ಸಿಡ್ನಿ: ವಿಶ್ವಕಪ್ 2023 (World Cup 2023) ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿತ್ತು. ಇದೀಗ ತಂಡದ ಕೆಲವರು ಅವರವರ ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ. ಅಂತೆಯೇ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಕೂಡ ಸಿಡ್ನಿ ಏರ್ಪೋರ್ಟ್ ಗೆ (Sidney Airport) ಬಂದಿಳಿದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು. ನಿನ್ನೆ ಬೆಳಗ್ಗೆ ಕಮ್ಮಿನ್ಸ್ (Pat Cummins) ಅವರು ಸಿಡ್ನಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇದನ್ನು Andrew McGlashan of ESPNcricinfo ಅವರು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ “ಪ್ಯಾಟ್ ಕಮ್ಮಿನ್ಸ್ ವಿಶ್ವಕಪ್ ವಿಜೇತ ನಾಯಕನಾಗಿ ತವರಿಗೆ ಮರಳಿದ್ದಾರೆ” ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ
ವಿಡಿಯೋದಲ್ಲೇನಿದೆ..?: ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಸೀಸ್ ತಂಡದ ನಾಯಕ ಕಮ್ಮಿನ್ಸ್ ಅವರು ತಮ್ಮ ಲಗ್ಗೇಜ್ಗಳನ್ನು ಸ್ವತಃ ತಾವೇ ವ್ಹೀಲಿಂಗ್ ಮಾಡಿಕೊಂಡು ಹೋಗುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೆ ಹೀಗೆ ಹೋಗುತ್ತಿದ್ದ ಸಂದರ್ಭದಲ್ಲಿ ಒಬ್ಬರು ಬಂದು ಶೇಕ್ಹ್ಯಾಂಡ್ ಮಾಡಿದ್ದಾರೆ. ಈ ವೇಳೆ ಅಲ್ಲಿ ಕ್ಯಾಮೆರಾದವರು ಬಿಟ್ಟರೆ ಬೇರೆ ಯಾರೂ ಇಲ್ಲ. ಹೀಗಾಗಿ ಟ್ರೋಫಿ ಗೆದ್ದು ಬಂದ ನಾಯಕನನ್ನು ಸ್ವಾಗತಿಸಲು ಯಾರೂ ಬರಲಿಲ್ಲ ಎಂದು ಜನ ಬೇಸರಿಸಿಕೊಂಡಿದ್ದಾರೆ.