ಬೀದರ್: ಜಾತಿಗಣತಿ ವರದಿ ಬಗ್ಗೆ ಸರ್ಕಾರ ಏನು ನಿರ್ಧಾರ ಮಾಡುತ್ತೋ ನೋಡೋಣ ಎಂದು ಬೀದರ್ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. https://ainlivenews.com/housewifes-body-found-hanging-in-bangalore/ ಜಾತಿಗಣತಿ ವರದಿ ಬಗ್ಗೆ ಸ್ಪಷ್ಟವಾಗಿ ಏನೂ ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಜನರ ಅಭಿಪ್ರಾಯ ಪಡೆದು ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡ್ತೇವೆ. ಜಾತಿಗಣತಿ ವರದಿಗೆ ವೀರಶೈವ ಲಿಂಗಾಯತ, ಒಕ್ಕಲಿಗರ ವಿರೋಧವಿದೆ ಎಂದು ಹೇಳಿದ್ದಾರೆ.
Author: AIN Author
ಹುಬ್ಬಳ್ಳಿ; ವಾಣಿಜ್ಯ ನಗರಿ ಹುಬ್ಬಳ್ಳಿಯ ಸರ್. ಸಿದ್ದಪ್ಪ ಕಂಬಳಿ ರಸ್ತೆಯ ಲ್ಯಾಮಿಂಗ್ಟನ್ ಸ್ಕೂಲ್ ಬಸ್ ನಿಲ್ದಾಣದ ಬಳಿಯ ಚರಂಡಿಯಲ್ಲಿ ಬಿದ್ದಿದ್ದ ನಾಯಿಯನ್ನು ಹು-ಧಾ ಪಾಲಿಕೆ ಆರೋಗ್ಯ ಅಧಿಕಾರಿಗಳಾದ ಡಾ. ಶ್ರೀಧರ್ ದಂಡೆಪ್ಪನವರ ನೇತೃತ್ವದಲ್ಲಿ ಪಾಲಿಕೆಯ ಸಿಬ್ಬಂದಿಯಿಂದ ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತು. ಬೆಳಿಗ್ಗೆಯೇ ಚರಂಡಿಯಲ್ಲಿ ನಾಯಿ ಬಿದ್ದಿತ್ತು ಎನ್ನಲಾಗಿದ್ದು, ಕೆಲ ಗಂಟೆಗಳ ಕಾಲ ಚರಂಡಿಯಲ್ಲಿಯೇ ಪರದಾಡಿದ್ದು, ಚರಂಡಿಯಿಂದ ಮೇಲೆ ಬಾರದೇ ಗಾಬರಿಗೊಂಡಿತ್ತು. ಪಾದಾಚಾರಿಗಳು ನಾಯಿಯ ಸ್ಥಿತಿ ನೋಡಿ ಅಯ್ಯೋ ಪಾಪಾ ನಾಯಿ ಚರಂಡಿಯಲ್ಲಿ ಬಿದ್ದಿದೆ ಎಂದು ಗುಣುಗುತ್ತಾ ಹೋದರೇ ವಿನಃ ನಾಯಿಯ ರಕ್ಷಣೆಯ ಗೋಜಿಗೆ ಹೋಗಲಿಲ್ಲ. ಆದರೇ ಅದೇ ದಾರಿಯಲ್ಲಿ ಹೊರಟಿದ್ದ ಪತ್ರಕರ್ತರು ನಾಯಿಯ ಅವಾಂತರವನ್ನು ನೋಡಿ ರಕ್ಷಣೆಗೆ ಮುಂದಾದರು. ಆದರೇ ನಾಯಿಯನ್ನು ರಕ್ಷಣೆ ಮಾಡುವಲ್ಲಿ ಅವ್ಯವಸ್ಥೆ ಉಂಟಾಯಿತು. ಅದೇ ರಸ್ತೆಯಲ್ಲಿ ಹೊರಟಿದ್ದ ಹು-ಧಾ ಪಾಲಿಕೆ ಮೇಯರ್ ವೀಣಾ ಚೇತನ್ ಬರದ್ವಾಡ ಅವರ ಕಾರ್ ನ್ನು ತಡೆದ ಪತ್ರಕರ್ತರು ನಾಯಿಯ ಪರದಾಟವನ್ನು ತಿಳಿಸಿದಾಗ, ಮೇಯರ್ ಪಾಲಿಕೆ ಸಿಬ್ಬಂದಿಗಳಿಗೆ ತಿಳಿಸಿದರು. https://ainlivenews.com/housewifes-body-found-hanging-in-bangalore/ ಮತ್ತೇ ಪಾಲಿಕೆ…
ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಅನೇಕರ ಅಸಮಾಧಾನಕ್ಕೆ ಗುರಿಯಾಗಿದ್ದ ಬಿ.ವೈ.ವಿಜಯೇಂದ್ರ (B.Y.Vijayendra) ಇಂದು (ಗುರುವಾರ) ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಮನೆಗೆ ಭೇಟಿ ನೀಡಿದರು. ಆ ಮೂಲಕ ಅಸಮಾಧಾನಗೊಂಡಿರುವ ಪಕ್ಷದ ನಾಯಕರ ಮನವೊಲಿಕೆಗೆ ವಿಜಯೇಂದ್ರ ಮುಂದಾಗಿದ್ದಾರೆ. ಸದಾಶಿವನಗರದ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಬೆಳಗ್ಗೆ ವಿಜಯೇಂದ್ರ ಭೇಟಿ ನೀಡಿದರು. ಈ ವೇಳೆ ವಿಜಯೇಂದ್ರಗೆ ಜಾರಕಿಹೊಳಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಇಬ್ಬರೂ ಒಟ್ಟಿಗೆ ಕುಳಿತು ಉಪಾಹಾರ ಸೇವಿಸಿದರು. ವಿಜಯೇಂದ್ರ ನೇಮಕ ಹಾಗೂ ವಿಪಕ್ಷ ನಾಯಕ ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ಕೊಡದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅತೃಪ್ತಿಗೊಂಡಿದ್ದರು. ಹೀಗಾಗಿ ಅವರ ಮನವೊಲಿಕೆಗೆ ವಿಜಯೇಂದ್ರ ಮುಂದಾಗಿದ್ದಾರೆ. ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ, ರಮೇಶ್ ಜಾರಕಿಹೊಳಿ ಅವರ ನಡೆ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿತ್ತು. ಕೆಲವು ಸಲ ಅವರು ಅಸಮಾಧಾನ ತೋಡಿಕೊಂಡಿದ್ದರು. ನನ್ನ ಜವಾಬ್ದಾರಿ ಎಲ್ಲರನ್ನೂ ಪಕ್ಷದಲ್ಲಿ ಜೊತೆಗೆ ಕರೆದೊಯ್ಯುವುದು. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಅರ್ಧ…
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿ ಜಿಲ್ಲೆ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ಜೊತೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಹುತಾತ್ಮರಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಅವರ ಪುತ್ರ. ಪ್ರಾಂಜಲ್, ದೆಹಲಿ ಪಬ್ಲಿಕ್ ಸ್ಕೂಲ್, MRPL ನ ಹಳೆಯ ವಿದ್ಯಾರ್ಥಿಯಾಗಿದ್ದರು ಮಗನ ಸಾವಿನ ಹಿನ್ನೆಲೆ ಮನೆಯಲ್ಲಿ ನೀರವ ಮೌನ ಪ್ರಾಂಜಲ್ ಪೋಷಕರನ್ನು ಸಂತೈಸಲು ಆಗಮಿಸುತ್ತಿರುವ ಸಂಬಂಧಿಗಳು ನೋವಿನಲ್ಲಿರುವ ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಕಳೆದ ಆರು ತಿಂಗಳ ಹಿಂದೆ ಮನೆಗೆ ಆಗಮಿಸಿದ್ದ ಪ್ರಾಂಜಲ್ ಮನೆಯಲ್ಲಿ ಹಮ್ಮಿಕೊಂಡಿದ್ದ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು ಒಂದು ವಾರ ಪೋಷಕರ ಜೊತೆ ಇದ್ದು ಕರ್ತವ್ಯಕ್ಕೆ ಮರಳಿದ್ದ ಪ್ರಾಂಜಲ್ ಜಿಗಣಿ ಸಮೀಪದ ನಂದನ ವನ ಬಡಾವಣೆಯಲ್ಲಿರುವ ನಿವಾಸ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ…
ಹುಬ್ಬಳ್ಳಿ: ಭಾರತದ ನಂ.1 ಮಾಹಿತಿ ಶೋಧ ತಾಣವಾಗಿರುವ ಜಸ್ಟ್ ಡಯಲ್‌ನ ಉದ್ಯಮ ಶ್ರೇಷ್ಠತೆ ಪ್ರಶಸ್ತಿ ಪ್ರದಾನದ ಮೊದಲ ಆವೃತ್ತಿಯ ಸಮಾರಂಭ ನ. 18 ರಂದು ಇಲ್ಲಿ ನಡೆಯಿತು. ಹುಬ್ಬಳ್ಳಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಸಶಕ್ತಗೊಳಿಸಲು ವಿನ್ಯಾಸಗೊಳಿಸಲಾದ ಸಂಪರ್ಕ ಜಾಲ ಹೆಚ್ಚಿಸುವ ಮತ್ತು ಮೆಚ್ಚುಗೆಯ ಕಾರ್ಯಕ್ರಮ ಅದಾಗಿತ್ತು. ಜಸ್ಟ್‌ಡಯಲ್ ವೇದಿಕೆಯಲ್ಲಿ ಸೇರ್ಪಡೆಯಾಗಿರುವ ಸ್ಥಳೀಯ ಉದ್ಯಮ– ವಹಿವಾಟುಗಳಿಗೆ ಬೆಳವಣಿಗೆ ಬಗ್ಗೆ ಮೌಲ್ಯಯುತ ಒಳನೋಟಗಳು ಮತ್ತು ಅವಕಾಶಗಳನ್ನು ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಕಂಪನಿ ಸಿಇಓ ತಿಳಿಸಿದ್ದಾರೆ. ಸ್ಥಳೀಯ ‘ಎಂಎಸ್‌ಎಂಇ’ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದ ವೈವಿಧ್ಯಮಯ ಸಂಪರ್ಕ ಸಭೆಗಳನ್ನೂ ಈ ಕಾರ್ಯಕ್ರಮವು ಒಳಗೊಂಡಿತ್ತು. ರಾಷ್ಟ್ರೀಯ ಸಣ್ಣ ಉದ್ದಿಮೆಗಳ ನಿಗಮ ಲಿಮಿಟೆಡ್‌ನ ಉಪ ವ್ಯವಸ್ಥಾಪಕ (ಬಿಡಿ) ಪ್ರವೀಣ ಮುಧೋಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ‘ಎಂಎಸ್‌ಎಂಇ’ಗಳಿಗೆ ನೆರವಾಗುವ ಸರ್ಕಾರದ ಯೋಜನೆಗಳು ಮತ್ತು ಉದ್ಯಮಿಗಳ ಬೆಳವಣಿಗೆಯ ಪಯಣದಲ್ಲಿ ‘ಎನ್‌ಎಸ್‌ಐಸಿ’ ಹೇಗೆ ಸಹಾಯ ಹಸ್ತ ಚಾಚುತ್ತಿದೆ ಎಂಬುದನ್ನು ಅವರು ವಿವರಿಸಿದರು. ಹುಬ್ಬಳ್ಳಿಯ ಉದ್ಯಮ ಜಗತ್ತಿನಲ್ಲಿ…
ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ನೆಲ್ಲಕ್ಕೂರುಳಿದ ಘಟನೆ ಗಬ್ಬೂರ ರಿಂಗ್ ರೋಡ್ ದಲ್ಲಿ ನಡೆದಿದೆ. ಹೌದು,, ಲಾರಿ ಚಾಲಕ ಹೈವೆ ರೋಡ್‌ದಿಂದ ರಿಂಗ್ ರೋಡ್‌ಗೆ ಹೊರಳುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಲಾರಿ ನೆಲಕ್ಕೂರುಳಿದೆ. ಚಾಲಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ.
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ, 2023ರ ವಿಶ್ವಕಪ್ ಟೂರ್ನಿಯಲ್ಲಿ ಹಲವು ಅವಿಸ್ಮರಣೀಯ ದಾಖಲೆಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರಂತಹ ದಿಗ್ಗಜರಿಗೆ ಸಡ್ಡು ಹೊಡೆದು ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡುರು. ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ವಿರ್ಶವಕಪ್ ಅಖಾಡದಲ್ಲಿ ತಲಾ 44 ವಿಕೆಟ್‌ಗಳನ್ನು ಪಡೆದ ದಾಖಲೆ ಹೊಂದಿದ್ದಾರೆ. ಆದರೆ, ಪ್ರಚಂಡ ಪ್ರದರ್ಶನ ನೀಡಿರುವ ಮೊಹಮ್ಮದ್ ಶಮಿ ಆಡಿದ 18 ವಿಶ್ವಕಕಪ್ ಪಂದ್ಯಗಳಲ್ಲೇ 55 ವಿಕೆಟ್‌ಗಳನ್ನು ಪಡೆಯುವ ಮೂಲಕ ಅತಿ ವೇಗವಾಗಿ ವಿಶ್ವಕಪಗ್‌ನಲ್ಲಿ ವಿಕೆಟ್‌ಗಳ ಅರ್ಧಶತಕ ಬಾರಿಸಿದ ದಾಖಲೆಯನ್ನೂ ಬರೆದಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ನ್ಯೂಜಿಲೆಂಡ್ ಎದುರು 57ಕ್ಕೆ 7 ವಿಕೆಟ್ ಪಡೆದ ಸಾಧನೆ ಮೆರೆದಿದ್ದರು. ಈ ಮೂಲಕ ಒಡಿಐ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರ ಶ್ರೇಷ್ಠ ಬೌಲಿಂಗ್ ಸಾಧನೆಯ ದಾಖಲೆಯನ್ನೂ ತಮ್ಮ…
ಚಿಕ್ಕಬಳ್ಳಾಪುರ: ವಿದ್ಯುತ್ ಹರಿದು ಕೊಟ್ಟಿಗೆಯಲ್ಲಿದ್ದ 20 ಕುರಿಗಳು ದಾರುಣವಾಗಿ ಸಾವನ್ನಪ್ಪರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ನಲ್ಲಮದ್ದಿರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.. ಗ್ರಾಮದ ವೆಂಕಟರಾಮಪ್ಪ ಎನ್ನುವವರಿಗೆ ಸೆರಿದ ಕುರಿಗಳು ಸಾವನಪ್ಪಿದ್ದು.. ಕುರಿಗಳನ್ನ ಕಟ್ಟಿಹಾಕಲು ಮೆಟಲ್ ವೈರ್ ಮೆಶ್ ನಿಂದ ಸುತ್ತಿದ ಕುರಿ ಕೊಟ್ಟಿಗೆಯನ್ನ ನಿರ್ಮಿಸಲಾಗಿತ್ತು.. ಆದರೆ ಕೊಟ್ಟಿಗೆ ಮೇಲೆ ಮನೆಗೆ ಸಂಪರ್ಕಿಸಲು ಹಾದುಹೋಗಿದ್ದ ವಿದ್ಯುತ್ ವೈರ್ ಮೇಲೆ ಕೋತಿಗಳು ಓಡಾಡುವಾಗ ವೈರ್ ತುಂಡಾಗಿ ಕೊಟ್ಟಿಗೆಯ ಮೆಟಲ್ ಮೆಶ್ ಮೇಲೆ ಬಿದ್ದಿದೆ, ಮೆಟಲ್ ವೈರ್ ಗೆ ವಿದ್ಯುತ್ ಪ್ರವಹಿಸಿ ಕೊಟ್ಟಿಗೆಯಲ್ಲಿ 35 ಕುರಿಗಳ ಪೈಕಿ 20 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.. https://ainlivenews.com/government-circus-to-put-a-stop-to-mlas-discontent-25-mlas-are-destined-for-corporation-board/ ಘಟನೆಯಿಂದ ಒಂದೂವರೆ ಲಕ್ಷ ರೂಪಾಯಿಗಳಷ್ಟು ಕುರಿಗಳು ಸಾವನ್ನಪ್ಪಿರೋದ್ರಿಂದ ಕುರಿಗಳ ಮಾಲಿಕ ವೆಂಕಟರಾಮಪ್ಪ ಕಂಗಾಲಾಗಿದ್ದಾನೆ.. ಸ್ಥಳಕ್ಕೆ ಪೆರೇಸಂದ್ರ ಠಾಣೆ ಪಿಎಸ್.ಐ ಜಗದೀಶ್ ರೆಡ್ಡಿ ಹಾಗೂ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕುರಿಗಳ ಸಾವಿನಿಂದ ನಷ್ಟಕ್ಕೊಳಗಾದ ರೈತನಿಗೆ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ತಂಡದ ನೂತನ ಮೆಂಟರ್ ಆಗಿ ನೇಮಕಗೊಂಡಿರುವ ಟೀಮ್ ಇಂಡಿಯಾ ಮಾಜಿ ಓಪನರ್ ಗೌತಮ್ ಗಂಭೀರ್, 2024ರಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡಬೇಕು ಎಂದಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ದೂರ ಉಳಿಯುವ ಬಗ್ಗೆ ಟೀಮ್ ಇಂಡಿಯಾ ಸೆಲೆಕ್ಟರ್ಸ್ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಮುಂದಿನ ವರ್ಷ ಟಿ20 ವಿಶ್ವಕಪ್ ಆಡುವುದು ಅನುಮಾನ. ಆದರೆ, ರೋಹಿತ್ ಶರ್ಮಾ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಆಡುವುದಷ್ಟೇ ಅಲ್ಲ, ಹಾರ್ದಿಕ್ ಪಾಂಡ್ಯ ಬದಲು ಅವರೇ ಕ್ಯಾಪ್ಟನ್ಸಿ ನಿಭಾಯಿಸಬೇಕು ಎಂದು ಗೌತಮ್ ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಈಗ ಸೆಲೆಕ್ಟರ್ಸ್ ಯುವ ಆಟಗಾರರಿಗೆ ಹೆಚ್ಚು ಮಣೆ ಹಾಕುತ್ತಿದ್ದಾರೆ. ಹೀಗಾಗಿ ಭಾರತದ ಟಿ20 ತಂಡಕ್ಕೆ ತಮ್ಮನ್ನು ಪರಿಗಣಿಸದೇ ಇದ್ದರೆ ಸಮಸ್ಯೆ ಇಲ್ಲ ಎಂಬ…
ಬೆಂಗಳೂರು: ತೆಲಂಗಾಣ ಚುನಾವಣೆ ಹಿನ್ನೆಲೆ ಸಚಿವ ಜಮೀರ್ ಅಹ್ಮದ್ ಖಾನ್ ತಂಗಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಹೈದರಾಬಾದ್ ಪಾರ್ಕ್ ಹಟ್ ಹೋಟೆಲ್ ಮೇಲೆ ಈ ದಾಳಿ ನಡೆದಿದೆ. ತಡರಾತ್ರಿ ರೇಡ್ ಮಾಡಿದ್ದಕ್ಕೆ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿ ನಡೆಸಿ ಯಾವುದೇ ಕುರುಹು ಇಲ್ಲದೆ ಪೊಲೀಸರು ಹಿಂತಿರುಗಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಹಾಗೂ ಬಿಎಸ್ಆರ್ ಸೋಲುವ ಭಯದಿಂದ ದಾಳಿ ಮಾಡಿಸಿದೆ ಎಂದು ಜಮೀರ್ ಆರೋಪಿಸಿದ್ದಾರೆ. ಈ ದಾಳಿ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಜಮೀರ್, ನಾನು ಉಳಿದುಕೊಂಡಿರುವ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದರು. ಆದ್ರೆ ಯಾವುದೇ ಸಾಕ್ಷ್ಯಗಳೂ ಸಿಗದೇ ಹಿಂದಿರುಗಿದರು. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದೆ. ಇದರಿಂದ ಕೇಂದ್ರ ಬಿಜೆಪಿ (BJP) ಮತ್ತು ರಾಜ್ಯದ ಬಿಆರ್‌ಎಸ್ (BRS) ಸರ್ಕಾರ ಹತಾಶೆಗೊಂಡಿದ್ದು, ಜಂಟಿ…