ಬೆಂಗಳೂರು: ಗ್ಯಾರಂಟಿ ಯೋಜನೆಗೆ ಹಣ ನೀಡಿ ರಾಜ್ಯ ಸರ್ಕಾರ ಪಾಪರ್ ಆಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದ ತೀರ್ಮಾನ ಅಕ್ರಮ, ಅನ್ಯಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿದ್ದವರು. ಈ ರೀತಿಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಸೋನಿಯಾ, ರಾಹುಲ್, ಸುರ್ಜೆವಾಲಾ ಒತ್ತಡದಿಂದಾಗಿ ಒಪ್ಪಿದ್ದಾರೆ ಎಂದು ಕಿಡಿಕಾರಿದರು.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಈ ತೀರ್ಮಾನ ಇಡೀ ಸಂಪುಟಕ್ಕೆ ಕಪ್ಪು ಚುಕ್ಕೆ, ಡಿಕೆಶಿ ರಕ್ಷಣೆಗಾಗಿಯೇ ವಿಶೇಷ ಸಂಪುಟ ಸಭೆ ನಡೆದಿದೆ. ಎಲ್ಲವನ್ನೂ ರಹಸ್ಯವಾಗಿ ಸಿದ್ಧಪಡಿಸಿಕೊಂಡು ಏಕಾಏಕಿ ಘೋಷಣೆ ಮಾಡಿದ್ದಾರೆ. ನ್ಯಾಯಾಂಗಕ್ಕೆ ಮಣ್ಣೆರಚುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡಿದೆ.
ಸಿಬಿಐ ಶೇ.70ರಷ್ಟು ತನಿಖೆ ಮುಗಿಸಿದ ವೇಳೆ ವಾಪಸ್ ಗೆ ನಿರ್ಧಾರ. ಡಿಕೆಶಿ ಸದಸ್ಯರಾಗಿರುವ ಸಂಪುಟದಲ್ಲಿ ಅವರ ಪರ ತೀರ್ಮಾನ, ಡಿಕೆಶಿ ಸಂಪುಟ ಸಭೆಯಲ್ಲಿ ಇರಲಿಲ್ಲ ಎಂಬುದು ಲೆಕ್ಕ ಅಲ್ಲ. ಈ ರೀತಿಯ ಪ್ರಕರಣಗಳಲ್ಲಿ ಹಿಂದೆ ಕೋರ್ಟ್ ಛೀಮಾರಿ ಹಾಕಿದ್ದಿದೆ. ಬಿಜೆಪಿ ಆಡಳಿತದಲ್ಲಿ ಅಕ್ರಮವಾಗಿ ಡಿಕೆಶಿ ಕೇಸ್ ಸಿಬಿಐಗೆ ನೀಡಿದ ಆರೋಪ ವಿಚಾರಕ್ಕೆ ತಿರುಗೇಟು ನೀಡಿದರು.