ಚಿಕ್ಕಬಳ್ಳಾಪುರ: ವಿದ್ಯುತ್ ಹರಿದು ಕೊಟ್ಟಿಗೆಯಲ್ಲಿದ್ದ 20 ಕುರಿಗಳು ದಾರುಣವಾಗಿ ಸಾವನ್ನಪ್ಪರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ನಲ್ಲಮದ್ದಿರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.. ಗ್ರಾಮದ ವೆಂಕಟರಾಮಪ್ಪ ಎನ್ನುವವರಿಗೆ ಸೆರಿದ ಕುರಿಗಳು ಸಾವನಪ್ಪಿದ್ದು.. ಕುರಿಗಳನ್ನ ಕಟ್ಟಿಹಾಕಲು ಮೆಟಲ್ ವೈರ್ ಮೆಶ್ ನಿಂದ ಸುತ್ತಿದ ಕುರಿ ಕೊಟ್ಟಿಗೆಯನ್ನ ನಿರ್ಮಿಸಲಾಗಿತ್ತು..
ಆದರೆ ಕೊಟ್ಟಿಗೆ ಮೇಲೆ ಮನೆಗೆ ಸಂಪರ್ಕಿಸಲು ಹಾದುಹೋಗಿದ್ದ ವಿದ್ಯುತ್ ವೈರ್ ಮೇಲೆ ಕೋತಿಗಳು ಓಡಾಡುವಾಗ ವೈರ್ ತುಂಡಾಗಿ ಕೊಟ್ಟಿಗೆಯ ಮೆಟಲ್ ಮೆಶ್ ಮೇಲೆ ಬಿದ್ದಿದೆ, ಮೆಟಲ್ ವೈರ್ ಗೆ ವಿದ್ಯುತ್ ಪ್ರವಹಿಸಿ ಕೊಟ್ಟಿಗೆಯಲ್ಲಿ 35 ಕುರಿಗಳ ಪೈಕಿ 20 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ..
Nigama Mandali: ಶಾಸಕರ ಅಸಮಧಾನಕ್ಕೆ ಬ್ರೇಕ್ ಹಾಕಲು ಸರ್ಕಾರ ಸರ್ಕಸ್: 25 ಶಾಸಕರಿಗೆ ನಿಗಮ ಮಂಡಳಿ ಭಾಗ್ಯ!
ಘಟನೆಯಿಂದ ಒಂದೂವರೆ ಲಕ್ಷ ರೂಪಾಯಿಗಳಷ್ಟು ಕುರಿಗಳು ಸಾವನ್ನಪ್ಪಿರೋದ್ರಿಂದ ಕುರಿಗಳ ಮಾಲಿಕ ವೆಂಕಟರಾಮಪ್ಪ ಕಂಗಾಲಾಗಿದ್ದಾನೆ.. ಸ್ಥಳಕ್ಕೆ ಪೆರೇಸಂದ್ರ ಠಾಣೆ ಪಿಎಸ್.ಐ ಜಗದೀಶ್ ರೆಡ್ಡಿ ಹಾಗೂ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕುರಿಗಳ ಸಾವಿನಿಂದ ನಷ್ಟಕ್ಕೊಳಗಾದ ರೈತನಿಗೆ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.