ಶಿವಮೊಗ್ಗ: ಆರ್ಥಿಕ ಸ್ಥಿತಿಗತಿಗೆ ಸರಿ ಹೋಗುವುದಾದರೆ ಆ ವರದಿ ಬರಲಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಒಕ್ಕಲಿಗರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದ್ದು, ಈ ವರದಿಯನ್ನು ಮನೆ ಬಾಗಿಲಿಗೆ ಹೋಗಿ ತಯಾರಿಸಲಾಗಿಲ್ಲ. ಬದಲಿಗೆ ಯಾವುದೋ ಕಂಪನಿಗೆ ಕೊಟ್ಟು ಏನೇನೋ ಮಾಡಿ ಆ ವರದಿ ತಯಾರು ಮಾಡಿದ್ದಾರೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ಜಾತಿ ಜನಗಣತಿ ವರದಿ ಬಗ್ಗೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ಶಾಸಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ನಾನು ಸಹ ಭಾಗವಹಿಸಿದ್ದೆ. ಒಕ್ಕಲಿಗ ಸಮಾಜಕ್ಕೆ ಇನ್ನೊಂದು ವರ್ಗಕ್ಕೆ ಏನು ಸಿಗಬಾರದು ಎಂಬ ಚಿಂತನೆ ಇಲ್ಲ ಎಂದರು. ಜಾತಿ ಜನಗಣತಿ ವರದಿ ತಯಾರಾಗಿ 8 ವರ್ಷ ಕಳೆದಿದೆ. 2017 ರ ಕೊನೆಯಲ್ಲಿ ಈ ವರದಿ ತಯಾರಾಗಿದೆ.
NPCI guidelines: ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಡೀ ಆ್ಯಕ್ಟಿವೇಟ್: ಕಾರಣ!
ಅಂದಿನ ಮುಖ್ಯಮಂತ್ರಿ ಆ ವರದಿಯನ್ನು ಸ್ವೀಕಾರ ಮಾಡಿರಲಿಲ್ಲ. ಇವತ್ತು ಅದೇ ಮುಖ್ಯಮಂತ್ರಿ ಸ್ವೀಕಾರ ಮಾಡುತ್ತೇನೆ ಅಂತಿದ್ದಾರೆ ಎಂದರು. ಈ ಹಿಂದೆ ನೀವು ಅಧಿಕಾರದಲ್ಲಿ ಇದ್ದಾಗ ಏಕೆ ವರದಿ ಸ್ವೀಕರಿಸಲಿಲ್ಲ? ಈ ವರದಿಯಲ್ಲಿ ಏನೋ ಇದೆ ಎಂಬುದು ನಿಮಗೆ ಗೊತ್ತಿದೆ. ನಮ್ಮ ಎಲ್ಲಾ ಸಮುದಾಯದ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗೆ ಸರಿ ಹೋಗುವುದಾದರೆ ಆ ವರದಿ ಬರಲಿ. ವರದಿ ಬರುವುದಾಗಿದ್ದರೆ 5 ವರ್ಷದ ಹಿಂದೆಯೇ ಬರುತ್ತಿತ್ತು. ಅದೊಂದು ರಾಜಕಾರಣದ ಆಟ ಆಗಬಾರದು ಎಂದರು.