ಅಧ್ಯಯನವೊಂದು ದಿನಕ್ಕೆ ಎರಡು ಬಾರಿ ಕಾಫಿ ಕುಡಿದ್ರೆ ನಿಮ್ಮ ಯಕೃತ್ ಆರೋಗ್ಯಕ್ಕೆ ಒಳ್ಳೆಯದಾಗಿದೆ ಎಂದು ಹೇಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಲಿವರ್/ ಯಕೃತ್ತಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕೆಟ್ಟ ಜೀವನಶೈಲಿ, ಅನಾರೋಗ್ಯಕಾರ ಆಹಾರ ಪದ್ದತಿ ಸೇರಿದಂತೆ ಹಲವು ಕಾರಣಗಳಿರಬಹುದು. ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗಿ ಸಾಗಬೇಕಾದರೆ ಯಕೃತ್ ಆರೋಗ್ಯಕರವಾಗಿ ಕಾರ್ಯನಿರ್ವಹಿಸುವುದು ಅವಶ್ಯಕ. ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ವಿರುದ್ಧದ ಹೊರಾಡುವ ಲಕ್ಷಣಗಳನ್ನು ಕಾಫಿಯು ಹೊಂದಿದೆ. ಇದು ಅತಿಯಾದ ಆಲ್ಕೊಹಾಲ್ ಸೇವನೆಗೆ ಸಂಬಂಧಿಸದ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಿಂದ ಗುರುತಿಸಲ್ಪಟ್ಟು, ಲಿವರ್ ಸಮಸ್ಯೆಗೆ ಪರಿಹಾರ ನೀಡುವುದಲ್ಲಿ ಕಾಫಿ ಸಹಾಯಕಾರಿಯಾಗಿದೆ. NAFLD ಅಪಾಯವನ್ನು ಕಡಿಮೆ ಮಾಡುವಲ್ಲಿ ಕಾಫಿಯ ಪೂರಕ ಪಾತ್ರವನ್ನು ಅಧ್ಯಯನಗಳು ಸಾಬೀತುಪಡಿಸಿದೆ. ಅಪೊಲೊ ಆಸ್ಪತ್ರೆಗಳ ಮುಖ್ಯ ಪೌಷ್ಟಿಕತಜ್ಞ ಡಾ ಪ್ರಿಯಾಂಕಾ ರೋಹಟಗಿ ಅದರ ಪ್ರಯೋಜನಗಳನ್ನು ವಿವರಿಸಿದ್ದಾರೆ. ಸಂಶೋಧನಾ ಅಧ್ಯಯನಗಳು, ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ ಇದ್ದವರಿಗೆ ಫ್ಯಾಟಿ ಲಿವರ್ ಸಮಸ್ಯೆ ಒಂದು ಹಂತದಲ್ಲಿ ಕಡಿಮೆ ಯಾಗುತ್ತದೆ. ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು…
Author: AIN Author
ಧಾರವಾಡ:- ಉದ್ಯೋಗ ಖಾತ್ರಿ ಅನುದಾನ ಶೇ 18 ರಷ್ಟು ಕೇಂದ್ರ ಸರ್ಕಾರ ಕಡಿತಗೊಳಿಸಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,, ಉದ್ಯೋಗ ಖಾತ್ರಿ ಜಾಬ್ ಕಾರ್ಡ್ದಾರರ ಸಂಖ್ಯೆ ಹೆಚ್ಚಳವಾಗಿದ್ದರೂ ಈ ವರ್ಷ ಉದ್ಯೋಗ ಖಾತ್ರಿ ಅನುದಾನವನ್ನು ಶೇ 18 ಕಡಿತ ಮಾಡಿದೆ, ಕೇಂದ್ರ ಸರ್ಕಾರವನ್ನು ಕೇಳುವವರು ಇಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ದೂರಿದರು. ದೇಶದಲ್ಲಿ 20 ಕೋಟಿ ಜನರು ಉದ್ಯೋಗ ಖಾತ್ರಿ ಯೋಜನೆಯನ್ನು ಅವಲಂಬಿಸಿದ್ದಾರೆ. ಪ್ರತಿ ವರ್ಷ ನರೇಗಾ ಅನುದಾನವನ್ನು ಹೆಚ್ಚಳ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಕಡಿಮೆಮಾಡಲಾಗಿದೆ. ಪ್ರಧಾನಿ ಮೋದಿ ಸಂಸತ್ತಿನಲ್ಲಿ ನರೇಗಾ ವಿರುದ್ಧ ಮಾತನಾಡಿದ್ದರು. ಅವರಿಗೆ ಈ ಯೋಜನೆಗೆ ಬಗ್ಗೆ ಆಸಕ್ತಿ ಇಲ್ಲ’ ಎಂದು ಕುಟುಕಿದರು. ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಬಿಜೆಪಿ ಸರ್ಕಾರ ಅನುಮತಿ ನೀಡಿದ್ದ ಆದೇಶವನ್ನು ಸರ್ಕಾರ ವಾಪಸ್ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸಂಪುಟ ಸಭೆ ಕೈಗೊಂಡಿರುವ ನಿರ್ಧಾರಕ್ಕೆ ಬದ್ಧ ಇದ್ದೇನೆ…
ಬೆಂಗಳೂರು:- 1,000ಕ್ಕೂ ಹೆಚ್ಚು ಮಾರ್ಷಲ್ಗಳನ್ನು ಹೊಂದುವ ಅಗತ್ಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಡಿಕೆಶಿ ಆದೇಶಿಸಿದ್ದಾರೆ. ಈ ಕುರಿತು ಆಪ್ತ ಕಾರ್ಯದರ್ಶಿ ಮೂಲಕ ಅಗತ್ಯ ಕ್ರಮ ಕೈಗೊಳ್ಳಲು ಪರಿಶೀಲಿಸುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ನವೆಂಬರ್ 21 ರಂದು ಬರೆದ ಪತ್ರದಲ್ಲಿ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಬಿಬಿಎಂಪಿಯ ಮಾರ್ಷಲ್ ವಿಭಾಗವು ಆಡಳಿತಕ್ಕೆ ಬಿಳಿ ಆನೆಯಂತಾಗಿದೆ. ಅನಗತ್ಯ ಮಾರ್ಷಲ್ ಸೇವೆಯನ್ನು ನಿಲ್ಲಿಸಬೇಕು ಎಂದು ಡಿಸಿಎಂಗೆ ಬರೆದ ಪತ್ರದಲ್ಲಿ ಬಿಜೆಪಿ ನಾಯಕ ರಮೇಶ್ ಉಲ್ಲೇಖಿಸಿದ್ದರು. ಬಿಬಿಎಂಪಿ ಮೂಲಗಳ ಪ್ರಕಾರ, ಸಂಸ್ಥೆಯ ವಿವಿಧ ವಿಭಾಗಗಳಲ್ಲಿ 1,000 ಕ್ಕೂ ಹೆಚ್ಚು ಮಾರ್ಷಲ್ಗಳನ್ನು ನಿಯೋಜಿಸಲಾಗಿದೆ. ಘನತ್ಯಾಜ್ಯ ಇಲಾಖೆಯಲ್ಲಿ 32 ಮೇಲ್ವಿಚಾರಕರೊಂದಿಗೆ 450 ಮಾರ್ಷಲ್ಗಳು, ಆರೋಗ್ಯ ಇಲಾಖೆಯಲ್ಲಿ 500 ಕ್ಕೂ ಹೆಚ್ಚು ಮಾರ್ಷಲ್ಗಳು ಮತ್ತು ಇಂದಿರಾ ಕ್ಯಾಂಟೀನ್ ಮತ್ತು ಇತರೆಡೆಗಳಲ್ಲಿ ಸುಮಾರು 30 ಕ್ಕೂ ಹೆಚ್ಚು ಮಾರ್ಷಲ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಷಲ್ಗಳ ಅಗತ್ಯ ಕಡಿಮೆಯಾಗಿದೆ ಮತ್ತು ವಿವಿಧ ಇಲಾಖೆಗಳ ಪ್ರಸ್ತುತ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡಬಹುದು ಎಂದು ಬಿಬಿಎಂಪಿ ಅಧಿಕಾರಿಗಳು…
ಬೆಂಗಳೂರು:- ಬಿಜೆಪಿ ಸರ್ಕಾರ ಡಿಕೆ ಶಿವಕುಮಾರ್ ಪ್ರಕರಣವನ್ನು ಸಿಬಿಐಗೆ ಕೊಟ್ಟಿದೇಕೆ ಎಂಬ ವಿಚಾರದ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಈ ಹಿಂದೆ ಎಜಿ ಒಪ್ಪಿಗೆ ಇಲ್ಲದೇ ಬಿಜೆಪಿಯವರು ಕಾನೂನು ಬಾಹಿರವಾಗಿ ಅನುಮತಿ ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ. ಆದರೆ ವಾಸ್ತವ ಸ್ಥಿತಿಯಲ್ಲಿ ಇಡಿಯವರು ಸಿಬಿಐಗೆ ಕೇಸ್ ಕೊಡಿಯೆಂದು ಪತ್ರ ಬರೆದಿದ್ದರು. ಹಾಗಾಗಿ ನಾವು ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೇವೆ ಎಂದು ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರದ ಕಾನೂನು ಬಾಹಿರ ಆದೇಶ ವಾಪಸ್ ಪಡೆದಿದ್ದೇವೆ ಎಂದಿದ್ದಾರೆ. ಇದು ವಾಸ್ತವಿಕ ಅಂಶ ಅಲ್ಲ, ಡಿ.ಕೆ ಶಿವಕುಮಾರ್ ಅವರನ್ನು ರಕ್ಷಣೆ ಮಾಡಲು ಸಿದ್ದರಾಮಯ್ಯ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಎಜಿ ಅಭಿಪ್ರಾಯ ಪಡೆದೇ ಸಿಬಿಐಗೆ ಪ್ರಕರಣ ಕೊಟ್ಟಿದ್ದೆವು. ಅಧಿವೇಶನದಲ್ಲಿ ದಾಖಲೆಗಳನ್ನು ಇಟ್ಟು ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. ಇನ್ನು ಡಿ.ಕೆ…
ಬೆಂಗಳೂರು:- ದರೋಡೆಕೋರರ ರಕ್ಷಣೆಯೇ ಸರ್ಕಾರದ ಧ್ಯೇಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆಯಲು ಸಂಪುಟ ಅನುಮೋದನೆ ನೀಡಿದ ಕುರಿತು ಈ ಪ್ರತಿಕ್ರಿಯೆ ನೀಡಿದರು. ಮರ್ಯಾದೆ ಇರುವವರು ಹೆದರುತ್ತಾರೆ. ಮರ್ಯಾದೆ ಇಲ್ಲದವರಿಗೆ ಕೋರ್ಟ್ನಲ್ಲಿ ಇದ್ದರೇನು? ಯಾವುದಲ್ಲಿದ್ದರೆ ಏನು? ಯಾವುದನ್ನು ಬೇಕಾದರೂ ಕೊಂಡುಕೊಳ್ಳುತ್ತೇವೆ ಎನ್ನುವ ದುರಹಂಕಾರ ದಲ್ಲಿರುತ್ತಾರೆ. ಅಂತಹವರಿಗೆ ಏನು ಹೇಳುವುದು ಎಂದು ವ್ಯಂಗ್ಯವಾಡಿದರು. ಸರ್ಕಾರದಲ್ಲಿ ನಡೆಯುತ್ತಿರುವ ಚಟುವಟಿಕೆಯ ಬಗ್ಗೆ ಬಹಳ ಮಾತನಾಡುವುದು ಇದೆ. ಚರ್ಚೆ ಮಾಡೋಣ, ಆ ಬಗ್ಗೆ ಆತುರ ಬೇಡ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.
ಗದಗ:- ಡಿ.ಕೆ.ಶಿವಕುಮಾರ್ ಪ್ರಕರಣ ಸಿಬಿಐನಿಂದ ವಾಪಸ್ ಪಡೆದಿರುವುದು ಖಂಡನೀಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ಸಿಬಿಐನಿಂದ ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಖಂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವಸರವಾಗಿ ಸಚಿವ ಸಂಪುಟ ಸಭೆಯನ್ನು ಕರೆದು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಈ ಅವಸರದ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ. ಕಳ್ಳ ಎಂದಿಗೂ ಕಳ್ಳನೇ. ಕಾಂಗ್ರೆಸ್ ಸರ್ಕಾರದವರು 139 ಜನರ ಬೆಂಬಲದ ಮೇಲೆ ಮಾಡಬಾರದ್ದನ್ನೆಲ್ಲಾ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ತಮ್ಮ ಪರ ಎಲ್ಲಾ ನ್ಯಾಯಾಲಯದಲ್ಲಿ ಹಾಕಿದ್ದ ಅಪೀಲು ಬಿದ್ದು ಹೋಗಿದೆ. 5 ವರ್ಷದಲ್ಲಿ 250 ಕೋಟಿ ಆಸ್ತಿ ಜಾಸ್ತಿಯಾಗಿದೆ ಎಂದು ಸಿಬಿಐ ವರದಿಯಲ್ಲೇ ಇದೆ ಎಂದರು. ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಕಾನೂನು ತಜ್ಞರು ಇಲ್ವಾ?, ಕಾನೂನು ತಜ್ಞರ ಗಮನಕ್ಕೆ ತಾರದೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಚಿವ…
ಹಾವೇರಿ :- ಕಾಡಾನೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗೊಂದಿ ಹಿರೇಕೌಂಶಿ ಗ್ರಾಮಗಳಲ್ಲಿ ಜರುಗಿದೆ. ಸುಮಾರು 4 ಕಾಡಾನೆಗಳಿಂದ ದಾಳಿ ನಡೆದಿದೆ. ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರು ಪರದಾಟ ನಡೆಸಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹಚ್ಚಿನ ಮೌಲ್ಯದ ಬಾಳೆ,ಮೆಕ್ಕೆಜೋಳ ಬೆಳೆಗಳ ನಾಶವಾಗಿದ್ದು, ರೈತರ ಜಮೀನುಗಳಲ್ಲಿ ಕಾಡಾನೆಗಳು ಸುತ್ತಾಡಿರುವುದನ್ನು ಗ್ರಾಮಸ್ಥರು ವೀಕ್ಷಿಸುತ್ತಿದ್ದಾರೆ. ಹೊಲ,ಗದ್ದೆಗಳಿಗೆ ರೈತರು,ಸಾರ್ವಜನಿಕರು ತೆರಳದಂತೆ ಅನೌನ್ಸ್ ಮಾಡಲಾಗಿದೆ. ಹಾನಗಲ್ ಅರಣ್ಯಾಧಿಕಾರಿಗಳಿಂದ ಗ್ರಾಮಗಳ ಸುತ್ತಮುತ್ತ ಮೈಕ್ ನಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ಬೇರೆ ಕಡೆ ಕಾಡಾನೆಗಳನ್ನು ಓಡಿಸಲು ಅಧಿಕಾರಿಗಳು ಶತ ಪ್ರಯತ್ನ ಮಾಡುತ್ತಿದ್ದಾರೆ. ಹಾನಗಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
ಕಲಬುರ್ಗಿ:- ಬೀದಿನಾಯಿ ದಾಳಿಗೆ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿಯ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ.. ಪಟ್ಟಣದ ತಳಿಗೇರಿ ಏರಿಯಾದಲ್ಲಿ ಘಟನೆ ನಡೆದಿದ್ದು ಮಹಿಳೆಯರು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಯಿಗಳ ದಾಳಿಗೆ ಆಕ್ರೋಶ ಹೊರಹಾಕಿರುವ ಜನ ಪುರಸಭೆ ವಿರುದ್ಧ ಕಿಡಿಕಾರಿದ್ದಾರೆ…
ತುಮಕೂರು:- ಬೈಕ್ ಹಾಗೂ ಓಮಿನಿ ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ತುಮಕೂರು ತಾಲೂಕಿನ ಓಬಳಾಪುರ ಬಳಿ ಜರುಗಿದೆ. ಬೈಕ್ ನಲ್ಲಿದ್ದ ಸವಾರರಿಗೆ ಗಂಭೀರ ಗಾಯವಾಗಿದ್ದು, ಓಮಿನಿಯಲ್ಲಿದ್ದ ಮಹಿಳೆಗೂ ಗಾಯವಾಗಿದೆ. ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ನಡೆದಿದೆ. ತುಮಕೂರು ಕಡೆಯಿಂದ ಹೋಗ್ತಿದ್ದ ಬೈಕ್, ಕೊರಟಗೆರೆ ಕಡೆಯಿಂದ ಬರ್ತಿದ್ದ ಓಮಿನಿ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ನವರು ಕುಡಚಿ ಮೂಲದವರು ಎನ್ನಲಾಗಿದೆ..ಎತ್ತಿನಹೊಳೆ ಕಾಮಗಾರಿ ಕೆಲಸಕ್ಕೆ ಬಂದಿದ್ದರು. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಬೆಂಗಳೂರು:- ಸಿಬಿಐ ತನಿಖೆ ಹೊತ್ತಲ್ಲಿ ಕೇಸ್ ವಾಪಸ್ ಪಡೆಯುವುದು ಸರಿಯಲ್ಲ ಎಂದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಸಚಿವ ಸಂಪುಟದಲ್ಲಿ ಡಿಕೆಶಿ ಸಿಬಿಐ ಕೇಸ್ ವಾಪಸ್ ಪಡೆದ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಇವರು ಪ್ರಾಮಾಣಿಕರು, ಪಾರದರ್ಶಕವಾಗಿದ್ದರೆ ಕೇಸ್ ಹಿಂಪಡೆಯುವ ಅಗತ್ಯವಿಲ್ಲ. ಇವರಿಗೆ ಭಯ ಯಾಕೆ, ಇವರ ಪ್ರಾಮಾಣಿಕತೆ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ ಎಂದು ಹೇಳಿದರು. ಸಿಬಿಐ ತನಿಖೆ ಹೊತ್ತಲ್ಲಿ ಸರ್ಕಾರ ಕೇಸ್ ವಾಪಸ್ ಪಡೆಯುವುದು ಸರಿಯಲ್ಲ. ಇದು ಸರ್ಕಾರದ ಭ್ರಷ್ಟಾಚಾರವನ್ನು ಸಾರ್ವಜನಿಕವಾಗಿ ತಿಳಿಸುತ್ತದೆ. ನಾನು ಖಂಡಿಸುತ್ತೇನೆ. ಹಾಗಂತ ಇದೊಂದೇ ಕೇಸ್ ಇಲ್ಲ, ಜಾರಿ ನಿರ್ದೇಶನಾಲಯದಲ್ಲೂ ಸಾಕಷ್ಟು ಕೇಸ್ಗಳಿವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.