Author: AIN Author

ಬೆಂಗಳೂರು:- ನ.29ರಿಂದ ಡಿ.1ರವರೆಗೆ ಬೆಂಗಳೂರು ಟೆಕ್ ಸಮ್ಮಿಟ್ ನಡೆಯಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ವಾರ್ಷಿಕ ಜಾಗತಿಕ ತಂತ್ರಜ್ಞಾನ ಕಾರ್ಯಕ್ರಮವಾದ ‘ಬೆಂಗಳೂರು ಟೆಕ್ ಸಮ್ಮಿಟ್’ ನ.29ರಿಂದ ಡಿ.1ರವರೆಗೆ ನಗರದ ಅರಮನೆ ಮೈದಾನದಲ್ಲಿ ಜರುಗಲಿದೆ.ರಾಜ್ಯ ಸರಕಾರದ ಆಯೋಜನೆಯ ಈ ಸಮ್ಮಿಟ್‌ ನಲ್ಲಿ ಈ ವರ್ಷ, ಚಂದ್ರಯಾನ-ಇಸ್ರೋ-ಬಾಹ್ಯಾಕಾಶ ಉದ್ಯಮದ ಪ್ರದರ್ಶನ ಮಳಿಗೆ ಇರಲಿದೆ. ಈ ಮಳಿಗೆಯಲ್ಲಿ ಭಾರತದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶನ ಮಾಡುವ ಉದ್ದೇಶವಿದೆ ಎಂದರು. ಸಮ್ಮಿಟ್‌ ನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಡೀಪ್ಟೆಕ್, ಮೆಟಾವರ್ಸ್ ಮತ್ತು ವೆಬ್ 3.0, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್, ಆನಿಮೇಶನ್, ವಿಶುವಲ್ ಎಫೆಕ್ಟ್, ಗೇಮಿಂಗ್, ಟೆಲಿಕಾಮ್ ಮತ್ತು 6ಜಿ ತಂತ್ರಜ್ಞಾನಗಳ ಮಾಹಿತಿಯನ್ನು ಪ್ರದರ್ಶನ ಮಾಡಲಾಗುತ್ತದೆ. ಈ ಪ್ರದರ್ಶನವು ಟೆಕ್ ಸಮ್ಮಿಟ್‌ ನಲ್ಲಿ ಈ ವರ್ಷದ ‘ಬ್ರೇಕಿಂಗ್ ಬೌಂಡರೀಸ್’ ಎಂಬ ಗುರಿಗೆ ಅನುಗುಣವಾಗಿರಲಿದ್ದು, ಆವಿಷ್ಕಾರ, ಪರಿವರ್ತನೆ ಹಾಗೂ ಅನ್ವೇಷಣೆಯ ಹಾದಿಯಲ್ಲಿ ಸಾಗಲಿದೆ ಎಂದು ಅವರು ತಿಳಿಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೆಚ್ಚಿಸಿಕೊಳ್ಳುತ್ತಿರುವ ಪ್ರಭಾವಕ್ಕೂ ಈ…

Read More

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ವಿಶ್ವಕಪ್‌ ಗೆಲ್ಲುವಲ್ಲಿ ವಿಫಲವಾಗಿರುವುದು ಬೇಸರ ಮೂಡಿಸಿದೆ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸ್ಪಿನ್‌ ದಿಗ್ಗಜ ಅನಿಲ್ ಕುಂಬ್ಳೆ ಹೇಳಿದ್ದಾರೆ. ಆದರೆ ಟೂರ್ನಿಯುದ್ದಕ್ಕೂ ತಂಡದ ಗೆಲುವಿಗೆ ನೆರವು ನೀಡಿದ್ದ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್‌ ಪ್ರದರ್ಶನವನ್ನು ಮಾಜಿ ನಾಯಕ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಭಾನುವಾರ (ನವೆಂಬರ್ 19) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ‌ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಸೋಲು ಕಂಡು ಏಕದಿನ ವಿಶ್ವಕಪ್ ಇತಿಹಾಸದಲ್ಲಿ 3ನೇ ಬಾರಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿತ್ತು. 2023ರ ಏಕದಿನ ವಿಶ್ವಕಪ್ ಟೂರ್ನಿಯ ಅಂತ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಟ್ರೋಫಿ ಗೆಲ್ಲದಿರುವುದು ಬೇಸರದ ಸಂಗತಿಯಾಗಿದೆ. ಈ ಇಬ್ಬರು ಆಟಗಾರರು ಟೀಮ್ ಇಂಡಿಯಾದ ಗೆಲುವಿಗಾಗಿ ಪ್ರತಿ ಕ್ಷಣವೂ ಕೈಜೋಡಿಸಿದ್ದರು. ರೋಹಿತ್ ಶರ್ಮಾ ಸ್ಫೋಟಕ ಪ್ರದರ್ಶನದಿಂದ ಆರಂಭದಲ್ಲೇ ರನ್ ವೇಗ ಹೆಚ್ಚಿಸಿದರೆ,…

Read More

ವಾಷಿಂಗ್ಟನ್‌: ತಾವು ಕಟ್ಟಿದ ಕಂಪನಿ ಓಪನ್‌ಎಐನಿಂದ ಪದಚ್ಯುತಗೊಂಡಿದ್ದ ಸ್ಯಾಮ್‌ ಆಲ್ಟ್‌ಮನ್‌, ಈಗ ಮೈಕ್ರೋಸಾಫ್ಟ್‌ ಸೇರಿದ್ದಾರೆ. ಕಂಪನಿ ಸಿಇಒ ಸತ್ಯ ನಾಡೆಲ್ಲಾ ಅವರೇ ಸೋಮವಾರ ಈ ಮಾಹಿತಿ ನೀಡಿದ್ದಾರೆ. ಸ್ಯಾಮ್‌ ಆಲ್ಟ್‌ಮನ್‌ ಜೊತೆಗೆ, ಓಪನ್‌ಎಐನ ಮಾಜಿ ಅಧ್ಯಕ್ಷ ಗ್ರೆಗ್‌ ಬಾಕ್ಸ್‌ಮನ್‌ ಕೂಡ ಮೈಕ್ರೋಸಾಫ್ಟ್‌ಗೆ ಸೇರಿದ್ದಾರೆ. ಆಲ್ಟ್‌ಮನ್‌ ಅವರು ಮೈಕ್ರೋಸಾಫ್ಟ್‌ನಲ್ಲಿ ಹೊಸ ಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ಸಂಶೋಧನಾ ತಂಡವನ್ನು ಮುನ್ನಡೆಸಲಿದ್ದಾರೆ. ಚಾಟ್‌ ಜಿಪಿಟಿ ಮೂಲಕ ಜಾಗತಿಕ ಖ್ಯಾತಿ ಗಳಿಸಿದ್ದ ಓಪನ್‌ಎಐ ಸಹ – ಸಂಸ್ಥಾಪಕ ಆಲ್ಟ್‌ಮನ್‌ ಅವರನ್ನು ಸಿಇಒ ಹುದ್ದೆಯಿಂದ ವಜಾಗೊಳಿಸಿದ ಬಳಿಕ, ಮೀರಾ ಮುರಾಟಿ ಅವರಿಗೆ ಮಧ್ಯಂತರ ಅವಧಿಗೆ ಈ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಮೀರಾ ಅವರನ್ನೂ ಆ ಹುದ್ದೆಯಿಂದ ತೆಗೆದುಹಾಕಲಾಗಿದೆ. ಈ ಕುರಿತು ಸಂಸ್ಥೆಯ ಸಿಬ್ಬಂದಿಗೆ ಭಾನುವಾರ ರಾತ್ರಿ ಕಳಿಸಿದ ಆಂತರಿಕ ಮೆಮೊದಲ್ಲಿ ಹೇಳಲಾಗಿದೆ.

Read More

ಬೆಂಗಳೂರು:- ವಿದ್ಯುತ್‌ ಅಪಘಾತ ತಡೆಯುವ ಕ್ರಮಗಳ ಕುರಿತು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ನ. 19 ರಂದು ಕಾಡುಗೋಡಿ 66/11 ಕೆವಿ ಉಪಕೇಂದ್ರದ F9 Feederನ ವಿದ್ಯುತ್ ವಾಹಕ ತುಂಡಾಗಿ ಬಿದ್ದ ಕಾರಣ ಅದನ್ನು ತುಳಿದು ಪಾದಚಾರಿ ಮಹಿಳೆ ಮತ್ತು ಮಗು ವಿದ್ಯುತ್ ಅಪಘಾತಕ್ಕೊಳಗಾಗಿ ಮೃತಪಟ್ಟಿರುವ ಬಗ್ಗೆ ವಿದ್ಯುತ್ ಪರಿವೀಕ್ಷಣಾ ಅಧಿಕಾರಿಗಳು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಈ ಘಟನೆಯು ಅತ್ಯಂತ ದುರದೃಷ್ಟಕರವಾಗಿದ್ದು, ಇಂತಹ ಅಪಘಾತಗಳಲ್ಲಿ ಜೀವಹಾನಿ ಆಗುತ್ತಿರುವ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದಲ್ಲಿ ಸುರಕ್ಷತಾ ಕ್ರಮಗಳ ನಿರ್ಲಕ್ಷತೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇಂತಹ ಘಟನೆಗಳು ಆಗದಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಮತ್ತು ವಿದ್ಯುತ್ ಪ್ರಸರಣ ನಿಗಮಗಳು ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕೆಳಕಂಡ ನಿರ್ದೇಶನಗಳನ್ನು ಸರ್ಕಾರ ನೀಡಿದೆ 1. ವಿದ್ಯುತ್ ಅಪಘಾತಗಳನ್ನು ತಡೆಯುವ ಬಗ್ಗೆ ಕಂಪನಿಗಳ ಎಲ್ಲಾ ಹಂತದ ಅಧಿಕಾರಿಗಳು ಮತ್ತು ನೌಕರರು/ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ Substation Staffಗೆ ತಿಳುವಳಿಕೆಯ ತರಬೇತಿಯನ್ನು ಕಡ್ಡಾಯವಾಗಿ ನೀಡುವುದು. 2. ವಿದ್ಯುತ್…

Read More

ಇಸ್ರೇಲ್: ಮುಂಬೈ ಭಯೋತ್ಪಾದನಾ (Mumbai Attack) ದಾಳಿಯಾಗಿ ನವೆಂಬರ್‌ಗೆ 15 ವರ್ಷ. ಈ ಕರಾಳ ದಿನದ ಸ್ಮರಣಾರ್ಥ ಭಯೋತ್ಪಾದಕ ಸಂಘಟನೆ ಲಷ್ಕರ್‌-ಎ-ತೊಯ್ಬಾ ನಿಷೇಧಿಸುವುದಾಗಿ ಇಸ್ರೇಲ್‌ ಘೋಷಿಸಿದೆ. ಮುಂಬೈ ದಾಳಿ ಖಂಡನೀಯ ಎಂದು ಭಯೋತ್ಪಾದಕ ಸಂಘಟನೆ ವಿರುದ್ಧ ಹರಿಹಾಯ್ದಿದೆ. ಭಾರತ ಸರ್ಕಾರದ ಯಾವುದೇ ಮನವಿ ಇಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ. ಲಷ್ಕರ್-ಎ-ತೈಬಾವನ್ನು (Lashkar-e-Taiba) ಇಸ್ರೇಲಿ ಅಕ್ರಮ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳನ್ನು ಪೂರೈಸಿದೆ ಎಂದು ಭಾರತದಲ್ಲಿನ ಇಸ್ರೇಲ್ (Israel) ರಾಯಭಾರ ಕಚೇರಿ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇಸ್ರೇಲ್ ತನ್ನ ಗಡಿಯೊಳಗೆ ಅಥವಾ ಅದರ ಸುತ್ತಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ಮಾತ್ರ ಪಟ್ಟಿ ಮಾಡಿದೆ. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ನೂರಾರು ಭಾರತೀಯ ನಾಗರಿಕರು ಮತ್ತು ಇತರರ ಹತ್ಯೆಗೆ ಈ ಭಯೋತ್ಪಾದಕ ಸಂಘಟನೆ ಹೊಣೆಯಾಗಿದೆ ಎಂದು ತಿಳಿಸಿದೆ. ಭಯೋತ್ಪಾದಕ ಸಂಘಟನೆ ದಾಳಿಯ ಸಂತ್ರಸ್ತರು, ಇಸ್ರೇಲ್‌ ಸೇರಿದಂತೆ ಮುಂಬೈ ದಾಳಿಯಲ್ಲಿ ಬದುಕುಳಿದ ಮತ್ತು ದುಃಖಿತ ಕುಟುಂಬಗಳಿಗೆ ಇಸ್ರೇಲ್‌ ಸಂತಾಪ ಸೂಚಿಸಿದೆ. ಭವಿಷ್ಯದ…

Read More

ತಮಿಳಿನ ಖ್ಯಾತ ನಟ ಸೂರ್ಯ (Surya) ನಟನೆಯ ‘ಕಂಗುವ’ (Kanguva) ಸಿನಿಮಾ ಟೀಮ್ ನಿಂದ ಭರ್ಜರಿ ಅಪ್ ಡೇಟ್ ಸಿಕ್ಕಿದೆ. ಈ ಸಿನಿಮಾವನ್ನು ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ. ಈ ಸಿನಿಮಾದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಆಗಲೇ ಭರ್ಜರಿ ವ್ಯಾಪಾರ ಕೂಡ ಆರಂಭಿಸಿದೆ.  ಭಾರೀ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಮೂಲಗಳ ಪ್ರಕಾರ ಅಮೆಜಾನ್ ಪ್ರೈಮ್ ಸಂಸ್ಥೆಯು ಕಂಗುವ ಸಿನಿಮಾದ ಓಟಿಟಿ (OTT) ಹಕ್ಕನ್ನು ಬರೋಬ್ಬರಿ 80 ಕೋಟಿಗೆ ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ.  ಈ ಮಾಹಿತಿಯನ್ನು ಚಿತ್ರತಂಡವೇ ಬಹಿರಂಗ ಪಡಿಸಿದೆ ಎಂದು ಕೆಲ ಮಾಧ್ಯಮಗಳ ವರದಿ ಮಾಡಿವೆ. ಸ್ಟುಡಿಯೋ ಗ್ರೀನ್ನಡಿ ಕೆ.ಇ. ಜ್ನಾನ ವೇಲ್ ರಾಜ ನಿರ್ಮಿಸಿ, ಶಿವ (Shiva) ನಿರ್ದೇಶಿಸುತ್ತಿರುವ ಈ ಚಿತ್ರವು ಪ್ರಾರಂಭವಾದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.…

Read More

ರಾಮನಗರ:- ಕಳ್ಳರು, ಸುಳ್ಳರು ಒಂದಾಗಿದ್ದಾರೆ, ನನಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೀವನ ಏನೆಂಬುದು ತಿಳಿದಿದೆ. ದೇಶದ ವ್ಯವಸ್ಥೆಯಲ್ಲಿ ಕಳ್ಳರು ಹಾಗೂ ಸುಳ್ಳರು ಒಂದಾಗಿದ್ದಾರೆ. ಮೇಲೊಬ್ಬ ಭಗವಂತ ಎಂಬುವವನಿದ್ದಾನೆ. ಅವನೇ ಅಂತಿಮವಾಗಿ ಎಲ್ಲಾ ತೀರ್ಮಾನ ತೆಗೆದುಕೊಳ್ಳುತ್ತಾನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು. ಸಮಾಜದಲ್ಲಿ ಹಣದ ಮದ ಹತ್ತಿಸಿಕೊಂಡವರು ಎಲ್ಲವನ್ನೂ ಕೊಂಡುಕೊಳ್ಳುತ್ತೇನೆ ಎಂದುಕೊಂಡಿದ್ದಾರೆ. ಆದರೆ ಎಲ್ಲದಕ್ಕೂ ಒಂದು ಅಂತ್ಯವೆಂಬುದು ಇದ್ದೇ ಇರುತ್ತದೆ ಎಂದು ತಿರುಗೇಟು ನೀಡಿದರು. ನನ್ನ ವಿರುದ್ಧ ಯಾರು ಬೇಕಾದರೂ ಪೋಸ್ಟರ್ ಅಂಟಿಸಿಕೊಳ್ಳಲಿ, ಬೇಡ ಎನ್ನುವುದಿಲ್ಲ. ನನಗೆ ಯಾರು ಏನೂ ಮಾಡಲು ಸಾಧ್ಯವಾಗುವುದಿಲ್ಲವೆಂದು ತಮ್ಮ ವಿರುದ್ಧದ ಪೋಸ್ಟರ್ ವಾರ್ ವಿಚಾರವಾಗಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು. ಸರ್ಕಾರದ ತಪ್ಪುಗಳನ್ನು ಏಕಾಂಗಿಯಾಗಿ ಪ್ರಶ್ನೆ ಮಾಡುವುದು ಕುಮಾರಸ್ವಾಮಿ ಒಬ್ಬನೇ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ…

Read More

ಮೂರು ತಿಂಗಳ‌ ಹಿಂದೆ ಅದ್ದೂರಿಯಾಗಿ ಮುಹೂರ್ತ ಆಚರಿಕೊಂಡಿದ್ದ ನಾಗಶೇಖರ್ (Nagasekhar) ಅವರ  ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಚಿತ್ರದ ಚಿತ್ರೀಕರಣ ಇದೀಗ ಕನಕಪುರ ರಸ್ತೆಯ ಫಾರಂ ಹೌಸ್ ನಲ್ಲಿ ನಡೆಯುತ್ತಿದೆ. ಅಲ್ಲಿ  ತಮ್ಮ  10ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಪ್ರಯುಕ್ತ ನಾಯಕ, ನಾಯಕಿಗೆ ಲಕ್ಷುರಿ ಕಾರ್ ಗಿಫ್ಟ್ ಕೊಡುವ ದೃಶ್ಯವನ್ನು ಛಾಯಾಗ್ರಾಹಕ ಸತ್ಯ ಹೆಗಡೆ ಸೆರೆ ಹಿಡಿಯುತ್ತಿದ್ದರು. ಚಿತ್ರೀಕರಣ ವೀಕ್ಷಣೆಗೆಂದು‌ ಮಾದ್ಯಮ ಮಿತ್ರರನ್ನು ಶೂಟಿಂಗ್ ಲೊಕೇಶನ್ ಗೆ  ಆಹ್ವಾನಿಸಿದ್ದ  ನಿರ್ದೇಶಕ ನಾಗಶೇಖರ್,  ಶೂಟಿಂಗ್ ಆರಂಭಿಸುವುದು ತಡವಾಗಿದ್ದಕ್ಕೆ ಕಾರಣ ನಮ್ಮ ಚಿತ್ರದ ಮತ್ತೋರ್ವ ನಿರ್ಮಾಪಕ, ಒಳ್ಳೆಯ ಸ್ನೇಹಿತ ಮಾಭಿ ನಾರಾಯಣ್ ಅಗಲಿದ್ದು. ಹಾಗಾಗಿ ಲೇಟ್ ಆಯ್ತು ಎಂದು  ಆರಂಭದಲ್ಲಿಯೇ ಮಾಹಿತಿ‌ ನೀಡಿದರು. ನಂತರ ಚಿತ್ರದ ಬಗ್ಗೆ ಮಾತನಾಡುತ್ತ  ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸೇ ಭಾಗ ಎರಡು ಆಗಲು ಕಾರಣ. ಮೊದಲ ಹಂತದಲ್ಲಿ ಈಗಾಗಲೇ 5-6 ದಿನ ಶೂಟಿಂಗ್ ನಡೆದಿದೆ.‌ ಅಚಾನಕ್ಕಾಗಿ ಒಂದಷ್ಟು ಬದಲಾವಣೆಗಳಾದವು.…

Read More

2023ರ ವಿಶ್ವಕಪ್​ ಫೈನಲ್​ ಪಂದ್ಯ ಕೊನೆಗೊಂಡಿದ್ದು ಆದರೆ ಕ್ರಿಕೆಟ್​ ಅಭಿಮಾನಿಗಳಿಗಾಗಿ ಮುಂಬರುವ ವಿಶ್ವಕಪ್​ ದಿನಾಂಕ ಮತ್ತು ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಮುಂಬರುವ ವಿಶ್ವಕಪ್​ನಲ್ಲಿ ನಮೀಬಿಯಾ ಅತಿಥೇಯ ರಾಷ್ಟ್ರವಾಗಿ ಪಾದರ್ಪಣೆ ಮಾಡಲು ಸಜ್ಜಾಗಿದೆ. ಹೀಗಾಗಿ 2027ರ ವಿಶ್ವಕಪ್​ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ. ಐಸಿಸಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ದಕ್ಷಿಣಾ ಆಫ್ರಿಕಾ ಮತ್ತು ಜಿಂಬಾಬ್ವೆ ಸಹ-ಅತಿಥೇಯರಾ್ಇ ಕಾರ್ಯ ನಿರ್ವಹಿಸಲಿದೆ. ODI ಶ್ರೇಯಾಂಕದಲ್ಲಿ ಅಗ್ರ 8 ತಂಡಗಳು ಅರ್ಹತೆ ಪಡೆಯುತ್ತವೆ. ಉಳಿದ 4 ಸ್ಥಾನಗಳು ಜಾಗತಿಕ ಅರ್ಹತಾ ಪಂದ್ಯಾವಳಿ ಮೂಲಕ ನಿರ್ಧರಿಸಲಾಗುತ್ತದೆ.ನಮೀಬಿಯಾ ವಿಶ್ವಕಪ್​ ಆಯೋಜನೆಯ ಹೊರತಾಗಿಯೂ, ಸದಸ್ಯತ್ವ ಹೊಂದಿರದ ಕಾರಣ ಅದರ ಭಾಗವಹಿಸುವಿಕೆ ಇನ್ನೂ ಖಚಿತವಾಗಿಲ್ಲ ಎಂದಿದೆ. 2027ರ ವಿಶ್ವಕಪ್​ ಪಂದ್ಯ ನಡೆಯುವ ಸ್ಥಳ ಮತ್ತು ದಿನಾಂಕದ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಆದರೆ 2003ರಲ್ಲಿ ನಡೆದ ಪಂದ್ಯದಂತೆ ದಕ್ಷಿಣಾ ಆಫ್ರಿಕಾದ 12 ಸ್ಥಳಗಳಲ್ಲಿ ವಿಶ್ವಕಪ್​​ ಪಂದ್ಯ ನಡೆಯಲಿಕ್ಕಿದೆ ಎನ್ನಲಾಗುತ್ತಿದೆ. ಅಂದು ಜಿಂಬಾಬ್ವೆಯಲ್ಲಿ ಎರಡು ಮತ್ತು ಕೀನ್ಯಾದಲ್ಲಿ ಒಂದು ಪಂದ್ಯ ಆಯೋಜಿಸಲಾಗಿತ್ತು.

Read More

ಸರಕಾರಿ ಸೌಲಭ್ಯ ಪಡೆಯುವ ಉದ್ದೇಶದಿಂದ ತಾವು ಸಣ್ಣ ರೈತರು ಎಂದು ತೋರಿಸಿಕೊಳ್ಳುವ ಭರದಲ್ಲಿ ರಾಜ್ಯದ ಕೃಷಿಕರು ಫ್ರೂಟ್ಸ್‌ ತಂತ್ರಾಂಶದಲ್ಲಿ ತಮ್ಮ ಒಡೆತನದಲ್ಲಿರುವ ಸಂಪೂರ್ಣ ಕೃಷಿ ಭೂಮಿಯ ಮಾಹಿತಿ ಮರೆಮಾಚಿ, ಕೆಲವೇ ಹೆಕ್ಟೇರ್‌ ಭೂಮಿ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಬರ ಪರಿಹಾರ ಪಡೆಯಲು ರೈತರಿಗೆ ತೊಡಕಾಗುವ ಅಪಾಯ ಎದುರಾಗಿದೆ. ರಾಜ್ಯಾದ್ಯಂತ ಬರ ಎದುರಾಗಿದ್ದು, ಬರ ಪರಿಹಾರ ಪಡೆಯಬೇಕಾದರೆ ರೈತರು ಫ್ರೂಟ್ಸ್‌ ಐಡಿ (ಎಫ್‌ಐಡಿ) ಕಡ್ಡಾಯವಾಗಿ ಹೊಂದಿರಬೇಕು ಎಂದಿರುವ ಸರಕಾರ, ಎಫ್‌ಐಡಿ ನೋಂದಣಿ ಗಡುವನ್ನು ನ.30ರವರೆಗೆ ವಿಸ್ತರಿಸಿದೆ. ಆದರೆ, ನೋಂದಣಿ ನಿರೀಕ್ಷೆಯಂತೆ ಆಗುತ್ತಿಲ್ಲ. ಜತೆಗೆ, ತಾವು ದೊಡ್ಡ ರೈತರೆಂದು ತೋರಿಸಿಕೊಂಡರೆ ಸರಕಾರದಿಂದ ಸಹಾಯಧನ, ಗೌರವಧನ, ಸಾಲ ಮೊದಲಾದ ಸೌಲಭ್ಯಸಿಗುವುದಿಲ್ಲ ಎಂಬ ಕಾರಣಕ್ಕೆ ರೈತರು ಪೂರ್ಣ ಮಾಹಿತಿ ನೀಡುತ್ತಿಲ್ಲ. ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ, ತಮ್ಮ ಎಲ್ಲ ಜಮೀನುಗಳ ಪಹಣಿ, ಆಧಾರ್‌ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್‌ ಪಾಸ್‌ಬುಕ್‌ ನೀಡಿ ಎಫ್‌ಐಡಿ ಮಾಡಿಸಬೇಕು. ಈಗಾಗಲೇ ಎಫ್‌ಐಡಿ ಹೊಂದಿರುವ ರೈತರು ತಮ್ಮ…

Read More