ಮುಂಜಾನೆ ಅಥವಾ ಸಂಜೆ ಟೀ ಬ್ರೇಕ್‌ನಲ್ಲಿ ಸವಿಯಲು ಕುರುಕಲು ತಿಂಡಿ ಇಲ್ಲವೆಂದರೆ ಏನೋ ಮಿಸ್ ಆದಂತೆ ಎನಿಸುತ್ತದೆ. ಪ್ರತಿ ಬಾರಿ ಅಂಗಡಿಗಳಿಂದ ಬಿಸ್ಕತ್ತು ಅಥವಾ ತಿಂಡಿಗಳನ್ನು ತರೋದಕ್ಕಿಂತ ನೀವೇ ನಿಮ್ಮ ಕೈಯಾರೆ ಮಾಡಿ ಚಹಾ ಜೊತೆ ಸವಿದರೆ ಅದರ ಅನುಭವ ವಿಭಿನ್ನ ಎನಿಸುತ್ತದೆ. ನೀವು ಕೂಡಾ ಗೋಡಂಬಿ ಬಟರ್ ಕುಕೀಸ್ ನಿಮ್ಮ ಕೈಯಾರೆ ಮಾಡಿ ಟೀ ಬ್ರೇಕ್‌ನಲ್ಲಿ ಆನಂದಿಸಿ. ಬೇಕಾಗುವ ಪದಾರ್ಥಗಳು: ಹುರಿದ ಗೋಡಂಬಿ – 2 ಕಪ್ ಬೆಚ್ಚಗಿನ ನೀರು – 2 ಕಪ್ ನೀರು – ಕಾಲು ಕಪ್ ತೆಂಗಿನ ಎಣ್ಣೆ – ಕಾಲು ಕಪ್ ಸಕ್ಕರೆ – ಅರ್ಧ ಕಪ್ ಮೊಟ್ಟೆ – 2 ಬೇಕಿಂಗ್ ಪೌಡರ್ – 1 ಟೀಸ್ಪೂನ್ ಚಾಕೋಚಿಪ್ಸ್ – 1 ಕಪ್ ಮಾಡುವ ವಿಧಾನ: * ಮೊದಲಿಗೆ ಹುರಿದ ಗೋಡಂಬಿಯನ್ನು ಬೆಚ್ಚಗಿನ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಸಿ ಇಡಿ. * ಓವನ್ ಅನ್ನು ಪೂರ್ವಭಾವಿಯಾಗಿ ಕಾಯಿಸಿ ಬೇಕಿಂಗ್ ಶೀಟ್‌ಗೆ ಬಟರ್…
Author: AIN Author
ಕಲಬುರಗಿ: -ನಾನಾ ಕಾರಣಕ್ಕಾಗಿ ಸತತ ಮೂರು ಬಾರಿ ಮುಂದೂಡಲಾಗಿದ್ದ ಕಲಬುರಗಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಇದೇ ತಿಂಗಳ 17 ಕ್ಕೆ ಫಿಕ್ಸ್ ಆಗಿದೆ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಿಗದಿಯಾಗಿದ್ದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತ್ರತ್ವದಲ್ಲಿ KDP ಮಿಟಿಂಗ್ ನಡೆಯಲಿದೆ. ಇಲಾಖೆಯವರು ದಾಖಲೆ ಸಮೇತ ಸಭೆಗೆ ಹಾಜರಿರಬೇಕು ಅಂತ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ..
ಬೆಂಗಳೂರು:- ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಬರ ಪರಿಹಾರ ಶೀಘ್ರವೇ ನೀಡಿ ಎಂದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಪ್ರಸಕ್ತ ವರ್ಷ ಶೇ.73ರಷ್ಟು ಮಳೆ ಕೊರತೆ ಉಂಟಾಗಿದ್ದು, ಅದರಿಂದಾಗಿ ರಾಜ್ಯದ 223 ತಾಲೂಕುಗಳು ಬರಕ್ಕೆ ತುತ್ತಾಗಿವೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಅದರಲ್ಲಿ ಸೆ. 22ರಂದು ರಾಜ್ಯ ಸರ್ಕಾರ 195 ತಾಲೂಕುಗಳಲ್ಲಿ ಬರದ ಪರಿಸ್ಥಿತಿಯಿದ್ದು, ಎನ್‌ಡಿಆರ್‌ಎಫ್ ನಿಯಮಗಳಂತೆ ಬರ ಪರಿಹಾರ ನೀಡುವಂತೆ ಮನವಿ ಸಲ್ಲಿಸಿತ್ತು. ಇದಾದ ನಂತರ ಮಳೆಯ ಕೊರತೆ ತೀವ್ರಗೊಂಡು ಮತ್ತೆ ಉಳಿದ ತಾಲೂಕುಗಳಲ್ಲೂ ಬರದ ಪರಿಸ್ಥಿತಿ ಎದುರಾಗಿತ್ತು. ಅದರ ಬಗ್ಗೆಯೂ ಕೇಂದ್ರ ಸರ್ಕಾರಕ್ಕೆ ಹೊಸದಾಗಿ ಮನವಿ ಸಲ್ಲಿಸಲಾಗಿತ್ತು ಎಂದಿದ್ದಾರೆ. ಅದರ ಆಧಾರದಲ್ಲಿ ಕೇಂದ್ರ ಬರ ಅಧ್ಯಯನ ತಂಡವು ರಾಜ್ಯಕ್ಕೆ ಬಂದು ಅಕ್ಟೋಬರ್ 5ರಿಂದ 9ರವರೆಗೆ ಬರ ಪರಿಸ್ಥಿತಿಯನ್ನು ವೀಕ್ಷಿಸಿ ತೆರಳಿದೆ. ಆದರೆ ಈವರೆಗೆ ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳನ್ನೂ ಕೇಂದ್ರದ ತಂಡ ಈವರೆಗೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.…
ದೆಹಲಿ: ವಿಶ್ವಕಪ್‍ನಿಂದ (World Cup) ಹೊರ ನಡೆದ ಪಾಕ್ (Pakistan) ತಂಡ ಕೆಲವು ಬದಲಾವಣೆಗಳನ್ನು ಕೈಗೊಂಡರೆ ಭಾರತದಂತೆ (Team India) ಬಲಿಷ್ಠವಾಗಲಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಬಾಬರ್ ಅಜಂ, ಶಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್‍ನಂತಹ ಪ್ರತಿಭಾನ್ವಿತ ಆಟಗಾರರಿದ್ದಾರೆ. ಕೆಲವು ಸರಿಯಾದ ನಿರ್ಧಾರ ಹಾಗೂ ಬದಲಾವಣೆಗಳನ್ನು ಮಾಡಿಕೊಂಡರೆ ಪಾಕ್ ಉತ್ತಮವಾಗಿ ಆಡಲು ಸಾಧ್ಯವಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಹಿಂದೆಯೂ ಬಲಿಷ್ಠವಾಗಿತ್ತು. ಈಗಲೂ ಪ್ರತಿಭಾವಂತ ಆಟಗಾರರಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಭ್ಯಾಸ ಹಾಗೂ ಉತ್ತಮ ನಾಯಕತ್ವ ಗುಣಗಳು ಯಶಸ್ವಿಯಾಗಲು ಸಾಧ್ಯವಿದೆ. ಪಾಕ್ ಮತ್ತೆ ಉತ್ತಮವಾಗಿ ಕ್ರಿಕೆಟ್ ಆಡುವ ನಿರೀಕ್ಷೆ ಇದೆ. ಕೇವಲ ಐಪಿಎಲ್ ಆಡುವುದರಿಂದ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಕ್ರಮವಾದ ಅಭ್ಯಾಸದಿಂದ ಮಾತ್ರ ಯಶಸ್ವಿಯಾಗಿ ಪ್ರದರ್ಶನ ನೀಡಲು ಸಾಧ್ಯ ಎಂದಿದ್ದಾರೆ. ಹಣ ಸಂಪಾದನೆಗೆ ಮಾತ್ರ ಟಿ-20 ಪಂದ್ಯಗಳನ್ನು ಆಡಿ. ಉತ್ತಮ ಆಟಗಾರರು 4-5 ದಿನ ನಿರಂತರವಾಗಿ ಕ್ರಿಕೆಟ್ ಆಡಬೇಕು. ಭಾರತದಲ್ಲಿ ಕ್ರಿಕೆಟ್‍ಗೆ ಉತ್ತಮ…
ಚಾಮರಾಜನಗರ:- ಪವಾಡ ಪುರುಷ ಮಲೆಮಹದೇಶ್ವರಬೆಟ್ಟದಲ್ಲಿ ದೀಪಾವಳಿ ರಥೋತ್ಸವಕ್ಕೆ ಕ್ಷಣ ಗಣನೆ ಶುರುವಾಗಿದೆ. ಮಾದಪ್ಪನಬೆಟ್ಟಕ್ಕೆ ಭಕ್ತಸಾಗರ ಹರಿದು ಬಂದಿದೆ. ಕಳೆದ ಮೂರು ದಿನಗಳಿಂದಲೂ ಮಾದಪ್ಪನ ಸನ್ನಿಧಿಯಲ್ಲಿ ಭಾರೀ ಸಂಖ್ಯೆಯ ಭಕ್ತರು ತಂಗಿದ್ದು, ರಥೋತ್ಸವಕ್ಕೆ ಪಾಲ್ಗೊಳ್ಳಲು ಭಕ್ತಸಾಗರ ಹರಿದುಬಂದಿದೆ. ಲಕ್ಷಾಂತರ ಜನರಿಂದ ರಥೋತ್ಸವದಲ್ಲಿ ಪಾಲ್ಗೊಳ್ಳಲು ಕಾತುರರಾಗಿದ್ದಾರೆ. ಪವಾಡ ಪುರುಷ ನೆಲೆಸಿರುವ ಮಲೆಮಾದಪ್ಪನ ಸನ್ನಿದಿಯಲ್ಲಿ ದೀಪಾವಳಿ ರಥೊತ್ಸವ ನಡೆಯಲಿದ್ದು, ಭಕ್ತಾಧಿಗಳು ಕಾತುರರಾಗಿದ್ದಾರೆ.
ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ಅವರು ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಗೆ ವಿಶೇಷವಾಗಿ ಶುಭಕೋರಿದ್ದಾರೆ. ತಮ್ಮ ಮೊದಲ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಸಿನಿಮಾದಿಂದಲೇ ಮತ್ತೆ ಕಮ್‌ಬ್ಯಾಕ್ ಆಗುತ್ತಾರೆ ಎಂದು ಹೇಳಲಾಗಿತ್ತು. ಬಳಿಕ ಚಿತ್ರದಿಂದ ಹೊರಬಂದಿದ್ದೇಕೆ ಎಂದು ಇದೀಗ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ’ ಇದು ನನಗೆ ಬಹಳ ವಿಶೇಷವಾದ ಚಿತ್ರ. ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ ಎಂದಷ್ಟೇ ಅಲ್ಲ. ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ವಿಷಯಾಧರಿತ ಚಿತ್ರ ಎಂದು ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದಾರೆ ಸ್ವಾತಿ ಮುತ್ತಿನ ಮಳೆ ಹನಿಯೇ’ ಇದು ನನಗೆ ಬಹಳ ವಿಶೇಷವಾದ ಚಿತ್ರ. ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ ಎಂದಷ್ಟೇ ಅಲ್ಲ. ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ವಿಷಯಾಧರಿತ ಚಿತ್ರ ಎಂದು ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದಾರೆ ಸ್ವಾತಿ ಮುತ್ತಿನ ಮಳೆ…
ವಿಜಯಪುರ: ಶಾಸಕ ಬಿ. ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸ್ವಾಗತಿಸಿದ್ದಾರೆ. ಜೊತೆಗೆ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ 25 ಕ್ಕೂ ಹೆಚ್ಚು ಲೋಕಸಭೆ ಸೀಟುಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಬಿ. ವೈ. ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಸಂತಸ ತಂದಿದೆ ಎಂದು ಸ್ವಾಗತಿಸಿದರು. https://ainlivenews.com/b-y-vijayendra-met-former-prime-minister-hd-deve-gowda/ ಬಿಜೆಪಿ ಯುವಕರಿಗೆ ಪ್ರೋತ್ಸಾಹ ಕೊಡುತ್ತದೆ ಎಂಬುದನ್ನು ಹೈಕಮಾಂಡ್ ಮತ್ತೆ ಎತ್ತಿ ತೋರಿಸಿದೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಬಿ. ಎಸ್. ವೈ ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೂ ಸಿಕ್ಕಿದೆ. ಇನ್ನು ಮುಂದೆ ಅವರ ಪುತ್ರ ಬಿ. ವೈ. ವಿಜಯೇಂದ್ರ ಅವರ ನಾಯಕತ್ವದಲ್ಲಿ ಯುವಕರು ಸಂಘಟಿತರಾಗಲಿದ್ದು, ರಾಜ್ಯದಲ್ಲಿ ಬಿಜೆಪಿ 25ಕ್ಕೂ ಹೆಚ್ಚು ಲೋಕಸಭೆ ಸೀಟುಗಳಲ್ಲಿ ಗೆಲವು ಸಾಧಿಸಲಿದೆ. ಅಲ್ಲದೇ, ರಾಜ್ಯದಲ್ಲಿ…
ಬಿಗ್ ಬಾಸ್ ಕನ್ನಡ ಸೀಸನ್ 4ರ (Bigg Boss Kannada 4) ವಿನ್ನರ್ ಪ್ರಥಮ್ (Pratham) ಅವರು ತಮ್ಮ ಮದುವೆಯ ಬಗ್ಗೆ ಅಪ್‌ಡೇಟ್‌ವೊಂದನ್ನ ಹಂಚಿಕೊಂಡಿದ್ದಾರೆ. ಮದುವೆ (Wedding) ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ಮುಂದಿನ ವಾರ ಮದುವೆ. ಅಲ್ಲೇ ಬಂದು ಆಶೀರ್ವಾದ ಮಾಡಬೇಕು ಅಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೇಸೆಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ. ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿ ಎಂದು ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕುಟುಂಬದವರು ಇಷ್ಟಪಟ್ಟ ಹುಡುಗಿ ಮಂಡ್ಯದ ಭಾನುಶ್ರೀ ಜೊತೆ ಪ್ರಥಮ್ ಇತ್ತೀಚೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ.
ಲೀಗ್ ಹಂತದ ಪಂದ್ಯಗಳು ಮುಗಿದು ಸೆಮಿಫೈನಲ್ ಫೀವರ್ ಎಲ್ಲೆಡೆ ಶುರುವಾಗಿದೆ. ನಾಳೆ ಮೊದಲ ಸೆಮಿಫೈನಲ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಫೈನಲ್ ಸುತ್ತಿಗೇರಲು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಕಾದಾಡಲಿವೆ. ಆದರೆ, ಭಾರತದಲ್ಲಿ ತೀರ ಪ್ರದೇಶಗಳಲ್ಲಿ ಮಾನ್ಸೂನ್ ಕಾರಣದಿಂದಾಗಿ ನಿರ್ಣಾಯಕ ಹಂತದ ಪಂದ್ಯಗಳಿಗೆ ಮಳೆ ಭೀತಿಯು ಕಾಡತೊಡಗಿದೆ. ಐತಿಹಾಸಿಕ ಟೂರ್ನಿ ಮುಗಿಲು ಇನ್ನೂ ಎರಡೇ ಹೆಜ್ಜೆ ಬಾಕಿ ಇದೆ. ಈ ಸಂದರ್ಭದಲ್ಲಿ ಮಳೆ ಎದುರಾದರೆ ಕ್ರೀಡಾಭಿಮಾನಿಗಳಿಗೆ ಅದಕ್ಕಿಂತ ದೊಡ್ಡ ನಿರಾಸೆ ಬೇರೊಂದಿಲ್ಲ. ಮಳೆ ಬರದಿರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ಮಳೆ ಬಂದರೆ ಪಂದ್ಯ ರದ್ದಾಗಲಿದೆಯಾ? ಫೈನಲ್ ಪಂದ್ಯಕ್ಕೆ ತಂಡವನ್ನು ಹೇಗೆ ನಿರ್ಧರಿಸುತ್ತಾರೆ? ಮಳೆ ಬಂದರೂ ಮತ್ತೊಂದು ದಿನ ಪಂದ್ಯ ನಡೆಯಲಿದೆಯಾ? ಸಮಿಫೈನಲ್ಗೆ ವರಣನ ಅಡ್ಡಿಯಾದರೆ ಫೈನಲ್ ಆಯ್ಕೆಗೆ ಏನೆಲ್ಲ ದಾರಿಗಳಿವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. ಮೊದಲನೆಯದಾಗಿ ಸಮಿಫೈನಲ್ ಪಂದ್ಯಗಳು ಅತ್ಯಂತ ನಿರ್ಣಾಯಕ ಘಟ್ಟವಾಗಿರುವುದರಿಂದ ಒಂದು ವೇಳೆ ಮಳೆ ಬಂದರೂ ಐಸಿಸಿ ನಿಯಮದಂತೆ…
ಬೆಂಗಳೂರ:- ಬಿಜೆಪಿ ನೂತನ ಅಧ್ಯಕ್ಷ ವಿಜಯೇಂದ್ರ ಅವರನ್ನು ಮಾಜಿ ಸಚಿವರಾದ ಸಿ.ಟಿ ರವಿ ಅವರು ಭೇಟಿ ಮಾಡಿದರು. ಬೆಂಗಳೂರಿನ ಬಿವೈ ವಿಜಯೇಂದ್ರ ಅವರ ನಿವಾಸಕ್ಕೆ ಭೇಟಿ ನೀಡಿ, ಶಾಲು ಹೊದಿಸಿ ಸಿಟಿ ರವಿ ಅಭಿನಂದಿಸಿದ್ದಾರೆ. ಇದೇ ವೇಳೆ ರಾಜಕೀಯ ಸಂಬಂಧ ಕೆಲವು ಸಮಯ ಚರ್ಚೆ ನಡೆಸಿದರು. ಇನ್ನೂ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಹಿನ್ನೆಲೆ, ಸಿಟಿ ರವಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿತ್ತು. ಇದೀಗ ಬಿವೈ ವಿಜಯೇಂದ್ರರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.