ಗದಗ: ಲಕ್ಕುಂಡಿ ಗ್ರಾಮದಿಂದ ನಿರಂತರ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಕಲ್ಯಾಣ ಕರ್ನಾಟಕ ಭಾಗದಿಂದ ಬರುವ ಬಸ್ ಗಳು ಗ್ರಾಮಕ್ಕೆ ಬಾರದಕ್ಕೆ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ ನಡೆಸಿದರು. ಲಕ್ಕುಂಡಿ ಗ್ರಾಮಕ್ಕೆ ಬಾರದೆ ಬೈಪಾಸ್ ಮೂಲಕ ಗದಗ, ಹುಬ್ಬಳ್ಳಿಗೆ ತೆರಳುವ ಬಸ್ ಗಳು. ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಮೂಲಕ ತೆರಳುವ ಬಸ್ ಗಳು..ಇದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸರಿಯದ ಸಮಯಕ್ಕೆ ಬಸ್ ಗಳು ಸಿಗುತ್ತಿಲ್ಲ, ಬೈಪಾಸ್ ನಿಂದ ತೆರಳುವ ಬಸ್ ಗಳಿಗೆ ಲಕ್ಕುಂಡಿ ಬಸ್ ನಿಲ್ದಾಣದವರೆಗೆ ಬರಲು ಸೂಚಿಸಬೇಕು. ಇಲ್ವಾದ್ರೆ ಸಂಪೂರ್ಣ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
Author: AIN Author
ಕಲಬುರಗಿ: ರಾಜ್ಯದಲ್ಲಿ ಪ್ರಜಾಪ್ರಭುತ್ವ ಆಡಳಿತ ನಡೀತಿದೆಯಾ ಇಲ್ಲಾ ನಿಜಾಮನ ಆಡಳಿತ ನಡೆದಿದೆಯಾ ಅಂತ ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ಪ್ರಶ್ನೆ ಮಾಡಿದ್ದಾರೆ.. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜೀವ್ ಕಾಂಗ್ರೆಸ್ ಸರ್ಕಾರವನ್ನ ನಿಜಾಮನ ಆಡಳಿತಕ್ಕೆ ಹೋಲಿಸಿದ್ದಾರೆ. ಈ ಹಿಂದೆ ಯಾರಾದ್ರೂ ನಿಜಾಮನ ಆಡಳಿತದ ತಪ್ಪುಗಳನ್ನ ಎತ್ತಿ ತೋರಿಸಿ ಮಾತನಾಡಿದ್ರೆ ಏನಾಗುತಿತ್ತೋ ಅದೇ ಪರಸ್ತಿತಿ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಹಾಗೇ ಆಗ್ತಿದೆ.ಅಮಾಯಕರ ಮೇಲೆ ಹಲ್ಲೆ ನಡೆದ್ರೂ ಸರ್ಕಾರ ಕ್ರಮ ತಗೋತಿಲ್ಲ…ಉಸ್ತುವಾರಿ ಸಚಿವರಂತೂ ಯಾವುದೇ ತಲೆಬುಡ ಇಲ್ಲದೇ ಮಾತಾಡ್ತಿದ್ದಾರೆ ಅಂತ ರಾಜೀವ್ ಹೇಳಿದ್ರು..
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ನಿರೀಕ್ಷಣ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ. ಲಿಂಗಾಯತ ಪಂಚಮಸಾಲಿ ಸಮಾಜ ರಬಕವಿ ಬನಹಟ್ಟಿ ತಾಲೂಕ ಘಟಕ ವತಿಯಿಂದ ಬಾಗಲಕೋಟೆ ಜಿಲ್ಲೆಯ ತಾಲೂಕು ಘಟಕ ಸಂಯೋಗದೊಂದಿಗೆ ಪಾದಯಾತ್ರೆ ಪ್ರವರ್ತಕ ಮೀಸಲಾತಿ ಕ್ರಾಂತಿಯೋಗಿ ಪ್ರಥಮ ಜಗದ್ಗುರು ಶ್ರೀ ಬಸವ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರವು ಟು ಎ ಮೀಸಲಾತಿ ಅನುಷ್ಠಾನಕ್ಕೆ ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸಿ ಶಿಫಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೋತಾಯಿಸಿ ಮತ್ತು ರಾಜ್ಯದಂತ ಆರಂಭವಾಗಿರುವ ಭಾಗ 2.0 6ನೇ ಹಂತದ ಚಳುವಳಿ ಮತ್ತು ಬನಹಟ್ಟಿ ನಗರದ ಚೆನ್ನಮ್ಮ ಮೂರ್ತಿ ಭೂಮಿ ಪೂಜೆ ಸಮಾರಂಭ ನಡೆಯಲಿದೆ ಎಂದು ಹೇಳಿದರು. ಸಮಾಜವನ್ನು ಹಾಳು ಮಾಡುವ ಕಿಡಿಗೇಡಿಗಳ ಮಾತಿಗೆ ಕಿವಿ ಕೊಡಬೇಡಿ ನಮ್ಮ ಸಮಾಜದ ಕೆಲವು ಹಿರಿಯರು ಸಮಾಜದ ಬಗ್ಗೆ ಅಪಪ್ರಚಾರ ಮಾಡಿ ಸಮಾಜದ ಕಾರ್ಯಕ್ರಮಕ್ಕೆ ಯಾರು ಹೋಗಬೇಡಿ ಎಂದು ವದಂತಿಗಳನ್ನು ಹಬ್ಬಿಸಿ ಸಮಾಜದ…
ನವದೆಹಲಿ : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಸಮಿತಿಯ ಸಭೆ ನಡೆದಿದ್ದು, ಪ್ರತಿನಿತ್ಯ 2700 ಕ್ಯೂಸೆಕ್ ನೀರು ಬಿಡುವಂತೆ CWRC ಸೂಚನೆ ನೀಡಿದೆ. ಡಿಸೆಂಬರ್ ಅಂತ್ಯದವರೆಗೂ ನೀರು ಬಿಡಲು ಹೇಳಿದ್ದು. ಬಾಕಿ ಇರುವ 7.5ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಾಕಿ ಬಿಡಬೇಕಾಗಿದ್ದ ನೀರನ್ನು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಸೂಚನೆ ನೀಡಿದೆ. ಈ ಮೂಲಕ ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಗುರುವಾರ ಬೆಳಗ್ಗೆ 11.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಬಾಕಿ ಬಿಡಬೇಕಾಗಿದ್ದ ನೀರನ್ನು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಬಿಡುವಂತೆ ಕರ್ನಾಟಕಕ್ಕೆ ಶಿಫಾರಸ್ಸು ಮಾಡಲಾಗಿದೆ. ಸಭೆಯಲ್ಲಿ ಹಳೇ ಬಾಕಿ ನೀರು ಬಿಡಲು ತಮಿಳುನಾಡು ಆಗ್ರಹಿಸಿತು. ಹಳೇ ಬಾಕಿ 11 tmc ನೀರು ಬಿಡಲು ಬಾಕಿ ಇದೆ. ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿತು. https://ainlivenews.com/housewifes-body-found-hanging-in-bangalore/…
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ನವೆಂಬರ್ 29ರ ವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://ainlivenews.com/eskom-online-service-outage-for-3-days-from-tomorrow/ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿಯ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಸದ್ಯ ಮೋಡ ಕವಿದ ವಾತಾವರಣ ಇದ್ದು, ನಿನ್ನೆ ರಾತ್ರಿ ಮಳೆಯಾಗಿತ್ತು.
ಚಾರ್ಲಿ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ (Sangeeta) ನಿನ್ನೆ ಸ್ವತಃ ಬಿಗ್ ಬಾಸ್ (Bigg Boss Kannada) ಗೆ ಶಾಕ್ ನೀಡಿದ್ದರು. ಬ್ರಹ್ಮಾಂಡ ಗುರೂಜಿಗಾಗಿ ತೆರೆದಿದ್ದ ಬಾಗಿಲುನ್ನು ಕ್ರಾಸ್ ಮಾಡಿ, ತಾವೂ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಹಠ ಹಿಡಿದಿದ್ದರು. ಅವರ ಈ ನಡೆ ಭಾರೀ ಹೈಡ್ರಾಮಾಗೆ ಸಾಕ್ಷಿಯಾಗಿತ್ತು. ನನ್ನ ಸ್ನೇಹಿತರಿಂದ ದೂರವಾಗಿ ವಿನಯ್ ತಂಡ ಸೇರಿಕೊಂಡಿದ್ದ ಸಂಗೀತಾ, ಕಾರ್ತಿಕ್ ತಲೆಬೋಳಿಸಿಕೊಳ್ಳುವ ಸವಾಲ್ ಹಾಕಿದ್ದರು. ಅದರಂತೆ ಕಾರ್ತಿಕ್ ಮತ್ತು ತುಕಾಲಿ ತಲೆ ಬೋಳಿಸಿಕೊಂಡಿದ್ದರು. ಹಾಗೆಯೇ ತನಿಷಾ ಮೆಣಸಿನಕಾಯಿ ಮತ್ತು ವರ್ತೂರು ಸಂತೋಷ್ ಗೆ ತಿನ್ನಲೂ ಕಾರಣರಾಗಿದ್ದರು. ಈ ಎರಡು ಘಟನೆಗಳು ಸಂಗೀತಾರನ್ನು ಕಾಡಲು ಶುರು ಮಾಡಿದ್ದವು. ಸ್ನೇಹಿತರ ನೋವಿಗೆ ಕಾರಣರಾದ ಬಗ್ಗೆ ಅವರಲ್ಲಿ ಪಶ್ಚಾತ್ತಾಪ ಹುಟ್ಟಿತ್ತು. ಅದೇ ಅವರು ಮನೆಯಿಂದ ಹೊರಬರಲೂ ಪ್ರೇರೇಪಿಸುತ್ತಿತ್ತು. ‘ನಾನು ನಾನಲ್ದೆ, ಬೇರೆ ಯಾರೋ ಆಗ್ತಿದೀನಿ ಅನಿಸ್ತಿದೆ’ ಎಂದು ನಿನ್ನೆ ಸಂಗೀತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಲೆಯೊಳಗೆ ಪ್ರೆಷರ್ ಜಾಸ್ತಿ ಆಗ್ತಿದೆ ಎಂದು ಫ್ರೆಸ್ಟ್ರೇಟ್ ಆಗಿದ್ದಾರೆ.…
ಧಾರವಾಡ: ದೆಹಲಿಯಲ್ಲಿ ನಡೆದ ರೈತ ಹೋರಾಟದ ನೆನಪಿಗೋಸ್ಕರ ವಿವಿಧ ಹಕ್ಕುಗಳಿಗಾಗಿ ಬೆಂಗಳೂರಿನಲ್ಲಿ ಮಹಾಧರಣಿ ನಡೆಸಲು ಸಂಯುಕ್ತ ಹೋರಾಟಗಳ ಸಮಿತಿ ಸಜ್ಜಾಗಿದೆ. ಈ ಹೋರಾಟದ ಪೋಸ್ಟರ್‌ಗಳನ್ನು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಇಂದು ತಮ್ಮ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ರೈತರು, ಹಿಂದುಳಿದ ವರ್ಗದವರು, ವಿದ್ಯಾರ್ಥಿಗಳು, ಯುವಜನರು ಹಾಗೂ ಮಹಿಳಾ ಸಂಘಟನೆಗಳನ್ನೊಳಗೊಂಡು 72 ಗಂಟೆಗಳ ಕಾಲ ಈ ಹೋರಾಟ ನಡೆಯಲಿದೆ. ನ.26 ರಿಂದ 28ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಈ ಮಹಾಧರಣಿ ನಡೆಯಲಿದೆ ಎಂದು ಹಿರೇಮಠ ಈ ಸಂದರ್ಭದಲ್ಲಿ ತಿಳಿಸಿದರು. https://ainlivenews.com/housewifes-body-found-hanging-in-bangalore/ ದೆಹಲಿಯಲ್ಲಿ ಬೇರೆ ಬೇರೆ ರಾಜ್ಯಗಳ ರೈತರು ನಡೆಸಿದ ಧರಣಿಯ ನೆನಪನ್ನು ಮುಂದಿಟ್ಟುಕೊಂಡು ರಾಜ್ಯದ ಜನರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಈ ಮಹಾಧರಣಿ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ರಾಜಭವನ ಚಲೋ ಚಳವಳಿಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಹಿರೇಮಠ ತಿಳಿಸಿದರು.
ತೆಲುಗಿನ ಹೆಸರಾಂತ ನಟ ರಾಮ್ ಚರಣ್ (Ram Charan) ಇದೀಗ ಮೈಸೂರಿನಲ್ಲಿದ್ದಾರೆ. ಅವರ ಗೇಮ್ ಚೇಂಜರ್ ಸಿನಿಮಾದ ಶೂಟಿಂಗ್ ಗಾಗಿ ಅವರು ಹೈದರಾಬಾದ್ ನಿಂದ ಮೈಸೂರಿಗೆ ಖಾಸಗಿ ಜೆಟ್ ನಲ್ಲಿ ಆಗಮಿಸಿದ್ದಾರೆ. ಬೆಳಗ್ಗೆ ಮೈಸೂರು (Mysore) ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಟನಿಗೆ ಸ್ವಾಗತ ಕೋರಲಾಗಿದೆ. ಮೈಸೂರಿನಲ್ಲಿ ಅವರ ನಟನೆಯ ಸಿನಿಮಾ ಶೂಟ್ ಆಗುತ್ತಿದೆ. ಒಂದು ಕಡೆ ಸಿನಿಮಾದ ಭರ್ಜರಿ ಚಿತ್ರೀಕರಣ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸೋರಿಕೆಯ ಸಮಸ್ಯೆಯನ್ನು ಟೀಮ್ ಎದುರಿಸುತ್ತಿದೆ. ಸಿನಿಮಾದ ಯಾವುದೇ ವಿಷಯ ಸೋರಿಕೆ ಆಗದಂತೆ ಎಚ್ಚರಿಕೆ ತೆಗೆದುಕೊಂಡಿದ್ದರೂ, ಮೊನ್ನೆಯಷ್ಟೇ ಹಾಡಿಗೇ ಹಾಡೇ ಸೋರಿಕೆ (Song Leak) ಆಗಿ ಆತಂಕ ಮೂಡಿಸಿತ್ತು. ಈ ಕುರಿತಂತೆ ನಿರ್ಮಾಪಕರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಒಬ್ಬರನ್ನು ಅರೆಸ್ಟ್ ಕೂಡ ಮಾಡಿದ್ದಾರೆ. ಡೈರೆಕ್ಟರ್ ಶಂಕರ್ (Shankar) ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ(Game Changer) ಕಿಯಾರಾ ಅಡ್ವಾಣಿ- ರಾಮ್ ಚರಣ್ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಸೋರಿಕೆ ಕಾಟ ಶುರುವಾಗಿದೆ.…
ಬೆಂಗಳೂರು: ಬಹುಕೋಟಿ ರೂಪಾಯಿ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrasekhar) ನೆಚ್ಚಿನ ಐಷಾರಾಮಿ ಕಾರುಗಳನ್ನು ಹರಾಜಿಗೆ ಇಟ್ಟಿದ್ದಾರೆ ಐಟಿ ಅಧಿಕಾರಿಗಳು. ನೂರಾರು ಕೋಟಿ ರೂಪಾಯಿ ವಂಚನೆ ಕೇಸಲ್ಲಿ ಬಂಧನ ಆಗಿರೋ ಸುಕೇಶ್ ಚಂದ್ರಶೇಖರ್, ಸದ್ಯ ದೆಹಲಿ ಕಾರಾಗೃಹದಲ್ಲಿದ್ದಾರೆ. ಹಲವು ಸಂಸ್ಥೆಗಳಿಗೆ ತೆರಿಗೆ ಬಾಕಿ ಉಳಿಸಿಕೊಂಡಿರೋ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಹಲವು ಸ್ವತ್ತುಗಳನ್ನು ವಶಪಡಿಸಿಕೊಂಡಿತ್ತು. ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ 12 ಐಷಾರಾಮಿ ಕಾರುಗಳನ್ನೂ ಜಪ್ತಿ ಮಾಡಿದ್ದ ಐಟಿ ಅಧಿಕಾರಿಗಳು BMW, ರೇಂಜ್ ರೋವರ್, ಜಾಗ್ವಾರ್, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಡುಕಾಟಿ ಡಿಯಾವೆಲ್ ಸೇರಿ ಹಲವು ಐಷಾರಾಮಿ ಕಾರುಗಳನ್ನು ಇದೀಗ ಹರಾಜಿಗೆ (Auction) ಇಟ್ಟಿದ್ದಾರೆ. ನ.28 ರಂದು ಹರಾಜು ಹಾಕಲು ಮುಂದಾಗಿದ್ದು, ಸುಮಾರು 308 ಕೋಟಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರ ಪರಿಣಾಮ ಇದಾಗಿದೆ. ಈಗ ಕಾರು ಹರಾಜಿನ ಕಾರಣದಿಂದಾಗಿ ಸುದ್ದಿ ಆಗಿರುವ ಸುಕೇಶ್, ಈ ಹಿಂದೆ ಜೈಲಿನಲ್ಲಿದ್ದುಕೊಂಡೇ (Jail) ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ…
ಬೆಂಗಳೂರು: ಸಾಫ್ಟ್‌ವೇರ್, ಹಾರ್ಡ್‌ವೇರ್ ಅಪ್‌ಡೇಟ್ ಹಿನ್ನೆಲೆ ಶುಕ್ರವಾರದಿಂದ 3 ದಿನಗಳ ಕಾಲ ಎಸ್ಕಾಂ (ESCOM) ಆನ್‌ಲೈನ್ ಸೇವೆಗಳು ಬಂದ್ ಇರಲಿದೆ. ಈ ಹಿನ್ನೆಲೆ ಬೆಂಗಳೂರು (Bengaluru) ಸೇರಿದಂತೆ ಹಲವೆಡೆ ಆನ್‌ಲೈನ್ ಸೇವೆಗಳು ಸ್ಥಗಿತವಾಗಿರಲಿದೆ. https://ainlivenews.com/bjp-state-presidents-exercise-to-convince-the-disaffected/ ಶುಕ್ರವಾರ ನವೆಂಬರ್ 24 ರಿಂದ 26 ರವರೆಗೆ 98 ನಗರ ಹಾಗೂ ಪಟ್ಟಣಗಳಲ್ಲಿ ಸೇವೆಗಳು ಅಲಭ್ಯವಾಗಿರಲಿದೆ. ಸಾಫ್ಟ್‌ವೇರ್, ಹಾರ್ಡ್‌ವೇರ್ ಅಪ್‌ಡೇಟ್ ಹಿನ್ನೆಲೆ ಸೇವೆಗಳು ಬಂದ್ ಇರಲಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು ಸೇರಿದಂತೆ ಹಲವೆಡೆ ಆನ್‌ಲೈನ್ ಸೇವೆಗಳು ಸ್ಥಗಿತವಾಗಲಿದೆ. ಈ ಬಗ್ಗೆ ಬೆಸ್ಕಾಂ ಅಧಿಕೃತ ಪ್ರಕಟಣೆ ನೀಡಿದೆ. ಯಾವೆಲ್ಲಾ ಸೇವೆ ಇರಲ್ಲ? * ಹೊಸ ವಿದ್ಯುತ್ ಸಂಪರ್ಕ ನೋಂದಣಿ * ಆನ್‌ಲೈನ್ ಹಣ ಪಾವತಿ * ಕೌಂಟರ್‌ಗಳಲ್ಲಿ ನಗದು ಪಾವತಿ ಇರಲ್ಲ