ಬೆಂಗಳೂರು : ಸಚಿವರು ಹೆದರಿಸುತ್ತಿದ್ದಾರೆ. ಮಂತ್ರಿಗಳು ಮಾತ್ರವಲ್ಲ ಅವರ ಪಿಎಗಳೂ ಕೂಡ ಓಪನ್ ಆಗಿ ದಂಧೆ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
Bigg News: ಶಬರಿಮಲೆ ತೆರಳುವವರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ KSRTC ಬಸ್ ವ್ಯವಸ್ಥೆ!
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನೆಮ್ಮದಿಯ ಸರ್ಕಾರ ಅಂತ ಹೇಳುತ್ತಿದ್ದಾರೆ. ನೆಮ್ಮದಿ ಕಳೆದುಕೊಂಡು ಕೂತಿದ್ದಾರೆ. ನಮ್ಮ ಅವಧಿಯ ದುಡ್ಡು ತಗೊಂಡಿದ್ದಾರೆ ಎಂದು ಕುಟುಕಿದ್ದಾರೆ.
ಬಿ.ಆರ್ ಪಾಟೀಲ್ ಪತ್ರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಈ ಸರ್ಕಾರದ ಬಗ್ಗೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಪದೇ ಪದೆ ಹೇಳುತ್ತಾ ಬಂದಿದ್ದೇವೆ. ನಿಮ್ಮ ಶಾಸಕರೇ ನಿಮ್ಮ ವಿರುದ್ಧ ದಂಗೆ ಎದ್ದಿದ್ದಾರೆ ಅಂತ. ಯಾವುದೂ ಇಲ್ಲ ಅಂದ್ರು. ಎರಡನೇ ಬಾರಿ ಬಿ.ಆರ್ ಪಾಟೀಲ್ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.