ಬೆಂಗಳೂರು:- ನ.29ರಿಂದ ಡಿ.1ರವರೆಗೆ ಬೆಂಗಳೂರು ಟೆಕ್ ಸಮಿಟ್ ನಡೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅರಮನೆ ಮೈದಾನದಲ್ಲಿ ನವೆಂಬರ್ 29ರಿಂದ ಡಿಸೆಂಬರ್ 1ರ ವರೆಗೆ ಬೆಂಗಳೂರು ಟೆಕ್ ಸಮಿಟ್ ನಡೆಯಲಿದೆ ಎಂದರು. ಬಂಡವಾಳ ಹೂಡಿಕೆ ಹಾಗೂ ಆರ್ಥಿಕತೆ ಪ್ರಗತಿ ಹಾಗೂ ಉದ್ಯೋಗ ಸೃಷ್ಟಿಗೆ ಸಮ್ಮಿಟ್ ನಿಂದ ಉಪಯೋಗವಾಗಲಿದೆ.
ಟೆಕ್ ಸಮ್ಮಿಟ್ ನ 26ನೇ ಆವೃತಿ ಇಲ್ಲಿ ಆಯೋಜನೆ ಮಾಡಿದ್ದು, ಮುಂದಿನ ಮೂರು ವರ್ಷಗಳಿಗೂ ಇದೇ ಥೀಮ್ ಇರಲಿದೆ. ಅದರ ದಿನಾಂಕಗಳನ್ನೂ ನಿಗದಿ ಮಾಡಲಾಗಿದೆ. ಅಂತರಾಷ್ಟ್ರೀಯ ಪಾಲುದಾರಿಕೆ ಸಲುವಾಗಿ ಈ ಪ್ರಯತ್ನ ಮಾಡಲಾಗಿದೆ. ಇನ್ನೋವೇಷನ್ ಇಂಡಿಯಾ ಇಂಪ್ಯಾಕ್ಟ್ ಫಾರ್ ವರ್ಲ್ಡ್ , ಬ್ರೇಕಿಂಗ್ ಬೌಂಡ್ರೀಸ್, ಅನ್ನೋದು ನಮ್ಮ ಥೀಮ್ ಆಗಿದೆ ಎಂದಿದ್ದಾರೆ.