ಬೆಂಗಳೂರು: ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ಜವಾಹರಲಾಲ್ ನೆಹರೂ. ಅವರ ದೂರದೃಷ್ಟಿಯ ಫಲವನ್ನು ಆಗಿನ-ಈಗಿನ ಪೀಳಿಗೆಯವರೂ ಅನುಭವಿಸುತ್ತಿದ್ದಾರೆ. ಮುಂದಿನ ಪೀಳಿಗೆಯವರೂ ಅನುಭವಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 134 ನೇ ಜನ್ಮ ದಿನೋತ್ಸವದ ಅಂಗವಾಗಿ ವಿಧಾನಸೌಧದಲ್ಲಿರುವ ಪ್ರತಿಮೆಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಪ್ರಜಾಪ್ರಭುತ್ವ-ಸಮಾಜವಾದ-ಜಾತ್ಯತೀತತೆ ನೆಹರೂ ಬದುಕಿನ ಮೌಲ್ಯಗಳು. ಈ ಮೌಲ್ಯಗಳನ್ನು ಪ್ರಧಾನಮಂತ್ರಿಯಾಗಿ ಭಾರತದಲ್ಲಿ ನೆಲೆಯೂರಿಸಲು ಶ್ರಮಿಸಿದರು. ಈ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನೆಹರೂ ಅವರಿಗೆ ನಾವು ಸಲ್ಲಿಸುವ ಅರ್ಥಪೂರ್ಣ ಶ್ರದ್ಧಾಂಜಲಿ ಎಂದರು. ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಕಾರಣಕ್ಕೇ ದೇಶದ ಮಕ್ಕಳ ಪಾಲಿಗೆ ಚಾಚಾ ನೆಹರೂ ಆದರು. ಸ್ವಾತಂತ್ರ್ಯ ಹೋರಾಟದಲ್ಲಿ 9 ವರ್ಷಗಳ ಕಾಲ ಜೈಲುವಾಸ ಅನುಭಸಿದ್ದರು. ಸ್ವಾತಂತ್ರ್ಯಾ ನಂತರದಲ್ಲಿ ದೇಶದ ಪ್ರಧಾನಿಯಾಗಿ ಆಧುನಿಕ ಭಾರತದ ಶಿಲ್ಪಿ ಎನ್ನಿಸಿಕೊಂಡರು ಎಂದು ವಿವರಿಸಿದರು. ನೆಹರೂ ಅವರು ಪ್ರಧಾನಿ ಆಗಿ ವಿರೋಧ ಪಕ್ಷದವರು ಮಾತಾಡುವಾಗ ಸಹನೆಯಿಂದ ಕೇಳಿಸಿಕೊಳ್ಳುತ್ತಿದ್ದರು.…
Author: AIN Author
ಬೆಳಗಾವಿ: ಇಲ್ಲಿವರೆಗೆ ಯಾವುದೇ ಸಚಿವರಿಗೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಬೇಕೆಂದು ಹೈಕಮಾಂಡ್ ಹೇಳಿಲ್ಲ. ಅಭ್ಯರ್ಥಿಗಳ ಆಯ್ಕೆಗಾಗಿ ಮೊದಲು ಅರ್ಜಿ ಕರೆಯಲಾಗುತ್ತೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ತಿಳಿಸಿದರು. ನಗರದ ಕಾಂಗ್ರೆಸ್ (Congress) ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಲೋಕಸಭೆ ಚುನಾವಣೆಗೆ ತಯಾರಿ ನಡೆದಿದೆ. ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. https://ainlivenews.com/application-invitation-for-many-posts-of-hindustan-petroleum-corporation/ ಎಲ್ಲಾ ರೀತಿಯ ಮಾನದಂಡಗಳನ್ನು ಅನುಸರಿಸಿ, ಮೂರು ಹಂತಗಳಲ್ಲಿ ಚರ್ಚಿಸಿದ ನಂತರ ಹೈಕಮಾಂಡ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಲಿಂಗಾಯತ, ಚಿಕ್ಕೋಡಿ ಕ್ಷೇತ್ರಕ್ಕೆ ಕುರುಬ ಸಮಾಜದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಚಿಂತನೆ ನಡೆದಿದೆ. ರಾಜ್ಯದ 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಬೆಂಗಳೂರು: ರಾಜಧಾನಿಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ನಾಲ್ಕು ಕಡೆಗಳಲ್ಲಿ ಸಿಸಿಬಿ ದಾಳಿ ನಡೆಸಿ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ. https://ainlivenews.com/diwali-do-you-know-how-many-children-have-been-damaged-so-far/ ಐದು ವರ್ಷಗಳ ನಂತರ ಮೀಟರ್ ಬಡ್ಡಿ ದಂಧೆ ನಡೆಸುತಿದ್ದವರನ್ನು ಗುರಿಯಾಗಿಸಿ ಸಿಸಿಬಿ ದಾಳಿ ನಡೆಸಿದೆ. ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಡ್ಡಿ ದಂಧೆ ನಡೆಸುತ್ತಿದ್ದವರ ವಿರುದ್ಧ ಮನಿ ಲಾಂಡರಿಂಗ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಾಳಿ ವೇಳೆ 23 ಲಕ್ಷ ರೂ. ನಗದು, 127 ಗ್ರಾಂ ಚಿನ್ನಾಭರಣ, 10 ಕೆಜಿ ಬೆಳ್ಳಿ, 109 ಚೆಕ್‌ಗಳು, 50 ಅನ್ ಡಿಮಾಂಡ್ ಪ್ರಾಮಿಸರಿ ನೋಟ್, 42 ಖಾಲಿ ಬಾಂಡ್ ಪೇಪರ್, 85 ಶುದ್ಧ ಕ್ರಯ ಪತ್ರಗಳು, 35 ಸಾಲ ನಮೂದಿಸಿದ ದಾಖಲಾತಿ, 11 ಇ-ಸ್ಪಾಂಪ್ ಪೇಪರ್‌ಗಳು, 45 ಪಾಕೆಟ್ ಪುಸ್ತಕ, 15 ಅಗ್ರಿಮೆಂಟ್ ಪ್ರತಿಗಳು, 6 ರೋಲೆಕ್ಸ್ ವಾಚುಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ಅಧ್ಯಕ್ಷ ಸ್ಥಾನ ಅನ್ನೋದು ನ್ಯಾಯಪೀಠವಿದ್ದಂತೆ. ನ್ಯಾಯಾಧೀಶ ಬದಲಾಗಬಹುದು. ನ್ಯಾಯಪೀಠವಲ್ಲ. ಆ ಪೀಠಕ್ಕೆ ಯಾವ ಬೆಲೆ ಕೊಡಬೇಕೋ ಆ ಬೆಲೆಯನ್ನು ನಾನು ಕೊಡುತ್ತೇನೆ ಎಂದು ಮಾಜಿ ಸಚಿವ ಸಿ.ಟಿ ರವಿ (CT Ravi) ಹೇಳಿದ್ದಾರೆ. https://ainlivenews.com/bjp-legislative-party-meeting-on-friday-by-vijayendra/ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು (Narendra Modi) ಮತ್ತೊಮ್ಮೆ ಪ್ರಧಾನಿಯಾಗಬೇಕು ಅನ್ನೋದು ನಮ್ಮ ಗುರಿ. ದೇಶದಲ್ಲಿ ಮತ್ತೊಮ್ಮೆ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಆ ಗುರಿಯನ್ನು ಈಡೇರಿಸಲು ಎಲ್ಲ ರೀತಿಯ ಕೆಲಸ ಮಾಡಿ, ಸಹಕಾರ ನೀಡುತ್ತೇವೆ. ನಾವು ಇದುವರೆಗೂ ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ. 20 ವರ್ಷಗಳ ಕಾಲ ಶಾಸಕರಾಗಿ, 35 ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಜವಾಬ್ದಾರಿ ನಿಭಾಯಿಸಿದ್ದೇನೆ. ನಾನು ಎಂದೂ ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ. ಒಂದು ವೇಳೆ ಜಗಳ ಮಾಡಿದ್ದರೂ ನಮ್ಮ ಮನೆಯ ಒಳಗೇ ಜಗಳ ಆಡಿದ್ದೇವೆ. ಪಕ್ಕದ ಮನೆಯಲ್ಲಿ ಕೂತು ನಮ್ಮ ಮನೆಯ ಸಮಸ್ಯೆಯನ್ನ ಬಗೆಹರಿಸಿ ಎಂದು ಕೇಳಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು: ಅಜಾಗರೂಕತೆ ಪರಿಣಾಮ ಬೆಳಕಿನ ಹಬ್ಬ ದೀಪಾವಳಿಯಂದು ಹಲವರ ಬಾಳಲ್ಲಿ ಕತ್ತಲು ಆವರಿಸುವ ಸ್ಥಿತಿ ಏರ್ಪಟ್ಟಿದೆ. ಬೆಂಗಳೂರಿನ (Bengaluru Deepavali) 25 ಕ್ಕೂ ಹೆಚ್ಚು ಮಂದಿ ಮಿಂಟೋ, ನಾರಾಯಣ ನೇತ್ರಾಲಯ ಸೇರಿದ್ದಾರೆ. ಇದುವರೆಗೆ 26 ಮಂದಿ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿ ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿದ್ದಾರೆ. ಇದರಲ್ಲಿ 13 ಮಂದಿ ಮಕ್ಕಳಿದ್ದಾರೆ. 5 ರೋಗಿಗಳ ಕಣ್ಣಿಗೆ ಗಂಭೀರ ಗಾಯಗಳಾಗಿವೆ. https://ainlivenews.com/good-news-for-women-state-government/ ಬೇರೆಯವರು ಪಟಾಕಿ ಹೊಡೆಯುವುದನ್ನು ನೋಡಲು ಹೋಗಿ ಗಾಯಗೊಂಡವರ ಸಂಖ್ಯೆಯೇ ಹೆಚ್ಚಿದೆ. ಹಸಿರು ಪಟಾಕಿಗೆ ಮಾತ್ರ ಅನುಮತಿ ಇದ್ದರೂ ಬೆಂಗಳೂರಿನಲ್ಲಿ ಢಂ ಢಂ ಸದ್ದು ಹೆಚ್ಚು ಕೇಳಿಬಂತು. ಪರಿಣಾಮ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಿದೆ. ಅತಿ ಹೆಚ್ಚು ಅಂದರೆ ಜಯನಗರದಲ್ಲಿ 189 ಎಕ್ಯೂಐ ದಾಖಲಾಗಿದೆ. ಅತ್ತ ದೆಹಲಿವಾಸಿಗಳ ನಿರ್ಲಕ್ಷ್ಯದ ಕಾರಣ ಮತ್ತೆ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿದೆ. ಜನ ನಿಷೇಧ ಉಲ್ಲಂಘಿಸಿ ಮತಾಪು ಸಿಡಿಸಿದ್ದಾರೆ. ಪರಿಣಾಮ ದೆಹಲಿ-ಎನ್‌ಸಿಆರ್‌ನಲ್ಲಿ ಹೊಗೆ ಆವರಿಸಿದೆ
ಚಾಮರಾಜನಗರ: ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು (ನ.14) ಅದ್ಧೂರಿ ರಥೋತ್ಸವ ನಡೆಯಲಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ಮಾಯ್ಕಾರ ಮಾದಪ್ಪನ ಸನ್ನಿಧಿಗೆ ಭಕ್ತ ಸಾಗರ ಹರಿದು ಬರುತ್ತಿದೆ. https://ainlivenews.com/application-invitation-for-many-posts-of-hindustan-petroleum-corporation/ ನೂರಾರು ಭಕ್ತರು ಪಾದಯಾತ್ರೆ ಮೂಲಕ ಬೆಟ್ಟಕ್ಕೆ ಬರುತ್ತಿದ್ದಾರೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ನೆರೆದಿದೆ. ಭಕ್ತಗಣ ಮಾದಪ್ಪನ ದರ್ಶನ ಪಡೆದು ವಿವಿಧ ಹರಕೆ ತೀರಿಸುತ್ತಿದೆ.
ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಶುಕ್ರವಾರ ನಿಗದಿಯಾಗಿದೆ. ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆಯಂತಹ ಬೆಳವಣಿಗೆ ಆಗಿಲ್ಲ. ಜೆ.ಪಿ.ನಡ್ಡಾ ಅವರಿಗೆ ಕರೆ ಮಾಡಿದ್ದೆ, ಇನ್ನೊಂದು ಗಂಟೆಯಲ್ಲಿ ತಿಳಿಸಲಿದ್ದಾರೆ. ಯಾರು ಯಾರು ವೀಕ್ಷಕರು ಬರುತ್ತಾರೆ ಅಂತಾ ಜೆ.ಪಿ.ನಡ್ಡಾ ಅವರು ತಿಳಿಸಲಿದ್ದಾರೆ. https://ainlivenews.com/good-news-for-women-state-government/ ಕೇಂದ್ರದ ವೀಕ್ಷಕರು ನವೆಂಬರ್ 16ರಂದು ಬರುತ್ತಾರಾ ಅಥವಾ ಶುಕ್ರವಾರ ಬರುತ್ತಾರಾ ಎಂಬುವುದು ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಕನ್ನಡದ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ತೆಲುಗಿನ ಬಿಗ್ ಬಾಸ್ ಸೀಸನ್ 7ರಲ್ಲಿ ಸಮರ್ಥ ಸ್ಪರ್ಧಿಯಾಗಿ ಮಿಂಚ್ತಿದ್ದಾರೆ. ಇದೀಗ ‘ಬಿಗ್ ಬಾಸ್’ (Bigg Boss) ವೇದಿಕೆಯಲ್ಲಿ ಪ್ರೀತಿಸಿದ ಹುಡುಗನ ಬಗ್ಗೆ ಶೋಭಾ ಬಾಯ್ಬಿಟ್ಟಿದ್ದಾರೆ. ವಾರಾಂತ್ಯದ ನಾಗಾರ್ಜುನ ಅಕ್ಕಿನೇನಿ ಅವರ ಪಂಚಾಯತಿಯಲ್ಲಿ ಶೋಭಾ ಶೆಟ್ಟಿ ತಾವು ಎಂಗೇಜ್ ಆಗಿರುವ ಹುಡುಗನ ಬಗ್ಗೆ ರಿವೀಲ್ ಮಾಡಿದ್ದಾರೆ. ಯಶವಂತ್ ರೆಡ್ಡಿ ಜೊತೆ ಕಳೆದ ಮೂರುವರೆ ವರ್ಷಗಳಿಂದ ಪ್ರೀತಿಸುತ್ತಿರೋದಾಗ ನಾಗಾರ್ಜುನ ಬಳಿ ಹೇಳಿಕೊಂಡಿದ್ದಾರೆ. ಶೋಭಾ ತಂದೆ ಮತ್ತು ಬಾಯ್‌ಫ್ರೆಂಡ್ ಯಶವಂತ್ ಕೂಡ ಎಂಟ್ರಿ ಕೊಟ್ಟು ಶೋಭಾಗೆ ಅಚ್ಚರಿ ಮೂಡಿಸಿದ್ದಾರೆ. ಇಬ್ಬರನ್ನೂ ನೋಡ್ತಿದ್ದಂತೆ ನಟಿ ಭಾವುಕರಾಗಿದ್ದಾರೆ. ಬಳಿಕ ಯಶವಂತ್‌ಗೆ ಮೊದಲು ಪ್ರಪೋಸ್ ಮಾಡಿದ್ದೇ ನಾನು ಎಂದು ಶೋಭಾ ಹೇಳಿದ್ದಾರೆ. ನಿರೂಪಕ ನಾಗಾರ್ಜುನ ಕೂಡ ಹೊಸ ಜೋಡಿಗೆ ವಿಶ್ ಮಾಡಿದ್ದಾರೆ ಯಶವಂತ್ (Yashwanth) ಜೊತೆ ‘ಬುಜ್ಜಿ ಬಂಗಾರಮ್’ ಎಂಬ ಪ್ರಾಜೆಕ್ಟ್‌ನಲ್ಲಿ ಶೋಭಾ ಶೆಟ್ಟಿ ಜೊತೆಯಾಗಿ ನಟಿಸಿದ್ದರು. ಇದೀಗ ಮೂರುವರೆ ವರ್ಷದ ನಂತರ…
ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ಇಂದೇ ಕೊನೆಯ ದಿನವಾಗಿದೆ. ಕೊನೆಯ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತರು ಬರುತ್ತಿದ್ದಾರ. ಬುಧವಾರ ಬೆಳಗ್ಗೆ 7 ಗಂಟೆಯವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. https://ainlivenews.com/another-terrorist-killed-by-unknown-gunmen-in-pakistan/ ನಾಳೆ (ನ.15) ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲನ್ನು ಭಕ್ತರು ಮುಚ್ಚಲಿದ್ದಾರೆ. ನವೆಂಬರ್ 2ರಿಂದ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾಗಿತ್ತು. ಈ ಬಾರಿ 12 ದಿನಗಳ ಕಾಲ ಭಕ್ತರಿಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಬೆಂಗಳೂರು: ಸರ್ಕಾರದ ಶಕ್ತಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಸಂಬಂಧಿಸಿ ಕೆಎಸ್‌ಆರ್‌ಟಿಸಿ ವತಿಯಿಂದ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಪ್ರಯಾಣಿಸುವಾಗ ಇನ್ಮುಂದೆ ಮೊಬೈಲ್‌ನಲ್ಲಿ ಆಧಾರ್ ಕಾರ್ಡ್ ತೋರಿಸಿ ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದು ತಿಳಿಸಿದೆ. ಉಚಿತ ಪ್ರಯಾಣಕ್ಕಾಗಿ ಮಹಿಳಾ ಪ್ರಯಾಣಿಕರು ಮೂಲ, ನಕಲು, ಡಿಜಿ ಲಾಕರ್ ಪ್ರತಿ ತೋರಿಸಿ ಪ್ರಯಾಣ ಮಾಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಹಿಳಾ ಪ್ರಯಾಣಿಕರು ಮೊಬೈಲ್‌ನಲ್ಲಿ ಅಧಿಕೃತ ಗುರುತಿನ ಚೀಟಿ ತೋರಿಸಿದಾದಾಗಲೂ ಮೊಬೈಲ್‌ನಲ್ಲಿನ ಗುರುತಿನ ಚೀಟಿಯನ್ನು ಮಾನ್ಯ ಮಾಡುವುದಿಲ್ಲ ಎಂದು ಕೆಲವು ನಿರ್ವಾಹಕರು ಅನವಶ್ಯಕವಾಗಿ ಮಹಿಳೆಯರಿಗೆ ತೊಂದರೆಯುಂಟು ಮಾಡುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ.