ಬೆಂಗಳೂರು:- ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆದ ವಿಚಾರಕ್ಕೆ ಮಾಜಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಕೆ ಶಿವಕುಮಾರ ವಿರುದ್ಧದ ಸಿಬಿಐ ಕೇಸ್ ವಾಪಾಸ್ ಪಡೆಯುವ ಸಂಪುಟ ನಿರ್ಣಯ ವಿಚಾರದಲ್ಲಿ ನಮ್ಮ ಸರ್ಕಾರ ಸಿಬಿಐಗೆ ವಹಿಸಿರುವುದರಲ್ಲಿ ಯಾವುದೇ ರೀತಿ ಕಾನೂನು ಉಲ್ಲಂಘನೆ ಆಗಿಲ್ಲ. ಹಾಗೇನಾದ್ರೂ ಆಗಿದ್ದರೆ ನ್ಯಾಯಾಲಯದಲ್ಲಿ ಇವರು ವಾದ ಮಾಡಬೇಕಿತ್ತಲ್ಲ ಎಂದರು. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವಂತೆ ವರ್ತಿಸುತ್ತಿದೆ. ಈ ವಿಚಾರದಲ್ಲಿ ತಪ್ಪು ಆಗಿದ್ದರೆ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಬೇಕಿತ್ತು. ಆಗ ಏಕೆ ನ್ಯಾಯಾಲಯಕ್ಕೆ ಹೋಗಿಲ್ಲ? ನಾವು ಅಧಿಕಾರದಲ್ಲಿದ್ದಾಗ ಎಲ್ಲವೂ ಕಾನೂನು ಪ್ರಕಾರವಾಗಿ ಕೆಲಸ ಮಾಡಿದ್ದೇವೆ. ನಾವು ಕಾನೂನು ಉಲ್ಲಂಘನೆ ಮಾಡಿದ್ದರೆ ನ್ಯಾಯಾಲಯ ಅದನ್ನು ಐದೇ ನಿಮಿಷದಲ್ಲಿ ತಿರಸ್ಕಾರ ಮಾಡುತ್ತಿತ್ತು. ಈ ಹಿಂದೆಯೂ ಹಲವು ಸಿಬಿಐ ಕೇಸ್ ಗಳನ್ನು ಬೇರೆ ಬೇರೆ ಸರ್ಕಾರಗಳು ಹಿಂದೆ ಪಡೆಯಲು ಪ್ರಯತ್ನಿಸಿ ವಿಫಲವಾಗಿವೆ ಹಾಗಾಗಿ ಈ ವಿಚಾರದಲ್ಲೂ ಸಿಬಿಐ ತನಿಖೆಯೇ ಮುಂದುವರಿಯುತ್ತದೆ.ಸತ್ಯಕ್ಕೆ,…
Author: AIN Author
ಗುಳೇದಗುಡ್ಡ :- ಪ್ರಧಾನಿ ಮೋದಿಗೆ ತಾಯಿ ಕರುಳು ಇಲ್ಲ ಎಂದು ಸಚಿವ ತಿಮ್ಮಾಪೂರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರೈತ ತೊಂದರೆಗೊಳಗಾದಾಗ ದೇಶದ ಪ್ರಧಾನಿ ಅವರ ಪರವಾಗಿರಬೇಕು. ದೇಶದ ಪ್ರಧಾನಿಗೆ ತಾಯಿಕರುಳ ಇರಬೇಕು. ಆದರೆ, ನಮ್ಮ ಪ್ರಧಾನಿ ಚುನಾವಣೆ ರಾಜಕಾರಣದಲ್ಲಿ ಬ್ಯುಜಿಯಾಗಿದ್ದು, ಪಕ್ಷಪಾತ ಧೋರಣೆ ತೋರುತ್ತಿರುವುದು ಬಹಳ ದುದೈವದ ಸಂಗತಿಯಾಗಿದೆ ಎಂದರು. ರಾಜ್ಯ ಬರದಿಂದ ತತ್ತರಿಸಿದೆ. ರಾಜ್ಯ ಸರ್ಕಾರ ಬರ ಪರಿಹಾರ ಕೇಳಲು ಹೋದರೆ ಪ್ರಧಾನಿ ಕೈಗೆ ಸಿಗುತ್ತಿಲ್ಲ. ಸಂಕಷ್ಟ ಕಾಲದಲ್ಲೂ ಅವರು ರಾಜಕೀಯ ಮಾಡುತ್ತಿದ್ದಾರೆ. ಒಬ್ಬ ಪ್ರಧಾನಿಯಾಗಿದ್ದರೂ ಕೂಡ ಕಾರ್ಪೋರೇಷನ್ ಚುನಾವಣೆ ಪ್ರಚಾರದಲ್ಲೂ ಅವರು ಭಾಗವಹಿಸುತ್ತಾರೆ. ಇಂಥ ಪ್ರಧಾನಿಯನ್ನು ನಾವು ನೋಡಿರಲೇ ಇಲ್ಲ. ನಮ್ಮ ಸರ್ಕಾರ ಕೇಂದ್ರದ ಬಳಿ ಭಿಕ್ಷೆ ಕೇಳುತ್ತಿಲ್ಲ. ನಮಗೆ ಬರಬೇಕಾದ ನ್ಯಾಯಯುತ ಪರಿಹಾರವನ್ನು ನಾವು ಕೇಳುತ್ತಿದ್ದೇವೆ. ಅವರು ಹೆಚ್ಚಿನ ಪರಿಹಾರ ಕೊಡುವದಂತೂ ದೂರದ ಮಾತು. ನಮಗೆ ಕೊಡುಬೇಕಾದ ಪರಿಹಾರವನ್ನಾದರೂ ಕೊಡಬೇಕಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಆದರೆ, ಯಾವೊಬ್ಬ ಸಂಸದರು ಪ್ರಧಾನಿ…
ವಿಜಯಪುರ:- ಕರ್ನಾಟಕದ ಹಿಂದೂಗಳು ಒಗ್ಗಟ್ಟಾಗುವಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದರು. ಈ ಸಂಬಂಧ ವಿಜಯಪುರದಲ್ಲಿ ಮಾತನಾಡಿದ ಅವರು, ವಿಜಯಪುರದಲ್ಲಿ ಹಿಂದೂಗಳ ಒಗ್ಗಟ್ಟಾಗಿದ್ದಾರೆ. ಅದೇ ತರ ಸಮಸ್ತ ಕರ್ನಾಟಕದ ಹಿಂದೂಗಳು ಒಗ್ಗಟ್ಟಾಗುವಂತೆ ಕರೆ ನೀಡಿದರು. ಪಾಕಿಸ್ತಾನ ಭಾರತದ ಮೇಲೆ ಯುದ್ಧ ಮಾಡಿದ್ರೆ ಪಾಕಿಸ್ತಾನಕ್ಕೆ ಬೆಂಬಲ ನೀಡುವಂತೆ ಓವೈಸಿ ಭಾಷಣ ಮಾಡ್ತಾರೆ. 15 ನಿಮಿಷ ಪೊಲೀಸರು ಸುಮ್ನಿದ್ರೆ ಹಿಂದೂಗಳನ್ನು ಖತಮ್ ಮಾಡುತ್ತೇವೆ ಎಂದು ಭಾಷಣ ಮಾಡಿದ್ದಾರೆ. ಮುಂದೆ ಸಂದರ್ಭ ಬಂದರೆ ಅದರಂತೆ ಮಾಡ್ತಾರೆ. ಅದಕ್ಕಾಗಿ ಸಮಸ್ತ ಹಿಂದೂಗಳು ಒಗ್ಗಟ್ಟಾಗಿರಬೇಕು. ವಿಜಯಪುರದಲ್ಲಿ ಹಿಂದೂಗಳು ಒಗ್ಗಟ್ಟಾಗಿದ್ದಾರೆ. ಅದರಂತೆ ಕರ್ನಾಟಕದಲ್ಲೂ ಒಗ್ಗಟ್ಟಾಗುವಂತೆ ಕರೆ ನೀಡಿದರು. ಇನ್ನು ಕಾಂಗ್ರೆಸ್ ಗ್ಯಾರಂಟಿ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಸ್ಕೀಂಗಳು ಬೋಗಸ್ ಸ್ಕೀಂಗಳು ಎಂದು ಲೇವಡಿ ಮಾಡಿದರು ಮುಂದುವರಿದು, ಪ್ರತಿ ಕುಟುಂಬಕ್ಕೂ 200 ಯುನಿಟ್ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದ್ದ್ರು. ಆದರೆ ಇದರಿಂದ ಜನತೆಗೆ ಅನುಕೂಲ ಆಗುವ ಬದಲು ಸಮಸ್ಯೆಯೇ ಆಗಿದೆ. ಚುನಾವಣೆಗೆ ಮೊದಲು…
ಬೆಂಗಳೂರು:- ನ.29ರಿಂದ ಡಿ.1ರವರೆಗೆ ಬೆಂಗಳೂರು ಟೆಕ್ ಸಮಿಟ್ ನಡೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅರಮನೆ ಮೈದಾನದಲ್ಲಿ ನವೆಂಬರ್ 29ರಿಂದ ಡಿಸೆಂಬರ್ 1ರ ವರೆಗೆ ಬೆಂಗಳೂರು ಟೆಕ್ ಸಮಿಟ್ ನಡೆಯಲಿದೆ ಎಂದರು. ಬಂಡವಾಳ ಹೂಡಿಕೆ ಹಾಗೂ ಆರ್ಥಿಕತೆ ಪ್ರಗತಿ ಹಾಗೂ ಉದ್ಯೋಗ ಸೃಷ್ಟಿಗೆ ಸಮ್ಮಿಟ್ ನಿಂದ ಉಪಯೋಗವಾಗಲಿದೆ. ಟೆಕ್ ಸಮ್ಮಿಟ್ ನ 26ನೇ ಆವೃತಿ ಇಲ್ಲಿ ಆಯೋಜನೆ ಮಾಡಿದ್ದು, ಮುಂದಿನ ಮೂರು ವರ್ಷಗಳಿಗೂ ಇದೇ ಥೀಮ್ ಇರಲಿದೆ. ಅದರ ದಿನಾಂಕಗಳನ್ನೂ ನಿಗದಿ ಮಾಡಲಾಗಿದೆ. ಅಂತರಾಷ್ಟ್ರೀಯ ಪಾಲುದಾರಿಕೆ ಸಲುವಾಗಿ ಈ ಪ್ರಯತ್ನ ಮಾಡಲಾಗಿದೆ. ಇನ್ನೋವೇಷನ್ ಇಂಡಿಯಾ ಇಂಪ್ಯಾಕ್ಟ್ ಫಾರ್ ವರ್ಲ್ಡ್ , ಬ್ರೇಕಿಂಗ್ ಬೌಂಡ್ರೀಸ್, ಅನ್ನೋದು ನಮ್ಮ ಥೀಮ್ ಆಗಿದೆ ಎಂದಿದ್ದಾರೆ.
ಬೆಂಗಳೂರು: ಇಲ್ಲಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (Hindustan Aeronautics Limited) ಶನಿವಾರ ಬೆಳಗ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ “(Narendra Modi) ತೇಜಸ್ ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. HALನಲ್ಲಿರುವ ರಕ್ಷಣಾ ವಲಯದ ಉತ್ಪಾದನಾ ಘಟಕ ಪರಿಶೀಲನೆ ನಡೆಸಿದ ಮೋದಿ ತೇಜಸ್ ಫೈಟರ್ ಜೆಟ್‌ಗಳ (Tejas Jets) ಸೌಲಭ್ಯ ಮೇಲ್ವಿಚಾರಣೆ ನಡೆಸಿದರು. ಬಳಿಕ ತೇಜಸ್ ಯುದ್ಧ ವಿಮಾನದ ಪರೀಕ್ಷಾರ್ಥವಾಗಿ ಹೆಚ್‌ಎಎಲ್‌ನಲ್ಲಿ ಒಂದು ಸುತ್ತು ಹಾರಾಟ ನಡೆಸಿ ಗಮನ ಸೆಳೆದರು. ಈ ಸಂತಸವನ್ನು ಸೋಶಿಯಲ್ ಮೀಡಿಯಾ Xನಲ್ಲಿ ಹಂಚಿಕೊಂಡಿರುವ ಅವರು, ತೇಜಸ್‌ನಲ್ಲಿ ಒಂದು ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವವು ವಿಸ್ಮಯಕಾರಿಯಾಗಿ ಪುಷ್ಟೀಕರಿಸಿದೆ ಇದು ನಮ್ಮ ದೇಶದಲ್ಲಿ ಸ್ಥಳೀಯ ರಕ್ಷಣಾ ವಲಯಗಳ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ಗಣನೀಯವಾಗಿ ವಿಶ್ವಾಸ ಹೆಚ್ಚಿಸಿತು. ಜೊತೆಗೆ ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆಯೂ ಹೆಮ್ಮೆ ಮತ್ತು ಆಶಾವಾದವನ್ನು ಹೆಚ್ಚಿಸಿತು ಎಂದು ಹೇಳಿಕೊಂಡಿದ್ದಾರೆ
ಬೆಂಗಳೂರಿನಲ್ಲಿ ಕಂಬಳ ಮಾಡುವುದು ನಮ್ಮ ಕನಸು ಇಂದು ನನಸಾಗ್ತಿದೆ. ಬೆಂಗಳೂರು ಕಂಬಳ ನಮ್ಮ ಕಂಬಳ ಅಲ್ಲ, ಇದು ನಿಮ್ಮ ಕಂಬಳ ಎಂದು ಬೆಂಗಳೂರಿನಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ರೈ ಹೇಳಿದರು. ಕೋಣಗಳನ್ನ ಬೆಂಗಳೂರಿಗೆ ತರುವಾಗ ಹೆಚ್ಚಿನ ಜನರು ಸಹಕರಿಸಿದ್ದಾರೆ. ಕಾಂತಾರ ಸಿನಿಮಾ ಮೂಲಕ ಕಂಬಳ ದೇಶದೆಲ್ಲೆಡೆ ಪರಿಚಯವಾಗಿದೆ. ಇನ್ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಬಳವನ್ನ ಗುರುತಿಸುತ್ತೇವೆ. ವಿವಿಧ ಎಲ್ಲಾ ಕ್ರೀಡೆಗಳಂತೆ ಕಂಬಳ ಕೂಡಾ ಬೆಳೆಯುತ್ತೆ ಎಂದರು. https://ainlivenews.com/laser-therapy-soukhy-robotic-ortho-care/ ಕಂಬಳಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಕರಾವಳಿ ಭಾಗದ ಸಾಕಷ್ಟು ಮಂದಿ ಕಂಬಳಾಭಿಮಾನಿಗಳು ಭಾಗಿಯಾಗಿದ್ದಾರೆ. ಅಭಿಮಾನಿಗಳು ಕಂಬಳ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹಿಸುವಂತೆ ಒತ್ತಾಯಿಸಿದ್ದಾರೆ. ಕಂಬಳದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ: ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ತಾಲೂಕಿನ ಗ್ರೀನ್ ವ್ಯಾಲಿ ಬಳಿ ನಡೆದಿದೆ. ಯರ್ರಗುಂಟೆ ನಿವಾಸಿಗಳಾದ ಶಿವು, ಆನಂದ್ ಘಟನೆಯಲ್ಲಿ ಗಾಯಗೊಂಡವರು.ಕಾರನ್ನು ಓವರ್ ಟೇಕ್ ಮಾಡುವ ಬರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ…
ಬೆಂಗಳೂರು: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ನಡೆದ ಕಾದಾಟದಲ್ಲಿ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್ ಅವರ ಅಂತಿಮ ಯಾತ್ರೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮೆರವಣಿಗೆ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು, ವೀರಯೋಧನಿಗೆ ಭಾವುಕ ವಿದಾಯ ಹೇಳಿದ್ದಾರೆ. https://ainlivenews.com/laser-therapy-soukhy-robotic-ortho-care/ ಶನಿವಾರ ಬೆಳಗ್ಗೆ ಜಿಗಣಿ ನಂದನವನ ಬಡಾವಣೆಯ ಸ್ವಗೃಹದಲ್ಲಿ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಜನರು, ಗಣ್ಯರು, ಬಂಧು-ಬಾಂಧವರು ಆಗಮಿಸಿ ವೀರಯೋಧನ ಅಂತಿಮ ದರ್ಶನ ಪಡೆದರು. ಈಗ ಪ್ರಾಂಜಲ್ ಅಂತಿಮ ಯಾತ್ರೆ ನಡೆಯುತ್ತಿದೆ. ಜಿಗಣಿ ಓಟಿಸಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ನೈಸ್ ರೋಡ್, ಕೋನಪ್ಪನ ಅಗ್ರಹಾರ ಸರ್ಕಲ್, ಕೂಡ್ಲುಗೇಟ್ ಮೂಲಕ ಹುತಾತ್ಮ ಯೋಧನ ಅಂತಿಮ ಯಾತ್ರೆ ಸಾಗಿದೆ. ಮಾರ್ಗದುದ್ದಕ್ಕೂ ನಿಂತಿದ್ದ ಜನರು ತ್ರಿವರ್ಣ ಧ್ವಜ ಹಿಡಿದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಈ ದೃಶ್ಯವು ನೋಡುಗರ ಮನಕಲಕುವಂತಿದೆ.
ಕಲಬುರಗಿ: ಡಿಸಿಎಂ ಡಿಕೆಶಿ ಕೇಸ್ ವಿಚಾರದಲ್ಲಿ ಬಿಜೆಪಿ ಯಾವತ್ತೂ ಕಾನೂನು ಉಲ್ಲಂಘಿಸಿಲ್ಲ.ಕಾನೂನು ಜೊತೆಗೇನೆ ಪ್ರಕರಣವನ್ನ ಸಿಬಿಐ ಗೆ ಒಪ್ಪಿಸಿದ್ದೇವೆ ಅಂತ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ. https://ainlivenews.com/laser-therapy-soukhy-robotic-ortho-care/ ಕಲಬುರಗಿಯಲ್ಲಿಂದು ಮಾತನಾಡಿದ ಅಶ್ವಥ್ ನಾರಾಯಣ್ ನಾವು ಕಾನೂನು ಉಲ್ಲಂಘಿಸಿದ್ರೆ ಇಷ್ಟೊತ್ತಿಗೆ ಕೋರ್ಟಲ್ಲಿ ರಿಜೆಕ್ಟ್ ಆಗ್ತಿತ್ತು.ಆದ್ರೆ ಕಳ್ಳನಿಗೊಂದು ಪಿಳ್ಳೆನೆವ ಅನ್ನೋತರ ಕಾಂಗ್ರೆಸ್ ತರಾತುರಿ ಸಂಪುಟ ಸಭೆ ನಡೆಸಿ ನಿರ್ಣಯ ಕೈಗೊಂಡಿದೆ.ಇಷ್ಟುದಿನ ಬಿಟ್ಟು ಈಗ್ಯಾಕೆ ನಿರ್ಧಾರ ಮಾಡಿದ್ರು. ಅಂತಿಮವಾಗಿ ಎಲ್ಲವೂ ಕೋರ್ಟಲ್ಲಿ ತೀರ್ಮಾನವಾಗುತ್ತೆ ಅಂತ ಹೇಳಿದ್ರು.
ಹುಬ್ಬಳ್ಳಿ : ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಅತೃಪ್ತಿ ಏನೇ ಇರಲಿ, ಬಹಿರಂಗ ಚರ್ಚೆ ಸರಿಯಲ್ಲ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಮಾಜಿ ಸಚಿವ ಸೋಮಣ್ಣ ಬಂಡಾಯದ ಕುರಿತು ಜೋಶಿ ಪ್ರತಿಕ್ರಿಯೆ ಸಹ ಹೇಳಿಕೆ ನೀಡಿದ ಅವರು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ನೇಮಕದ ನಂತರ ಸೋಮಣ್ಣ ಅತೃಪ್ತಿ ವ್ಯಕ್ತಪಡಿಸಿದ ಕುರಿತು ಹೇಳಿಕೆ ನೀಡಿದ ಅವರು ಮಾಜಿ ಸಚಿವ ಸೋಮಣ್ಣ ಹೈಕಮಾಂಡ್ ಗೆ ದೂರು ನೀಡುತ್ತಿರುವ ಕುರಿತು ಮಾಹಿತಿ ಇಲ್ಲ ನಿಮ್ಮ ಕುಂದು ಕೊರತೆಗಳು ಏನೇ ಇರಲಿ https://ainlivenews.com/laser-therapy-soukhy-robotic-ortho-care/ ಅದನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ಗಮನಕ್ಕೆ ತರಲಿ ಅದನ್ನು ಬಿಟ್ಟು ಮಾಧ್ಯಮ ಮುಂದೆ ಮಾತನಾಡುವುದು ಸರಿಯಲ್ಲ ಈ ಕುರಿತು ಬೇಕಾದರೆಇತರ ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಲಿ ಮಾಧ್ಯಮದ ಮೂಲಕ ಇದನ್ನು ಚರ್ಚಿಸುವುದು ಒಳ್ಳೆಯದಲ್ಲ ಸೋಮಣ್ಣ ಪ್ರಮುಖ ನಾಯಕರು ವೈಯಕ್ತಿಕವಾಗಿಯ…