ಬೆಂಗಳೂರು: ಸಾಫ್ಟ್ವೇರ್, ಹಾರ್ಡ್ವೇರ್ ಅಪ್ಡೇಟ್ ಹಿನ್ನೆಲೆ ಶುಕ್ರವಾರದಿಂದ 3 ದಿನಗಳ ಕಾಲ ಎಸ್ಕಾಂ (ESCOM) ಆನ್ಲೈನ್ ಸೇವೆಗಳು ಬಂದ್ ಇರಲಿದೆ. ಈ ಹಿನ್ನೆಲೆ ಬೆಂಗಳೂರು (Bengaluru) ಸೇರಿದಂತೆ ಹಲವೆಡೆ ಆನ್ಲೈನ್ ಸೇವೆಗಳು ಸ್ಥಗಿತವಾಗಿರಲಿದೆ.
ಅತೃಪ್ತರ ಮನವೊಲಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಕಸರತ್ತು: ರಮೇಶ್ ಜಾರಕಿಹೊಳಿ ಮನೆಗೆ ವಿಜಯೇಂದ್ರ ಭೇಟಿ!
ಶುಕ್ರವಾರ ನವೆಂಬರ್ 24 ರಿಂದ 26 ರವರೆಗೆ 98 ನಗರ ಹಾಗೂ ಪಟ್ಟಣಗಳಲ್ಲಿ ಸೇವೆಗಳು ಅಲಭ್ಯವಾಗಿರಲಿದೆ. ಸಾಫ್ಟ್ವೇರ್, ಹಾರ್ಡ್ವೇರ್ ಅಪ್ಡೇಟ್ ಹಿನ್ನೆಲೆ ಸೇವೆಗಳು ಬಂದ್ ಇರಲಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು ಸೇರಿದಂತೆ ಹಲವೆಡೆ ಆನ್ಲೈನ್ ಸೇವೆಗಳು ಸ್ಥಗಿತವಾಗಲಿದೆ. ಈ ಬಗ್ಗೆ ಬೆಸ್ಕಾಂ ಅಧಿಕೃತ ಪ್ರಕಟಣೆ ನೀಡಿದೆ.
ಯಾವೆಲ್ಲಾ ಸೇವೆ ಇರಲ್ಲ?
* ಹೊಸ ವಿದ್ಯುತ್ ಸಂಪರ್ಕ ನೋಂದಣಿ
* ಆನ್ಲೈನ್ ಹಣ ಪಾವತಿ
* ಕೌಂಟರ್ಗಳಲ್ಲಿ ನಗದು ಪಾವತಿ ಇರಲ್ಲ