ಮಂಡ್ಯ: ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರದಲ್ಲಿ ಯಾರ ತಕರಾರೂ ಇಲ್ಲ ಎಂದು ಮಂಡ್ಯದಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ಹೇಳಿದರು. JDS ಎನ್‌ಡಿಎ ತೆಕ್ಕೆಗೆ ಬರಬೇಕು ಎಂಬುದು ವರಿಷ್ಠರ ತೀರ್ಮಾನ. ಈ ತೀರ್ಮಾನದ ಬಗ್ಗೆ ರಾಜ್ಯದಲ್ಲಿ ಉತ್ಸಾಹ ಇದೆ. ಮೈತ್ರಿಯಿಂದ ತಳಮಟ್ಟದ ಕಾರ್ಯಕರ್ತರಿಗೂ ಉತ್ಸಾಹ ಬಂದಿದೆ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, JDS ಹೆಚ್ಚು ಸ್ಥಾನ ಗೆಲ್ಲುತ್ತದೆ. ನಮ್ಮ ಗುರಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡುವುದು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಿಗೆ ಕೆಲಸ ಮಾಡುತ್ತೇವೆ. ಮಂಡ್ಯ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ಕೈಬಿಡುವ ಪ್ರಶ್ನೆ ಇಲ್ಲ. ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ನಾಯಕರಿಗೆ ಹೆಚ್ಚು ಶಕ್ತಿ ಕೊಡುತ್ತೇವೆ ಎಂದರು.
Author: AIN Author
ವಿಜಯಪುರ:- ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೀಡಿರುವ ಹೇಳಿಕೆಗೆ ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಕೆಲವರು ಹಗಲುಗನಸು ಕಾಣುತ್ತಿದ್ದಾರೆ. ನನಸಾಗದ ಹಗಲು ಕಾಣುವವರಿಗೆ ಬೇಡವೆನ್ನಲಾದೀತೆ. ಕೆಲವರು ಹಗಲು ಕನಸು ಕಾಣುತ್ತಿರುತ್ತಾರೆ. ಡೇ ಡ್ರೀಮ್ ಕಾಣುವವರಿಗೆ ಬೇಡ ಎನ್ನಲಾಗದು. ಕನಸಾಗಿಯೇ ಉಳಿಯುವ ಹಗಲುಗನಸು ಕಾಣುವವರನ್ನು ಅಂಥ ಕನಸು ಕಾಣಲಿ ಎಂದು ಬಿಟ್ಟುಬಿಡಬೇಕು ಎಂದ ಅವರು, ನಾವು ಜೋಡೆತ್ತುಗಳು ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷದ ನಾಯಕ ಆರ್. ಆಶೋಕ ಹೇಳಿಕೆಗೆ ಬಹಳ ಸಂತೋಷ ಎಂದಷ್ಟೇ ಪರಮೇಶ್ವರ ನಗೆ ಬೀರಿದರು.
ಪಾಟ್ನಾ: ಬಿಹಾರದಲ್ಲಿ (Bihar) ಛಾತ್ ಹಬ್ಬದ (Chhath Festivities) ಆಚರಣೆ ವೇಳೆ ವಿವಿಧ ಜಲ ಮೂಲಗಳಲ್ಲಿ ಮುಳುಗಿ ಒಟ್ಟು 13 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟ್ನಾ (Patna), ಖಗಾರಿಯಾ, ಸಮಸ್ತಿಪುರ್, ಸಹರ್ಸಾ, ದಬರ್ಂಗಾ, ಮುಂಗೇರ್ ಮತ್ತು ಬೆಸುಸರೈಗಳಲ್ಲಿ ಈ ಸಾವುಗಳು ವರದಿಯಾಗಿವೆ. ಪಾಟ್ನಾ ಜಿಲ್ಲೆಯಲ್ಲಿ ಬ್ರಹ್ಮಪುರ ಪ್ರದೇಶದಲ್ಲಿ ಮೂವರು ವ್ಯಕ್ತಿಗಳು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಖಗಾರಿಯಾದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಚೌತಮ್ ಮತ್ತು ಪರ್ಬಟಾ ಪ್ರದೇಶಗಳಲ್ಲಿ ಮೂವರು ಮುಳುಗಿದ್ದಾರೆ. ಅಲ್ಲದೆ, ದಬರ್ಂಗಾ ಮತ್ತು ಸಮಸ್ತಿಪುರ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಬೇಗುಸರೈ, ಮುಂಗರ್ ಮತ್ತು ಸಹರ್ಸಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಅವರ ಗುರುತು ಪತ್ತೆಗೆ ಅಧಿಕಾರಿಗಳು ಹಾಗೂ ಪೊಲೀಸರು (Police) ಕ್ರಮ ಕೈಗೊಂಡಿದ್ದಾರೆ. ಕಳೆದ ಬಾರಿ ಛಾತ್ ಹಬ್ಬದ ವೇಳೆ ಬಿಹಾರದಾದ್ಯಂತ ಸುಮಾರು 53 ಜನ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು.
ದಾವಣಗೆರೆ: ದಾವಣಗೆರೆಯ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಆಪ್ತ ಅಯುಬ್ ಪೈಲ್ವಾನ್ ಸೇರಿದಂತೆ ಆತನ ಕುಟುಂಬಸ್ಥರು ಪೊಲೀಸರ ಮೇಲೆಯೇ ದರ್ಪ ತೋರಿದ್ದಾರೆ. ನವೆಂಬರ್ 16 ರಾತ್ರಿ ನಗರದ ಅರಳಿಮರ ವೃತ್ತದಲ್ಲಿ ಈ ಘಟನೆ ನಡೆದಿದೆ. ರಾತ್ರಿ 11 ಗಂಟೆ ಬಳಿಕ ನಗರದಲ್ಲಿನ ಅಂಗಡಿ ಮುಂಗಟ್ಟುಗಳನ್ನ ಮುಚ್ಚುವಂತೆ ನಿಯಮವಿದೆ. ಆದರೆ, ರಾತ್ರಿ 11.30ರ ಸುಮಾರಿನಲ್ಲಿ ಅರಳಿ ವೃತ್ತದಲ್ಲಿ ಅಂಗಡಿಯ ಮುಂದೆ ಬೈಕ್ ನಿಲ್ಲಿಸಿಕೊಂಡು ಕೆಲವರು ಯುವಕರು ಕುಳಿತುಕೊಂಡಿದ್ದರು. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಬೀಟ್ ಸಿಬ್ಬಂದಿ ಸ್ಥಳಕ್ಕೆ ಬಂದು ಅಂಗಡಿ ಬಂದ್ ಮಾಡಿ ಮನೆಗೆ ತೆರಳುವಂತೆ ಸೂಚನೆಯನ್ನ ನೀಡಿದ್ದಾರೆ. ಅಲ್ಲದೇ, ಬೈಕ್ ನ ಪೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಯುವಕನೊಬ್ಬ ಮನೆಗೆ ತೆರಳದೆ ಬಗ್ಗಿ ತನ್ನ ಹಿಂಭಾಗ ತೋರಿಸಿ ಈ ಪೋಟೋ ತೆಗೆದುಕೊಳ್ಳಿ ಎಂದು ಆವಾಜ್ ಹಾಕಿದ್ದಾನೆ. ಅಲ್ಲದೇ, ಸುಮ್ಮನೆ ಹೋಗದಿದ್ದರೆ ತನ್ನ ಸಂಬಂಧಿ ಕರೆಸಿ ಏನು ಮಾಡುತ್ತೇನೆ ಎಂದು ಹೆದರಿಸಿದ್ದಾನೆ. ಇದೇ ಅವಾಂತರಕ್ಕೆ ಕಾರಣವಾಗಿದೆ. ಬಳಿಕ,…
ಬೆಂಗಳೂರಿನಲ್ಲಿ (Bengaluru) ವಿದ್ಯುತ್ ತಗುಲಿ ತಾಯಿ, ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (National Human Rights Commission) ನೋಟಿಸ್ (Notice) ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿಯನ್ನು ಆರು ವಾರಗಳಲ್ಲಿ ಸಲ್ಲಿಸುವಂತೆ ನೋಟಿಸ್‌ನಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ನಡೆದ ಘಟನೆ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಸಮಸ್ಯೆಯನ್ನು ತೋರಿಸುತ್ತದೆ ಎಂದು ಆಯೋಗವು ಗಮನಿಸಿದೆ. ಇದು ಕಳವಳಕಾರಿ ವಿಷಯವಾಗಿದೆ. ವರದಿಯಾಗಿರುವ ಘಟನೆಯು ಬೆಂಗಳೂರಿನ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವನ್ನು ಸೂಚಿಸುತ್ತದೆ. ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ನೀಡಬೇಕು ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್‌ನಲ್ಲಿ ತಿಳಿಸಿದೆ. ವರದಿಯು ಎಫ್‌ಐಆರ್‌ನ ಸ್ಥಿತಿ, ಲೋಪಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ತೆಗೆದುಕೊಂಡ ಕ್ರಮ ಮತ್ತು ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾದ ಪರಿಹಾರವನ್ನು ಒಳಗೊಂಡ ಮಾಹಿತಿಯೂ ಸೇರಿ ವಿಸ್ತೃತ ವರದಿಯನ್ನು ನೀಡಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೇಳಿದೆ.
ಬೆಂಗಳೂರು: ಅವರಿಬ್ಬರೂ ಬೆಂಗಳೂರಿನ ನಟೋರಿಯಸ್ ರೌಡಿಶೀಟರ್ ಗಳು ಹಣಕಾಸು ವಿಚಾರಕ್ಕೆ ಒಬ್ಬನ ಮೇಲೆ ಮತ್ತೊಬ್ಬನ ಗ್ಯಾಂಗ್ ಅಟ್ಯಾಕ್ ಮಾಡಿತ್ತು ಈ ಹಳೆ ದ್ವೇಷಕ್ಕೆ ಆತನನ್ನ ಮುಗಿಸಲೇಬೇಕಂತ ಡಿಸೈಡ್ ಮಾಡಿದ ಗ್ಯಾಂಗ್ ಆತನಿದ್ದ ಊರಿಗೆ ಹುಡುಕಿಕೊಂಡು ಹೋಗಿ ಹತ್ಯೆ ಮಾಡಲು ಸ್ಕೆಚ್ ಹಾಕಿದ್ರು. ಆದರೆ ಆತ ಇವರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದ. ಸಿಲಿಕಾನ್ ಸಿಟಿಯಲ್ಲಿ ನಡೆಯಬೇಕಿದ್ದ ಗ್ಯಾಂಗ್ ವಾರ್ ನನ್ನ ಸಿಸಿಬಿ ಪೊಲೀಸರು ತಪ್ಪಿಸಿ ಆರೋಪಿಗಳ ಎಡೆಮರಿ ಕಟ್ಟಿದ್ದಾರೆ ಹಾಗಾದ್ರೆ ಯಾರು ಆ ನಟೋರಿಯಸ್ ರೌಡಿಶೀಟರ್ ಈ ಸ್ಟೋರಿ ನೋಡಿ. ಟಾಲಿವುಡ್, ಕಾಲಿವುಡ್ ಸಿನಿಮಾಗಳನ್ನು ಮೀರಿಸೋ ರೇಂಜಿಗೆ ಹತ್ತಾರು ಕಾರುಗಳಲ್ಲಿ ಬಿಲ್ಡಪ್ ಕೊಟ್ಟುಕೊಂಡು ಈ ಗ್ಯಾಂಗ್ ಹೊರಟಿದ್ದು, ರೌಡಿಯೊಬ್ಬನ ಹತ್ಯೆಗೆ ಸ್ಕೇಚ್ ಹಾಕಿ ಹತ್ತಾರು ಕಾರುಗಳಲ್ಲಿ ಊರಿಂದ ಊರಿಗೆ ಬಿಲ್ಡಪ್ ಯಾತ್ರೆ ಮಾಡಿ ರೌಡಿಗಳ ಈ ಹಬ್ಬರದ ಯಾತ್ರೆ ಮೊಬೈಲ್ ನಲ್ಲಿ ಸೆರೆಯಾಗಿದೆ. ಅಂದಹಾಗೇ, ರೌಡಿಶೀಟರ್ ಒಬ್ಬನ ಹತ್ಯೆಗೆ ಸ್ಕೇಚ್ ಹಾಕಿದ ಮತ್ತೊಂದು ರೌಡಿ ಪಟಾಲಂ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಊರಿಂದ…
ಬೆಂಗಳೂರು: ಗೋವಿಂದರಾಜನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ಕಮಿಷನರ್ ದಯಾನಂದ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಬಂಧಿತ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಗೋವಾದಿಂದ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ಈತನೊಂದಿಗೆ ಇನ್ನಿಬರು ಸಹಚರರನ್ನು ಬಂಧಿಸಿಲಾಗಿದೆ. ಬಂಧಿತನಿಂದ 1 ಕೆಜಿ, 215 ಗ್ರಾಂ ಚಿನ್ನಾಭರಣ, 3 ಕೆಜಿ 500 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಒಟ್ಟು 70ವನ್ನು ಲಕ್ಷ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 2005 ರಿಂದಲೂ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಹೊರರಾಜ್ಯಗಳಾದ ಚನ್ನೈ, ತಿರುಪತಿ ಯಲ್ಲಿ ತನ್ನ ಕೈಚಳಕ ತೋರಿಸಿ ಪೊಲೀಸರ ಅತಿಥಿಯಾಗಿದ್ದ. ಡೋರ್ ಲಾಕ್ ಒಡೆದು ರಾತ್ರಿ ವೇಳೆ ಕೈಚಳಕ ತೋರುತ್ತಿದ್ದ ಈತ ಈ ಹಿಂದೆ ಮೂರು ಬಾರಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ, ಇದುವರೆಗೂ ಒಟ್ಟು 80 ಪ್ರಕರಣಗಳಲ್ಲಿ ಬಂಧಿತ ಆರೋಪಿ ಭಾಗಿಯಾಗಿದ್ದ. ಕಾರ್ತಿಕ್ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ 18 ಜಾಮೀನು ರಹಿತ…
ಕಲಬುರಗಿ: ನಾವು ಬೇಡ ಅಂದ್ರೂ ಕಾಂಗ್ರೆಸ್ಸಿಗರೇ ಬಹಳಷ್ಟು ಅಸ್ತ್ರ ಕೊಟ್ಟಿದ್ದಾರೆ ಎಂದು ಕಲಬುರಗಿಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಸುವರ್ಣಸೌಧದಲ್ಲಿರುವ ಸಾರ್ವಕರ್ ಫೋಟೋ ತೆಗೆಯುತ್ತೇವೆ ಎಂದಿದ್ದಾರೆ. ಇದು ಸಾರ್ವಕರ್ಗೆ ಮಾಡುತ್ತಿರುವ ಅಪಮಾನ ಎಂದಿದ್ದಾರೆ. ಇನ್ನೂ ಹಲೋ ಅಪ್ಪಾ ಅಂತ ಅವರೇ ಕೊಟ್ಟಿರೋ ಅಸ್ತ್ರ ವಿದೆ. ಹೀಗಾಗಿ ಬೆಳಗಾವಿಯಲ್ಲಿ ಸರ್ಕಾರದ ಕಿವಿ ಹಿಂಡುತ್ತೇವೆ ಎಂದು ಕಲಬುರಗಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ಹುಬ್ಬಳ್ಳಿ: ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಲ್ಲ ಚಿತ್ರನಟ ಅಭಿಷೇಕ ಅಂಬರೀಷ್ ಹೇಳಿದರು. ನಗರದಲ್ಲಿ ಮಂಗಳವಾರ ಬ್ಯಾನ್ ಮ್ಯಾನರ್ಸ್ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ನನ್ನ ತಾಯಿಯವರು, ತಾವು ಇರೋವರೆಗೆ ರಾಜಕೀಯಕ್ಕೆ ಬರಲ್ಲಾ ಅಂತಾ ಹೇಳಿದ್ದಾರೆಸಿನಿಮಾ ರಂಗ ಬೇರೆ, ರಾಜಕಾರಣ ಬೇರೆ ಸಿನಿಮಾ ಅಂದ್ರೆ ದುಡ್ಡು ಕೊಟ್ಟು ಬರ್ತಾರೆ, ರಾಜಕಾರಣಕ್ಕೆ ನಾವೇ ದುಡ್ಡು ಕೊಟ್ಟು ಜನರನ್ನ ಕರೀಬೇಕು. ಹೀಗಾಗಿ ಚಿತ್ರರಂಗ ಮತ್ತು ಸಿನಿಮಾ ಏಕಕಾಲಕ್ಕೆ ನಡೆಯಲ್ಲ ಎಂದ ಅವರು, ಅಂಬರೀಷಣ್ಣ 34 ವರ್ಷ ಚಿತ್ರರಂಗದಲ್ಲಿದ್ದು ನಂತರ ರಾಜಕೀಯಕ್ಕೆ ಬಂದ್ರುಆಡಳಿತದಲ್ಲಿ ಮಕ್ಕಳ ಹಸ್ತಕ್ಷೇಪ ಸರಿಯಲ್ಲ, ನಾನು ಉದ್ಘಾಟನೆ ಆಡಳಿತ, ರಾಜಕೀಯದಲ್ಲಿ ಭಾಗವಹಿಸಲ್ಲ ಸೇವಾ ಕೆಲಸ ಇದ್ರೆ ಮಾತ್ರ ಭಾಗವಹಿಸುತ್ತೇನೆ ಎಂದ ಅವರು, ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಆಗ್ಬಾರ್ದು ಕನ್ನಡ ಚಿತ್ರಗಳು ಬರುವಾಗ ಇತರ ಚಿತ್ರಗಳ ಬಿಡುಗಡೆ ಮುಂದೂಡಬೇಕು ಆ ರೀತಿ ವಾತಾವರಣ ಸೃಷ್ಟಿಯಾಗಬೇಕು, ಹಿರಿಯರಿದ್ದಾರೆ ಮಾಡ್ತಾರೆ ಅನ್ನೋ ವಿಶ್ವಾಸವಿದೆ ಎಂದ ಅಭಿಷೇಕ ಎಂದರು.
ಬೆಂಗಳೂರು: ಇಷ್ಟು ದಿನ ಜನರನ್ನ ಹೊತ್ತು ತಿರುಗುವ ಕೆಎಸ್ಆರ್ಟಿಸಿ ಬಸ್ ನೋಡಿದ್ದೀರಿ. ಆದ್ರೆ ಇನ್ಮುಂದೆ ಲಗೇಜ್ ಗಳನ್ನ ಹೊತ್ತು ಸಾಗುವ ಕೆಎಸ್ಆರ್ಟಿಸಿ ಲಾರಿಗಳು ರಸ್ತೆಗಿಳಿಯಲಿವೆ. ಹೌದು ಆರ್ಥಿಕವಾಗಿ ದಿವಾಳಿಯಾಗಿರೋ ನಿಗಮವನ್ನ ಮೇಲುತ್ತಲು ಲಾಜಿಸ್ಟಿಕ್ಸ್ ವಿಭಾಗದಲ್ಲೂ ತನ್ನ ಅದೃಷ್ಟ ಪರೀಕ್ಷೆ ಮಾಡಲು ನಿಗಮ ಮುಂದಾಗಿದೆ. ಕೆಎಸ್ಆರ್ಟಿಸಿ..ಇದು ರಾಜ್ಯದ ಸಾರಿಗೆ ನಿಗಮ.ನಿತ್ಯ ಲಕ್ಷಾಂತರ ಮಂದಿ ಈ ಬಸ್ ಗಳಲ್ಲಿ ಪ್ರಯಾಣ ಮಾಡ್ತಾರೆ. ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಈಗಾಗಲೇ ಮೈಲುಗಲ್ಲು ಸಾಧಿಸಿರೋ KSRTC ಈಗ ಮತ್ತೊಂದು ವಾಣಿಜ್ಯ ಸೇವೆ ನೀಡಲು ಮುಂದಾಗಿದೆ.ಇಷ್ಟು ದಿನ ಪ್ರಯಾಣಿಕರು ಸಂಚರಿಸುವ ಬಸ್‌ನಲ್ಲಿ ಪಾರ್ಸೆಲ್ ಸೇವೆ ಒದಗಿಸಲಾಗುತ್ತಿತ್ತು. ಜೊತೆಗೆ ಕೆಲ ಖಾಸಗಿಯವರಿಗೆ ಕಾರ್ಗೋ ಸಾಗಣೆ ಟೆಂಡರ್‌ಗಳನ್ನು ನೀಡಿ ಅವರಿಂದ ವರ್ಷಕ್ಕೆ 28 ಕೋಟಿಯಷ್ಟು ಲಾಭವನ್ನು ಕೆಎಸ್‌ಆರ್‌ಟಿಸಿ ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಲಗೇಜ್ ಸಾಗಣೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಖುದ್ದು ಇನ್ನುಮುಂದೆ ತಾವೇ ಈ ಸೇವೆ ನೀಡಲು ನಿಗಮ ಪ್ಲ್ಯಾನ್ ಮಾಡಿದೆ. ಈ ಮೂಲಕ ಖಾಸಗಿಯವರಿಂದ ಬರುತ್ತಿದ್ದ…