ಚಿಕ್ಕಮಗಳೂರು: ಇವತ್ತಿನ ದಿನ ಭಾರತದ ದೇಶಕ್ಕೆ ವಿಶೇಷ ದಿನ. ಪ್ರತಿಯೊಂದು ಕುಟುಂಬಗಳು ಕ್ರೀಡಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ನಮ್ಮ ದೇಶದ ಕ್ರಿಕೆಟ್ ಆಟಗಾರರಿಗೆ ವಿಶ್ವಕಪ್ನಲ್ಲಿ ಗೆಲ್ಲುವ ಮೂಲಕ ದೇಶದ ಹಿರಿಮೆಯನ್ನು ಎತ್ತಿ ಹಿಡಿಯಲು ಶುಭ ಹಾರೈಕೆಗಳು ಬರುತ್ತಿವೆ. ಪ್ರತಿ ಕುಟುಂಬ, ಪ್ರತಿ ನಾಗರಿಕರ ಕ್ರೀಡಾಪಟುಗಳಿಗೆ ವಿಶೇಷ ಹಾರೈಕೆಗಳನ್ನು ನಾನು ಎಂದು ನೋಡಿಲ್ಲ. ನಮ್ಮ ಟೀಂಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮೊದಲ ಬಾರಿಗೆ 10 ಪಂದ್ಯಗಳನ್ನು ಭಾರತ ಗೆದ್ದಿದೆ. 12 ವರ್ಷಗಳಿಂದ ಭಾರತ ಕಾಯುತ್ತಿದ್ದ ಗುರಿಯನ್ನ ಇವತ್ತು ತಲುಪಲಿ ಎಂದು ಶುಭ ಹಾರೈಕೆಯನ್ನು ಮಾಡುತ್ತೇನೆ ಎಂದು ಮಾಜಿ ಸಿ.ಎಂ ಕುಮಾರಸ್ವಾಮಿ ಹೇಳಿದರು.
Author: AIN Author
ಕಲಬುರಗಿ: ಹತ್ತು ಮ್ಯಾಚ್ ಗೆದ್ದಿರುವ ಭಾರತ ಫೈನಲ್ ಮ್ಯಾಚ್ ಗೆಲ್ಲಲೇಬೇಕು..ಹೀಗಂತ ಸಂಕಲ್ಪ ಮಾಡಿರುವ ಹಿಂದೂ ಜಾಗೃತ ಸೇನೆ ಇವತ್ತು ಹೋಮ ಹವನ ಮಾಡಿ ಪ್ರಾರ್ಥಿಸಿತು. ನಗರದ ಅಳಂದ ರಸ್ತೆಯಲ್ಲಿರುವ ಸ್ಥಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹೋಮ ಹವನ ನಡೆಸಿತು..ಹಿಂದೂ ಸೇನೆ ಕಾರ್ಯಕರ್ತರು ಟೀಂ ಇಂಡಿಯಾ ಫೋಟೋ ಹಿಡಿದು ಹೋಮ ಕಾರ್ಯದಲ್ಲಿ ತೊಡಗಿದ್ದು ವಿಶೇಷವಾಗಿತ್ತು..
ಕಲಬುರಗಿ: ಬಿಸಿಯೂಟದ ವೇಳೆ ಸಾಂಬಾರ್ ತುಂಬಿದ್ದ ಬಾಣಲೆಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ..ಚಿಣಮಗೇರಾ ಸರ್ಕಾರಿ ಶಾಲೆಯಲ್ಲಿ ನವೆಂಬರ 16 ರಂದು ಘಟನೆ ನಡೆದಿದ್ದು ಎರಡನೇ ತರಗತಿ ವಿದ್ಯಾರ್ಥಿನಿ ಮಹಂತಮ್ಮ ತೀವ್ರವಾಗಿ ಗಾಯಗೊಂಡಿದ್ಲು. ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತ್ರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಕಳೆದ ರಾತ್ರಿ ಬಾಲಕಿ ಸಾವನ್ನಪ್ಪಿದ್ದಾಳೆ. ಕರ್ತವ್ಯ ನಿರ್ಲಕ್ಷ ಆರೋಪದ ಮೇಲೆ ಮುಖ್ಯ ಶಿಕ್ಷಕಿ ಸೇರಿ ಇಬ್ಬರನ್ನ ಜಿಲ್ಲಾಡಳಿತ ಈಗಾಗಲೇ ಸಸ್ಪೆಂಡ್ ಮಾಡಿದೆ..
ಬೆಂಗಳೂರು: ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯ ಹಿನ್ನೆಲೆ. ಭಾರತ ವಿಶ್ವಕಪ್ ನಲ್ಲಿ ಗೆಲ್ಲಲಿ ಅಂತಾ ದೇವರ ಮೊರೆ ಜನ ಕ್ರಿಕೆಟ್ ಅಭಿಮಾನಿಗಳು ಇವತ್ತು ಟೀಮ್ ಇಂಡಿಯಾಗಾಗಿ ನಗರದ ಅನೇಕ ಕಡೆ ವಿಶೇಷ ಪೂಜೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ವಿಘ್ನ ನಿವಾರಕ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂಡಿಯನ್ ಪೋಸ್ಟರ್ ಸಮೇತ ಪೂಜೆ ಕ್ರಿಕೆಟ್ ಅಭಿಮಾನಿಗಳಿಂದ ಕಪ್ ಗೆಲ್ಲಲಿ ಅಂತ ಗಣೇಶನಿಗೆ ವಿಶೇಷ ಪೂಜೆ ಟೀಮ್ ಇಂಡಿಯಾ ಪೋಸ್ಟರ್ ಜೊತೆ ವಿಘ್ನ ವಿನಾಶಕನ ಮುಂದೆ ವಿಶೇಷ ಪೂಜೆ ನಡೆಸಿದ ಕ್ರಿಕೆಟ್ ಪ್ರೇಮಿಗಳು
ಮೈಸೂರು: ದಲಿತ ಪ್ರೇಮ ಎಂಬುದು ಬಾಯಿ ಮಾತಿನ ಸರಕಾಗಬಾರದು. ಅದು ಕೃತಿಯಲ್ಲೂ ಇದ್ದರೆ ಚೆನ್ನ. ಚುನಾವಣೆಗೆ ಮೊದಲು ಮತ್ತು ನಂತರದಲ್ಲಿ ದಲಿತರಿಗೆ ಸ್ಥಾನ ನೀಡಿ ಎನ್ನುತ್ತಿದ್ದ ಬಿಜೆಪಿಗರು ವಿಪಕ್ಷೀಯ ಸ್ಥಾನಕ್ಕೆ ಅಥವಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತರನ್ನೇ ನೇಮಿಸಬಹುದು ಎಂದುಕೊಂಡಿದ್ದೆ. ಆದರೆ ಅದು ಹಾಗಾಗಲಿಲ್ಲ ಹಿಂದುತ್ವ ಎಂದರೆ ದಲಿತರನ್ನು ಹೊರಗಿಡುವ ಜಾತಿತ್ವ ಎಂದು ಮತ್ತೊಮ್ಮೆಸಾಬೀತಾಯಿತು. #ದಲಿತ_ವಿರೋಧಿ_ಬಿಜೆಪಿ ಎಂದು ಡಾ. ಹೆಚ್ಸಿ ಮಹದೇವಪ್ಪ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಎರಡು ದಿನ ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಮತ್ತು ನಾಳೆ (ನ.19, 20) ಮೈಸೂರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು 12 ಗಂಟೆಗೆ ಮೈಸೂರಿಗೆ ಆಗಮಿಸಲಿರುವ ಬಿ ವೈ ವಿಜಯೇಂದ್ರ, 1.50ಕ್ಕೆ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಲಿದ್ದಾರೆ. 2.30ಕ್ಕೆ ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. 3.40ಕ್ಕೆ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಸಂಜೆ 4 ಗಂಟೆಗೆ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿದಾನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸುತ್ತಾರೆ. 5.10ಕ್ಕೆ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಕಾರ್ಯಕರ್ತರ ಸಭೆ, ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಧಾರವಾಡ: ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕ್ರಿಕೇಟ್ ಪ್ರೇಮಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಎಲ್ಲೆಡೆ ಟೀಂ ಇಂಡಿಯಾಗೆ ಶುಭಾಶಯಗಳ ಸುರಿಮಳೆ ಆಗುತ್ತಿದ್ದು, ಗೆದ್ದುಬಾ ಇಂಡಿಯಾ ಎಂದು ಘೋಷಣೆ ಕೂಗಿ ಶುಭಹಾರೈಸಲಾಗುತ್ತಿದೆ. ಧಾರವಾಡದ ಯುವ ಡ್ಯಾನ್ಸ್ ಅಕ್ಯಾಡೆಮಿಯ ಮಕ್ಕಳು ಜೀತೆಗಾ ಜೀತೆಗಾ ಭಾರತ್ ಜೀತೆಗಾ, ಗೆದ್ದು ಬಾ ಭಾರತ ಎಂದು ಶುಭ ಹಾರೈಸಿದ್ದಾರೆ
ಹಾಸನ: ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಪಂದ್ಯ ಇರುವ ಹಿನ್ನೆಲೆಯಲ್ಲಿ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ ಯಾರಿಗೆ ಗೆಲುವು ಎಂದು ಹಾಗೆ ಭಾತರಕ್ಕೆ ಒಲಿಯಲಿ ಎಂದು ಎಲ್ಲಾ ಕಡೆಯಿಂದ ಪೂಜೆಗಳನ್ನು ಸಹಮಾಡುತ್ತಿದ್ದಾರೆ. ಹಾಗೆ ಅದೇರೀತಿ ಟೀಂ ಇಂಡಿಯಾಗೆ ವಿಭಿನ್ನ ರೀತಿ ಶುಭ ಕೋರಿದ ಅಭಿಮಾನಿಗಳು ಹಾಸನ ನಗರದ ಪ್ರಮುಖ ಬೀದಿಗಳಲ್ಲಿ ರನ್ನಿಂಗ್ ಮಾಡಿ ಜಯಘೋಷ ಹಾಗೂ ಟೀಂ ಇಂಡಿಯಾ ಜರ್ಸಿ ಧರಿಸಿ ಶುಭ ಕೋರಿದ ಹತ್ತಾರು ಅಭಿಮಾನಿಗಳು ಸುಮಾರು 10ಕಿ.ಮಿ ಜಾಗಿಂಗ್ ಮಾಡಿ ಭಾರತ ಪರ ಜಯ ಘೋಷ ಕೂಗಿ ಶುಭಾಶಯಜಿಲ್ಲಾ ಕ್ರೀಡಾಂಗಣ, ಎನ್.ಆರ್ ವೃತ್ತ, ಡಿ.ಸಿ ಕಚೇರಿ, ಶಂಕರಮಠ ರಸ್ತೆ ಮೂಲಕ ರನ್ನಿಂಗ್ ಇಂದು ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು:- ವಿಪಕ್ಷ ನಾಯಕನ ಆಯ್ಕೆಯಿಂದ ಬಿಜೆಪಿಯಲ್ಲಿ ಅಸಮಾಧಾನ ವಿಚಾರವಾಗಿ ಶಾಸಕ ಎಸ್ ಆರ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪಕ್ಷದ ತೀರ್ಮಾನದಂತೆ ಶಾಸಕರ ಅಭಿಪ್ರಾಯದಂತೆ ಕೊಟ್ಟಿದ್ದಾರೆ ಅದನ್ನ ನಾವು ಒಪ್ಪಬೇಕು. ಬೆಂಗಳೂರಿನವರಿಗೆ ವಿಪಕ್ಷ ಸ್ಥಾನ ಕೊಟ್ಟಿದ್ದಾರೆ. ಶಾಸಕರಾದಾಗಲಿಂದಲೂ ಮಂತ್ರಿ ಡಿಸಿಎಂ ಎಲ್ಲ ಅವರಿಗೆ ಕೊಡ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲ್ಲ ಉಪೇಕ್ಷೆ ಮಾಡ್ತಾರೆ. ಅವರು ಸರಿಯಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂದ್ರೆ ಪಕ್ಷಕ್ಕೆ ಅವರ ಘನತೆಗೆ ಕುಂದು ಬರುತ್ತೆ ಎಂದರು. ಯಡಿಯೂರಪ್ಪ ಅವರು ಸಿಎಂ ಆಗಿದ್ರೆ ನಮಗೆ ಈ ದುಸ್ಥಿತಿ ಬರ್ತಿರಲಿಲ್ಲ. ನಾವು ಅಧಿಕಾರ ಪಕ್ಷದಲ್ಲಿ ಇರ್ತಿದ್ವಿ. ಅವರ ಕುಟಂಬ ರಾಜಕಾರಣ ಅಂತೆಲ್ಲ ಮಾತನಾಡಬಾರದು. ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷರ ವಿರುದ್ದ ಮಾತನಾಡಿದಷ್ಟು ಅವರಿಗೆ ಡ್ಯಾಮೇಜ್ ಆಗುತ್ತೆ ಎಂದು ತಿಳಿಸಿದರು.
ಕಲಬುರ್ಗಿ: ಚಿತ್ತಾಪುರ ಕ್ಷೇತ್ರದ ಬಿಜೆಪಿ ಮುಖಂಡ ಹಾಗು ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲೆ ಕಳೆದ ರಾತ್ರಿ ಅಪರಿಚಿತರ ಗ್ಯಾಂಗ್ ಭೀಕರ ಹಲ್ಲೆ ನಡೆಸಿದೆ. ಸ್ನೇಹಿತರೊಡನೆ ಚಿತ್ತಾಪುರದಿಂದ ವಾಪಾಸ್ ಕಲಬುರಗಿಗೆ ಬರ್ತಿದ್ದ ವೇಳೆ ಗುಂಪೊಂದು ವಾಹನ ಅಡ್ಡಗಟ್ಟಿದೆ..ನಂತ್ರ ಏಕಾಎಕಿ ಹಲ್ಲೆ ನಡೆಸಿ ಪರಾರಿಯಾಗಿದೆ. ತೀವ್ರವಾಗಿ ಗಾಯಗೊಂಡ ರಾಠೋಡ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಘಟನೆಗೆ ಕಾರಣ ಏನೂಂತ ಇನ್ನೂ ತಿಳಿದು ಬಂದಿಲ್ಲ…