ಮುಂಬರುವ ಹನುಮಂತೋತ್ಸವ ಮೆರವಣಿಗೆ ಸಂಬಂಧ ನಗರ ಠಾಣೆ ಪೊಲೀಸರು ಪೂರ್ವಬಾವಿ ಸಭೆ ನಡೆಸಿದರು. ನಗರ ಠಾಣೆ ಸಭಾಂಗಣದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಮುಖಂಡರಿಂದ ಮಾಹಿತಿ ಪಡೆದ ನಂತರ ಮಾತನಾಡಿದ ಡಿವೈಎಸ್ ಪಿ ಯವರು ತಾಲೂಕು ಮತ್ತು ಜಿಲ್ಲಾಡಳಿತದ ನಿಬಂಧನೆಗೊಳಪಟ್ಟು ಹನುಮಂತೋತ್ಸವ ಮೆರವಣಿಗೆ ನಡೆಸಬೇಕು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು. https://ainlivenews.com/upi-id-with-no-transaction-for-1-year-upi-number-de-activate-reason/ ಶಾಂತಿ ಕಾಪಾಡಬೇಕು. ಸಾರ್ಜನಿಕರ ನೆಮ್ಮದಿಗೆ ಭಂಗ ಬರದಂತೆ ಮೆರವಣಿಗೆ ನಡೆಸಬೇಕು. ಬೈಕ್ ಮತ್ತಿತರ ವಾಹನಗಳಲ್ಲಿ ಬಾವುಟ ಕಟ್ಟಿಕೊಂಡು ಓಡಾಡುವುದು. ಬೈಕ್ ರ್ಯಾಲಿ ನಡೆಸಬಾರದು. ಬಂಟಿಂಗ್ಸ್ .ಬ್ಯಾನರ್ ಅಳವಡಿಸುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಮೆರವಣಿಗೆಯಲ್ಲಿ ಸಮಿತಿಯವರು ಗುರುತು ಪತ್ರ ಹೊಂದಿರುವ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಸಣ್ಣಪುಟ್ಟ ವಿಷಯವೆಂದು ಅಲಕ್ಷ್ಯ ಮಾಡದೆ ಸಮಿತಿಯವರು ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
Author: AIN Author
ಬೆಂಗಳೂರು: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜಧಾನಿಯಲ್ಲಿ ನಡೆದಿರೋ ಕಂಬಳ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು. ಲಕ್ಷಾಂತರ ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಎರಡನೇ ದಿನವೂ ಬೆಂದುಕಾಳೂರಿನಲ್ಲಿ ಬೇಯಿಸಿ, ರುಬ್ಬಿದ ಹುರಳಿ ಕಾಳು ತಿಂದು ಕೆರೆ ಗಿಳಿದ ಜೋಡಿ ಕೋಣಗಳು ಮಿಂಚಿನ ಓಡ ನಡೆಸಿದ್ದವು. ಹಾಗಾದ್ರೆ ಕೊನೆಯ ದಿನದ ಕೋಣಗಳ ಮಿಂಚಿನ ಓಟ ಹೇಗಿತ್ತು ಬನ್ನೋ ತೋರಿಸ್ತೀವಿ ‘ ಕಂಬಳ ಅಂದರೆ ನೆನಪಾಗೋದು ಕರಾವಳಿಯ ಮಂಗಳೂರು, ಉಡುಪಿ. ಆದ್ರೆ ಇನ್ಮುಂದೆ ಕಂಬಳ ಅಂದ್ರೆ ಕಣ್ಮಂದೆ ಬರೋದು ಬೆಂಗಳೂರು. ಹೌದು ಕರಾವಳಿ ಆಚರಣೆಯ ಕಂಬಳ ಫಸ್ಟ್ ಟೈ ಬೆಂಗಳೂರಿನಲ್ಲಿ ನಿನ್ನೆ ಇಂದು ಅಂದರೆ ಎರಡು ದಿನ ನಡೆದಿದೆ. 150 ಹೆಚ್ಚು ಜೋಡಿ ಕೋಣಗಳು ಕೆಸರಗದ್ದೆಯಲ್ಲಿ ನಾನಾ ನೀನಾ ಅಂತ ಸ್ವರ್ಧೆಗೆ ಬಿದ್ದದ್ವು. ಈ ಕೋಣಗಳನ್ನ ನೋಡೋಕೆ ಸಿಕ್ಕಾಪಟ್ಟೆ ತ್ರಿಲ್ ಆಗಿತ್ತು.ಕರಾವಳಿಗರ ಕಂಬಳ ಕಿಕ್ ಕೊಡೋಕೆ ಕಾರಣ ರಿಷಬ್ ಶೆಟ್ಟಿಯ ಕಾಂತರ ಸಿನಿಮಾ. ಕಾಂತರದಲ್ಲಿ ಕಾಡುಬೆಟ್ಟದ ಶಿವ ಕಂಬಳ ಪಟ್ಟುವಾಗಿದ್ದು, ಶೆಟ್ರು…
ಬೆಂಗಳೂರು: ಹಿರಿಯ ನಟಿ ಲೀಲಾವತಿ (Leelavathi) ಅವರ ಮನೆಗೆ ಇಂದು (ನ.26) ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಭೇಟಿ ನೀಡಿದ್ದಾರೆ. ನಟಿ ಲೀಲಾವತಿ ಅವರನ್ನ ದರ್ಶನ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ವಯಸ್ಸಿನ ಕಾರಣದಿಂದ ಹಾಸಿಗೆ ಹಿಡಿದಿರುವ ಲೀಲಾವತಿ ಅವರನ್ನ ನಟ ದರ್ಶನ್ ಭೇಟಿಯಾಗಿ ವಿನೋದ್ ರಾಜ್ (Vinod Raj) ಬಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಕೆಲ ಹೊತ್ತು ಲೀಲಾವತಿ ಅವರ ಮನೆಯಲ್ಲಿದ್ದು ವಿನೋದ್ ರಾಜ್ ಬಳಿ ಸಾಕಷ್ಟು ವಿಚಾರಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರಳಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಅರ್ಜುನ್ ಸರ್ಜಾ ಕೂಡ ಇತ್ತೀಚೆಗೆ ಅದೇ ಕೆಲಸ ಮಾಡಿದ್ದರು. 87 ವರ್ಷದ ಹಿರಿಯ ನಟಿ ಲೀಲಾವತಿಯವರು ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ
ಕೋಲಾರ: ರಾಜ್ಯದ ಜನ ಕಾಂಗ್ರೆಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ನಡೆಯಲಿ ಬಿಡಿ. ಸರ್ಕಾರಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಕೋಲಾರದ ಮುಳಬಾಗಿಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. https://ainlivenews.com/upi-id-with-no-transaction-for-1-year-upi-number-de-activate-reason/ ಸರ್ಕಾರ ಬೀಳುತ್ತೆ ಅನ್ನೋದನ್ನ ನಾನು ಒಪ್ಪಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ನಡಿಯಲಿ ಬಿಡಿ. ಇನ್ನೂ ಯಾವುದೇ ಆಪರೇಷನ್ ಕಮಲ ಮಾಡುವುದಕ್ಕೆ ಹೋಗುವುದಿಲ್ಲ, ಬಹುಮತದೊಂದಿಗೆ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು ಎಂದು ನುಡಿದಿದ್ದಾರೆ.
ಬೆಂಗಳೂರು: ಪ್ರತಿಷ್ಠಿತ ಮಾಲ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮಾಸುವ ಮುನ್ನವೇ ಬಿಎಂಟಿಸಿಯಲ್ಲಿ ಬೆಚ್ಚಿ ಬೀಳಿಸೋ ಸಂಗತಿಯೊಂದು ಬೆಳಕಿಗೆ ಬಂದಿದೆ. ನಮ್ಮ ಸಾರಿಗೆ ಬಸ್ ಸೇಫ್ ಆಗಿರುತ್ತೆ. ಶಕ್ತಿ ಯೋಜನೆಯಲ್ಲಿ ಉಚಿತ ಟಿಕೆಟ್ ಇದೆ ಅಂತ ಮಹಿಳೆಯರು ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಬಿಎಂಟಿಸಿ ಬಸ್‌ನಲ್ಲೂ ಮಹಿಳೆಯರಿಗೆ ರಕ್ಷಣೆ ಇಲ್ವಾ ಅನ್ನೋ ಪ್ರಶ್ನೆ ಈ ಘಟನೆಂದ ಎಲ್ಲಾರಿಗೂ ಕಾಡುತ್ತದೆ. https://ainlivenews.com/no-matter-who-is-upset-lets-work-together-to-make-modi-pm-again-pritam-gowda/ ಕಳೆದ ತಿಂಗಳು ಯುವತಿಯೊಬ್ಬರು ರಾತ್ರಿ ವೇಳೆ ಶಿವಾಜಿನಗರ ಟು ಕೆ.ಆರ್ ಪುರ ಹೋಗುವ ರೂಟ್ ನಂ- 300 EA ಬಸ್ ಹತ್ತಿದ್ದಾರೆ. ಬಸ್‌ನಲ್ಲಿ ಪ್ರಯಾಣಿಕರೇ ಇಲ್ಲದಿದ್ರೂ ಕಂಡಕ್ಟರ್ ಕೆಂಪಣ್ಣ ಉದ್ದೇಶಪೂರ್ವಕವಾಗಿ ಯುವತಿ ಕೂತಿದ್ದ ಸೀಟ್ ಬಳಿ ಹೋಗಿದ್ದಾರೆ. ನಾಲ್ಕೈದು ಬಾರಿ ಆಕೆಯ ಮೈ, ಕೈ ಮುಟ್ಟಿದ್ದಾರಂತೆ. ಕಂಡಕ್ಟರ್ ಕಿರುಕುಳಕ್ಕೆ ಮನನೊಂದಿರುವ ಮಹಿಳೆ ಕೆಲ ದಿನದ ನಂತರ ಬಿಎಂಟಿಸಿ ಮೇಲ್ ಐಡಿಗೆ ದೂರು ನೀಡಿದ್ದಾಳೆ. ಬಿಎಂಟಿಸಿಯ ಭದ್ರತಾ & ಜಾಗೃತದಳದ ಅಧಿಕಾರಿಗಳಿಂದ ಕಂಡಕ್ಟರ್ ವಿಚಾರಣೆ ಮಾಡಿದ ಅಸಲಿ ವಿಷಯ ಗೊತ್ತಾಗಿದೆ. ತನಿಖೆಯ…
ಬೆಂಗಳೂರು: ಯಾರಿಗೆ ಎಷ್ಟೇ ಅಸಮಾಧಾನ ಇದ್ದರೂ ಮೋದಿ ಅವರನ್ನ ಮತ್ತೆ ಪ್ರಧಾನಿ ಮಾಡಲು ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಪ್ರೀತಂಗೌಡ (Preetham Gowda) ಪಕ್ಷದ ಅಸಮಾಧಾನಿತರಿಗೆ ಕರೆ ನೀಡಿದ್ದಾರೆ. https://ainlivenews.com/bjp-workers-dont-need-to-be-shy-about-anything-b-y-vijayendra/ ಬಿಜೆಪಿಯಲ್ಲಿ ಯತ್ನಾಳ್, ಸೋಮಣ್ಣ ಅಸಮಾಧಾನ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ (BJP Office) ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣದಲ್ಲಿ ಸೋಮಣ್ಣ, ಯತ್ನಾಳ್ ಹಿರಿಯರಿದ್ದಾರೆ. ಜೆಡಿಎಸ್ ಜೊತೆ ಹೊಂದಾಣಿಕೆ ಆದಾಗ ಎಫೆಕ್ಟ್ ಆದ ಮೊದಲ ವ್ಯಕ್ತಿ ಪ್ರೀತಂಗೌಡ. ಮೋದಿ (Narendra Modi) ಅವರು ಮತ್ತೆ ಪ್ರಧಾನಿ ಆಗಬೇಕು ಅಂತ ಇಚ್ಚೆ ಪಟ್ಟಿದ್ದೇವೆ. ಅದಕ್ಕಾಗಿ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ. ಅದಕ್ಕೆ ಸೋಮಣ್ಣ, ಯತ್ನಾಳ್ ಹೊರತಲ್ಲ ಎಂದರು. ವಿಜಯೇಂದ್ರ ಹರಕೆಯ ಕುರಿ, ಯಡಿಯೂರಪ್ಪಗೆ ಆದ ಗತಿಯೇ ವಿಜಯೇಂದ್ರಗೆ ಆಗಲಿದೆ ಎಂಬ ಸಚಿವ ತಿಮ್ಮಾಪೂರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಹರಕೆಯ ಕುರಿ ಅಂತ ಮುಂದೆ ಗೊತ್ತಾಗಲಿದೆ. ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆದ್ರು. ಹಾಗಾದ್ರೆ ತಿಮ್ಮಾಪುರ ಪ್ರಕಾರ ವಿಜಯೇಂದ್ರ…
ಬೆಂಗಳೂರು: ಬಿಜೆಪಿ ಕಾರ್ಯಕರ್ತರು ಯಾವುದಕ್ಕೂ ಅಂಜಬೇಕಿಲ್ಲ ಎದೆಗುಂದ ಬೇಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ. https://ainlivenews.com/kantara-konas-wins-gold-medal-in-bengaluru-carpet/ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಪೊಲೀಸರು ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ, ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ವಿರುದ್ಧ ಹಾಗೂ ಸರ್ಕಾರದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಲು ಕಾರ್ಯಕರ್ತರು ಯಾವುದಕ್ಕೂ ಅಂಜ ಬೇಕಿಲ್ಲ, ಎದೆಗುಂದ ಬೇಕಿಲ್ಲ. ಸಂವಿಧಾನ ನಮಗೆ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು, ಕಾನೂನು ಪೋಲಿಸರಿಗೆ ಅಧಿಕಾರ ನೀಡಿಲ್ಲ ಎಂದರು ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲೂ ನಮ್ಮ ಕಾರ್ಯಕರ್ತ ಬಂಧುಗಳಿಗೆ ತೊಂದರೆ, ಬೆದರಿಕೆ, ಕಿರುಕುಳಗಳು ಎದುರಾದರೆ ಅವರ ನೆರವಿಗೆ ಪಕ್ಷ ತಕ್ಷಣ ನೆರವಿಗೆ ಬರಲಿದೆ.
ತುಮಕೂರು:- ಸಿಬಿಐನಿಂದ ತನಿಖೆ ವಾಪಸ್ ಪಡೆದ ಸರ್ಕಾರ, ಜನರ ಮುಂದೆ ಬೆತ್ತಲಾಗಿದೆ ಎಂದು ಎ ನಾರಾಯಣಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲಿನ ಪ್ರಕರಣದ ತನಿಖೆಯನ್ನು ಸಿಬಿಐನಿಂದ ರಾಜ್ಯ ಸರ್ಕಾರ ವಾಪಸ್ ಪಡೆದು ಜನರ ಮುಂದೆ ಬೆತ್ತಲಾಗಿದೆ ಎಂದರು. ಒಮ್ಮೆ ಎಫ್‌ಐಆರ್ ದಾಖಲಿಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ ನಂತರ ಬದಲಾವಣೆ ಮಾಡಲು ನ್ಯಾಯಾಧೀಶರ ಅನುಮತಿ ಪಡೆಯಬೇಕು. https://ainlivenews.com/upi-id-with-no-transaction-for-1-year-upi-number-de-activate-reason/ ನ್ಯಾಯಾಲಯದಲ್ಲಿ ಇರುವ ಪ್ರಕರಣದ ಬಗ್ಗೆ ನ್ಯಾಯಾಧೀಶರೇ ತೀರ್ಮಾನ ತೆಗೆದುಕೊಳ್ಳಬೇಕು. ವಾಪಸ್ ಪಡೆಯಲು ಸಚಿವ ಸಂಪುಟಕ್ಕೆ ಅಧಿಕಾರ ಇಲ್ಲ’ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆತ್ತಿದರೆ ಕಾನೂನು, ನಿಯಮಗಳ ಬಗ್ಗೆ ಮಾತನಾಡುತ್ತಾರೆ. ಹಿಂದೆ ಸಿಬಿಐನವರು ಅನುಮತಿ ಕೇಳಿದ್ದು, ಸರ್ಕಾರ ಒಪ್ಪಿಗೆ ನೀಡಿತ್ತು. ಶಿವಕುಮಾರ್ ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ನಿರ್ದೋಷಿಯಾಗಿ ಹೊರ ಬಂದು ಜನರ ಮುಂದೆ ನಿಲ್ಲಬೇಕಿತ್ತು. ವಾಪಸ್ ತೆಗೆದುಕೊಂಡಿರುವುದನ್ನು ನೋಡಿದರೆ ನ್ಯಾಯಾಲಯಕ್ಕೆ ಸವಾಲ್ ಹಾಕಿದಂತಿದೆ ಎಂದು ತಿಳಿಸಿದರು.
ನವದೆಹಲಿ: ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಡೀಪ್‌ಫೇಕ್ (Deepfake) ಹಾವಳಿಯನ್ನು ಪರಿಶೀಲಿಸಲು ಮತ್ತು ಆನ್‌ಲೈನ್‌ನಲ್ಲಿ ನಕಲಿ ವಿಷಯವನ್ನು ಪತ್ತೆಹಚ್ಚಿದಾಗ ನಾಗರಿಕರು ದೂರು ದಾಖಲಿಸಲು ಸಹಾಯ ಮಾಡಲು ಸರ್ಕಾರವು ವಿಶೇಷ ಅಧಿಕಾರಿಗಳ ತಂಡವನ್ನು ನಿಯೋಜಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಹೇಳಿದ್ದಾರೆ. ಡೀಪ್‌ಫೇಕ್ ವಿಡಿಯೋಗಳು ಅಂತರ್ಜಾಲದಲ್ಲಿ ಹೆಚ್ಚಿದ ಬಳಿಕ ಅದ ನಿಂಯತ್ರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಂದಿನಿಂದ MeitY ಮತ್ತು ಭಾರತ ಸರ್ಕಾರವು ಸಮಸ್ಯೆ ಪರಿಹರಿಸಲು ಏಳು ಅಧಿಕಾರಿಗಳನ್ನು ನಾಮನಿರ್ದೇಶನ ಮಾಡುತ್ತದೆ. ಎಲ್ಲಾ ಪ್ಲಾಟ್ ಫಾರ್ಮ್ ಗಳಿಂದ 100% ಇದು ಮೇಲ್ವಿಚಾರಣೆ ಮಾಡಲಿದೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. https://ainlivenews.com/upi-id-with-no-transaction-for-1-year-upi-number-de-activate-reason/ ಅಧಿಕಾರಿಗಳ ನಿಯೋಜನೆಯಿಂದ ನಾಗರಿಕರು ದೂರುಗಳು ಅಥವಾ ಕಾನೂನು ಉಲ್ಲಂಘನೆಯ ಘಟನೆಗಳನ್ನು ಸರ್ಕಾರದ ಗಮನಕ್ಕೆ ತರಲು ಬಹಳ ಸುಲಭವಾಗುತ್ತದೆ. ಏಳು ಅಧಿಕಾರಿಗಳು ದೂರಿನ ಅನ್ವಯ ಡಿಜಿಟಲ್ ಪ್ಲಾಟ್‌ಫಾರ್ಮ್ ಮಾಹಿತಿಯನ್ನು ತೆಗೆದುಕೊಂಡು ಸಮಸ್ಯೆಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತಾರೆ. ಭಾರತದ ಐಟಿ ಕಾನೂನು ಹಳೆಯದಾಗಿದ್ದು, ಡೀಪ್‌ಫೇಕ್ ಅನ್ನು ಎದುರಿಸಲು ಹೊಸ ನಿಯಮಗಳ…
ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಅಭಿನಯದ ಕಾಂತಾರ (Kantara) ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಚಿನ್ನದ ಪದಕ ದಕ್ಕಿದೆ ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಇಂದು 6.5 ಅಡಿ ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ (Gold Medal) ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಈ ಕೋಣಗಳನ್ನು ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದರು. https://ainlivenews.com/job-in-bengaluru-job-search-employment/ ಬೆಂಗಳೂರು ಕಂಬಳಕ್ಕೆ ರಾಯಭಾರಿಯಾಗಿ ರಿಷಭ್ ಶೆಟ್ಟಿ ಇರಬೇಕಿತ್ತು. ಕಾಂತಾರ ಚಿತ್ರ ಯಶಸ್ವಿಗೆ ಕಂಬಳದ ಕೋಣಗಳು ಕಾರಣ. ಆದರೆ ಇವತ್ತು ಅವರು ಇಲ್ಲಿಗೆ ಬಂದಿಲ್ಲ. ಊರಿನ ಬಗ್ಗೆ ಇಡೀ ದೇಶಕ್ಕೆ ಪ್ರಚಾರ ಮಾಡುತ್ತಾರೆ ಎಂದರು