ಬೆಂಗಳೂರು: ಇವರೆಲ್ಲಾ ಬ್ಲೂಫಿಲಂ ತೋರಿಸಿ ಮೇಲೆ ಬಂದವರು ಎಂಬ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಾನು ಬ್ಲೂಫಿಲಂ ತೋರಿಸಿದ್ದನ್ನು ಸಾಬೀತು ಮಾಡಿದರೇ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು.

TA Sharavana: ಬೆಸ್ಕಾಂ ನಿರ್ಲಕ್ಷಕ್ಕೆ ಇನ್ನೆಷ್ಟು ಬಲಿ: ತಾಯಿ, ಮಗಳ ಸಾವಿಗೆ ಸಿಎಂ , ಡಿಸಿಎಂ ಇಂಧನ ಸಚಿವರೇ ನೇರ ಹೊಣೆ : ಟಿ.ಎ. ಶರವಣ ಕಿಡಿ!

ನಗರದಲ್ಲಿ ಮಾತನಾಡಿದ ಡಿಕೆಶಿ, ದೊಡ್ಡ ಆಲಹಳ್ಳಿ ಸುತ್ತಮುತ್ತ ಯಾವನಾದರೂ ಒಬ್ಬ ನಾನು ಬ್ಲೂ ಫಿಲಂ ತೋರಿಸಿದ್ದೀನಿ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕುಮಾರಸ್ವಾಮಿ ಕನಕಪುರಕ್ಕೆ ಬರಲಿ, ಬ್ಲೂ ಫಿಲಂ ಬಗ್ಗೆ ಮಾತಾಡಲಿ. ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗುತ್ತೆ. ವಿಧಾನಸಭೆ ಚುನಾವಣೆಯಲ್ಲಿ ಕನಕಪುರಕ್ಕೆ ಬಂದು ಕುಮಾರಸ್ವಾಮಿ ಪ್ರಚಾರ ಮಾಡಿಲ್ಲ‌‌. ಬಂದು ಬ್ಲೂ ಫಿಲಂ ಬಗ್ಗೆ ಹೇಳಬೇಕಿತ್ತು, ಆಗ ಗೊತ್ತಾಗೋದು ಎಂದು ಟಾಂಗ್‌ ಕೊಟ್ಟರು.

ನನಗೆ ಯಾರ್ ಬ್ರೇಕ್ ಹಾಕ್ತಾರೆ ರೀ, ಪ್ರಕೃತಿ ನಿಯಮ ಇದೆ. ನನಗೆ ಯಾರು ಬ್ರೇಕ್ ಗೀಕ್ ಹಾಕಲ್ಲ. ಕೆಲವರು ಲಿಮಿಟೇಶನ್ ದಾಟುತ್ತಾರೆ ಅಷ್ಟೇ. ಕುಮಾರಸ್ವಾಮಿ ಜೊತೆ ಗುದ್ದಾಟಕ್ಕೆ ನನಗೆ ಟೈಂ ಇಲ್ಲ. ಅಯ್ಯೋ ಪಾಪ ಅವರಿಗೆ ಪ್ರಾಬ್ಲಂ ಇದೆ. ಈಗಲೂ 21 ಥಿಯೇಟರ್ ಇವೆ. ನಮ್ಮದು ಎಲ್ಲಾದ್ರೂ ಉಂಟೇನ್ರಿ. ದೊಡ್ಡ ಆಲಹಳ್ಳಿ, ಕೋಡಹಳ್ಳಿ, ಸಾತನೂರಿನಲ್ಲಿ ಹೋಗಿ ಜನರನ್ನ ಕೇಳಿ. ಒಬ್ಬ ಏನಾದ್ರೂ ಡಿಕೆಶಿ ಬ್ಲೂ ಫಿಲ್ಮ್ ತೋರಿಸ್ತಿದ್ದ ಅಂದ್ರೆ ನಾನು ರಾಜಕೀಯ ನಿವೃತ್ತಿ ತಗೋತೀನಿ ಎಂದು ತಿರುಗೇಟು ಕೊಟ್ಟರು.

Share.