ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಚಾರ ‘ನನಗೆ ಆ ಜವಾಬ್ದಾರಿ ಕೊಟ್ಟರೆ ಸಂತೋಷ ಎಂದು ಬೆಂಗಳೂರಿನಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ‘ಕೊಡುವ ಸ್ಥಾನಕ್ಕೆ ಗೌರವ ಸಲ್ಲಿಸುವೆ, ಬೇರೆ ಯಾರಿಗೆ ಕೊಟ್ಟರೂ ಅವರೊಂದಿಗೆ ಸಹಕರಿಸಿಕೊಂಡು ಹೋಗುತ್ತೇವೆ. ನಮಗೆ ಪಕ್ಷ, ಸಿದ್ದಾಂತ ಮುಖ್ಯ. ಇಂದು ಸಂಜೆಯೇ ವಿಪಕ್ಷ ನಾಯಕರ ಆಯ್ಕೆ ಆಗಬಹುದು. ಅದಕ್ಕೂ ಮೊದಲು ಅವರು ಪ್ರಮುಖ ನಾಯಕರನ್ನು ಭೇಟಿಯಾಗಿ ವೈಯುಕ್ತಿಕ ಅಭಿಪ್ರಾಯ ಪಡೆಯುತ್ತಿದ್ದಾರೆ ಎಂದರು.
Author: AIN Author
ಬೀದರ್: ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಬೀದರ್ ಜಿಲ್ಲೆಯ ವಿವಿಧೆಡೆಯ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದರು. ಜಿಲ್ಲೆಯ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಮಠಾಣಾ ರೈತ ಸಂಪರ್ಕ ಕೇಂದ್ರ, ಬಗದಲ್ ರೈತ ಸಂಪರ್ಕ ಕೇಂದ್ರ, ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಜನವಾಡ ರೈತ ಸಂಪರ್ಕ ಕೇಂದ್ರ, ಔರಾದ ವಿಧಾನಸಭಾ ಕ್ಷೇತ್ರದ ದಾಬಕಾ ರೈತ ಸಂಪರ್ಕ ಕೇಂದ್ರ ಸೇರಿದಂತೆ ವಿವಿಧ ರೈತ ಸಂಪರ್ಕ ಕೇಂದ್ರಗಳ ಖಾಶೆಂಪುರ್, ಕಾಡವಾದ, ಬಗದಲ್ ತಾಂಡ, ಮರಕಲ್, ಮುರ್ಕಿ, ಚಿಕ್ಲಿ, ಗಣೇಶಪೂರ್ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾಳಾದ ತೊಗರಿ ಸೇರಿದಂತೆ ವಿವಿಧ ಬೆಳಗಳನ್ನು ವೀಕ್ಷಿಸಿ, ರೈತರೊಂದಿಗೆ ಚರ್ಚಿಸಿದರು. ಪರಿಹಾರಕ್ಕೆ ಒತ್ತಾಯಿಸಿ ಶುಕ್ರವಾರ ಮುಖ್ಯಮಂತ್ರಿಗೆ ಮನವಿ: ಬಂಡೆಪ್ಪ ಖಾಶೆಂಪುರ್ ಜೆಡಿಎಸ್ ಪಕ್ಷದ ಪ್ರಮುಖರೊಂದಿಗೆ ಬೆಳೆ ವೀಕ್ಷಣೆ ನಡೆಸಿ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು, ಮಳೆಯ…
ಬೆಂಗಳೂರು: ತೆಲಂಗಾಣದಲ್ಲಿ ಚುನಾವಣೆ ಪ್ರಚಾರದ ವೇಳೆ ರಾಜ್ಯದ ಸಚಿವ ಜಮ್ಮೀರ್ ಅಹಮದ್ ಖಾನ್ ಬಿಜೆಪಿ ವಿರುದ್ದ ನೀಡಿದ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರಿಂದ ಖಂಡನೆ ವ್ಯಕ್ತಪಡಿಸಿದ್ದಾರೆ. https://ainlivenews.com/joint_pain_suprem_ray_treatment_reiki/ ಬೆಂಗಳೂರಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷ ಸ್ಥಾನದಲ್ಲಿರುವವರಿಗೆ ನಾವು ಗೌರವ ಕೊಡುತ್ತೇವೆ ಎಂದರೇ ಅದು ಆ ಸ್ಥಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಕೊಡುವಂತದ್ದು ಯಾವುದೇ ವ್ಯಕ್ತಿಗಲ್ಲ ಎಂದರು. ಜಮ್ಮೀರ್ ಅಹಮದ್ ಅವ್ರೇ, ನೀವು ಯಾವುದೋ ಒಂದು ಕೋಮಿನ ಜವಬ್ದಾರಿ ತಗೊಂಡಿಲ್ಲ. ಒಬ್ಬ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನೀವು ನಿಮ್ಮ ಅಂತರಾಳದ ಮಾತನ್ನು ಆಡಿದ್ದೀರಿ. ಈ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಮತ್ತು ಇದನ್ನು ಖಂಡಿಸುತ್ತೇವೆ, ಇನ್ಮುಂದೆ ಈ ರೀತಿ ಮಾತಾಡದಂತೆ ಎಚ್ಚರಿಕೆ ವಹಿಸಿ ಅಂತಾ ಅವರು ಹೇಳಿದರು.
ಬೆಂಗಳೂರು : ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಪರ ಬ್ಯಾಟ್ ಬೀಸಿರುವ ಹೆಚ್.ಡಿ. ರೇವಣ್ಣ ನಡೆ ಬಗ್ಗೆ ಮಾಜಿ ಸಿಎಂ ಹಾಗೂ ಸಹೋದರ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/joint_pain_suprem_ray_treatment_reiki/ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೇವಣ್ಣರಿಗೆ ಏನು ಗೊತ್ತಿದೆ? ಅವರಿಗೆ ಹೃದಯ ವೈಶಾಲ್ಯತೆ ಇದೆ, ನಾವು ಏನು ಮಾಡೋದು? ಎಂದು ಹೇಳಿದ್ದಾರೆ. ಬೆಳಗ್ಗೆ ಅಷ್ಟೊಂದು ಸುದ್ದಿಯಾಯ್ತ, ಮೂರು ಗಂಟೆಯವರೆಗೂ ಯಾಕೆ ದಾಖಲೆ ರಿಲೀಸ್ ಮಾಡಿಲ್ಲ. ಎರಡುವರೆ ಲಕ್ಷ ಸಿಎಸ್ಆರ್ ಪಂಢ್ ತೆಗೆದುಕೊಳ್ಳುತ್ತಿರಾ? ನಾನು ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೆನೆ. ಡುಬ್ಲಿಕೇಟ್ ಸಿಎಂಗೆ ಸಿಎಸ್ಆರ್ ಪಂಡ್ಗೆ ತುಂಬಾನೆ ಇಷ್ಟ(ಡಿಕೆಶಿಗೆ). ವಿವೇಕಾನಂದ ಅಂದ್ರೆ ಯಾರು ಅಂತಾರೆ, ಬಿಇಓ ಹೆಸರು ಗೊತ್ತಿಲ್ವಾ? ಎಂದು ಸಿಎಂ ಸಿದ್ದರಾಮಯ್ಯಗೆ ಚಾಟಿ ಬೀಸಿದ್ದಾರೆ.
ಬೆಂಗಳೂರು: ದೀಪಾವಳಿ ಅಂಗಡಿ ಕ್ಲೀನ್ ಮಾಡೋಕೆ ಹೇಳಿದ್ದ ಮಾಲಿಕ ಕ್ಲೀನ್ ನೆಪದಲ್ಲಿ ಅಂಗಡಿ ಯಲ್ಲಿ ಇದ್ದ ಚಿನ್ನಾಭರಣ ದೋಚಿದ್ದವರು ಬಂಧನವಾಗಿದೆ. ಕೆಲಸ ಮಾಡ್ತಿದ್ದ ಜ್ಯುವೆಲರಿ ಶಾಪ್ ನಲ್ಲಿ ಕಳ್ಳತನ ಮಾಡಿ ಪುರಾತನ ಕಾಲದ ಚಿನ್ನಾಭರಣ, ಹಾಗೂ ಹಳೇ ನಾಣ್ಯ ಹಾಗೂ ನೋಟುಗಳನ್ನ ಕದ್ದಿದ್ದ ಕಳ್ಳರನ್ನ ಹಲಸೂರು ಗೇಟ್ ಪೊಲೀಸ್ರು ಬಂಧಿಸಿದ್ದಾರೆ.ದೀಪಾವಳಿ ಹಬ್ಬಕ್ಕೆ ಕ್ಲೀನ್ ಅಂಗಡಿ ಕ್ಲೀನ್ ಮಾಡಲು ಮಾಲಿಕರು ಕೆಲಸದವರಿಗೆ ಹೇಳಿದ್ರು. https://ainlivenews.com/joint_pain_suprem_ray_treatment_reiki/ ಈ ವೇಳೆ ಕ್ಲೀನ್ ಮಾಡ್ತಿದ್ದೇವೆ ಎಂದು ಹೇಳಿ ಸಂಪೂರ್ಣವಾಗಿ ಅಂಗಡಿಯನ್ನೇದೋಚಿದ್ರು. ಹಲಸೂರು ಗೇಟ್ ಠಾಣ ವ್ಯಾಪ್ತಿಯ ಕಾಂಚನಾ ಜ್ಯುವೆಲರಿಯಲ್ಲಿ ಆರೋಪಿಗಳು ಕೆಲಸ ಮಾಡ್ತಿದ್ರು. ಅಂಗಡಿಯಲ್ಲಿಪುರಾತನ ಕಾಲದ ಚಿನ್ನಾಭರಣ ಹಾಗೂಹಣ ಕಳ್ಳತನ ಮಾಡಿದ್ರು. ಸದ್ಯ ಆರೋಪಿಗಳಾದ ಖೇತರಾಮ್, ಸುರೇಶ್ ನ ಬಂಧಿಸಿ ಅರೋಪಿಗಳಿಂದ 1ಕೆಜಿ, 624 ಗ್ರಾಂ ಚಿನ್ನ, 6.455 ಕೆಜಿ ಬೆಳ್ಳಿ , ಹಳೆಯ ಒಂದು ಮತ್ತು ಎರಡು ರೂಪಾಯಿ ನೋಟುಗಳು,ವಾಚ್ ಗಳು, ಹಳೆ ನಾಣ್ಯಗಳು ಮತ್ತು ದ್ವಿಚಕ್ರ ವಾಹನ ಸೀಜ್ ಮಾಡಿದ್ದಾರೆ.
ಬೆಂಗಳೂರು ಸೇರಿ ರಾಜ್ಯದ್ಯತ ವರ್ಲ್ ಕಪ್ ಟೂರ್ನಿಯಲ್ಲಿ ಬೆಟ್ಟಿಂಗ್ ನಡೆಸ್ತಿದ್ದ ಬುಕ್ಕಿಯನ್ನ ಸಿಸಿಬಿ ಹೆಡೆಮುರಿ ಕಟ್ಟಿದರೆ ಈ ಭಾರಿ ವರ್ಲ್ಡ್ ಕಪ್ ಹಬ್ಬ ಜೋರಾಗಿದ್ದು ವರ್ಲ್ಡ್ ಕಪ್ ಮ್ಯಾಚ್ ಗಳಲ್ಲಿ ಲಕ್ಷಲಕ್ಷ ಬೆಟ್ಟಿಂಗ್ ನಡೆಸ್ತಿದ್ದ ಬುಕ್ಕಿಯನ್ನ ಸಿಸಿಬಿ ಅಧಿಕಾರಿಗಳು ಲಾಕ್ ಮಾಡಿದ್ದಾರೆ. CCB killed the bookie who was betting in Bangalore! allexch.bet ಎಂಬ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸ್ತಿದ್ದ. ಬೆಂಗಳೂರು ಸೇರಿದಂತೆ ಹಲವೆಡೆ ಬೆಟ್ಟಿಂಗ್ ನಡೆಸ್ತಿದ್ದ. ಆರೋಪಿ ಪ್ರಕಾಶ್ ಶೆಟ್ಟಿ ಬೆಟ್ಟಿಂಗ್ ಆ್ಯಪ್ ನಿರ್ವಹಣೆ ಮಾಡಲು ಕಾರ್ಕಳ ಬಳಿಯ ಮನೆಯಲ್ಲಿ ವೆಬ್ ಸೈಟ್ ನಿರ್ವಹಣೆ ಮಾಡ್ತಿದ್ದ. ಈ ಆ್ಯಪ್ ನಿರ್ವಹಣೆ ಮಾಡಲು ಹೊರ ರಾಜ್ಯದಿಂದ ಟೆಕ್ಕಿಗಳನ್ನ ಕರೆತಂದು ಆ್ಯಪ್ ನಿರ್ವಹಣೆ ತರಬೇತಿ ಪಡೆಯುತ್ತಿದ್ದ. ಬೆಟ್ಟಿಂಗ್ ಗಾಗಿ ವಾಟ್ಸ್ ಅಪ್ ಗ್ರೂಪ್ ಮಾಡಿ ಯುವಕರನ್ನ ಬೆಟ್ಟಿಂಗ್ ಗೆ ಪ್ರೇರೆಪಿಸುತ್ತಿದ್ದ. ಸದ್ಯ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪ್ರಕಾಶ್ ಶೆಟ್ಟಿ ಅಂಡ್ ಟೀಮ್ ನ ಬಂಧಿಸಿ.ಬಂಧಿತನಿಂದ…
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಮ್ (Kulgam) ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆ (Security Force) ಎನ್‌ಕೌಂಟರ್ (Encounter) ನಡೆಸಿದ್ದು, ಐವರು ಲಷ್ಕರ್ ಭಯೋತ್ಪಾದಕರನ್ನು (Lashkar Terrorists) ಹತ್ಯೆ ಮಾಡಲಾಗಿದೆ. ಐವರು ಭಯೋತ್ಪಾದಕರನ್ನು ಕುಲ್ಗಾಮ್ ಪೋಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ತಟಸ್ಥಗೊಳಿಸಿದೆ. ಭಯೋತ್ಪಾದಕರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭಯೋತ್ಪಾದಕರು ತಪ್ಪಿಸಿಕೊಳ್ಳದಂತೆ ಭದ್ರತಾ ಪಡೆ ಪ್ರದೇಶವನ್ನು ಸುತ್ತುವರೆದಿದೆ. ಕುಲ್ಗಾಮ್‌ನ ದಮ್ಹಾಲ್ ಹಂಜಿ ಪೋರಾ ಪ್ರದೇಶದಲ್ಲಿ ಎನ್‌ಕೌಂಟರ್ ಆರಂಭವಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್‌ನಲ್ಲಿ ತಿಳಿಸಿದ್ದಾರೆ. https://ainlivenews.com/what-happens-if-tea-coffee-is-given-to-children/ ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ ಭದ್ರತಾ ಪಡೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ…
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ14 ವರ್ಷದ ರಾಮ ಎಂಬ ಹೆಸರಿನ ಸಿಂಹ ಸಾವನ್ನಪ್ಪಿದೆ. ಸಿಂಹವು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಅಲ್ಲದೆ, ಪಶುವೈದ್ಯರು ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದಿದ್ದಾರೆ. https://ainlivenews.com/joint_pain_suprem_ray_treatment_reiki/ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಬಿಬಿಎಂಪಿ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 14 ವರ್ಷದ ಸಿಂಹ ಸಾವನ್ನಪ್ಪಿದೆ. ಸಿಂಹಕ್ಕೆ ಬುಧವಾರ ಸಂಜೆ ವಾಂತಿ ಸಂಬಂಧಿತ ಲಕ್ಷಣಗಳನ್ನು ಕಾಣಿಸಿಕೊಂಡಿದೆ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಗುರುವಾರ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ
ಮಂಗಳೂರು: ಮಾಜಿ ಜೆಡಿಎಸ್ ಶಾಸಕರ ಸೇರ್ಪಡೆಗೆ ಸಚಿವ ಕೆ.ಎನ್ ರಾಜಣ್ಣ ಅಸಮಧಾನ ವಿಚಾರ ‘ವಿರೋಧ ಅಂತಾ ನಾನು ಹೇಳಿಲ್ಲ. ಅಸಮಾಧಾನ ಇದ್ದೆ ಇರುತ್ತೆ ಎಂದು ಮಂಗಳೂರಿನಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು. ಒಂದು ಮನೆಯಲ್ಲಿ ಅಸಮಾಧಾನ ಇರಲ್ವಾ?, ಆದ್ರೆ, ಪಕ್ಷಕ್ಕೆ ಮಾರಕವಾಗುವ ರೀತಿಯ ಅಸಮಾಧಾನ ಅಲ್ಲ. ಸಾತ್ವಿಕ ವಿರೋಧ ಅಷ್ಟೇ ಎಂದರು. https://ainlivenews.com/what-happens-if-tea-coffee-is-given-to-children/
ಬೆಂಗಳೂರು: ಯಾವುದೇ ವ್ಯಕ್ತಿಗಳು, ಸಂಘಟನೆಗಳು ಕಾನೂನು ವಿರುದ್ಧ ನಡೆದುಕೊಂಡರೆ ಕ್ರಮ ಅನಿವಾರ್ಯ ಎಂದು ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ ಕೊಟ್ಟಿದ್ದಾರೆ. ಬಜರಂಗದಳದ (Bajarang Dal) ಕಾರ್ಯಕರ್ತರಿಗೆ ಗಡಿಪಾರಿಗೆ ನೋಟಿಸ್ (Deportation Notice) ನೀಡಿರುವ ವಿಚಾರವಾಗಿ ಪೇಜಾವರ ಶ್ರೀ, ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಹೊರತುಪಡಿಸಿ ಪೊಲೀಸ್ ಇಲಾಖೆ ಯಾವ ಕೆಲಸ ಮಾಡಲ್ಲ. ಬಜರಂಗದಳ ಆಗಲಿ ಯಾವುದೇ ಸಂಘ ಸಂಸ್ಥೆಗಳು ಆಗಲಿ, ವೈಯಕ್ತಿಕವಾಗಿ ಕಾನೂನು ಪ್ರಕಾರ ಏನೇ ಮಾಡಿದರೂ ನಮ್ಮ ಸರ್ಕಾರ ಅವರ ಜೊತೆ ಇರುತ್ತೆ. ಕಾನೂನಿನ ವಿರುದ್ಧವಾಗಿ ಕೆಲಸ ಮಾಡಿದರೆ ಏನು ಮಾಡಬೇಕು? ಪೊಲೀಸ್ ಇಲಾಖೆ ಇರೋದು ಕಾನೂನು ಹಾಗೂ ಶಾಂತಿ ಕಾಪಾಡಲು. ಆ ದೃಷ್ಟಿಯಲ್ಲಿ ಪೊಲೀಸ್ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಗಡಿಪಾರು ನೋಟಿಸ್ ಅನ್ನು ಸಮರ್ಥನೆ ಮಾಡಿಕೊಂಡರು. https://ainlivenews.com/joint_pain_suprem_ray_treatment_reiki/ ಯಾರನ್ನೋ ಹತ್ತಿಕ್ಕಬೇಕು ಅಥವಾ ರಾಜಕೀಯ ದುರುದ್ದೇಶಕ್ಕೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಪೊಲೀಸರು ಮಾಡಲ್ಲ. ನಮ್ಮ ಸರ್ಕಾರ ಜನ ಸಮುದಾಯಕ್ಕೆ, ರಾಜ್ಯದ ಜನರಿಗೆ ಶಾಂತಿ…