ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ನಿರೀಕ್ಷಣ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ. ಲಿಂಗಾಯತ ಪಂಚಮಸಾಲಿ ಸಮಾಜ ರಬಕವಿ ಬನಹಟ್ಟಿ ತಾಲೂಕ ಘಟಕ ವತಿಯಿಂದ ಬಾಗಲಕೋಟೆ ಜಿಲ್ಲೆಯ ತಾಲೂಕು ಘಟಕ ಸಂಯೋಗದೊಂದಿಗೆ ಪಾದಯಾತ್ರೆ ಪ್ರವರ್ತಕ ಮೀಸಲಾತಿ ಕ್ರಾಂತಿಯೋಗಿ ಪ್ರಥಮ ಜಗದ್ಗುರು ಶ್ರೀ ಬಸವ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರವು ಟು ಎ ಮೀಸಲಾತಿ ಅನುಷ್ಠಾನಕ್ಕೆ ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸಿ ಶಿಫಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೋತಾಯಿಸಿ ಮತ್ತು ರಾಜ್ಯದಂತ ಆರಂಭವಾಗಿರುವ ಭಾಗ 2.0 6ನೇ ಹಂತದ ಚಳುವಳಿ ಮತ್ತು ಬನಹಟ್ಟಿ ನಗರದ ಚೆನ್ನಮ್ಮ ಮೂರ್ತಿ ಭೂಮಿ ಪೂಜೆ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಸಮಾಜವನ್ನು ಹಾಳು ಮಾಡುವ ಕಿಡಿಗೇಡಿಗಳ ಮಾತಿಗೆ ಕಿವಿ ಕೊಡಬೇಡಿ
ನಮ್ಮ ಸಮಾಜದ ಕೆಲವು ಹಿರಿಯರು ಸಮಾಜದ ಬಗ್ಗೆ ಅಪಪ್ರಚಾರ ಮಾಡಿ ಸಮಾಜದ ಕಾರ್ಯಕ್ರಮಕ್ಕೆ ಯಾರು ಹೋಗಬೇಡಿ ಎಂದು ವದಂತಿಗಳನ್ನು ಹಬ್ಬಿಸಿ ಸಮಾಜದ ಕಾರ್ಯಕ್ರಮವನ್ನು ಹಾಳು ಮಾಡುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಅಂತ ಕಿಡಿಗೇಡಿಗಳಿಗೆ ಕಿವಿ ಕೊಡದೆ ಸಮಾಜದ ಕಾರ್ಯಕ್ರಮಕ್ಕೆ ಸಮುದಾಯದವರು ಎಲ್ಲರೂ ಬಂದು ಕಾರ್ಯಕ್ರಮನ ಯಶಸ್ವಿ ಮಾಡಿ ಮನವಿ ಮಾಡಿಕೊಂಡರು ಕಿಡಿಗೇಡಿಗಳಿಂದ ಪಂಚಮಸಾಲಿ ಸಮುದಾಯಕ್ಕೆ ಏನು ಕೊಡುಗೆ 20 ವರ್ಷದಿಂದ ಒಂದೇ ಪಾರ್ಟಿಯಲ್ಲಿ ಇದ್ದು ಕೇಲಸ ಮಾಡಿದ್ದರಿ. ನಿಮ್ಮದು ಸಮುದಾಯಕ್ಕೆ ಇವರೇನು ಕೊಡುಗೆ ಕೊಟ್ಟಿದ್ದಾರೆ ಎಂದು ಬಹಿರಂಗಪಡಿಸಿ.
ನಮ್ಮ ಸಮಾಜಕ್ಕೆ ಮಾಲಿಂಗಪುರದಲ್ಲಿ ಒಂದು ಕೋಟಿ ರೂಪಾಯಿ ಅನುದಾನವನ್ನು ನೀಡಿ ಸಮುದಾಯವನ್ನು ಕಟ್ಟಿಸಿದ್ದು ಶಾಸಕ ಸಿದ್ದು ಸವದಿ ಹಾಗಾದರೆ ನಿಮ್ಮ ಕೊಡುಗೆ ಏನು ಬಹಿರಂಗಪಡಿಸಲಿ ಸುಖ ಸುಮ್ಮನೆ ನಮ್ಮ ಸಮುದಾಯವನ್ನು ಹಾಳು ಮಾಡಲು ಇವರು ಹೊರಟಿದ್ದಾರೆ ನಿಮಗೆ ಆ ಜನಾನೇ ತಕ್ಕ ಪಾಠ ಕಲಿಸುತ್ತದೆ ಎಚ್ಚರಿಕೆಯಿಂದ ಹೇಳಿಕೆ ಕೊಡಿ.
ರವಿವಾರ 26. 11. 2023 ರಂದು ನಡೆಯುವ ನಮ್ಮ ಸಮುದಾಯದ ಕಾರ್ಯಕ್ರಮದಲ್ಲಿ ಹಿರಿಯರು ಬಂದು ಕಾರ್ಯಕ್ರಮವನ್ನು ಯಶಸ್ವಿ ಮಾಡಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ಹೋರಾಟ ಮತ್ತು ಈ ಕಾರ್ಯಕ್ರಮಗಳನ್ನ ನಾವು ಆಯೋಜಿಸಿದ್ದೇವೆ. ಲಿಂಗಾಯತ ಪಂಚಮಸಾಲಿ ಕಾರ್ಯಕ್ರಮ ಇದು ಯಾವುದೇ ಪಕ್ಷಕ್ಕೆ ಸೀಮಿತವಾದ ಕಾರ್ಯಕ್ರಮ ಅಲ್ಲ ಇದು ಪಕ್ಷಾತೀತ ಕಾರ್ಯಕ್ರಮ ಮತ್ತು ಪಂಚಮಸಾಲಿ ಸಮುದಾಯವನ್ನು ಟು ಎ ಗೆ ಸೇರ್ಪಡೆ ಮಾಡುವ ಸಲುವಾಗಿ ಹೋರಾಟ ಹೊರತು ಬೇರೆ ಏನು ಇದರಲ್ಲಿ ಇಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಪಂಚಮಸಾಲಿ ಸಮಾಜದ ಅಧ್ಯಕರು ಶ್ರೀಶೈಲ ದಲಾಲ. ಲಕ್ಕಪ್ಪಾ ಪಾಟೀಲ. ಮಾಹಾದೇವ ಕೋಟ್ಯಾಳ. ಈಶ್ವರ ಬಿರಾದಾರಪಾಟೀಲ. ಸಂಗಮೇಶ ಪಾಟೀಲ. ಬಿಮಶಿ ಪಾಟೀಲ. ಬಿಮಶಿ ಹಂದಿಗುಂದ. ಮಲ್ಲಕಪಾ ಪಾಟೀಲ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ