ಕಲಬುರ್ಗಿ:- ಜೈ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ನಡೆಯಿತು. ಜೈಕರಾವೇ ಮುಖ್ಯಸ್ಥ ಸಚಿನ್ ಫರ್ತಾಬಾದ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಹಾಗು ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕಲ್ಯಾಣ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಇದೇವೇಳೆ ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಪ್ರಸಿದ್ಧಿಯಾಗಿರುವ ವಿಜಯಪುರದ ರವಿ ಕೋರೆ ಸಾಹಸಸಿಂಹನ ನಟನೆ ಮಾಡಿ ತೋರಿಸಿದ್ದು ಸೂಪರ್ ಆಗಿತ್ತು..ವಿವಿಧ ಮಠಾಧೀಶರು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು..ಮಾಲಾಶ್ರೀ ತಳಕೇರಿ ಹಾಗು ಚನ್ನು ನಾಲವಾರ ಸಂಗೀತ ಸಂಜೆ ನಡೆಸಿಕೊಟ್ರು..
Author: AIN Author
ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಸುದೀಪ್ ಅವರಿಂದ ಪ್ರತಿವಾರದಂತೆ ಈ ವಾರವೂ ಕೂಡ ಹೆಚ್ಚಿನ ಕ್ಲಾಸ್ ಪಡೆದುಕೊಂಡಿದ್ದಾರೆ. ವೀಕ್ಷಕರ ಪ್ರಕಾರ ಯಾರು ಹೇಗೆಲ್ಲಾ ಕಾಣಿಸುತ್ತಿದ್ದಾರೆ ಹೊರಗಡೆ ಎಂಬುದನ್ನು ಆಯಾ ಸ್ಪರ್ಧಿಗಳಿಗೆ ಸುದೀಪ್ ಸರಳವಾಗಿ ತಿಳಿ ಹೇಳಿದ್ದಾರೆ. ಈ ಮಧ್ಯೆ ಮೈಕಲ್ಗೆ ಕಿಚ್ಚನ ಚಪ್ಪಾಳೆ ಕೊಟ್ಟ ಕಿಚ್ಚ, ಅವರ ಪ್ರಯತ್ನವನ್ನು ಮೆಚ್ಚಿ ಮಾತನಾಡಿದ್ದಾರೆ. ಶನಿವಾರದ ಕಿಚ್ಚನ ಪಂಚಾಯಿತಿಗಾಗಿ ಈ ಬಾರಿ ಹೆಚ್ಚಿನ ಕಾತರದಿಂದ ಕಾದಿದ್ದು ಮನೆಯ ಸದಸ್ಯರಿಗಿಂತ ವೀಕ್ಷಕರು ಎಂಬುದರಲ್ಲಿ ಅನುಮಾನವೇ ಇಲ್ಲ. ಕಾರಣ ಈ ವಾರದ ಆರಂಭದಿಂದಲೂ ಸ್ಪರ್ಧಿಗಳ ಮಧ್ಯೆ ಭಾರೀ ಜಟಾಪಟಿ, ಮಾತಿನ ಚಕಮಕಿ, ಹೊಡೆದಾಟ ಮಾಡಿಕೊಳ್ಳುವಷ್ಟು ಮಿತಿ ಮೀರಿದ ವರ್ತನೆ ವೀಕ್ಷಕರಲ್ಲಿ ಭಾರೀ ಗೊಂದಲ ಮೂಡಿಸಿತ್ತು. ಈ ವಿಚಾರಗಳ ಕುರಿತು ಯಾರದು ತಪ್ಪು? ಯಾರದು ಸರಿ? ಎಂಬ ಸಂಗತಿಗಳನ್ನು ಸುದೀಪ್ ಹೇಗೆ ತಿಳಿಸಲಿದ್ದಾರೆ ಎಂಬ ಕುತೂಹಲ ತೀವ್ರವಾಗಿತ್ತು. ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್ ಎಂದಿನಂತೆ ಈ ವಾರವೂ ಖಡಕ್ ಆಗಿಯೇ ಇತ್ತು. ಸ್ಪರ್ಧಿಗಳಿಗೆ ಕೆಲವು ಸಂಗತಿಗಳನ್ನು…
ಕಾಂತಾರ ಸಿನಿಮಾ ಟೀಮ್ನಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಸಿನಿಮಾದ ಮುಹೂರ್ತದ ದಿನದಂದೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ. ರಿಷಬ್ ಶೆಟ್ಟಿ ಫಸ್ಟ್ ಲುಕ್ ಗಾಗಿ ಮಾಡಿದ ಪೋಸ್ಟರ್ನಲ್ಲಿ ಇದು ಬರಿ ಬೆಳಕಲ್ಲ, ದರ್ಶನ ಎಂದು ಟ್ಯಾಗ್ ಲೈನ್ ಕೊಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಸಿನಿಮಾ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿವೆ. ಸಿನಿಮಾ ಟೀಮ್ ಅಧಿಕೃತವಾಗಿ ಯಾವುದೇ ಮಾಹಿತಿ ಸಿಗದೇ ಇದ್ದರೂ, ಬಲ್ಲ ಮೂಲಗಳು ಮಾಹಿತಿಯನ್ನು ಹೊರ ಹಾಕುತ್ತಲೇ ಇವೆ. ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಹಿಟ್ ಆದ ನಂತರ ಹಲವು ಭಾಷೆಗಳಲ್ಲಿ ಅದನ್ನು ಡಬ್ ಮಾಡಲಾಯಿತು. ಆದರೆ, ಕಾಂತಾರ 2 ಬರೋಬ್ಬರಿ ಏಳು ಭಾಷೆಗಳಲ್ಲಿ ನಿರ್ಮಾಣವಾಗಲಿದೆಯಂತೆ. ಹಾಗಾಗಿ ಅದ್ಧೂರಿ ಮೇಕಿಂಗ್ ಕೂಡ ಇರಲಿದೆ ಎಂದು ಚಿತ್ರ ತಂಡದ ಮೂಲಗಳು ತಿಳಿಸಿದೆ.
ಬಾಗಲಕೋಟೆ:- ಬಿಜೆಪಿಯಲ್ಲಿ ಬಿಎಸ್‌ವೈಗೆ ಆದ ಸ್ಥಿತಿ ವಿಜಯೇಂದ್ರನಿಗೂ ಬರಲಿದೆ ಎಂದು ಸಚಿವ ತಿಮ್ಮಾಪುರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯಲ್ಲಿ ಸಾಕಷ್ಟು ನಾಯಕರಿಗೆ ಅನ್ಯಾಯಮಾಡಿದ್ದು, ನಮ್ಮ ಯಡಿಯೂರಪ್ಪ ಸಾಹೇಬರನ್ನು ಈ ಮುಂಚೆ ಯಾವ ರೀತಿಯಾಗಿ ಪಕ್ಷವು ನಡೆಸಿಕೊಂಡಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಪರಿಸ್ಥಿತಿ ಅವರ ಮಗನಿಗೂ ಬರಲಿದೆ ಎಂದು ಭವಿಷ್ಯ ನುಡಿದರು. ಲಿಂಗಾಯತರು, ದಲಿತರು ಎಲ್ಲ ಸರ್ವ ಜನಾಂಗದವರನ್ನು ತುಳಿಯುವ ವ್ಯವಸ್ಥೆ ಬಿಜೆಪಿಯಲ್ಲಿದೆ. ಯಾರನ್ನೂ ಸಹ ಅವರು ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ಎಲ್ಲ ಮುಖಂಡರ ಪರಿಸ್ಥಿತಿಯೂ ಬಿಜೆಪಿಯಲ್ಲಿ ಹಾಗೆಯೇ ಇದೆ. ಇತ್ತೀಚೆಗೆ ವಿಧಾನಸಭೆ ಚುನಾವಣೆಯಲ್ಲಿ ವಿ.ಸೋಮಣ್ಣ ಅವರಿಗೆ ಬೇಕೆಂದಲೇ 2 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ, ಕ್ಷೇತ್ರ ಬದಲಿಸಿ ಅವರನ್ನು ಸೋಲಿಸಲಾಗಿದೆ. ಇಂಥ ಪಕ್ಷದಲ್ಲಿ ಇರುವುದು ಎಲ್ಲ ನಾಯಕರಿಗೂ ಬೇಡವಾಗಿದೆ ಎಂದರು. ಹಿಂದು-ಮುಸ್ಲಿಂ ಗಲಾಟೆ ಮಾಡಿಸುವುದೇ ಬಿಜೆಪಿಯವರ ಮುಖ್ಯ ಕೆಲಸವಾಗಿದೆ. ತಮ್ಮ ಸ್ವಾರ್ಥ ಸಾಧನೆಗೆ ಬಿಜೆಪಿ ಹೈಕಮಾಂಡ್ ಮುಖಂಡರು ಎಲ್ಲರನ್ನೂ ಬಲಿಕೊಡುತ್ತಿದ್ದಾರೆ. ಅಧಿಕಾರದ ಲಾಲಸೆಗೆ ಏನು ಬೇಕಾದರೂ ಮಾಡಲು ಅವರು…
ಕಳೆದ ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಮತ್ತು ಫೋನ್ ನಂಬರ್ಗಳನ್ನು ಡೀ ಆ್ಯಕ್ಟಿವೇಟ್ ಮಾಡುವ ಸಂಬಂಧ ಎನ್ಪಿಸಿಐ (NPCI guidelines) ಮಾರ್ಗಸೂಚಿ ಹೊರಡಿಸಿದೆ. ಟಿಪಿಎಪಿ ಅಥವಾ ಪಿಎಸ್ಪಿ ಅಪ್ಲಿಕೇಶನ್ಗಳಿಂದ ಹಣಕಾಸು ವಹಿವಾಟನ್ನಾಗಲೀ ಅಥವಾ ಬ್ಯಾಲನ್ಸ್ ಎನ್ಕ್ವೈರಿ ಇತ್ಯಾದಿ ಹಣಕಾಸೇತರ ವಹಿವಾಟನ್ನಾಗಲೀ (Non Banking Transaction) ಮಾಡದೇ ಇದ್ದರೆ ಡೀ ಆಕ್ಟಿವೇಟ್ ಆಗುವ ಸಾಧ್ಯತೆ ಇರುತ್ತದೆ ಟಿಪಿಎಪಿ, ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ಗಳೆಂದರೆ ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿಯವರು. ಇನ್ನು, ಪಿಎಸ್ಪಿ ಎಂದರೆ ಪೇಮೆಂಟ್ ಸರ್ವಿಸ್ ಪ್ರೊವೈಡರ್ಗಳಾಗಿವೆ. ಪೇಮೆಂಟ್ ಒದಗಿಸುವ ಬ್ಯಾಂಕ್ ಇತ್ಯಾದಿಗಳು ಪಿಎಸ್ಪಿಗಳಾಗಿವೆ. ಎನ್ಪಿಸಿಐನ ಕೆಲ ಮಾರ್ಗಸೂಚಿಗಳು ಇವು ಒಂದು ವರ್ಷದಿಂದ ಯಾವ ವಹಿವಾಟು ನಡೆಸದ ಯುಪಿಐ ಐಡಿಗಳನ್ನು ಎಲ್ಲಾ ಟಿಪಿಎಪಿ ಮತ್ತು ಪಿಎಸ್ಪಿಗಳು ಗುರುತಿಸಬೇಕು. ಯಾವುದೇ ಹಣ ವರ್ಗಾವಣೆ ಆಗದಂತೆ ಆ ಯುಪಿಐ ಐಡಿ ಮತ್ತು ಯುಪಿಐ ನಂಬರ್ಗಳನ್ನು ಡಿಸೇಬಲ್ ಮಾಡಬೇಕು. ಈ ಫೋನ್ ನಂಬರ್ ಅನ್ನು ಯುಪಿಐ…
ಬೆಂಗಳೂರು:- ಹೈಗ್ರೌಂಡ್ಸ್ ಠಾಣಾ ಪೊಲೀಸರು ಕಾರ್ಯಚರಣೆ ನಡೆಸಿ ಸಿಗ್ನಲ್ಗಳ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಸೈಫ್ ಪಾಷಾ ಮತ್ತು ಸಲ್ಮಾನ್ ಖಾನ್ ಬಂಧಿತರು. ಆರೋಪಿಗಳಿಂದಒಟ್ಟು ಐದು ಲಕ್ಷ ಮೌಲ್ಯದ 80 ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಆರೇಳು ತಿಂಗಳಿಂದ ನಗರದ ಹಲವು ಜಂಕ್ಷನ್ಗಳಲ್ಲಿ ಸಿಗ್ನಲ್ಗಳಿಗೆ ಅಳವಡಿಸಿದ್ದ ಬ್ಯಾಟರಿಗಳು ಕಳ್ಳತನವಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಠಾಣಾ ಪೊಲೀಸರು, ಬರೋಬ್ಬರಿ 120 ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಚಲನವಲನಗಳು ಪತ್ತೆಯಾಗಿವೆ. ಅದರಂತೆ, ಆರೋಪಿಗಳ ಗುರುತು ಪತ್ತೆಹಚ್ಚಿದ ಹೈಗ್ರೌಂಡ್ಸ್ ಪೊಲೀಸರು, ಆರೋಪಿಗಳಾದ ಸೈಫ್ ಪಾಷಾ ಮತ್ತು ಸಲ್ಮಾನ್ ಖಾನ್ ಎಂಬವರನ್ನು ಬಂಧಿಸಿ ಕಳ್ಳತನ ಮಾಡಿದ್ದ 80 ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾ
ಚನ್ನಪಟ್ಟಣ: ವರ್ಕ್ ಫ್ರಂ ಹೋಂ ಹೆಸರಿನಲ್ಲಿ ಯುವತಿಯೊಬ್ಬಳಿಗೆ 5.43 ಲಕ್ಷ ರು. ವಂಚಿಸಿರುವ ಘಟನೆ ತಾಲೂಕಿನ ದೇವರಹೊಸ ಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಡಿ.ಸಿ.ಲಾವಣ್ಯ(28) ಹಣ ಕಳೆದುಕೊಂಡವರು. ಎಂಜಿನಿಯರಿಂಗ್ ಪೂರೈಸಿದ್ದ ಯುವತಿಗೆ 4 ದಿನಗಳ ಹಿಂದೆ ವಾಟ್ಸಾಪ್‌ನಲ್ಲಿ ವರ್ಕ್ ಫ್ರಂ ಹೋಂ ಅವಕಾಶವಿದೆ. ಕೆಲವು ಟಾಸ್ಕ್‌ಗಳನ್ನು ಪೂರೈಸಿದರೆ ಹಣ ಬರುತ್ತದೆ ಎಂಬ ಸಂದೇಶ ಬಂದಿದೆ. ಇದನ್ನು ನಂಬಿದ ಯುವತಿ ಸಂದೇಶದಲ್ಲಿ ಸೂಚಿಸಿದ್ದ ವೆಬ್‌ಸೈಟ್‌ಗೆ ಲಾಗಿನ್ ಆಗಿದ್ದಾಳೆ. https://ainlivenews.com/shooting-in-metro-also-from-now-on-bmrcl-green-signal/ ಆಗ ಯುವತಿಗೆ ಕೆಲವು ಟಾಸ್ಕ್‌ಗಳನ್ನು ಖರೀದಿಸುವಂತೆ ಸೂಚಿಸಿದ್ದು, ವಂಚಕರು ಸೂಚಿಸಿದ ವಿವಿಧ ಯುಪಿಐ ಐಡಿಗೆ ಒಂದು ಸಾವಿರ, 5 ಸಾವಿರ, 7 ಸಾವಿರದಂತೆ ಲಾವಣ್ಯ ಮೂರು ಬಾರಿ ಹಣ ವರ್ಗಾವಣೆ ಮಾಡಿದ್ದಾಳೆ. ಆ ನಂತರ ತಮ್ಮ ಹಣವನ್ನು ಮರಳಿ ಪಡೆಯಲು ಮತ್ತೆ ಹಣ ಹೂಡಿಕೆ ಮಾಡುವಂತೆ ಸೂಚಿಸಿದ್ದು, ಅದರಂತೆ ಯುವತಿ ಇನ್ನೊಂದು ಬ್ಯಾಂಕ್ ಖಾತೆಯಿಂದ ಮತ್ತೆ 68 ಸಾವಿರ, 28 ಸಾವಿರ, 1.36 ಲಕ್ಷ, 2.98 ಲಕ್ಷ ಹಣವನ್ನು ವಂಚಕರು ಸೂಚಿಸಿದಂತೆ ವರ್ಗಾಯಿಸಿದ್ದು, ಒಟ್ಟು…
ಕೊಲ್ಕತ್ತಾ: ಅಮ್ಮ ಮೊಬೈಲ್ ಫೋನ್ ಕಿತ್ತುಕೊಂಡಳು ಎಂದು ಕೋಪಗೊಂಡು 11ನೇ ತರಗತಿ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ಇದೇ ವಯಸ್ಸಿನ ಹುಡುಗಿಯೊಬ್ಬಳು ಓದುವ ಕಡೆ ಗಮನಹರಿಸುತ್ತಿಲ್ಲ ಅಂತ ಪೋಷಕರು ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಜ್ಯೋತಿ ಶಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೊಬೈಲ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾಳೆ ಅಂತ ಈಕೆಗೆ ತಾಯಿ ಬೈದಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. https://ainlivenews.com/miley-is-the-new-president-of-argentina-who-talks-to-a-dead-dog/ ಏನಿದು ಪ್ರಕರಣ?: ಜ್ಯೋತಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಪೋಷಕರು ಫೋನ್ ಕೊಡಿಸಿದ್ದರು. ಆದರೆ ಜ್ಯೋತಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಳು. ಇದರಿಂದ ಆತಂಕಗೊಂಡ ಜ್ಯೋತಿ ತಾಯಿ, ಮಗಳು ಕಲಿಯುವ ಕಡೆ ಗಮನ ಕೊಡುವ ಬದಲು ಫೆಸ್‍ಬುಕ್ ಗೆ ಅಂಟಿಕೊಂಡಿದ್ದಾಳೆ ಅಂತ ಕಳೆದ ಮೂರು ದಿನಗಳ ಹಿಂದೆ ಫೋನ್ ಕಿತ್ತುಕೊಂಡು ಬೈದಿದ್ದರು. ಆದರೂ ಈಕೆ ಓದಿನ ಕಡೆ ನಿರ್ಲಕ್ಷ್ಯ ತೋರಿದ್ದಳು. ಮತ್ತೆ ತಾಯಿ ಫೋನ್ ಕಿತ್ತುಕೊಂಡು ಬೈದಿದ್ದಾರೆ. ನಂತರ ಈಕೆ ರೂಮಿಗೆ ಹೋಗಿ ಫ್ಯಾನಿಗೆ ನೇಣು ಬಿಗಿದುಕೊಂಡು…
ಸೌತೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ತಿಳಿದುಕೊಂಡಿರುತ್ತಾರೆ. ಕೆಲವರು ತಮ್ಮ ಡಯಟ್‍ಗೆಂದು ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿ ತಿನ್ನುವುದರಿಂದ ಒಳ್ಳೆಯದಾಗುತ್ತದೆ. ಸೌತೆಕಾಯಿ ಒಳ್ಳೆಯದು ಅಂತಾ ಹೆಚ್ಚಾಗಿ ಸೇವನೆ ಮಾಡಿದ್ರೆ ಅದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಲವು ಜನರು ಡಯಟ್ ಎಂದು ದಿನಕ್ಕೆ 8 ರಿಂದ 10 ಸೌತೆಕಾಯಿ ತಿನ್ನುತ್ತಾರೆ. ಸೌತೆಕಾಯಿ ತಿನ್ನುವುದರಿಂದ ನಮ್ಮ ದೇಹಕ್ಕೆ ಒಳ್ಳೆಯದಾಗುತ್ತೆ. ಆದರೆ ಅವಶ್ಯಕ್ಕಿಂತ ಹೆಚ್ಚು ಸೌತೆಕಾಯಿ ತಿಂದರೆ ಅಮೃತವೂ ವಿಷವಾಗುತ್ತದೆ ಎನ್ನುವ ಗಾದೆ ಮಾತಿನಂತೆ ಸೌತೆಕಾಯಿ ಕೂಡ ವಿಷ ಆಗುತ್ತದೆ. ರಾತ್ರಿ ಸಮಯದಲ್ಲಿ ಎಂದಿಗೂ ಸೌತೆಕಾಯಿ ತಿನ್ನಬೇಡಿ. ಬೆಳಗ್ಗೆ ಹೊತ್ತು ಸೌತೆಕಾಯಿ ತಿಂದರೆ ನಿಮ್ಮ ದೇಹಕ್ಕೆ ಅಧಿಕ ಲಾಭವಾಗುತ್ತದೆ. ಮಧ್ಯಾಹ್ನ ತಿಂದರೆ ಸಾಮಾನ್ಯವಾಗಿ ಒಳ್ಳೆಯದಾಗುತ್ತದೆ. ಆದರೆ ರಾತ್ರಿ ಸೌತೆಕಾಯಿ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ. ಸೌತೆಕಾಯಿಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕುಕುರ್ಬಿಟೈನ್ ಎಂಬ ವಿಷಕಾರಿ ಅಂಶವಿರುತ್ತದೆ. ನೀವು ಅವಶ್ಯಕ್ಕಿಂತ ಹೆಚ್ಚು ಸೌತೆಕಾಯಿ ತಿಂದರೆ ನಿಮ್ಮೆ ದೇಹದಲ್ಲಿ ಟಾಕ್ಸಿಕ್ ಅಂಶ ಸೇರುತ್ತದೆ. ಇದರಿಂದ ನಿಮ್ಮ…
ಹೈದರಾಬಾದ್:- ಸಿಬಿಐ ತನಿಖೆ ರದ್ದು ತೀರ್ಮಾನ ರಾಜ್ಯ ಸರ್ಕಾರದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೈದರಾಬಾದ್ ನಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲೋಪದೋಷಗಳಿವೆ. ನನಗೆ ನಾನೇ ವಕೀಲನಾಗಲು ಬಯಸುವುದಿಲ್ಲ. ಅಂದು ನಾನು ಸಚಿವ ಸಂಪುಟ ಸಭೆಗೆ ಹಾಜರಾಗಿಲ್ಲ. ಅದು ಸರ್ಕಾರ ತೆಗೆದುಕೊಂಡ ನಿರ್ಧಾರ. ನನ್ನ ವಿರುದ್ಧದ ತನಿಖೆಗೆ ಯಾವುದೇ ಅನುಮತಿ ನೀಡಿದರೂ ಅದು ಅಸಿಂಧು ಎಂದು ನಾನು ಅರ್ಜಿ ಸಲ್ಲಿಸಿದ್ದೆ. ನನ್ನ ವಿರುದ್ಧ ತನಿಖೆಗೆ ಅಂದಿನ ಅಡ್ವೋಕೇಟ್ ಜನರಲ್ ಅನುಮತಿ ನೀಡಿದ್ದು ಸರಿಯಲ್ಲ. ಈಗಿನ ನಿರ್ಧಾರದ ಬಗ್ಗೆ ನಾನೇನೂ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು. ಇದು ಕಾಂಗ್ರೆಸ್ ಸರ್ಕಾರದ ಪಕ್ಷಪಾತಿ ನಿರ್ಧಾರ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಏನೂ ತಪ್ಪು ಮಾಡಿಲ್ಲ. ಅಂದಿನ ಸರ್ಕಾರ ಕೈಗೊಂಡಿದ್ದು ರಾಜಕೀಯ ನಿರ್ಧಾರ. ಇಂದಿನ ಸರ್ಕಾರ ಕೈಗೊಂಡಿದ್ದು ಕಾನೂನಾತ್ಮಕ ನಿರ್ಧಾರ’ ಎಂದು ಸ್ಪಷ್ಟಪಡಿಸಿದರು.