ಅರ್ಜೆಂಟೀನಾ: ಅರ್ಜೆಂಟೀನಾದ ಹೊಸ ಅಧ್ಯಕ್ಷರಾಗಿ ಲಿಬರ್ಟೇರಿಯನ್ ಹೊರಗಿನ ಜೇವಿಯರ್ ಮಿಲೀ ಅವರನ್ನು ಆಯ್ಕೆ ಮಾಡಿದೆ. ಮೂರು-ಅಂಕಿಯ ಹಣದುಬ್ಬರ, ಮುಂಚೂಣಿಯಲ್ಲಿರುವ ಆರ್ಥಿಕ ಹಿಂಜರಿತ ಮತ್ತು ಹೆಚ್ಚುತ್ತಿರುವ ಬಡತನದಿಂದ ಜರ್ಜರಿತವಾಗಿರುವ ಆರ್ಥಿಕತೆಯನ್ನು ಸರಿಪಡಿಸಲು ಮೂಲಭೂತ ದೃಷ್ಟಿಕೋನಗಳೊಂದಿಗೆ ಹೊರಗಿನವರವನ್ನು ಆಯ್ಕೆ ಮಾಡಿದೆ. ಅಧಿಕೃತ ಫಲಿತಾಂಶಗಳು ಮಿಲೀ ಅವರ ಪ್ರತಿಸ್ಪರ್ಧಿ, ಪೆರೋನಿಸ್ಟ್ ಆರ್ಥಿಕ ಸಚಿವ ಸೆರ್ಗಿಯೊ ಮಾಸ್ಸಾಗೆ 56% ಮತ್ತು 44% ರಷ್ಟನ್ನು ತೋರಿಸಿದವು. ಸರ್ಕಾರ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಪೆರೋನಿಸ್ಟ್ ಪಕ್ಷದ ಸೆರ್ಗಿಯೋ ಚುನಾವಣೆಯಲ್ಲಿ ಗೆದ್ದ ಜೇವಿಯರ್ ಅವರನ್ನು ಅಭಿನಂದಿಸಿದ್ದಾರೆ. ತನ್ನನ್ನು ಅರಾಜಕತಾವಾದಿ-ಬಂಡವಾಳಶಾಹಿ ಎಂದು ಕರೆದುಕೊಳ್ಳುವ ಮಿಲ್ಲಿಯನ್ನು ಸಾಮಾನ್ಯವಾಗಿ ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೋಲಿಸಲಾಗುತ್ತದೆ. ಕೆಲವೊಮ್ಮೆ ಅವರ ನಡವಳಿಕೆ, ಕೆಲವೊಮ್ಮೆ ಅವರ ಕೆಲಸದ ಆಧಾರದ ಮೇಲೆ ಈ ಹೆಸರಿನಲ್ಲಿ ಕರೆಯಲಾಗುತ್ತದೆ. https://ainlivenews.com/housewifes-body-found-hanging-in-bangalore/ ಅರ್ಜೆಂಟೀನಾದ ಹೊಸ ಅಧ್ಯಕ್ಷರನ್ನು ದಿ ಲಯನ್, ದಿ ವಿಗ್ ಮತ್ತು ದಿ ಮ್ಯಾಡ್‌ಮ್ಯಾನ್ ಎಂಬ ಮೂರು ಅಡ್ಡಹೆಸರುಗಳಿಂದ ಕರೆಯಲಾಗುತ್ತದೆ. ಸತ್ತ ನಾಯಿಯಿಂದ ಸಲಹೆಯನ್ನು ಪಡೆಯುವ ಕಾರಣ…
Author: AIN Author
ಬೆಂಗಳೂರು:- KEA ಪರೀಕ್ಷೆಯಲ್ಲಿನ ಅಕ್ರಮ ಎಸಗಿದ ಆರ್.ಡಿ. ಪಾಟೀಲಗೆ ಮತ್ತೆ ನ್ಯಾಯಾಂಗ ಬಂಧನ ನೀಡಲಾಗಿದೆ. ಕಳೆದ ಅಕ್ಟೋಬರ್ 28ರಂದು ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಪ್ರಮುಖ ಆರೋಪಿ ಅಫಜಲಪುರದ ಆರ್.ಡಿ. ಪಾಟೀಲ ಪೊಲೀಸ್ ಕಸ್ಟಡಿಯ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಇಲ್ಲಿನ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯವು ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿತ್ತು. ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ತನಿಖೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಮಾಹಿತಿ ಸಂಗ್ರಹಿಸಿದ ಬಳಿಕ ಗುರುವಾರ ಆರ್.ಡಿ. ಪಾಟೀಲನನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶ ಸಂತೋಷ ಶ್ರೀವಾಸ್ತವ ಅವರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದುವರೆಗೆ ಕಲಬುರಗಿಯ ಅಶೋಕ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು. ವಿಶ್ವವಿದ್ಯಾಲಯ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಮತ್ತೆ ತಮ್ಮ ವಶಕ್ಕೆ ನೀಡುವಂತೆ ಸಿಐಡಿ…
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಟ್ರೆಂಡ್‌ನಲ್ಲಿರುವ ಸಾಲನ್ನ ಆಪ್ತರೊಬ್ಬರಿಗೆ ಹೇಳಿದ್ದಾರೆ. ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಬರೆದುಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ. ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದು ಬೇರೇ ಯಾರಿಗೋ ಅಲ್ಲ. ಗೆಳೆಯ ರಾಜ್ ಬಿ ಶೆಟ್ಟಿಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ರಾಜ್, ಸಿರಿ ನಟನೆ ಬಲು ಇಷ್ಟಪಟ್ಟಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟ್ರೈಲರ್ ಶೇರ್ ಮಾಡಿ ಸೋ ಮೂಡಿ, ಸೋ ಬ್ಯೂಟಿಫುಲ್ ರಾಜ್ ಬಿ ಶೆಟ್ಟಿ (Raj B Shetty) ಯೂ ಆರ್ ದಿ ಮ್ಯಾನ್ ಎಂದು ರಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಮ್ಯಾ (Ramya) ನಿರ್ಮಾಣದ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಇದೇ ನವೆಂಬರ್…
ಸುದೀಪ್ (Sudeep) ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿ ಬರೋಬ್ಬರಿ ಮೂವರು ನಾಯಕಿಯರು ನಟಿಸುತ್ತಿದ್ದಾರೆ. ಮೂವರದ್ದೂ ವಿಭಿನ್ನ ಪಾತ್ರಗಳಾಗಿದ್ದು, ಯಾವ ರೀತಿಯ ಪಾತ್ರಗಳನ್ನು ಅವರು ಮಾಡಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಕನ್ನಡತಿಯರಾದ ಸಂಯುಕ್ತ ಹೊರನಾಡು (Samyukta Horanadu), ಸುಕೃತಾ ವಾಗ್ಲೆ ಮತ್ತು ತಮಿಳಿನ ನಟಿ ವರಲಕ್ಷ್ಮಿ ಶರತ್ ಕುಮಾರ್ (Varalakshmi) ಈ ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದಾರೆ. ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ. ಬಿಗ್ ಬಾಸ್ ನಡುವೆಯೂ ತಪ್ಪದೇ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ (Max) ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದೆ. ಹಾಗಾಗಿ ಫೆಬ್ರವರಿಯಲ್ಲಿ (February) ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾ ತಂಡವು ಅಧಿಕೃತವಾಗಿ ಮಾಹಿತಿ ನೀಡದೇ ಇದ್ದರೂ, ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿರುವ ಮಾತಿನಂತೆ ಫೆಬ್ರವರಿಗೆ ಮ್ಯಾಕ್ಸ್ ತೆರೆ ಕಾಣಲಿದೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಸುದೀಪ್ ಒಪ್ಪಿಕೊಂಡಿದ್ದರಿಂದ ಮತ್ತು ಅವರೇ ಚಿತ್ರವೊಂದನ್ನು ನಿರ್ದೇಶನ ಮಾಡಬೇಕಾಗಿರುವುದರಿಂದ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಸಿನಿಮಾದ ಶೂಟಿಂಗ್…
ಬೆಂಗಳೂರು:- ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಸಮಸ್ಯೆ ಇಲ್ಲ. ನಿರ್ವಹಣೆಗಾಗಿ ರಾಜ್ಯದಲ್ಲಿನ ಕೆಲವು ವಿದ್ಯುತ್ ಘಟಕಗಳನ್ನು ಮುಂಗಾರು ಸಮಯದಲ್ಲಿ ಮುಚ್ಚಲಾಗಿತ್ತು. ಹೀಗಾಗಿ ಅಲ್ಪಕಾಲದ ಪವರ್ ಕಟ್ ಉಂಟಾಗಿತ್ತು. ಆದರೆ ಈ ಕೊರತೆಯನ್ನು ನಾವು ನೀಗಿಸಿದ್ದೇವೆ. ರೈತರು ಬೇಡಿಕೆ ಇಟ್ಟಾಗೆಲ್ಲಾ ನಾವು ಅವರಿಗೆ ವಿದ್ಯುತ್ ಪೂರೈಕೆ ಮಾಡಿದ್ದೇವೆ. ಈಗ ಯಾವುದೇ ದೂರುಗಳಿಲ್ಲ. 5ರಿಂದ 10 ದಿನಗಳ ಕಾಲ ಮಾತ್ರ ವಿದ್ಯುತ್ ಕೊರತೆ ಉಂಟಾಗಿತ್ತು. ಆದರೆ ಅನಾವಶ್ಯಕವಾಗಿ ಈ ಬಗ್ಗೆ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ವಿದ್ಯುತ್ ಕೊರತೆ ನೀಗಿಸಲು ಹೆಚ್ಚಿನ ಘಟಕಗಳ ಸ್ಥಾಪನೆ ಮಾಡಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಮಾಡಿದೆ ಎಂದು ಹೇಳಿದರು.
ಹಿಂಗಾರು ಕೈಕೊಟ್ಟಿದ್ದರೂ ಒಂದಷ್ಟು ಕೆರೆಗಳಲ್ಲಿ ನೀರಿರುವುದರಿಂದ ಮತ್ಸ್ಯ ಕೃಷಿ ತೃಪ್ತಿದಾಯಕವಾಗಿದ್ದು, ಈವರೆವಿಗೆ 36.87 ಲಕ್ಷ ಮೀನು ಮರಿಗಳನ್ನು ನಾನಾ ಕೆರೆಗಳಲ್ಲಿ ಬಿತ್ತನೆ ಮಾಡಲಾಗಿದೆ. ಮೀನುಗಾರಿಕೆಯನ್ನೇ ನಂಬಿ ಸಾವಿರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮೀನಿಗೂ ಸಾಕಷ್ಟು ಬೇಡಿಕೆ ಇದೆ. ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಈ ಬಾರಿ ಗುರಿಯಷ್ಟು ಸಾಧನೆ ಆಗದಿದ್ದರೂ ಮತ್ಸ್ಯ ಬಿತ್ತನೆ ತೃಪ್ತಿಕರವಾಗಿದೆ. ‘ಕನಿಷ್ಠ 4 ರಿಂದ 5 ಅಡಿ ನೀರು ಇರುವ ಹಾಗೂ ಅದೇ ಮಟ್ಟದಲ್ಲಿ 8 ತಿಂಗಳು ಕಾಲ ನೀರು ನಿಲ್ಲುವ ಕೆರೆಗಳಲ್ಲಿ ಮೀನುಮರಿಗಳ ಬಿತ್ತನೆಯನ್ನು ಮಾಡಲಾಗುತ್ತದೆ. 4 ಅಡಿಯೂ ನೀರಿಲ್ಲದ ಕೆರೆಗಳಲ್ಲಿ ಮೀನು ಬಿತ್ತನೆ ಮಾಡಿದರೆ ಪ್ರಯೋಜನವಿಲ್ಲ. ಅಲ್ಲದೇ ಬಿತ್ತನೆ ನಂತರ ಮೂರ್ನಾಲ್ಕು ತಿಂಗಳಲ್ಲಿ ಕೆರೆಯಲ್ಲಿನ ನೀರು ಬತ್ತಿ ಹೋದರೂ ಮೀನು ಬೆಳವಣಿಗೆ ಸಾಧ್ಯವಿಲ್ಲ. ಆದ್ದರಿಂದ ಕನಿಷ್ಠ 8 ತಿಂಗಳ ಕಾಲ 5 ಅಡಿ ಮೇಲ್ಪಟ್ಟು ನೀರು ನಿಲ್ಲುವಂತಹ ಕೆರೆಗಳನ್ನೇ ಮೀನು ಕೃಷಿಗೆ ಆಯ್ಕೆ ಮಾಡಲಾಗುತ್ತದೆ,” ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು. ಮೀನುಗಾರಿಕೆ ಇಲಾಖೆಯು ಜಿಲ್ಲೆಯಲ್ಲಿ…
ಡಿಸೆಂಬರ್ 4ರಿಂದ 8ರವರೆಗೆ ಸರ್ಕಾರಿ ಬ್ಯಾಂಕುಗಳು ಹಾಗೂ ಮತ್ತು ಡಿಸೆಂಬರ್ 11ರಂದು ಖಾಸಗಿ ಬ್ಯಾಂಕುಗಳ ಉದ್ಯೋಗಿಗಳು ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರಿ ಬ್ಯಾಂಕುಗಳು ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಬ್ಯಾಂಕುಗಳು ಮುಷ್ಕರ ನಡೆಸಿವೆ. ಎಲ್ಲಾ ಖಾಸಗಿ ಬ್ಯಾಂಕುಗಳ ಉದ್ಯೋಗಿಗಳು ಒಂದೇ ದಿನ ಮುಷ್ಕರ ನಡೆಸಲಿದ್ದಾರೆ. ಯಾವ್ಯಾವ ದಿನ ಯಾವ ಬ್ಯಾಂಕುಗಳಲ್ಲಿ ಮುಷ್ಕರ, ವಿವರ ಈ ಕೆಳಗಿದೆ: ಡಿಸೆಂಬರ್ 4: ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಿಂಧ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 5: ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 6: ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 7: ಇಂಡಿಯನ್ ಬ್ಯಾಂಕ್, ಯುಕೋ ಬ್ಯಾಂಕ್ ಡಿಸೆಂಬರ್ 8: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಡಿಸೆಂಬರ್ 11: ಎಲ್ಲಾ ಖಾಸಗಿ ಬ್ಯಾಂಕುಗಳು
‘ಬಾಹುಬಲಿ’ (Bahubali) ಕಟ್ಟಪ್ಪನ ಹಳೇ ಲವ್ ಸ್ಟೋರಿಗೆ ಈಗ ಜೀವ ಬಂದಿದೆ. ಅದೆಲ್ಲಿಯ ಕಟ್ಟಪ್ಪ ಅದೆಲ್ಲಿಯ ನಮಿತಾ? ಇಬ್ಬರಿಗೂ ಪ್ರೇಮಾಂಕುರ ಆಗಿದ್ದೆಲ್ಲಿ? ಇನ್ನೇನು ಮದುವೆ ಆಗಿಬಿಟ್ಟಿರು ಎನ್ನುವಾಗ ಅಡ್ಡಗಾಲು ಹಾಕಿದ ಇನ್ನೊಬ್ಬ ನಟ ಯಾರು? ಬ್ರೇಕಪ್ ಬಗ್ಗೆ ಇಲ್ಲಿದೆ ಮಾಹಿತಿ. ಬಣ್ಣದ ಲೋಕದಲ್ಲಿ ಯಾರ ಜೊತೆಯಾದರೂ ಎಲ್ಲಿ ಬೇಕಾದರೂ ಪ್ರೀತಿ ಉಕ್ಕುತ್ತದೆ. ಅದನ್ನು ಪ್ರೀತಿ ಅಂತೀರೋ. ಆಕರ್ಷಣೆ ಅಂತೀರೊ ನಿಮಗೆ ಬಿಟ್ಟಿದ್ದು. ಒಟ್ಟಿನಲ್ಲಿ ಆ ಹಸಿ ಬಿಸಿ ಏನೊ ಒಂದನ್ನು ತಂದು ಗಂಡು ಹೆಣ್ಣನ್ನು ಜಂಟಿ ಮಾಡುತ್ತದೆ. ಅದಕ್ಕೆ ಸಾಕ್ಷಿ ಬಾಹುಬಲಿಯ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ (Sathyaraj) ಹಾಗೂ ಹಾಟ್ ಕ್ವೀನ್ ನಮಿತಾ. ಇಬ್ಬರೂ ಆ ಕಾಲದಲ್ಲಿ ಅದು ಹೇಗೊ ಜಂಟಿಯಾಗಿ ಕುಂಟಾಬಿಲ್ಲೆ ಆಡಲು ತಯಾರಾಗಿದ್ದರು. ಸತ್ಯರಾಜ್ ಮದುವೆ ಆಗಲು ಸಜ್ಜಾಗಿದ್ದರು. ಆದರೆ ಶರತ್‌ಕುಮಾರ್ ಅಡ್ಡಗಾಲು ಹಾಕಿದರು. ಸತ್ಯರಾಜ್‌ಗೆ ಅದಾಗಲೇ ಮದುವೆಯಾಗಿತ್ತು. ಮಕ್ಕಳೂ ಇದ್ದರು. ಆದರೆ ಮನಸಿನ ಬಿಸಿ ಕೇಳಬೇಕಲ್ಲವೆ? ನಮಿತಾ ಬಲೆಗೆ ಬಿದ್ದರು. ಇನ್ನೇನು ಮದುವೆ ಆಗಬೇಕೆನ್ನುವಾಗಲೇ ನಟ ಶರತ್‌ಕುಮಾರ್…
ಗೋವಾ (Goa) ಸರ್ಕಾರ, ಎಂಟರ್ ಟೈನ್‍ಮೆಂಟ್ ಸೊಸೈಟಿ ಆಫ್ ಗೋವಾ ಮತ್ತು ಎನ್.ಎಫ್.ಡಿ.ಸಿ ಇಂಡಿಯಾ ಜಂಟಿಯಾಗಿ ಗೋವಾದ ಪಣಜಿಯಲ್ಲಿ ಆಯೋಜಿಸಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (Chirotsava) (IFFI) ಕನ್ನಡದ ‘ದಿ ಗ್ರೇ ಗೇಮ್ಸ್’ ಚಿತ್ರ ಆಯ್ಕೆಯಾಗಿದೆ. ವಿಜಯ್ ರಾಘವೇಂದ್ರ, ಭಾವನಾ ರಾವ್, ಶ್ರುತಿ ಪ್ರಕಾಶ್, ಅಪರ್ಣ ವಸ್ತಾರೆ, ಜೈ ಮುಂತಾದವರು ನಟಿಸಿರುವ ಈ ಚಿತ್ರವನ್ನು ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಗಂಗಾಧರ್ ಸಾಲಿಮಠ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ‘ಗ್ರೇ ಗೇಮ್ಸ್’ (Gray Games) ಚಿತ್ರವು ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದ ‘ರೆಡ್ ಕಾರ್ಪೆಟ್ ಗಾಲ ಪ್ರೀಮಿಯರ್’ ವಿಭಾಗದಡಿ ಮೊದಲ ಪ್ರದರ್ಶನ ಕಾಣುತ್ತಿದೆ. ಈ ವಿಭಾಗದಲ್ಲಿ ಭಾರತದ ಹಲವು ಚಿತ್ರಗಳು ಪ್ರೀಮಿಯರ್ ಆಗುತ್ತಿದ್ದು, ಈ ಪೈಕಿ ಕನ್ನಡದ ‘ದಿ ಗ್ರೇ ಗೇಮ್ಸ್’ ಸಹ ಒಂದಾಗಿರುವುದು ವಿಶೇಷ. ಮೆಟಾವರ್ಸ್ ಮತ್ತು ಆನ್‍ಲೈನ್ ಗೇಮಿಂಗ್ ವೈಷಮ್ಯದ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ (Vijay Raghavendra) ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಾವನಾ ರಾವ್…
ಸಿಡ್ನಿ: ವಿಶ್ವಕಪ್ 2023 (World Cup 2023) ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿತ್ತು. ಇದೀಗ ತಂಡದ ಕೆಲವರು ಅವರವರ ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ. ಅಂತೆಯೇ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಕೂಡ ಸಿಡ್ನಿ ಏರ್‌ಪೋರ್ಟ್ ಗೆ (Sidney Airport) ಬಂದಿಳಿದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಹೌದು. ನಿನ್ನೆ ಬೆಳಗ್ಗೆ ಕಮ್ಮಿನ್ಸ್ (Pat Cummins) ಅವರು ಸಿಡ್ನಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇದನ್ನು Andrew McGlashan of ESPNcricinfo ಅವರು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ “ಪ್ಯಾಟ್ ಕಮ್ಮಿನ್ಸ್ ವಿಶ್ವಕಪ್ ವಿಜೇತ ನಾಯಕನಾಗಿ ತವರಿಗೆ ಮರಳಿದ್ದಾರೆ” ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ ವಿಡಿಯೋದಲ್ಲೇನಿದೆ..?: ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಸೀಸ್ ತಂಡದ ನಾಯಕ ಕಮ್ಮಿನ್ಸ್ ಅವರು ತಮ್ಮ ಲಗ್ಗೇಜ್‍ಗಳನ್ನು ಸ್ವತಃ ತಾವೇ ವ್ಹೀಲಿಂಗ್ ಮಾಡಿಕೊಂಡು ಹೋಗುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೆ ಹೀಗೆ…