ಬೆಂಗಳೂರು: ಪ್ರತಿಷ್ಠಿತ ಮಾಲ್ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮಾಸುವ ಮುನ್ನವೇ ಬಿಎಂಟಿಸಿಯಲ್ಲಿ ಬೆಚ್ಚಿ ಬೀಳಿಸೋ ಸಂಗತಿಯೊಂದು ಬೆಳಕಿಗೆ ಬಂದಿದೆ.
ನಮ್ಮ ಸಾರಿಗೆ ಬಸ್ ಸೇಫ್ ಆಗಿರುತ್ತೆ. ಶಕ್ತಿ ಯೋಜನೆಯಲ್ಲಿ ಉಚಿತ ಟಿಕೆಟ್ ಇದೆ ಅಂತ ಮಹಿಳೆಯರು ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಬಿಎಂಟಿಸಿ ಬಸ್ನಲ್ಲೂ ಮಹಿಳೆಯರಿಗೆ ರಕ್ಷಣೆ ಇಲ್ವಾ ಅನ್ನೋ ಪ್ರಶ್ನೆ ಈ ಘಟನೆಂದ ಎಲ್ಲಾರಿಗೂ ಕಾಡುತ್ತದೆ.
Job : ಉದ್ಯೋಗ – ಸಂದರ್ಶನಕ್ಕೆ ಹಾಜರಾಗಿ, ಈ ಸಂಸ್ಥೆಯಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕ ಹುದ್ದೆ
ಕಳೆದ ತಿಂಗಳು ಯುವತಿಯೊಬ್ಬರು ರಾತ್ರಿ ವೇಳೆ ಶಿವಾಜಿನಗರ ಟು ಕೆ.ಆರ್ ಪುರ ಹೋಗುವ ರೂಟ್ ನಂ- 300 EA ಬಸ್ ಹತ್ತಿದ್ದಾರೆ. ಬಸ್ನಲ್ಲಿ ಪ್ರಯಾಣಿಕರೇ ಇಲ್ಲದಿದ್ರೂ ಕಂಡಕ್ಟರ್ ಕೆಂಪಣ್ಣ ಉದ್ದೇಶಪೂರ್ವಕವಾಗಿ ಯುವತಿ ಕೂತಿದ್ದ ಸೀಟ್ ಬಳಿ ಹೋಗಿದ್ದಾರೆ. ನಾಲ್ಕೈದು ಬಾರಿ ಆಕೆಯ ಮೈ, ಕೈ ಮುಟ್ಟಿದ್ದಾರಂತೆ.
ಕಂಡಕ್ಟರ್ ಕಿರುಕುಳಕ್ಕೆ ಮನನೊಂದಿರುವ ಮಹಿಳೆ ಕೆಲ ದಿನದ ನಂತರ ಬಿಎಂಟಿಸಿ ಮೇಲ್ ಐಡಿಗೆ ದೂರು ನೀಡಿದ್ದಾಳೆ. ಬಿಎಂಟಿಸಿಯ ಭದ್ರತಾ & ಜಾಗೃತದಳದ ಅಧಿಕಾರಿಗಳಿಂದ ಕಂಡಕ್ಟರ್ ವಿಚಾರಣೆ ಮಾಡಿದ ಅಸಲಿ ವಿಷಯ ಗೊತ್ತಾಗಿದೆ. ತನಿಖೆಯ ವೇಳೆ ಕಂಡಕ್ಟರ್ ಕೆಂಪಣ್ಣ ತಪ್ಪೊಪ್ಪಿಕೊಂಡಿದ್ದಾರೆ.