ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ಗೆ ಮರಳಿದ್ದರಿಂದ ಬೂಮ್ರಾಗೆ ಬೇಸರವಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಗುಜರಾತ್ ಟೈಟನ್ಸ್ಗೆ ಎರಡು ವರ್ಷ ಆಡಿದ ನಂತರ ಹಾರ್ದಿಕ್ ಅವರು ಭಾನುವಾರ ಮುಂಬೈ ತಂಡಕ್ಕೆ ವಾಪಸಾಗಿದ್ದಾರೆ. 2015 ರಿಂದ 2022ರವರೆಗೆ ಅವರು ಮುಂಬೈ ತಂಡದಲ್ಲಿದ್ದರು.
ಗುಜರಾತ್ಗೆ ದೊಡ್ಡ ಮೊತ್ತ ಪಾವ ತಿಸಿ ಮುಂಬೈ ತಂಡ ಹಾರ್ದಿಕ್ ಅವರನ್ನು ಪಡೆದ ಬಳಿಕ ಬೂಮ್ರಾ ಅವರು ಇನ್ಸ್ಟಾ ಸ್ಟೋರಿಯಲ್ಲಿ ‘ಕೆಲವೊಮ್ಮೆ ಮೌನವೇ ಅತ್ಯುತ್ತಮ ಉತ್ತರವಾಗುತ್ತದೆ’ ಎಂದು ಒಗಟಿನ ರೀತಿ ಸಂದೇಶ ಹಾಕಿದ್ದರು ಎಂದು ಹೇಳಲಾಗಿದೆ.