ಕಲಬುರಗಿ:- ಅನ್ನಭಾಗ್ಯಕ್ಕೆ ಸೇರಿದ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೋಲೀಸರು ದಾಳಿ ನಡೆಸಿ ಪತ್ತೆಹಚ್ಚಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯಿಂದ ಸೇಡಂ ಕಡೆ ಟೆಂಪೋದಲ್ಲಿ ಸಾಗಾಟ ಮಾಡ್ತಿದ್ದ 33ಕ್ವಿಂಟಾಲ್ ಅಕ್ಕಿಯನ್ನ ಜಪ್ತಿ ಮಾಡಿದ್ದು ಮಲ್ಲಪ್ಪ ಎಂಬಾತನನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರೆದಿದೆ..
Author: AIN Author
ಹಾಸನ: ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡಿದ್ದ ಜಿಲ್ಲಾಧಿಕಾರಿ ಕಚೇರಿ (DC Office) ಎಸ್‍ಡಿಎ (SDA) ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ (Hassan) ನಗರದ ರಕ್ಷಣಾಪುರಂನಲ್ಲಿ ನಡೆದಿದೆ. ಮೃತಳನ್ನು ಸುಚಿತ್ರಾ (31) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿ ಕೃಷ್ಣಮೂರ್ತಿ ವಿಲೇಜ್ ಅಕೌಂಟೆಂಟ್ ಆಗಿದ್ದರು. ಕಳೆದ ಮೂರು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಅವರು ಪತಿಯನ್ನು ಕಳೆದುಕೊಂಡಿದ್ದರು. ಪತಿ ಮರಣದ ನಂತರ ಸುಚಿತ್ರಾಗೆ ಎಸ್‍ಡಿಎ ಹುದ್ದೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಕಛೇರಿ ಗ್ರಾಮ ಒನ್ ಕೇಂದ್ರದಲ್ಲಿ ಸುಚಿತ್ರಾ ಎಸ್‍ಡಿಎ ಆಗಿ ಕೆಲಸ ಮಾಡುತ್ತಿದ್ದರು. ಸುಚಿತ್ರಾಗೆ ಒಂದು ಹೆಣ್ಣುಮಗುವಿದ್ದು ರಕ್ಷಣಾಪುರಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಗಳು ಶಾಲೆ ಮುಗಿಸಿ ವಾಪಸ್ ಬಂದು ಮನೆಯ ಬಾಗಿಲು ಬಡಿದಿದ್ದು ಬಾಗಿಲು ತೆರೆಯದಿದ್ದಾಗ ತನ್ನ ಮಾವನಿಗೆ ಕರೆ ಮಾಡಿದ್ದಾರೆ. ನಂತರ ಮಾವ ಆಗಮಿಸಿ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿ ನೋಡಿದಾಗ ಸುಚಿತ್ರಾ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ. https://ainlivenews.com/upi-id-with-no-transaction-for-1-year-upi-number-de-activate-reason/ ಆತ್ಮಹತ್ಯೆಗೆ…
ಬೆಂಗಳೂರು: 2024ರ ಐಪಿಎಲ್ ಮಿನಿ ಹರಾಜಿನ ಸಲುವಾಗಿ ತಂಡದ ಪರ್ಸ್ ನ ಮೊತ್ತವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ ತನ್ನ ಸ್ಟಾರ್ ಆಟಗಾರರಾದ ವಾನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ ರನ್ನು ತಂಡದಿಂದ ಬಿಡುಗಡೆಗೊಳಿಸಿದ್ದಾರೆ. ಈ ಕುರಿತು ತಂಡದ ಮಾಜಿ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2022ರ ಮೆಗಾ ಹರಾಜಿನಲ್ಲಿ ತಲಾ 10.75 ಕೋಟಿ ವ್ಯಯಿಸಿದ ಆರ್ ಸಿಬಿ ಫ್ರಾಂಚೈಸಿ ಹರ್ಷಲ್ ಪಟೇಲ್ ಹಾಗೂ ವಾನಿಂದು ಹಸರಂಗರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿ ಟ್ರೋಫಿ ಗೆಲ್ಲುವ ಕನಸು ಹೊತ್ತಿದ್ದರು. ಹಸರಂಗ 26 ವಿಕೆಟ್ ಪಡೆದು ಉತ್ತಮ ಪ್ರದರ್ಶನ ತೋರಿದರೂ ಆರ್ ಸಿಬಿ ಮಾತ್ರ ಟ್ರೋಫಿ ಗೆಲ್ಲದೆ ನಿರಾಸೆ ಮೂಡಿಸಿತ್ತು. 2021ರಲ್ಲಿ 32 ವಿಕೆಟ್ ಪಡೆದು ಗಮನ ಸೆಳೆದಿದ್ದ ಹರ್ಷಲ್ ಪಟೇಲ್ ಕಳೆದೆರಡು ಐಪಿಎಲ್ ಆವೃತ್ತಿಗಳಿಂದ ಉತ್ತಮ ಪ್ರದರ್ಶನ ತೋರಲು ಎಡವಿದ್ದು ಫ್ರಾಂಚೈಸಿ ಈ ಆಟಗಾರರನ್ನು ,2024ರ ಮಿನಿ ಹರಾಜಿಗೆ ಬಿಡುಗಡೆಗೊಳಿಸಿ ಟ್ರೋಫಿ ಗೆದ್ದುಕೊಡುವ ಆಟಗಾರರ…
ಗದಗ:- ಶಕ್ತಿ ಯೋಜನೆ ಎಫೆಕ್ಟ್ ನಿಂದಾಗಿ ದುಡ್ಡು ಕೊಟ್ಟು ಪ್ರಯಾಣಿಸುವ ಪುರುಷರ ಕಷ್ಟ ಕೇಳೋರೆ ಇಲ್ಲದಂತಾಗಿದೆ. ಬಸ್ ಸೀಟ್ ಗಳಿಗಾಗಿ ಪುರುಷ ಪ್ರಯಾಣಿಕರು ಹರಸಾಹಸ ಪಟ್ಟಿದ್ದಾರೆ. ಕಿಟಕಿ ಮೂಲಕ ಬಸ್ ಹತ್ತೋಕೆ ಯತ್ನಿಸಲಾಗುತ್ತಿದ್ದು, ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಈ ದೃಶ್ಯಗಳು ಕಂಡು ಬಂದಿದೆ. ಕಿಟಕಿಯಲ್ಲಿ ತೂರಿಕೊಂಡು ಬಸ್ ಒಳಗೆ ಪುರುಷ ಪ್ರಯಾಣಿಕರು ಪ್ರವೇಶ ಮಾಡ್ತಿದ್ದಾರೆ. ಇದೇ ವೇಳೆ ಕಿಟಕಿ ಮೂಲಕ ಹತ್ತಲೆತ್ನಿಸಿದ ಪುರುಷ ಪ್ರಯಾಣಿಕನನ್ನ ಬಸ್ ಚಾಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಇಳಿ ಕೆಳಗೆ ಗೊತ್ತಾಗೋದಿಲ್ವಾ ನಿಮಗೆ ಅಂತಾ ಕಿಟಕಿಯಿಂದ ಚಾಲಕ ಕೆಳಗಿಳಿಸಿದ್ದಾರೆ. ಚಾಲಕ ಅತ್ತ ಹೋಗ್ತಿದ್ದಂತೆ ಮತ್ತೆ ಕಿಟಕಿ ಮೂಲಕ ಬಸ್ ಹತ್ತಿ ಪ್ರಯಾಣಿಕರು ಒಳಹೋಗಿದ್ದಾರೆ. ನಾವೇನೂ ಕಮ್ಮಿ ಇಲ್ಲ ಎನ್ನೋವಂತೆ ಮಹಿಳಾ ಪ್ರಯಾಣಿಕರಿಂದಲೂ ಕಿಟಕಿ ಮೂಲಕ ಬಸ್ ಹತ್ತೋ ಯತ್ನ ಮಾಡಿದ್ದಾರೆ. ಇಂದು ಗೌರಿ ಹುಣ್ಣಿಮೆ ಹಿನ್ನೆಲೆ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳೋ ಪ್ರಯಾಣಿಕರು ಹೆಚ್ಚಿರೋ ಹಿನ್ನೆಲೆ ಹೆಚ್ಚಿದ ಪರದಾಟ ನಡೆಸಿದ್ದಾರೆ.
ಬೆಂಗಳೂರು: ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಧಿಕೃತವಾಗಿ ಮುಂಬೈ ಇಂಡಿಯನ್ಸ್ ಬಳಗ ಸೇರಿದ್ದಾರೆ. 2 ವರ್ಷಗಳ ಕಾಲ ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿ ಆಡಿ ಒಂದು ಟ್ರೋಫಿ ಗೆದ್ದು ಹಾಗೂ ಒಮ್ಮೆ ರನ್ನರ್ಸ್‌ಅಪ್ ಸ್ಥಾನ ತಂದುಕೊಟ್ಟ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟನ್ಸ್ ತಂಡ ಐಪಿಎಲ್ 2024 ಟೂರ್ನಿಗೆ ಪ್ರಕಟ ಮಾಡಿದ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಸೇರಿಸಿತ್ತು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಟ್ರೇಡಿಂಗ್ ವಿಂಡೋ ಮೂಲಕ ಮುಂಬೈ ಇಂಡಿಯನ್ಸ್ ಸೇರಿದ್ದಾರೆ. ಹಾರ್ದಿಕ್ ಸಲುವಾಗಿ ಟೈಟನ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ 15 ಕೋಟಿ ರೂ. ನೀಡಲಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಗುಜರಾತ್ ಟೈಟನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಹೊರಬಂದಿರುವ ಕಾರಣ ಯುವ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ತಂಡದ ಕ್ಯಾಪ್ಟನ್ ಆಗುವ ರೇಸ್‌ನಲ್ಲಿ ಮುಂಚೂಣಿಗೆ ಬಂದಿದ್ದಾರೆ. ಮುಂಬೈ ಇಂಡಿಯನ್ಸ್ ತಾನು ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಿದ ಬಳಿಕ ತನ್ನ ಖಾತೆಯಲ್ಲಿ 15.25 ಕೋಟಿ…
ಮುಂಬೈ: ಎಲ್ಲಾ 10 ಫ್ರಾಂಚೈಸಿಗಳು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ಹರಾಜಿಗೆ ಸಿದ್ಧವಾಗಿವೆ. ಈ ನಡುವೆ ಭಾನುವಾರ ಜಿಯೋಸಿನಿಮಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ರಿಟೇನ್, ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ವಿಶ್ವಕಪ್ 2023 ರಲ್ಲಿ ಮಿಂಚಿದ್ದ ಜೋಶ್ ಹ್ಯಾಜಲ್‌ವುಡ್ ಹಾಗೂ ಶ್ರೀಲಂಕಾದ ಸ್ಪಿನ್ನರ್ ವಾನಿಂದು ಹಸರಂಗ ಸೇರಿದಂತೆ 11 ಆಟಗಾರರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೇಟ್‌ಪಾಸ್ ಕೊಟ್ಟಿದೆ. ಫಾಫ್ ಡುಪ್ಲೆಸಿಸ್ (ಕ್ಯಾಪ್ಟನ್), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಮಹಿಪಾಲ್ ಲೋಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್ ತಂಡಕ್ಕೆ ರಿಟೇನ್ ಆಗಿದ್ದಾರೆ. ಕೈಬಿಟ್ಟ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್…
ಶಿವಮೊಗ್ಗ: ಆರ್ಥಿಕ ಸ್ಥಿತಿಗತಿಗೆ ಸರಿ ಹೋಗುವುದಾದರೆ ಆ ವರದಿ ಬರಲಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಒಕ್ಕಲಿಗರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದ್ದು, ಈ ವರದಿಯನ್ನು ಮನೆ ಬಾಗಿಲಿಗೆ ಹೋಗಿ ತಯಾರಿಸಲಾಗಿಲ್ಲ. ಬದಲಿಗೆ ಯಾವುದೋ ಕಂಪನಿಗೆ ಕೊಟ್ಟು ಏನೇನೋ ಮಾಡಿ ಆ ವರದಿ ತಯಾರು ಮಾಡಿದ್ದಾರೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ. ಜಾತಿ ಜನಗಣತಿ ವರದಿ ಬಗ್ಗೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ಶಾಸಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ನಾನು ಸಹ ಭಾಗವಹಿಸಿದ್ದೆ. ಒಕ್ಕಲಿಗ ಸಮಾಜಕ್ಕೆ ಇನ್ನೊಂದು ವರ್ಗಕ್ಕೆ ಏನು ಸಿಗಬಾರದು ಎಂಬ ಚಿಂತನೆ ಇಲ್ಲ ಎಂದರು. ಜಾತಿ ಜನಗಣತಿ ವರದಿ ತಯಾರಾಗಿ 8 ವರ್ಷ ಕಳೆದಿದೆ. 2017 ರ ಕೊನೆಯಲ್ಲಿ ಈ ವರದಿ ತಯಾರಾಗಿದೆ. https://ainlivenews.com/upi-id-with-no-transaction-for-1-year-upi-number-de-activate-reason/ ಅಂದಿನ ಮುಖ್ಯಮಂತ್ರಿ ಆ ವರದಿಯನ್ನು ಸ್ವೀಕಾರ ಮಾಡಿರಲಿಲ್ಲ. ಇವತ್ತು ಅದೇ ಮುಖ್ಯಮಂತ್ರಿ ಸ್ವೀಕಾರ…
ಅಥಣಿ: ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತುಳಿದ ತಾಯಿ ಹಾಗೂ ಮಗು ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ಅಥಣಿಯಲ್ಲಿ ತಂದೆ ಮತ್ತು ಮಗನಿಗೆ ವಿದ್ಯುತ್ ತಗುಲಿ ಸ್ಥಳದಲ್ಲಿ ಇಬ್ಬರು ಮೃತಪಟ್ಟಿರುವ ಧಾರಣ ಘಟನೆ ರವಿವಾರ ಸಂಜೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32) ಹಾಗೂ ಪ್ರೀತಮ ಮಲ್ಲಿಕಾರ್ಜುನ ಪೂಜಾರಿ (7) ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಧ್ಯಾಹ್ನ ಮೃತ ಮಲ್ಲಿಕಾರ್ಜುನ ತೋಟದಲ್ಲಿ ಬೋರ್ವೆಲ್ ಮೋಟಾರ್ ಪ್ರಾರಂಭಿಸಿ ಬೇರೆ ಕಡೆ ನೀರು ತಿರುವಿಗೆ ( ವಾಲ್ ಟರ್ನ್) ಮುಂದಾಗಿದ್ದಾರೆ, ಆದರೆ ಬೋರ್ವೆಲ್ ಹತ್ತಿರ ವಯರ್ ತುಂಡಾಗಿದ್ದು ಗಮನಿಸದೇ ವಿದ್ಯುತ್ ಕೈಗೆ ತಗೋಲಿ ಸಾವು ಸಂಭವಿಸಿದೆ, ಅಪ್ಪನನ್ನು ಉಳಿಸಲು ಹೋಗಿ ಮಗ ಪ್ರೀತಮ್ ಕೂಡ ಸ್ಥಳದಲ್ಲಿ ಮೃತಪಟ್ಟು ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ :- ಜಿಲ್ಲೆ ಅಫಜಲಪುರ ತಾಲೂಕಿನ ಪುಣ್ಯ ಕ್ಷೇತ್ರ ಗಾಣಗಾಪುರದಲ್ಲಿಂದು ಶ್ರೀ ಗುರುದತ್ತನ ಸನ್ನಿಧಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಪ್ರತಿ ವರ್ಷದ ಸಂಪ್ರದಾಯದಂತೆ ಕಾರ್ತಿಕ ಮಾಸದಲ್ಲಿ ಬರುವ ಗೌರಿ ಹುಣ್ಣಿಮೆಯಂದು ಉತ್ಸವ ನಡೆಯುತ್ತೆ.. ಆಂಧ್ರ ತೆಲಂಗಾಣ ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಬರ್ತಾರೆ..ಪಲ್ಲಕ್ಕಿ ಉತ್ಸವದ ನಂತ್ರ ಮಧ್ಯಾನ ಸಂಗಮ ನದಿ ತೀರದಲ್ಲಿ ಸಾವಿರಾರು ಭಕ್ತರು ಸೇರಿ ಬುತ್ತಿ ಊಟ ಮಾಡುವುದು ಉತ್ಸವದ ಮತ್ತೊಂದು ವಿಶೇಷ..
ತುಮಕೂರು: ವಿಪಕ್ಷ ನಾಯಕ ಆರ್.ಅಶೋಕ್ ತುಮಕೂರು ಜಿಲ್ಲೆಯಲ್ಲಿ ಬರ ವೀಕ್ಷಣೆ ಮಾಡಿದ್ದಾರೆ..ಶಿರಾದ ರೈತರ ಜಮೀನಿಗೆ ತೆರಳಿ ಮಳೆ ಇಲ್ಲದೇ ಒಣಗಿರೋ ಬೆಳೆಯನ್ನ ಪರಿಶೀಲಿಸಿ,ರೈತರೊಟ್ಟಿಗೆ ಸಮಾಲೋಚನೆ ನಡೆಸಿದ್ದಾರೆ..ಇದೇ ವೇಳೆ ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಅಶೋಕ್ ಕಿಡಿಕಾರಿದ್ದಾರೆ.. ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಬರ ಅಧ್ಯಯನ ನಡೆಸಿದೆ..ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕ ಜ್ಯೋತಿಗಣೇಶ್, ಎಂಎಲ್ಸಿ ಚಿದಾನಂದ್ ಸೇರಿ ಸ್ಥಳೀಯರ ಮುಖಂಡರು ಬರ ವೀಕ್ಷಣೆ ನಡೆಸಿದ್ದಾರೆ.. ಶಿರಾ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ರೈತ ಪಾಂಡುರಂಗಪ್ಪ ಎನ್ನುವರ ಜಮೀನಿಗೆ ಭೇಟಿ ನೀಡಿದ ತಂಡ ರೈತ ಬೆಳೆದಿದ್ದ ಜೋಳ, ಹುರುಳಿ ಬೆಳೆಯನ್ನ ವೀಕ್ಷಿಸಿದ್ದಾರೆ..3 ಎಕರೆ 30 ಗುಂಟೆಯಲ್ಲಿ ಜೋಳ,ಹುರುಳಿ ಬೆಳೆದಿದ್ದ ರೈತ ಪಾಂಡುರಂಗಪ್ಪ ಆನೆ ಕಾಲು ಕಾಯಿಲೆಗೆ ತುತ್ತಾಗಿದ್ದಾರೆ..ಕಾಂಗ್ರೆಸ್ ನವರು ಯಾರು ಕೇಳಿಲ್ಲ,ಮೂರು ವರ್ಷದ ಹಿಂದೆ ಬೆಳೆ ವಿಮೆ ಮಾಡಿದ್ದೆ.ಹಣ ಬರಲಿಲ್ಲ, ಈಗ ಕಾಲು ಸರಿಯಿಲ್ಲ ಹಾಗಾಗಿ ಬೆಳೆ ವಿಮೆ ಕಟ್ಟಲಿಲ್ಲ.50 ಸಾವಿರ ಹಣ…