ವಿಜಯನಗರ: ಅವರಿಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ರು. ಒಂದೇ ಏರಿಯಾದವರಿಗಿರೋ ಹಿನ್ನೆಲೆ ಆರಂಭದಿಂದಲೂ ಸ್ನೇಹ ಇತ್ತು. ಆ ಸ್ನೇಹ ಕಳೆದೆಂಟು ವರ್ಷಗಳ ಹಿಂದೆ ಪ್ರೀತಿಗೆ ಬದಲಾಗಿತ್ತು. ಪರಸ್ಪರ ಬೇರೆ ಜಾತಿಯವರಾಗಿದ್ರು. ಮನೆಯವರನ್ನು ಒಪ್ಪಿಸಿ ಮದುವೆಯಾಗೋದಕ್ಕೆ ನಿರ್ಧಾರ ಮಾಡಿದ್ರು. ಆದ್ರೇ, ಅದೇನಾಯ್ತೋ ಗೊತ್ತಿಲ್ಲ ಇನ್ನೇರಡು ದಿನದಲ್ಲಿ ಮದುವೆ ಎನ್ನುವಾಗಲೇ ಆಕೆ ಅವನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಹಲವು ಅನುಮಾನ ಹುಟ್ಟಿಸಿದ ಮಧುಮಗಳ ಸಾವಿನ ಈ ಕಥೆ, ಆತ್ಮಹತ್ಯೆ ಪ್ರಚೋದನೆಗೆ ಜಾತಿ ತಾರತಮ್ಯವೇ ಕಾರಣವಾಯ್ತೇ,-? ಹೀಗೆ ಪೋಟೋದಲ್ಲಿ ಮುದ್ದುಮುದ್ದಾಗಿ ಕಾಣುವ ಈ ಯುವತಿಯ ಹೆಸರು ಐಶ್ವರ್ಯ ಎಲ್ಲವೂ ಅಂದು ಕೊಂಡಂತೆ ನಡೆದಿದ್ರೇ, ಇದೇ 23 ನೇ ತಾರಿಖಿನಂದು ಹಸೆಮಣೆ ಏರುವ ಮೂಲಕ ಹೊಸದೊಂದು ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ಆಕೆಯ ದುರಾದೃಷ್ಟಕ್ಕೆ ಇವತ್ತು ಆಕೆ ಮಸಣ ಸೇರಿದ್ದಾಳೆ. ಆದ್ರೇ ಸಾವಿಗೆ ಕಾರಣ ಮಾತ್ರ ಸದ್ಯಕ್ಕೆ ನಿಗೂಢವಾಗಿದೆ. ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂನಲ್ಲಿ ವಾಸ ಮಾಡುತ್ತಿದ್ದ ಐಶ್ವರ್ಯ ಮತ್ತು ಆಶೋಕ ಮೊದಲಿನಿಂದಲೂ ಸ್ನೇಹಿತರು.
ಕಳೆದ ಏಳೆಂಟು ವರ್ಷದ ಹಿಂದೆ ಇಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಇಬ್ಬರು ಖಾಸಗಿ ಕಂಪನಿಯಲ್ಲಿ ಒಳ್ಳೆಯ ಹುದ್ದೇಯಲ್ಲಿಯೂ ಇದ್ರು. ಐಶ್ವರ್ಯ ಎಸ್ಸಿ ಜನಾಂಗಕ್ಕೆ ಸೇರಿದ್ರೇ ಆಶೋಕ ಗೌಂಡರ್ ಜಾತಿಗೆ ಸೇರಿದವರು. ಹೀಗಾಗಿ ಮದುವೆಗೆ ಮನೆಯಲ್ಲಿ ಸಾಕಷ್ಟು ವಿರೋಧವಿತ್ತು. ಆದ್ರೇ, ಇಬ್ಬರು ಮನೆಯವರನ್ನು ಒಪ್ಪಿಸಿ ಮದುವೆಗೆ ಒಪ್ಪಿಗೆ ಪಡೆದ್ರು. ಇದೇ 23ರಂದು ಮದುವೆ ಇತ್ತು. ಮದುವೆಗೆ ಆಶೋಕ ಕಡೆಯವರು ಸಾಕಷ್ಟು ಕಂಡಿಷನ್ ಕೂಡ ಹಾಕಿದ್ರು. ಮದುವೆಗೂ ಮುನ್ನೆ ಮನೆಯಲ್ಲಿ ಶಾಸ್ತ್ರ ಇದೆ ಎಂದು ಆಶೋಕ ಕಡೆಯವರು ಐಶ್ವರರ್ಯಳನ್ನು ಕರೆದುಕೊಂಡು ಹೋಗಿದ್ದಾರೆ. ಆದ್ರೇ, ಅದೇನಾಯ್ತೋ ಗೊತ್ತಿಲ್ಲ. ಐಶ್ವರ್ಯ ಮದುವೆಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
Vishwas Vaidya: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ CM ಆಗುವುದು ಅಷ್ಟೇ ಸತ್ಯ: ಕಾಂಗ್ರೆಸ್ ಶಾಸಕ
ಇನ್ನೂ ಐಶ್ವರ್ಯ ಪೋಷಕರು ಹೇಳೋ ಪ್ರಕಾರ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋದಾಗ ಜಾತಿ ತಾರತಮ್ಯ ಮಾಡಿದ್ದಾರೆ. ಮದುವೆಗೆ ಹತ್ತು ದಿನ ಮೊದಲೇ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಶಾಸ್ತ್ರ ಮಾಡೋದಿದ್ರೆ, ನಮ್ಮದುರಿಗೆ ಮಾಡಬೇಕಿತ್ತು. ಆಕೆಗೆ ಮಾನಸಿಕ ಕುಗ್ಗಿಸಲು ಮನೆಗೆ ಕರೆದುಕೊಂಡು ಹೋಗಿ ನಿರಂತರವಾಗಿ ಜಾತಿ ನಿಂದನೆ ಮಾಡಿದ್ದಾರೆ. ಹೀಗಾಗಿ ಆಕೆ ಸುಸೈಡ್ ಮಾಡಿಕೊಂಡಿರಬಹುದು. ಆದರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಳಲಲ್ಲ ಎನ್ನುತ್ತಿದ್ದಾರೆ ಪೋಷಕರು..
ಹೀಗಾಗಿ ಸದ್ಯ ಸಾವಿಗೆ ಪ್ರಚೋದನೆ ನೀಡಿದ್ದಾರೆನ್ನುವ ಆರೋಪದಡಿ ಟಿಬಿ ಡ್ಯಾಂ ಪೊಲಿಸ್ ಠಾಣೆಯಲ್ಲಿ ದಾಖಲಾಗಿದೆ. ಜಾಗತಿಕವಾಗಿ ಪ್ರಪಂಚ ಎಷ್ಟೇ ಬೆಳೆದ್ರು ಕೆಲವರಲ್ಲಿ ಇನ್ನೂ ಕೂಡ ಮೇಲು ಕೀಳೆಂಬ ಭಾವನೆ ಇರೋದು ಮಾತ್ರ ದುರ್ದೈವದ ಸಂಗತಿಯಾಗಿದೆ. ಅದೇನೇ ಇರಲಿ ಬಾಳಿ ಬೆಳಗಬೇಕಾದ ಯುವತಿ ಮಾತ್ರ ದುರಂತ ಸಾವಿನೊಂದಿಗೆ ತನ್ನ ಜೀವನ ಅಂತ್ಯಕೊಳಿಸಿರೋದು ಮಾತ್ರ ಬೇಸರದ ಸಂಗತಿಯಾಗಿದೆ.