ಬೆಂಗಳೂರು: ಇಲ್ಲಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ಗೆ (Hindustan Aeronautics Limited) ಶನಿವಾರ ಬೆಳಗ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ “(Narendra Modi) ತೇಜಸ್ ಫೈಟರ್ ಜೆಟ್ನಲ್ಲಿ ಹಾರಾಟ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
HALನಲ್ಲಿರುವ ರಕ್ಷಣಾ ವಲಯದ ಉತ್ಪಾದನಾ ಘಟಕ ಪರಿಶೀಲನೆ ನಡೆಸಿದ ಮೋದಿ ತೇಜಸ್ ಫೈಟರ್ ಜೆಟ್ಗಳ (Tejas Jets) ಸೌಲಭ್ಯ ಮೇಲ್ವಿಚಾರಣೆ ನಡೆಸಿದರು. ಬಳಿಕ ತೇಜಸ್ ಯುದ್ಧ ವಿಮಾನದ ಪರೀಕ್ಷಾರ್ಥವಾಗಿ ಹೆಚ್ಎಎಲ್ನಲ್ಲಿ ಒಂದು ಸುತ್ತು ಹಾರಾಟ ನಡೆಸಿ ಗಮನ ಸೆಳೆದರು.
ಈ ಸಂತಸವನ್ನು ಸೋಶಿಯಲ್ ಮೀಡಿಯಾ Xನಲ್ಲಿ ಹಂಚಿಕೊಂಡಿರುವ ಅವರು, ತೇಜಸ್ನಲ್ಲಿ ಒಂದು ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಈ ಅನುಭವವು ವಿಸ್ಮಯಕಾರಿಯಾಗಿ ಪುಷ್ಟೀಕರಿಸಿದೆ ಇದು ನಮ್ಮ ದೇಶದಲ್ಲಿ ಸ್ಥಳೀಯ ರಕ್ಷಣಾ ವಲಯಗಳ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ಗಣನೀಯವಾಗಿ ವಿಶ್ವಾಸ ಹೆಚ್ಚಿಸಿತು. ಜೊತೆಗೆ ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆಯೂ ಹೆಮ್ಮೆ ಮತ್ತು ಆಶಾವಾದವನ್ನು ಹೆಚ್ಚಿಸಿತು ಎಂದು ಹೇಳಿಕೊಂಡಿದ್ದಾರೆ