ಬೆಂಗಳೂರು:- ಬಿಜೆಪಿ ಸರ್ಕಾರ ಡಿಕೆ ಶಿವಕುಮಾರ್ ಪ್ರಕರಣವನ್ನು ಸಿಬಿಐಗೆ ಕೊಟ್ಟಿದೇಕೆ ಎಂಬ ವಿಚಾರದ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಈ ಹಿಂದೆ ಎಜಿ ಒಪ್ಪಿಗೆ ಇಲ್ಲದೇ ಬಿಜೆಪಿಯವರು ಕಾನೂನು ಬಾಹಿರವಾಗಿ ಅನುಮತಿ ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ. ಆದರೆ ವಾಸ್ತವ ಸ್ಥಿತಿಯಲ್ಲಿ ಇಡಿಯವರು ಸಿಬಿಐಗೆ ಕೇಸ್ ಕೊಡಿಯೆಂದು ಪತ್ರ ಬರೆದಿದ್ದರು. ಹಾಗಾಗಿ ನಾವು ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೇವೆ ಎಂದು ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರದ ಕಾನೂನು ಬಾಹಿರ ಆದೇಶ ವಾಪಸ್ ಪಡೆದಿದ್ದೇವೆ ಎಂದಿದ್ದಾರೆ. ಇದು ವಾಸ್ತವಿಕ ಅಂಶ ಅಲ್ಲ, ಡಿ.ಕೆ ಶಿವಕುಮಾರ್ ಅವರನ್ನು ರಕ್ಷಣೆ ಮಾಡಲು ಸಿದ್ದರಾಮಯ್ಯ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವು ಎಜಿ ಅಭಿಪ್ರಾಯ ಪಡೆದೇ ಸಿಬಿಐಗೆ ಪ್ರಕರಣ ಕೊಟ್ಟಿದ್ದೆವು. ಅಧಿವೇಶನದಲ್ಲಿ ದಾಖಲೆಗಳನ್ನು ಇಟ್ಟು ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಇನ್ನು ಡಿ.ಕೆ ಶಿವಕುಮಾರ್ ಇದನ್ನು ಹೈಕೋರ್ಟ್ನಲ್ಲಿ ಪ್ರಸ್ತಾಪಿಸಿದ್ದಾಗ ಹೈಕೋರ್ಟ್ ಕೂಡ ತಳ್ಳಿ ಹಾಕಿತ್ತು. ಡಿಕೆಶಿ ಅವರನ್ನು ಸಿಬಿಐ ಕೇಸ್ನಿಂದ ರಕ್ಷಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಮಾಡಿದ ಕೆಲಸ ಅಕ್ಷಮ್ಯ ಅಪರಾಧ. ಕಾನೂನು ಬಾಹಿರವಾಗಿ ಡಿಕೆ ಶಿವಕುಮಾರ್ ಅವರನ್ನು ಉಳಿಸಲು ಈ ಕೆಲಸವನ್ನು ಸಿಎಂ ಮಾಡಬಾರದಾಗಿತ್ತು. ಈಗಲಾದರೂ ಸರ್ಕಾರ ತನ್ನ ನಿರ್ಣಯ ವಾಪಸ್ ಪಡೆಯಲಿ, ರಾಜ್ಯದ ಜನ ಇದನ್ನು ಕ್ಷಮಿಸಲ್ಲ. ಸಿದ್ದರಾಮಯ್ಯ ರಾಜ್ಯದ ಜನರ ಬಳಿ ಕ್ಷಮೆ ಕೇಳಿ ನಿರ್ಣಯ ವಾಪಸ್ ಪಡೆಯಲಿ. ನಾವು ಎಜಿ ಅಭಿಪ್ರಾಯ ಪಡೆದು, ಕಾನೂನು ಚೌಕಟ್ಟಿನಲ್ಲೇ ಪ್ರಕರಣ ಸಿಬಿಐಗೆ ಕೊಟ್ಟಿದ್ದೇವು. ಈಗ ಹಿಂಬಾಗಿಲ ಮೂಲಕ ಪ್ರಕರಣದ ಅನುಮತಿ ವಾಪಸ್ ಪಡೆದಿದ್ದು ಅಕ್ಷಮ್ಯ ಅಪರಾಧ, ಅವರ ಅಪರಾಧದಲ್ಲಿ ಸಿದ್ದರಾಮಯ್ಯ ಕೂಡ ಶಾಮೀಲಾಗಲು ಹೊರಟಿದ್ದಾರೆ ಎಂದರು.