Author: AIN Author

ಹುಬ್ಬಳ್ಳಿ; ಕಲಘಟಗಿ ತಾಲ್ಲೂಕಿನ ಭೋಗೇನಾಗರಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ ಬಸಪ್ಪ ದಾಸಪ್ಪನವರ (35) ಅವರನ್ನು ಬುಧವಾರ ತಡರಾತ್ರಿ ಕೊಲೆ ಮಾಡಲಾಗಿದೆ. ಆಸ್ತಿ ವಿಚಾರದ ದ್ವೇಷದಲ್ಲಿ ಸಂಬಂಧಿಕರೇ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನಿಂಗಪ್ಪ ಅವರ ಊರು ಬಗಡಗೇರಿಯ ಪ್ರಯಾಣಿಕರ ತಂಗುದಾಣ ಪ್ರದೇಶದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ತಲೆ, ಕುತ್ತಿಗೆ ಭಾಗದಲ್ಲಿ ರಕ್ತ ಸೋರಿದೆ. ನಿಂಗಪ್ಪ ಅವರ ಅತ್ತೆಯ ಆಸ್ತಿ ಮಾರಾಟ ವಿಚಾರದ ದ್ವೇಷದಲ್ಲಿ ಕೃತ್ಯ ಸಂಬಂಧಿಕರಿಬ್ಬರು ಕೃತ್ಯ ಎಸಗಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀಶೈಲ ಕೌಜಲಗಿ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಕರಣಕ್ಕೆ ಸಬಂಧಿಸಿದಂತೆ ತನಿಖೆ ಮುಂದುವರಿದಿದೆ. ಆರೋಪಿಗಳಿಗಾಗಿ ಶೋಧ: ಆಸ್ತಿ ವಿಚಾರಕ್ಕೆ ನಿಂಗಪ್ಪ ಅವರ ಸಂಬಂಧಿಕರೇ ಕೊಲೆ ಮಾಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ತಿಳಿಸಿದರು.

Read More

ಮಳೆಗಾಲ ಅಂದ್ರೆ ಕೆಲವರಿಗೆ ತುಂಬಾ ಕಿರಿಕಿರಿ ಅನಿಸಿದ್ರೆ, ಇನ್ನೂ ಕೆಲವರಿಗೆ ತುಂಬಾ ಇಷ್ಟ. ಈ ಮಧ್ಯೆ ನಾವು ನಮ್ಮ ತ್ವಚೆಯ ಮೇಲೂ ಗಮನಹರಿಸಬೇಕಾದ ಅವಶ್ಯಕತೆ ಇದೆ. ಮಳೆಗಾಲದಲ್ಲಿ ಚರ್ಮದ ತುರಿಕೆ, ಅಲರ್ಜಿ, ಗುಳ್ಳೆ ಮೊದಲಾದ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ಸಮಸ್ಯೆಗಳಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಬಹುದಾದ ಕೆಲವೊಂದು ಸಲಹೆಗಳನ್ನು ಇಲ್ಲಿ ವಿವರಿಸಲಾಗಿದೆ. * ನಿಮ್ಮ ಚರ್ಮ ಒಣಗಿದಂತೆ ಅಥವಾ ತುರಿಕೆ ಕಂಡುಬಂದರೆ ಕೊಬ್ಬರಿ ಎಣ್ಣೆಯನ್ನು ಹಚ್ಚೊ ಅರ್ಧ ಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಈ ರೀತಿಯ ಸಮಸ್ಯೆಯಿಂದ ಪಾರಾಗಬಹುದು. * ಸ್ನಾನ ಮಾಡಿದ ಬಳಿಕ ಮಾಯಿಸ್ಚರೈಸರ್ ಬಳಕೆ ಮಾಡಿ. * ನೀರು, ಜ್ಯೂಸ್ ಹೆಚ್ಚಾಗಿ ಕುಡಿಯಿರಿ. ಹೆಚ್ಚಾಗಿ ಬಿಸಿ ನೀರು ಕುಡಿಯುವುದು ಸೂಕ್ತ. ಅಲ್ಲದೆ ಮುಖವನ್ನು 3-4 ಬಾರಿ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗಿ ಆಕರ್ಷಕ ತ್ವಚೆ ಕಾಂತಿ ಪಡೆಯಬಹುದು. * ಮುಖದಲ್ಲಿ ಮೊಡವೆ ಹಾಗೂ ಗುಳ್ಳೆಗಳಂತಹ ಸಮಸ್ಯೆಯಿದ್ದರೆ ಮುಲಾಮು ಹಚ್ಚುವ ಬದಲು ಅರಿಶಿಣ ಹಚ್ಚುವುದು…

Read More

ಹುಬ್ಬಳ್ಳಿ ;ಕಲಬುರ್ಗಿಯಿಂದ ಹುಬ್ಬಳ್ಳಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದ ಕಲಬುರ್ಗಿಯ ಅನ್ನಪೂರ್ಣಾ ಭಜಂತ್ರಿ ಅವರ ಬ್ಯಾಗ್‌ನಲ್ಲಿದ್ದ ₹3.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಅನ್ನಪೂರ್ಣಾ ಅವರು ಕಲಬುರ್ಗಾದಿಂದ ಬಸ್‌ನಲ್ಲಿ ವಿಜಯಪುರ ಮಾರ್ಗವಾಗಿ ಹುಬ್ಬಳ್ಳಿಗೆ ಬಂದಿದ್ದರು. ನಗರದ ಅಕ್ಷಯ ಕಾಲೊನಿಯ ಸಹೋದರಿ ಮನೆಗೆ ಬಂದು ಬ್ಯಾಗ್‌ ನೋಡಿದಾಗ, ಹರಿತವಾದ ವಸ್ತುವಿನಿಂದ ಕೊಯ್ದು 65 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗೋಕುಲ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕಿರುತೆರೆಯಲ್ಲಿ ಹಾವಳಿ ಮಾಡಿದ ಮೇಲೆ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಮೋಡಿ ಮಾಡುತ್ತಿರುವ ಶರಣ್ಯ ಶೆಟ್ಟಿ (Sharanya Shetty) ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಸಂಚಲನ ಸೃಷ್ಟಿಸುತ್ತಲೇ ಇರುತ್ತಾರೆ. ನಯಾ ಲುಕ್‌ನಲ್ಲಿ ನಟಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ. ಹಳದಿ ಬಣ್ಣದ ಮಾಡ್ರರ್ನ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಶರಣ್ಯ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಶರಣ್ಯ ಹೊಸ ಅವತಾರಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಗಟ್ಟಿಮೇಳ’ (Gattimela) ಸೀರಿಯಲ್‌ನ ಸಾಹಿತ್ಯ ಪಾತ್ರದ ಮೂಲಕ ಟಿವಿ ಪ್ರಿಯರ ಮನೆಗೆದ್ದ ಚೆಲುವೆ ಈಗ ಬೆಳ್ಳಿಪರದೆಯಲ್ಲಿ ಹೀರೋಯಿನ್ ಮಿಂಚ್ತಿದ್ದಾರೆ. ಈಗಾಗಲೇ 1980, ಹುಟ್ಟುಹಬ್ಬದ ಶುಭಾಶಯಗಳು, ಸ್ಫೂಕಿ ಕಾಲೇಜ್ ಸಿನಿಮಾಗಳಲ್ಲಿ ಶರಣ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ನಾಯಕಿಯಾಗಿ ‘ಕೃಷ್ಣಂ ಪ್ರಣಯ ಸಖಿ’, ಅನೀಶ್‌ಗೆ ಜೋಡಿಯಾಗಿ ಹೊಸ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಶರಣ್ಯ ಬ್ಯುಸಿಯಾಗಿದ್ದಾರೆ

Read More

ರೋಹಿತ್ ಶರ್ಮಾ ಇನ್ಮುಂದೆ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಸಾಧ್ಯತೆಯಿಲ್ಲ. ಐಸಿಸಿ ವಿಶ್ವಕಪ್​ 2023ರ ಪಂದ್ಯ ಆರಂಭಕ್ಕೂ ಮುನ್ನವೇ ರೋಹಿತ್​ ತಮ್ಮ ಭವಿಷ್ಯದ ಬಗ್ಗೆ ಚರ್ಚಿಸಿದ್ದರು ಎಂದು ಬಿಸಿಸಿಐ ಮೂಲ ಹೇಳಿದೆ. ನವೆಂಬರ್ 2022 ರಲ್ಲಿ ಭಾರತ ಟಿ-20 ವಿಶ್ವಕಪ್ ಸೆಮಿಫೈನಲ್ ನಿರ್ಗಮನದ ನಂತರ ರೋಹಿತ್ ಒಂದೇ ಒಂದು ಪಂದ್ಯವನ್ನು ಕೂಡ ಆಡಿಲ್ಲ ಎಂಬುದು ಗಮನಾರ್ಹವಾಗಿದೆ. ಅಂದಿನಿಂದಲೂ ಟಿ-20ಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. 36 ವರ್ಷದ ರೋಹಿತ್​ ಶರ್ಮಾ ಒಟ್ಟು 148 ಟಿ20 ಪಂದ್ಯಗಳನ್ನು ಆಡಿದ್ದು, ನಾಲ್ಕು ಶತಕಗಳೊಂದಿಗೆ ಸುಮಾರು 140 ಸ್ಟ್ರೈಕ್ ರೇಟ್‌ನಲ್ಲಿ 3,853 ರನ್ ಗಳಿಸಿದ್ದಾರೆ. ‘ಇದು ಹೊಸ ಬೆಳವಣಿಗೆಯಲ್ಲ. ರೋಹಿತ್ ಕಳೆದ ಒಂದು ವರ್ಷದಲ್ಲಿ ಏಕದಿನ ವಿಶ್ವಕಪ್‌ನತ್ತ ಹೆಚ್ಚು ಗಮನಹರಿಸಿದ್ದರಿಂದ ಯಾವುದೇ ಟಿ20ಐಗಳನ್ನು ಆಡಿಲ್ಲ. ಈ ನಿಟ್ಟಿನಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರೊಂದಿಗೆ ಅವರು ವ್ಯಾಪಕ ಚರ್ಚೆ ನಡೆಸಿದ್ದಾರೆ. ಅವರೇ ಸ್ವಯಂಪ್ರೇರಿತರಾಗಿ ಟಿ20ಯಿಂದ ದೂರ ಉಳಿಯಲು ಇದೀಗ ಮುಂದಾಗಿದ್ದಾರೆ. ಇದು ಸಂಪೂರ್ಣವಾಗಿ…

Read More

ಬಹುತೇಕ ಕಾಲೇಜು ಹುಡುಗ ಹುಡುಗಿಯರು ಟ್ರೆಂಡಿಯಾಗಿ ಸ್ಪೆಕ್ಸ್ ಧರಿಸಲು ಮುಂದಾಗಿದ್ದಾರೆ. ಕನ್ನಡಕ ಧರಿಸಿದರೆ ಸಾಕು ಕಣ್ಣು ಹೋಯ್ತೆ ಎಂದು ರೇಗಿಸುವ ಕಾಲವೊಂದಿತ್ತು. ಈಗ ಬಿಂಕ ಬಿಗುಮಾನಗಳನ್ನು ಬದಿಗಿಟ್ಟು ಅದನ್ನೇ ಫ್ಯಾಷನ್‌ಆಗಿ ಬದಲಾಯಿಸಿಕೊಂಡಿದ್ದಾರೆ. ಕಣ್ಣಿನ ತಪಾಸಣಾ ಕೇಂದ್ರಗಳು ಹಾಗೂ ಕನ್ನಡಕ ಕಂಪನಿಗಳು ಸಹ ಗ್ರಾಹಕರ ಅಭಿರುಚಿಗೆ ತಕ್ಕಂತೆ ಪೂರ್ಣ ಮತ್ತು ಅರ್ಧ ಚೌಕಟ್ಟುವುಳ್ಳ ಫ್ರೇಮ್ ಗ್ಲಾಸ್, ವೈರ್ ಫ್ರೇಮ್‌ಗ್ಲಾಸ್, ಪ್ಲಾಸ್ಟಿಕ್ ಫ್ರೇಮ್ ಹಾಗೂ ಲೋ ಬ್ರಿಡ್ಜ್‌ಗ್ಲಾಸ್‌, ಸಿಂಗಲ್ ಲೈನ್‌ಫ್ರೇಮ್ ಹಾಗೂ ಮರದ ವಿನ್ಯಾಸದಲ್ಲಿ ಕಾಣುವಂತೆ ವಿನ್ಯಾಸಗೊಳಿಸಿದ ಫ್ರೇಮ್‌ಗ್ಲಾಸ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಯೂತ್ ಐಕಾನ್: ವಯಸ್ಸಾದವರು ಮಾತ್ರ ಕನ್ನಡಕ ಧರಿಸಬೇಕು ಎಂಬ ಜಮಾನಕ್ಕೆ ಗುಡ್‌ಬೈ ಹೇಳಿ ಇಂದಿನ ಯುವಜನತೆ ಕನ್ನಡಕದ ಮೋಹಿಗಳಾಗಿ ವರ್ಷಗಳೇ ಕಳೆದಿವೆ. ವೈವಿಧ್ಯಮಯ ವಿನ್ಯಾಸ ಬೀರುವ ಸ್ಪೆಕ್ಸ್ ಮುಖದಲ್ಲಿದ್ದು, ಅವರ ಸೌಂದರ್ಯ ದುಪ್ಪಟ್ಟು ಮಾಡುತ್ತಿದೆ. ಯಾರೂ ಕೂಡ ಮೂಗು ಮುರಿಯದೇ ಕನ್ನಡಕವನ್ನು ಪ್ರೀತಿಸುತ್ತಿದ್ದಾರೆ. ಅದೇ ಈಗ ಹೊಸದೊಂದು ಟ್ರೆಂಡ್ ಆಗಿದೆ. ಹುಡುಗಿಯರ ಕ್ರಶ್: ಹಿಂದೆಲ್ಲಾ ಸೋಡಾಬುಡ್ಡಿ ಎಂದು ರೇಗಿಸುತ್ತಾರೆ ಎಂಬ ಕಾರಣಕ್ಕಾಗಿಯೇ…

Read More

ಬೆಳಗಾವಿ :-ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕನಾಗಿ ಆರ್.ಅಶೋಕ ನೇಮಕ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ನಾವು ಅಳೆದು, ತೂಗಿ ಅಧ್ಯಕ್ಷರನ್ನಾಗಿ ಮಾಡಿಲ್ಲ. ನಮ್ಮಲ್ಲಿ ಆಯ್ಕೆ ಆಗಿರುವ 66 ಜನರಲ್ಲಿ ಅನೇಕರು ಸ್ವಂತ ಶಕ್ತಿ ಮೇಲೆ ಶಾಸಕರಾಗಿದ್ದಾರೆ. ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಹೊಂದಾಣಿಕೆ ಮಾಡಿಕೊಳ್ಳುವವರಿಗೆ ಕಾಲ ಇದು. ಅಧ್ಯಕ್ಷರು, ಪ್ರತಿಪಕ್ಷ ನಾಯಕರು ವಿರೋಧ ಪಕ್ಷಗಳ ಜೊತೆಗೆ ಹೊಂದಾಣಿಕೆ ಇದೆ. ಅಂಥ ವ್ಯವಸ್ಥೆ ನಮ್ಮ ಪಕ್ಷದಲ್ಲಿ ಬಂದಿದೆ. ಈ ಹೊಂದಾಣಿಕೆಯಿಂದ ಲೋಕಸಭೆ ಚುನಾವಣೆಯಲ್ಲಿ ಜಾಸ್ತಿ ಸ್ಥಾನ ಗೆಲ್ಲಿಸುತ್ತಿರಬಹುದು. ಅದಕ್ಕಾಗಿ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇಮಕ ಮಾಡಿದ್ದಾರೆಂದು ತಿಳಿಸಿದರು.

Read More

ವೇಲ್ಸ್‌: 3ನೇ ಹಂತದ ಕರುಳಿನ ಕ್ಯಾನ್ಸರ್‌ ಸಮಸ್ಯೆಯಿಂದ ಬಳಲುತ್ತಿದ್ದ ವೇಲ್ಸ್ ದೇಶದ ಮಹಿಳೆಯೊಬ್ಬರು ಡೋಸ್ಟರ್‌ಲಿಮಬ್ ಎಂಬ ಔಷಧಿಯನ್ನು ಸೇವಿಸಿದ ನಂತರ  ಅಚ್ಚರಿ ಎಂಬಂತೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಒಂದು ವೇಳೆ ಇದು ನಿಜವಾಗಿದ್ದಲ್ಲಿ ವೈದ್ಯಕೀಯ ಲೋಕದಲ್ಲಿ ಇದೊಂದು ದೊಡ್ಡ ಸಾಧನೆಯೇ ಆಗಲಿದೆ.  ವೇಲ್ಸ್‌ನ 42 ವರ್ಷದ ಕ್ಯಾರಿ ಡೌನಿ (Carrie Downey) ಎಂಬ ಮಹಿಳೆ ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದರೆ ಕಳೆದ ಆರು ತಿಂಗಳಿಂದ ಇವರು ಡೊಸ್ಟರ್ಲಿಮಬ್ ಎಂಬ ಔಷಧಿಯೊಂದನ್ನು ಸೇವನೆ ಮಾಡುತ್ತಿದ್ದು, ಇದಾದ ನಂತರ ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಕ್ಯಾರಿ ಡೌನಿ ಅವರು  ಬ್ರಿಟನ್ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದು, ಮತ್ತೆ ಕೆಲಸಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ. ರೇಡಿಯೇಷನ್‌ ಹಾಗೂ ಕಿಮೋಥೆರಪಿಯ ಜೊತೆ ಜೊತೆಗೆ ಡೊಸ್ಟರ್ಲಿಮಬ್ ಎಂಬ ಔಷಧಿಯನ್ನು  ಅವರಿಗೆ ನೀಡಲಾಗುತ್ತಿತ್ತು.  https://ainlivenews.com/young-woman-sexually-molested-in-our-metro-fellow-passengers-who-did-not-come-to-the-rescue/ ಅಲ್ಲದೇ ಅವರಿಗೆ ಕೊನೆಹಂತದ ಕರುಳಿನ ಕ್ಯಾನ್ಸರ್ (colorectal cancer) ಇದೇ ಎಂಬುದನ್ನು ಪರೀಕ್ಷೆಗಳು…

Read More

ಅಹಮದಾಬಾದ್: ಭಾರತೀಯ ಕ್ರಿಕೆಟ್ ತಂಡ ಕ್ಯಾಪ್ಟನ್, ಹಿಟ್ ಮ್ಯಾನ್, ಅತೀ ಹೆಚ್ಚು ಮಹಿಳಾ ಫ್ಯಾನ್ಸ್ (Women Cricket Fans) ಹೊಂದಿರುವ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma). ಇನ್ನೂ 10-20 ವರ್ಷಗಳ ನಂತರ ಟಾಪ್-10 ಕ್ರಿಕೆಟಿಗರ ಪಟ್ಟಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಹೆಸರೆಂದರೇ ಅದು ರೋಹಿತ್ ಶರ್ಮಾ. ಈ ಪರಿ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ರೋಹಿತ್ ಶರ್ಮಾ. ರೋಹಿತ್ ಶರ್ಮಾ ಅವರು ಈ ಮಟ್ಟಕ್ಕೆ ಬೆಳೆಯಲು ಕಠಿಣಶ್ರಮವೇ ಕಾರಣ. ಯಶಸ್ಸಿಗೆ ಮತ್ತೇನಾದ್ರೂ ಸೂತ್ರ ಇದೆಯಾ ಅಂತ ರೋಹಿತ್ ಅವರನ್ನೊಮ್ಮೆ ಕೇಳಿ ನೋಡಿದ್ರೆ ಅವರು ಕೊಡುವ ಆನ್ಸರ್, `ಹಾರ್ಡ್ ವರ್ಕ್.. ಹಾರ್ಡ್ ವರ್ಕ್.. ಓನ್ಲಿ ಹಾರ್ಡ್ ವರ್ಕ್’. ತನ್ನನ್ನು ಈ ಕಠಿಣ ಪರಿಶ್ರಮವೇ ಗೆಲ್ಲಿಸಬಲ್ಲದು ಎಂದು ರೋಹಿತ್ ಅವರಿಗೆ ಅರಿವಾದದ್ದು ಬಾಲ್ಯದಲ್ಲಿ. ಇದು ಬಡತನದಿಂದ ಕಲಿತ ಪಾಟವೂ ಹೌದು. ರೋಹಿತ್ ಶರ್ಮಾ ಇಂದು ನೂರಾರು ಕೋಟಿ ಆಸ್ತಿಗೆ ಓಡೆಯನಾಗಿದ್ದಾರೆ, ಒಂದೇ ಒಂದು ಐಪಿಎಲ್ ಟೂರ್ನಿಯನ್ನಾಡಿದ್ರೆ ಸಾಕು, ಕೋಟಿ ಕೋಟಿ ಹಣ…

Read More

ರುಧೀರಂ ಸಿನಿಮಾ ಮೂಲಕ ಈಗಾಗಲೇ ಮಲಯಾಳಂ (Malayalam) ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಕನ್ನಡದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಇದೀಗ ಮತ್ತೊಂದು ಮಲಯಾಳಂ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸ್ಟಾರ್ ನಟ ಮಮ್ಮಟ್ಟಿ  (Mammootty) ನಾಯಕನಾಗಿ ನಟಿಸುತ್ತಿರುವ ಟರ್ಬೋ (Turbo) ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರವನ್ನು ಮಾಡಲಿದ್ದಾರೆ. ಸ್ವತಃ ಚಿತ್ರತಂಡವೇ ಈ ಮಾಹಿತಿಯನ್ನು ಹೊರ ಹಾಕಿದೆ. ಒಂದು ಕಡೆ ಎರಡೆರಡು ಮಲೆಯಾಳಂ ಸಿನಿಮಾದಲ್ಲಿ ರಾಜ್ ನಟಿಸುತ್ತಿದ್ದರೆ, ಮತ್ತೊಂದು ಕಡೆ ಮಲಯಾಳಂ ಸಿನಿಮಾವೊಂದನ್ನು ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ. ದುಲ್ಕರ್ ಸಲ್ಮಾನ್ ಗಾಗಿ ರಾಜ್ ಶೆಟ್ಟಿ ಚಿತ್ರವೊಂದನ್ನು ನಿರ್ದೇಶನ (Direction) ಮಾಡಲಿದ್ದಾರೆ. ಈ ಅಚ್ಚರಿಯ ಸುದ್ದಿಯನ್ನು ಹಂಚಿಕೊಂಡಿದ್ದು ಸ್ವತಃ ದುಲ್ಕರ್ ಸಲ್ಮಾನ್ (Dulquer Salmaan). ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಮೂಡಿ ಬರಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಲ್ಲಿಗೆ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಹಾರಲಿದ್ದಾರೆ ಎನ್ನುವುದು ಲೇಟೆಸ್ಟ್…

Read More