Author: AIN Author

ಧಾರವಾಡ: ಬರಗಾಲದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ ನೇತೃತ್ವದಲ್ಲಿ ಜೆಡಿಎಸ್ ಬರ ಅಧ್ಯಯನ ತಂಡವು ಧಾರವಾಡ ಜಿಲ್ಲೆಯ ವಿವಿಧ ಊರುಗಳಿಗೆ ತೆರಳಿ ಬರ ಅಧ್ಯಯನ ನಡೆಸಿದ್ದಾರೆ. ಬರ ಅಧ್ಯಯನಕ್ಕೆಂದು ಹೋದ ಊರುಗಳಲ್ಲಿನ ಒಣಗಿದ ಬೆಳೆಯನ್ನು ತಂದು ಜಿಲ್ಲಾಧಿಕಾರಿಗೆ ಈ ತಂಡ ತೋರಿಸಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತ ಬೆಳೆದ ಬೆಳೆಗಳೆಲ್ಲ ನೀರಿಲ್ಲದೇ ಒಣಗಿವೆ. ರೈತ ತೀವ್ರ ಸಂಕಷ್ಟದಲ್ಲಿದ್ದಾನೆ. ಇದುವರೆಗೂ ರೈತರಿಗೆ ಬೆಳೆ ಪರಿಹಾರ ಸಿಕ್ಕಿಲ್ಲ. ಬೆಳೆವಿಮೆ ಕೂಡ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗದೇ ಬೆಳೆಗಳಿಗೆ ನೀರು ಹಾಯಿಸಲು ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ರೈತರ ಸಂಕಷ್ಟ ಮನವರಿಕೆ ಮಾಡಿಕೊಟ್ಟರು. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ 8 ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಹೇಳಿ ಕೇವಲ 5 ಗಂಟೆ ಮಾತ್ರ ವಿದ್ಯುತ್ ಕೊಡುತ್ತಿದೆ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಸುಳ್ಳು ಗ್ಯಾರಂಟಿಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ರೈತರ ಬಗ್ಗೆ ಶೀಘ್ರ ಕಾಳಜಿ ವಹಿಸಬೇಕು. ಕೇಂದ್ರ…

Read More

ಬಾಲಿವುಡ್ ಕಂಡ ಅಪರೂಪದ ಸಿನಿಮಾ ಮೇಕರ್ಸ್..ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿಗಿಂದು (Rajkumar Hirani) ಜನ್ಮದಿನದ ಶುಭಾಶಯ. ಮುನ್ನಾ ಬಾಯ್ ಎಂಬಿಬಿಎಸ್, ತ್ರಿ ಇಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವು ಹಿರಾನಿ ಡಂಕಿ (Dunki) ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ರಾಜ್ ಕುಮಾರ್ ಹಿರಾನಿ ಚಿತ್ರಗಳು ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶಗಳನ್ನು ಒಳಗೊಂಡಿರುತ್ತದೆ. ಫ್ಯಾಮಿಲಿ ಕುಳಿತು ನೋಡುವ ಸಿನಿಮಾಗಳಾಗಿರುತ್ತವೆ. ಇಂತಹ ಸ್ಟಾರ್ ಡೈರೆಕ್ಟರ್ ಶಾರುಖ್ ಖಾನ್ ಗೆ ಡಂಕಿ ಎಂಬ ಸಿನಿಮಾ ಅನೌನ್ಸ್ ಮಾಡಿರುವುದು ಗೊತ್ತೇ ಇದೆ. ಶಾರುಖ್ ಖಾನ್ ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್ ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ (Shahrukh Khan),…

Read More

ಮಂಗಳೂರು: ಆಪ್ತರ ಜೊತೆ ಸಚಿವ ಸತೀಶ್ ಜಾರಕಿಹೊಳಿ ದುಬೈ ಪ್ರವಾಸ ಕೈಗೊಂಡಿರುವ ಬಗ್ಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಸತೀಶ್ ಜಾರಕಿಹೊಳಿ ದುಬೈಗೆ ಹೋಗಿರುವುದರಲ್ಲಿ ತಪ್ಪೇನಿದೆ. ಶಿಸ್ತಿನ ರಾಜಕಾರಣಿಗಳಲ್ಲಿ ಸತೀಶ್ ಜಾರಕಿಹೊಳಿ ಕೂಡ ಒಬ್ಬರು. ಸತೀಶ್ ಜಾರಕಿಹೊಳಿ ಏನೇ ಮಾಡಿದರೂ ಅರ್ಥಪೂರ್ಣವಾಗಿರುತ್ತದೆ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿಜವಾದ ಕಾಂಗ್ರೆಸ್ಸಿಗ. ವಿರಾಮಕ್ಕಾಗಿ ದುಬೈಗೆ ಹೋಗಿರಬಹುದು, ಯಾವುದೇ ಸಂಶಯ ಬೇಡ ಎಂದರು. ಇನ್ನೂ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಧಾರವಾಡ ಜಿಲ್ಲೆಯಲ್ಲಿ ಮೂವರು ಪ್ರಮುಖರು ಸೇರ್ಪಡೆ ಸಾಧ್ಯತೆಯಿದೆ. ಬಿಜೆಪಿಯ ಮಾಜಿ ಸಚಿವರು, ಶಾಸಕರು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಇದೆ ಎಂದರು.

Read More

ಬೆಂಗಳೂರು: ಹುಳಬಿದ್ದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಆವರಣದ ಹಾಸ್ಟಲ್​​ ನಲ್ಲಿ ನಡೆದಿದೆ. ನಿನ್ನೆ ರಾತ್ರಿ ವಿದ್ಯಾರ್ಥಿಗಳಿಗೆ ನೀಡಲಾದ ಅಹಾರದಲ್ಲಿ ಹುಳ ಪತ್ತೆಯಾಗಿತ್ತು. ತಕ್ಷಣ ಅದ ದೃಷ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿದ್ಯಾರ್ಥಿಗಳು, ಹಾಸ್ಟಲ್ ಮುಂಬಾಗದಲ್ಲಿ ಪ್ರತಿಭಟನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಆರೋಪಗಳೇನು..?  ಬೆಂಗಳೂರು ವಿವಿ ಹಾಸ್ಟೆಲ್‌ನಲ್ಲಿ ಮೂಲಸೌಕರ್ಯ ಕೊರತೆಯ ಬಗ್ಗೆ ಪ್ರಶ್ನೆ ಮಾಡಿದ್ರೆ ಗೂಂಡಾಗಳ ರೀತಿ ವರ್ತನೆ ತೋರುತ್ತಾರೆ. ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ಬೆಡ್‌ ವ್ಯವಸ್ಥೆ ಮಾಡಿಲ್ಲ. ಸೂಕ್ತ ಶೌಚಾಲಯ ಇಲ್ಲ, ಗುಣಮಟ್ಟದ ಊಟ ಕೊಡುತ್ತಿಲ್ಲ 650 ವಿದ್ಯಾರ್ಥಿಗಳಿರುವ ಹಾಸ್ಟೆಲ್‌ ಇಲ್ಲಿಒಂದು ಕೊಠಡಿಯಲ್ಲಿ 8 ಮಂದಿಗೆ ಅವಕಾಶ ಬೇರೆ ಬೇರೆ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿರುವ ಆರೋಪ ಮಾಡಿದ್ಧಾರೆ. ವಾರ್ಡನ್​ ದಬ್ಬಾಳಿಕೆ ಹುಳಬಿದ್ದ ಆಹಾರವನ್ನೇ ತಿನ್ನುವಂತೆ ವಿದ್ಯಾರ್ಥಿನಿಲಯದ ವಾರ್ಡನ್​ ದಬ್ಬಾಳಿಕೆ ಮಾಡುತ್ತಿದ್ದಾರೆ.ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹಾಗಾಗಿ ಹಾಸ್ಟಲ್ ವಾರ್ಡನನ್ನು ಕೂಡಲೇ ಅಮಾನತು ಮಾಡಬೇಕು ಎಂದು ವಿದ್ಯಾರ್ಥಿ ಮುಖಂಡರು ವಿಶ್ವವಿದ್ಯಾಲಯದ ಕುಲಪತಿ…

Read More

ವಿಜಯನಗರ: ಅವರಿಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ರು. ಒಂದೇ ಏರಿಯಾದವರಿಗಿರೋ ಹಿನ್ನೆಲೆ ಆರಂಭದಿಂದಲೂ ಸ್ನೇಹ ಇತ್ತು. ಆ ಸ್ನೇಹ ಕಳೆದೆಂಟು ವರ್ಷಗಳ ಹಿಂದೆ ಪ್ರೀತಿಗೆ ಬದಲಾಗಿತ್ತು. ಪರಸ್ಪರ ಬೇರೆ ಜಾತಿಯವರಾಗಿದ್ರು. ಮನೆಯವರನ್ನು ಒಪ್ಪಿಸಿ ಮದುವೆಯಾಗೋದಕ್ಕೆ ನಿರ್ಧಾರ ಮಾಡಿದ್ರು. ಆದ್ರೇ, ಅದೇನಾಯ್ತೋ ಗೊತ್ತಿಲ್ಲ ಇನ್ನೇರಡು ದಿನದಲ್ಲಿ ಮದುವೆ ಎನ್ನುವಾಗಲೇ ಆಕೆ  ಅವನ ಮನೆಯಲ್ಲಿ  ನೇಣಿಗೆ ಶರಣಾಗಿದ್ದಾಳೆ. ಹಲವು ಅನುಮಾನ ಹುಟ್ಟಿಸಿದ ಮಧುಮಗಳ ಸಾವಿನ ಈ ಕಥೆ, ಆತ್ಮಹತ್ಯೆ ಪ್ರಚೋದನೆಗೆ ಜಾತಿ ತಾರತಮ್ಯವೇ ಕಾರಣವಾಯ್ತೇ,-? ಹೀಗೆ  ಪೋಟೋದಲ್ಲಿ ಮುದ್ದುಮುದ್ದಾಗಿ ಕಾಣುವ ಈ ಯುವತಿಯ ಹೆಸರು ಐಶ್ವರ್ಯ ಎಲ್ಲವೂ ಅಂದು ಕೊಂಡಂತೆ ನಡೆದಿದ್ರೇ, ಇದೇ 23 ನೇ ತಾರಿಖಿನಂದು ಹಸೆಮಣೆ ಏರುವ ಮೂಲಕ ಹೊಸದೊಂದು ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಆಕೆಯ ದುರಾದೃಷ್ಟಕ್ಕೆ ಇವತ್ತು ಆಕೆ ಮಸಣ ಸೇರಿದ್ದಾಳೆ. ಆದ್ರೇ ಸಾವಿಗೆ ಕಾರಣ ಮಾತ್ರ ಸದ್ಯಕ್ಕೆ ನಿಗೂಢವಾಗಿದೆ. ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂನಲ್ಲಿ ವಾಸ ಮಾಡುತ್ತಿದ್ದ ಐಶ್ವರ್ಯ ಮತ್ತು ಆಶೋಕ ಮೊದಲಿನಿಂದಲೂ ಸ್ನೇಹಿತರು.  ಕಳೆದ ಏಳೆಂಟು ವರ್ಷದ…

Read More

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ. ಸತೀಶ್ ಜಾರಕಿಹೊಳಿ​​ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ. ಸತೀಶ್​ ಜಾರಕಿಹೊಳಿಯನ್ನು ಸಿಎಂ ಆಗಿ ನೋಡಬೇಕೆಂದು ಹೇಳುತ್ತಿದ್ದಾರೆ. ಮುಂದಿನ ದಿನದಲ್ಲಿ ಬೆಳಗಾವಿ ಗಡಿ ಭಾಗದಿಂದ ಒಬ್ಬ ಸಿಎಂ ಆಗುತ್ತಾರೆ. ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟೋ ಸತ್ಯವೋ, ಸತೀಶ್ ಜಾರಕಿಹೊಳಿ ಅಣ್ಣ ಸಿಎಂ ಆಗುವುದು ಕೂಡ ಅಷ್ಟೇ ಸತ್ಯ ಎಂದು ಕಾಂಗ್ರೆಸ್​ ಶಾಸಕ ವಿಶ್ವಾಸ್ ವೈದ್ಯ ಹೇಳಿದ್ದಾರೆ. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ಕಾಂಗ್ರೆಸ್‌ನಲ್ಲಿ  ಮತ್ತೆ ಮುಂದಿನ ಮುಖ್ಯಮಂತ್ರಿ (CM) ಬಗ್ಗೆ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ತೆರೆದ ವೇದಿಕೆಯ ಮೇಲೆಯೇ ಸತೀಶ್ ಜಾರಕಿಹೊಳಿ (Satish Jarkiholi) ಮುಂದಿನ ಸಿಎಂ ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ (Vishwas Vaidya) ಹೇಳಿಕೆ ನೀಡಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಮಾತನಾಡಿರುವ ವಿಶ್ವಾಸ ವೈದ್ಯ, ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಾತೀತವಾಗಿ ಪ್ರಭಾವ ಬೆಳೆಸಿಕೊಂಡಿರುವ ಸತೀಶ್ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ…

Read More

ಶಿವಮೊಗ್ಗ: ಸ್ಪೀಕರ್​ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಯಾವ ರೀತಿಯಲ್ಲಿ ಹೇಳಿದ್ದಾರೆಂದು ಅವರೇ ಉತ್ತರ ಕೊಡಬೇಕಾಗುತ್ತೆ. ನಮ್ಮಂಥವರು ಕೆಲವೊಮ್ಮೆ ಮಾತಾಡುವಾಗ ಹುಷಾರಾಗಿ ಇರಬೇಕು. ನಮ್ಮ ಸರ್ಕಾರ ಧರ್ಮಾತೀತವಾಗಿ ಒಳ್ಳೆ ಉದ್ದೇಶಕ್ಕೆ ಕೆಲಸ ಮಾಡ್ತಿದೆ ಎಂದರು.

Read More

ಬೆಂಗಳೂರು: ಇವರೆಲ್ಲಾ ಬ್ಲೂಫಿಲಂ ತೋರಿಸಿ ಮೇಲೆ ಬಂದವರು ಎಂಬ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಾನು ಬ್ಲೂಫಿಲಂ ತೋರಿಸಿದ್ದನ್ನು ಸಾಬೀತು ಮಾಡಿದರೇ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ನಗರದಲ್ಲಿ ಮಾತನಾಡಿದ ಡಿಕೆಶಿ, ದೊಡ್ಡ ಆಲಹಳ್ಳಿ ಸುತ್ತಮುತ್ತ ಯಾವನಾದರೂ ಒಬ್ಬ ನಾನು ಬ್ಲೂ ಫಿಲಂ ತೋರಿಸಿದ್ದೀನಿ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕುಮಾರಸ್ವಾಮಿ ಕನಕಪುರಕ್ಕೆ ಬರಲಿ, ಬ್ಲೂ ಫಿಲಂ ಬಗ್ಗೆ ಮಾತಾಡಲಿ. ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗುತ್ತೆ. ವಿಧಾನಸಭೆ ಚುನಾವಣೆಯಲ್ಲಿ ಕನಕಪುರಕ್ಕೆ ಬಂದು ಕುಮಾರಸ್ವಾಮಿ ಪ್ರಚಾರ ಮಾಡಿಲ್ಲ‌‌. ಬಂದು ಬ್ಲೂ ಫಿಲಂ ಬಗ್ಗೆ ಹೇಳಬೇಕಿತ್ತು, ಆಗ ಗೊತ್ತಾಗೋದು ಎಂದು ಟಾಂಗ್‌ ಕೊಟ್ಟರು. ನನಗೆ ಯಾರ್ ಬ್ರೇಕ್ ಹಾಕ್ತಾರೆ ರೀ, ಪ್ರಕೃತಿ ನಿಯಮ ಇದೆ. ನನಗೆ ಯಾರು ಬ್ರೇಕ್ ಗೀಕ್ ಹಾಕಲ್ಲ. ಕೆಲವರು ಲಿಮಿಟೇಶನ್ ದಾಟುತ್ತಾರೆ ಅಷ್ಟೇ. ಕುಮಾರಸ್ವಾಮಿ ಜೊತೆ ಗುದ್ದಾಟಕ್ಕೆ ನನಗೆ ಟೈಂ ಇಲ್ಲ. ಅಯ್ಯೋ ಪಾಪ ಅವರಿಗೆ ಪ್ರಾಬ್ಲಂ ಇದೆ.…

Read More

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ‌.ಕುಮಾರಸ್ವಾಮಿ ವಿರುದ್ಧ ಮತ್ತೆ ಪೋಸ್ಟರ್ ವಾರ್ ಶುರುವಾಗಿದೆ. ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಕೆರಳಿದ ದುಷ್ಕರ್ಮಿಗಳು, ಸಿನಿಮಾ ಮಾದರಿಯ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ನಗರದ ಶೇಷಾದ್ರಿಪುರ ರಸ್ತೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಪೋಸ್ಟರ್ ಅಂಟಿಸಿದ್ದಾರೆ. ಕರೆಂಟ್ ಕಳ್ಳ ಖ್ಯಾತಿಯ ಹೆಚ್​ಡಿಕೆ ನಿರ್ಮಾಣದ ಚಿತ್ರ “ಪೆನ್ ಡ್ರೈವ್ ಬ್ರದರ್” ಪ್ರಾಮಾಣಿಕ ಕರೆಂಟ್ ಕಳ್ಳ ಖ್ಯಾತಿಯ ನಿರ್ದೇಶನ, ಬರೀ ಟೀಸರ್ ಗೆ ಇಷ್ಟೊಂದು ಟೆನ್ಶನ್ ಆದರೆ ಹೇಗೆ ಸಿನಿಮಾ ಇನ್ನೂ ಬಾಕಿಯಿದೆ. ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ. ಚಿತ್ರದ ನಿರ್ಮಾಣದ ವೆಚ್ಚ 68,000 ಎಂದು ಪೋಸ್ಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.

Read More

ಬೆಂಗಳೂರು: ನನ್ನ ಮೊದಲ ಆದ್ಯತೆ ‘ಮಂಡ್ಯ ಜಿಲ್ಲೆಯಿಂದಲೇ ಪಕ್ಷ ಸಂಘಟನೆ’. ನನ್ನನ್ನು ಈ ಭಾಗದಿಂದ ಹೆಚ್ಚು ನಾಡಿಗೆ ಪರಿಚಯಿಸಿದೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಶಾಸಕರನ್ನು ಗೆಲ್ಲಿಸಲು ಶ್ರಮ ಹಾಕುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ನಾರಾಯಣಗೌಡರು ನಮ್ಮ ಜೊತೆಯಲ್ಲೇ ಇದ್ದಾರೆ. ಎಲ್ಲೂ ಹೋಗಿಲ್ಲ. ನಾನು ಅಧ್ಯಕ್ಷರಾದ ನಂತರ ಬಂದು ಆಶೀರ್ವಾದ ಮಾಡಿ ಹೋಗಿದ್ದಾರೆ ಎಂದು ತಿಳಿಸಿದರು. https://ainlivenews.com/another-victim-of-bescoms-negligence-cm-dcm-energy-minister-directly-responsible-for-death-of-mother-daughte/ ಉಪ ಚುನಾವಣೆ ನಂತರ ಜನರತ್ತ ಹೋಗುವಲ್ಲಿ ವಿಫಲರಾಗಿದ್ದೇವೆ. ಹೀಗಾಗಿ, ನಮ್ಮ ಕ್ಷೇತ್ರಗಳನ್ನ ಕಳೆದುಕೊಂಡಿದ್ದೇವೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಶಾಸಕರನ್ನ ಗೆಲ್ಲಿಸಬೇಕು. ಆ ಮೂಲಕ ಪಕ್ಷಕ್ಕೆ ಭದ್ರ ಬುನಾದಿ ಹಾಕಲು ಸಂಕಲ್ಪ ಮಾಡಲಾಗುವುದು ಎಂದು ಹೇಳಿದರು. ನಿಮ್ಮ ದರ್ಪಕ್ಕೆ ತಕ್ಕ ಉತ್ತರ ಕೊಡ್ತೀವಿ ಕಲಬುರ್ಗಿಯಲ್ಲಿ ಮಣಿಕಂಠ್ ರಾಠೋಡ್ ಕ್ಷೇತ್ರದ ಶಾಸಕರ ವಿರುದ್ಧ ಲೋಕಾಯುಕ್ತಗೆ ದೂರು ಕೊಟ್ಟಿದ್ದಾರೆ. ಅವರಿಗೆ ಕೊಟ್ಟಿದ್ದ ಗನ್ ಮ್ಯಾನ್ ಹಿಂಪಡೆದಿದ್ದಾರೆ. ನಿಮ್ಮ ಅಧಿಕಾರದ ದರ್ಪಕ್ಕೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ. ಸಚಿವ ಬಿ.ಝಡ್.…

Read More