ಹಾವೇರಿ :- ಕಾಡಾನೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗೊಂದಿ ಹಿರೇಕೌಂಶಿ ಗ್ರಾಮಗಳಲ್ಲಿ ಜರುಗಿದೆ.
ಸುಮಾರು 4 ಕಾಡಾನೆಗಳಿಂದ ದಾಳಿ ನಡೆದಿದೆ. ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರು ಪರದಾಟ ನಡೆಸಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹಚ್ಚಿನ ಮೌಲ್ಯದ ಬಾಳೆ,ಮೆಕ್ಕೆಜೋಳ ಬೆಳೆಗಳ ನಾಶವಾಗಿದ್ದು, ರೈತರ ಜಮೀನುಗಳಲ್ಲಿ ಕಾಡಾನೆಗಳು ಸುತ್ತಾಡಿರುವುದನ್ನು ಗ್ರಾಮಸ್ಥರು ವೀಕ್ಷಿಸುತ್ತಿದ್ದಾರೆ.
ಹೊಲ,ಗದ್ದೆಗಳಿಗೆ ರೈತರು,ಸಾರ್ವಜನಿಕರು ತೆರಳದಂತೆ ಅನೌನ್ಸ್ ಮಾಡಲಾಗಿದೆ. ಹಾನಗಲ್ ಅರಣ್ಯಾಧಿಕಾರಿಗಳಿಂದ ಗ್ರಾಮಗಳ ಸುತ್ತಮುತ್ತ ಮೈಕ್ ನಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ಬೇರೆ ಕಡೆ ಕಾಡಾನೆಗಳನ್ನು ಓಡಿಸಲು ಅಧಿಕಾರಿಗಳು ಶತ ಪ್ರಯತ್ನ ಮಾಡುತ್ತಿದ್ದಾರೆ. ಹಾನಗಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ