ವೇಲ್ಸ್: 3ನೇ ಹಂತದ ಕರುಳಿನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ವೇಲ್ಸ್ ದೇಶದ ಮಹಿಳೆಯೊಬ್ಬರು ಡೋಸ್ಟರ್ಲಿಮಬ್ ಎಂಬ ಔಷಧಿಯನ್ನು ಸೇವಿಸಿದ ನಂತರ ಅಚ್ಚರಿ ಎಂಬಂತೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಒಂದು ವೇಳೆ ಇದು ನಿಜವಾಗಿದ್ದಲ್ಲಿ ವೈದ್ಯಕೀಯ ಲೋಕದಲ್ಲಿ ಇದೊಂದು ದೊಡ್ಡ ಸಾಧನೆಯೇ ಆಗಲಿದೆ. ವೇಲ್ಸ್ನ 42 ವರ್ಷದ ಕ್ಯಾರಿ ಡೌನಿ (Carrie Downey) ಎಂಬ ಮಹಿಳೆ ಮಾರಕ ಕ್ಯಾನ್ಸರ್ನಿಂದ ಬಳಲುತ್ತಿದ್ದರು.
ಆದರೆ ಕಳೆದ ಆರು ತಿಂಗಳಿಂದ ಇವರು ಡೊಸ್ಟರ್ಲಿಮಬ್ ಎಂಬ ಔಷಧಿಯೊಂದನ್ನು ಸೇವನೆ ಮಾಡುತ್ತಿದ್ದು, ಇದಾದ ನಂತರ ಈಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಕ್ಯಾರಿ ಡೌನಿ ಅವರು ಬ್ರಿಟನ್ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದು, ಮತ್ತೆ ಕೆಲಸಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ. ರೇಡಿಯೇಷನ್ ಹಾಗೂ ಕಿಮೋಥೆರಪಿಯ ಜೊತೆ ಜೊತೆಗೆ ಡೊಸ್ಟರ್ಲಿಮಬ್ ಎಂಬ ಔಷಧಿಯನ್ನು ಅವರಿಗೆ ನೀಡಲಾಗುತ್ತಿತ್ತು.
ನಮ್ಮ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ನೆರವಿಗೆ ಬಾರದ ಸಹ ಪ್ರಯಾಣಿಕರು
ಅಲ್ಲದೇ ಅವರಿಗೆ ಕೊನೆಹಂತದ ಕರುಳಿನ ಕ್ಯಾನ್ಸರ್ (colorectal cancer) ಇದೇ ಎಂಬುದನ್ನು ಪರೀಕ್ಷೆಗಳು ತೋರಿಸಿದ್ದವು. ಆದರೆ ಈಗ ಅವರ ದೇಹದಲ್ಲಿ ಅಂತಹ ಯಾವ ಕಾಯಿಲೆಗಳ ಲಕ್ಷಣವೂ ಇಲ್ಲ ಎಂಬುದನ್ನು ವೈದ್ಯರು ತಪಾಸಣೆಗಳಿಂದ ಖಚಿತಪಡಿಸಿದ್ದು ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.
ಡೊಸ್ಟರ್ಲಿಮಬ್ ಹಿಎಕ್ಸ್ಎಲ್ವೈ ಎಂಬ ಇಂಜೆಕ್ಷನ್ ಮೊನೊಕ್ಲೋನಲ್ ಆಂಟಿಬಾಡಿಸ್ (monoclonal antibodies) ಎಂಬ ಔಷಧಿಗಳ ವರ್ಗದಲ್ಲಿದೆ, ಇದು ಕ್ಯಾನ್ಸರ್ ಕೋಶಗಳಲ್ಲಿ ನಿರ್ದಿಷ್ಟ ಪ್ರೋಟೀನ್ನ ಕ್ರಿಯೆಯನ್ನು ತಡೆಯುವ ಮೂಲಕ ಕಾರ್ಯನಿರ್ವಹಿಸುತ್ತದೆ. ಔಷಧವು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಮತ್ತು ಗೆಡ್ಡೆಯ ಬೆಳವಣಿಗೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.
ಅಲ್ಲದೇ ಈ ಇಂಜೆಕ್ಷನ್ನಿಂದ ಸಣ್ಣಪುಟ್ಟ ತುರಿಕೆ ಹುಣ್ಣುಗಳ ಹೊರತಾಗಿ ನನಗೆ ಹೆಚ್ಚೇನು ಸೈಡ್ ಎಫೆಕ್ಟ್ಗಳು ಆಗಿಲ್ಲ ಎಂದು ಅವರು ಕ್ಯಾರಿ ಡೌನಿ ಹೇಳಿದ್ದಾರೆ. ತಜ್ಞರ ಪ್ರಕಾರ, ಡೊಸ್ಟರ್ಲಿಮಬ್, ಕರುಳಿನ ಕ್ಯಾನ್ಸರ್ನ ನಿರ್ದಿಷ್ಟ ರೂಪಾಂತರವನ್ನು ನಿಖರವಾಗಿ ಗುರಿಪಡಿಸುತ್ತದೆ ಮತ್ತು ಇದೊಂದು ಚಿಕಿತ್ಸೆಯ ಪ್ರಾಯೋಗಿಕ ಡ್ರಗ್ ಆಗಿದ್ದರೂ, ಧನಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ, ಇದರಲ್ಲಿ ರೋಗಿಗಳ ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಚಿಕಿತ್ಸೆ ಕಡಿಮೆ ಆಗಿದೆ.