ಬಳ್ಳಾರಿ: ಎಲ್ಲಾ ರೈತರು ಪ್ರತಿ ವರ್ಷ ಕಡ್ಡಾಯವಾಗಿ ವಿಮೆ ನೊಂದಣಿ ಮಾಡುವುದರಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ದೊಡ್ಡ ನಷ್ಟ ತಪ್ಪಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ. ಕ್ರೀಡಾ ಮತ್ತು ಯುವ ಸಬಲೀಕರಣ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವರಿ ಸಚಿವರಾದ ನಾಗೇಂದ್ರ ಅವರೊಂದಿಗೆ ತಾಲ್ಲೂಕಿನ ವಿವಿಧ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ,
ಅಹವಾಲು ಅಲಿಸಿ ಸಚಿವರು ರೈತರಿಗೆ ಕಿವಿ ಮಾತು ಹೇಳಿದರು. ಬಳ್ಳಾರಿ ತಾಲ್ಲೂಕಿನ ಹಲಕುಂದಿ ಹಾಗು ಬೆಲಗೊಳ ಗ್ರಾಮಗಳ ಜಮೀನಿನಲ್ಲಿ ಬೆಳೆದಿದ್ದ ತೋಗರಿ, ನವಣೆ ಮತ್ತು ಸೂರ್ಯಕಾಂತಿ ಬೆಳೆ ಪರಿಶೀಲಿಸಿದ ಸಚಿವರು ಉತ್ತಮ ಮಳೆ , ಇಳುವರಿ ಬಂದು ಪರಿಹಾರ ಸಿಗದಿದ್ದರೂ 10 ವರ್ಷಗಳಲ್ಲಿ ಒಮ್ಮೆ ಇದರ ಫಲ ಎಲ್ಲಾ ಕಂತಿನ ಹಣದ ಹತ್ತಾರು ಪಟ್ಟು ಬರಲಿದೆ .ಇದರ ಅನುಕೂಲ ತಿಳಿದು ನಿರಂತರ ವೆಮೆ ಮಾಡಿಸಿ ಎಂದರು.
Most Visited Websites: ಭಾರತೀಯರು ಅತಿ ಹೆಚ್ಚು ಭೇಟಿ ನೀಡಿದ ವೆಬ್ ಸೈಟ್ಗಳು ಯಾವುದು ಗೊತ್ತಾ?
ತೋಗರಿ ಬೆಳೆ ಬೆಳಿದಿದ್ದ ಮಲ್ಲಿಕಾರ್ಜುನ ಎಂಬ ರೈತನ ಜಮೀನಿಗೆ ಭೇಟಿ ನೀಡಿದ ಸಚಿವರು ಬೆಳೆ ವಿಮೆ ಬಗ್ಗೆ ಮಾಹಿತಿ ಪಡೆದರು.. 10 ಎಕರೆ ಜಮೀನಿನಲ್ಲಿ ಬೆಳೆದ ತೊಗರಿ ಬೆಳೆಗೆ ವಿಮೆ ಮಾಡಿಸಿರುವುದಕ್ಕೆ ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.. ಕೃಷಿಕರ ಮನವಿಯನ್ನು ಆಲಿಸಿದ ಕೃಷಿ ಸಚಿವರು ನಿಯಮಾನುಸಾರ ಎಲ್ಲಾ ರೈತರಿಗೂ ಬರ ಪರಿಹಾರ ದೊರೆಯಲಿದೆ ಎಂದರು. ಅದೇ ರೀತಿ ವಿಮೆ ಕಂತು ಪಾವತಿಸಿದವರಿಗೆ ಮಾನದಂಡ ಅನುಸರಿಸಿ ಪರಿಹಾರ ಪಾವತಿಸಲಾಗಲಿದೆ ಎಂದು ಸಚಿವರು ಹೇಳಿದರು.
ಎಲ್ಲಾ ರೈತರು ತಮ್ಮ ಜಮೀನಿನ ಎಲ್ಲಾ ಆರ್.ಟಿ.ಸಿಗಳನ್ನು ಫ್ರೂಟ್ ಐಡಿಯಲ್ಲಿ ದಾಖಲು ಮಾಡಲು ಹೆಚ್ಚಿನ ಪ್ರಚಾರ ನಡೆಸಲು ಕಂದಾಯ ,ಕೃಷಿ ಅಧಿಕಾರಿಗಳು ಶ್ರಮಿಸುವಂತೆ ಜಿಲ್ಲಾಧಿಕಾರಿಗೆ ಸ್ಥಳದಲ್ಲೆ ಸೂಚನೆ ನೀಡಿದರು.. ಪೂರ್ಣ ಪ್ರಮಾಣದ ಪರಿಹಾರ ಪಡೆಯಲು ರೈತರು ಜಾಗೃತರಾಗಿ ತಮ್ಮ ಎಲ್ಲಾ ಜಮೀನಿನ ಆರ್ ಟಿ ಸಿ ಗಳನ್ನು ಫ್ರೂಟ್ಸ್ ಐ ಡಿ ಗೆ ಸೇರ್ಪಡೆ ಮಾಡಿ ಎಂದು ಅವರು ಸಲಹೆ ಮಾಡಿದರು.
ರೈತರು ಪ್ರತಿ ವರ್ಷ ವಿಮೆ ಮಾಡಿಸಬೇಕು, ರೈತರು ಕೇವಲ 2% ರಷ್ಟು ಬೆಳೆ ವಿಮೆ ನೊಂದಣೆ ಮಾಡಿಕೊಂಡರೆ ರೈತರಿಗೆ ಬೆಳೆ ಹಾನಿ ಸಂದರ್ಭದಲ್ಲಿ ನಷ್ಟ ಪರಿಹಾರ ಸಿಗಲಿದೆ ಎಂದು ಸಚಿವರು ರೈತರಿಗೆ ಮನವರಿಕೆ ಮಾಡಿಕೊಟ್ಟರು.. ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಬಳ್ಳಾರಿ ಜಂಟಿ ಕೃಷಿ ನಿರ್ದೇಶಕರು ಸೇರಿದಂತೆ ಕೃಷಿ ಇಲಾಖೆ ಇತರೆ ಅಧಿಕಾರಿಗಳು ಹಾಜರಿದ್ದರು..