Author: AIN Author

ಕಲಬುರಗಿ: ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿಗೆ ಬದ್ಧವಾಗಿದ್ದು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ ಎಂ ಸಿ ಸುಧಾಕರ ಹೇಳಿದರು. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಅಂದಾಜು ಮೊತ್ತ ರೂ 800 ಲಕ್ಷ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂದಾಜು ಮೊತ್ತ ರೂ 625.95 ಲಕ್ಷ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸಿಎಂ ಸಿದ್ದರಾಮಯ್ಯ ನವರು 25 ನೂತನ ಪಾಲಿಟೆಕ್ನಿಕ್ ಕಾಲೇಜುಗಳನ್ನು ಘೋಷಿಸಿದ್ದರು.‌. ಪರಿಣಾಮ ಆಳಂದ ಪಟ್ಟಣದಲ್ಲಿ ಅಂದಾಜು 8 ಕೋಟಿ ವೆಚ್ಚದಲ್ಲಿ ನೂತನ‌ ಕಾಲೇಜು ಮಂಜೂರಾಗಿದೆ. ಅಂತ ಹೇಳಿದ್ರು..ಇಂತಹ ಅಭಿವೃದ್ಧಿ ಕಾರ್ಯಗಳ ಹಿಂದೆ ಕ್ಷೇತ್ರದ ಶಾಸಕ ಬಿಆರ್ ಪಾಟೀಲರ ಅವಿರತ ಶ್ರಮವಿದೆ ಅಂದ್ರು..ಸಚಿವ ಪ್ರಿಯಾಂಕ್ ಖರ್ಗೆ MLC ತಿಪ್ಪಣ್ಣಪ್ಪ ಕಮಕನೂರ್ ಸೇರಿದಂತೆ ಇತರರಿದ್ರು..

Read More

ಧಾರವಾಡ: ಕಿಯೋನಿಕ್ಸ್ ಎಂಡಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದು, ಯಾರೇ ತಪ್ಪು ಮಾಡಿದರು ತನಿಖೆಯಾಗಿ ಆಗಬೇಕು ಎಂದು ಹೇಳಿದ್ದಾರೆ. ನಗರದ ಸಪ್ತಾಪುರ ಬಡವಾಣೆಯ ಮೆಟ್ರಿಕ್ ನಂತರ ಸರಕಾರಿ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿಯೋನಿಕ್ಸ್ ಭ್ರಷ್ಟಾಚಾರದ ಬಗ್ಗೆ ನನಗೆ ಗೊತ್ತಿಲ್ಲ. ಅವರು ಕಮೀಷನ್ ಕೇಳಿರುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರರು ದೂರು ಕೊಟ್ಟಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆ ನಡೆಯುತ್ತದೆ. ಯಾರೇ ಆದರೂ ಕ್ರಮ ಆಗಬೇಕು ಎಂದರು. ಇನ್ನೂ ಧಾರವಾಡದ ಹಾಸ್ಟೆಲ್‌ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಧಾರವಾಡದ ಹಾಸ್ಟೆಲ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 450 ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್‌ನಲ್ಲಿ ಅವಕಾಶವಿದೆ. ಆದರೆ, ಇಲ್ಲಿ 600 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇನ್ನೊಂದಿಷ್ಟು ಕೊಠಡಿಗಳನ್ನು ಮಾಡಬೇಕಿದೆ. ಕೊಠಡಿಗಳು ಆದಾಗ ಸಮಸ್ಯೆ ಬಗೆಹರಿಯುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ,…

Read More

ಕೊಪ್ಪಳ:ತಾಲೂಕಿ ಮುನಿರಾಬಾದ್ ಬಳಿ ತುಂಗಭದ್ರಾ ನದಿಗೆ ಲಾರಿ ಉರುಳಿ ಬಿದ್ದು, ಚಾಲಕ ಮೃತಪಟ್ಟಿದ್ದಾನೆ. ಮೈನ್ಸ್ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದ್ದು, ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಅಲ್ಲದೇ ನದಿಗೆ ಬಿದ್ದಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನದಿಯಲ್ಲಿ ನೀರಿಲ್ಲದ ಕಾರಣ ಬಂಡೆಗಳ ಮೇಲೆ ಬೋರಲಾಗಿ ಲಾರಿ ಬಿದ್ದಿದೆ. ಚಾಲಕ ಬಿಹಾರ ಮೂಲದವನೆಂದು ತಿಳಿದು ಬಂದಿದೆ. ಹೊಸಪೇಟೆ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Read More

ಕಲಬುರಗಿ: ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಇದ್ದೇನೆ ಅಂತ ಹಿಂದೇನೇ ಹೇಳಿದ್ದೀನಿ ಮುಂದೇನೂ ಹೇಳ್ತೀನಿ ಡೌಟೇ ಬೇಡ.. ಹೀಗಂತ ಜೇವರ್ಗಿ ಶಾಸಕ ಹಾಗು KKRDB ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಅಜಯ್ ಸಿಂಗ್ ಪಾಲ್ಟಿಕ್ಸ್ ಇಸ್ ವೇಟಿಂಗ್ ಗೇಮ್. ಅದಕ್ಕಾಗಿ ನಾನು ಸಮಾಧಾನವಾಗಿದ್ದೇನೆ ಅಂದ್ರು .ಈಗ KKRDB ಅಧ್ಯಕ್ಷ ಆಗಿದ್ದೇನೆ ಮುಂದೆ ನೋಡೋಣ ಅಂತ ಹೇಳಿದ್ರು..ಅಷ್ಟೇಅಲ್ಲ ಲೋಕಸಭಾ ಚುನಾವಣೆ ನಂತ್ರ ಸಂಪುಟ ವಿಸ್ತರಣೆ ಆಗಬಹುದು ಅಂತ ಹೇಳಿದ್ರು..

Read More

ಧಮಾಕ ಸಕ್ಸಸ್ ಬೆನ್ನಲ್ಲೇ ಮಾಸ್ ಮಹಾರಾಜ ಮತ್ತೊಮ್ಮೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಛಾಯಾಗ್ರಹಕರಾಗಿದ್ದ ಕಾರ್ತಿಕ್ ಕಟ್ಟಿಮನೆ ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳ್ತಿರುವ ‘ಈಗಲ್’ ಸಿನಿಮಾದ ಸಣ್ಣ ಗ್ಲಿಂಪ್ಸ್ ಭಾರೀ ಸದ್ದು ಮಾಡಿತ್ತು. ಇದೀಗ ಈಗಲ್ ಟೀಸರ್ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡ್ತಿದೆ. ಫಸ್ಟ್ ಗ್ಲಿಂಪ್ಸ್ ನಲ್ಲಿ ರವಿತೇಜ ಮುಖವನ್ನು ರಿವೀಲ್ ಮಾಡದೇ ಸಸ್ಪೆನ್ಸ್ ಕಾಯ್ದುಕೊಂಡಿದ್ದ ಚಿತ್ರತಂಡ ಕುತೂಹಲಕ್ಕೆ ಬ್ರೇಕ್ ಹಾಕಿದೆ. ಮಾಸ್ ಡೈಲಾಗ್ ಹೊಡೆಯುತ್ತಾ ರಗಡ್ ಲುಕ್ ನಲ್ಲಿ ಮಾಸ್ ಮಹಾರಾಜ ಎಂಟ್ರಿ ಕೊಟ್ಟಿದ್ದು, ಅನುಪಮಾ ಪರಮೇಶ್ವರನ್, ನವದೀಪ್, ಮಧುಬಾಲ, ಕಾವ್ಯ ಥಾಪರ್ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈಗಲ್ ಸಿನಿಮಾಗೆ ಕಾರ್ತಿಕ್ ಗಟ್ಟಿಮನ್ನಿ ನಿರ್ದೇಶನದ ಜೊತೆಗೆ ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ‌. ಮಣಿಬಾಬು ಕರಣಂ ಸಂಭಾಷಣೆ, ದಾವ್ಜಂಡ್ ಟ್ಯೂನ್ ಚಿತ್ರಕ್ಕಿದೆ. ಹೈದ್ರಾಬಾದ್ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, 2024ರ ಜನವರಿ 13 ಸಂಕ್ರಾಂತಿ ಹಬ್ಬ ಸಿನಿಮಾ ತೆರೆಗೆ ಬರಲಿದೆ.

Read More

ಮುಂಬೈ: ಸೇತುವೆ‌ (Bridge) ಮೇಲಿನಿಂದ ಉರುಳಿದ ಕಾರು (Car) ಚಲಿಸುತ್ತಿದ್ದ ರೈಲಿನ (Train) ಮೇಲೆ ಬಿದ್ದ ಪರಿಣಾಮ ಸ್ಥಳೀಯ ಆರ್‌ಪಿಐ ಕಾರ್ಯಕರ್ತ (RPI Activist) ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ಮೃತರನ್ನು ಧರ್ಮಾನಂದ ಗಾಯಕ್ವಾಡ್ (41) ಮತ್ತು ಅವರ ಸಂಬಂಧಿಕರಾದ ಮಂಗೇಶ್ ಜಾಧವ್ (46) ಮತ್ತು ನಿತೀನ್ ಜಾಧವ್ (48) ಎಂದು ಗುರುತಿಸಲಾಗಿದೆ. ಗಾಯಕ್ವಾಡ್ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ ಗುಂಪು) ಕಾರ್ಯಕರ್ತರಾಗಿದ್ದರು ಎಂದು ತಿಳಿದುಬಂದಿದೆ. ಮಂಗಳವಾರ ಮುಂಜಾನೆ 3:30 ರಿಂದ 4 ಗಂಟೆಯ ವೇಳೆಗೆ ಕಿನವಲಿ ಬಳಿಯ ಸೇತುವೆಯ ಮೇಲೆ ಕಾರು ಮುಂಬೈ-ಪನ್ವೇಲ್ ರಸ್ತೆಯಲ್ಲಿ ನೇರಲ್ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪನ್ವೇಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. https://ainlivenews.com/knee-pain-treatment-joint-pain-treatment/ ಸರಕು ಸಾಗಣೆ ರೈಲು ರಾಯಗಢ ಜಿಲ್ಲೆಯ ಪನ್ವೇಲ್‌ನಿಂದ ಕರ್ಜತ್‌ಗೆ ತೆರಳುತ್ತಿತ್ತು. ಘಟನೆಯಿಂದಾಗಿ ಅದರ ಕೆಲವು ವ್ಯಾಗನ್‌ಗಳು ಬೇರ್ಪಟ್ಟಿವೆ ಎಂದು ಕೇಂದ್ರ ರೈಲ್ವೆಯ (ಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕ…

Read More

ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆ ಕಮಲ್ ಹಾಸನ್ ನಿನ್ನೆ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟು ಹಬ್ಬದ ಸಮಾರಂಭದಲ್ಲಿ ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ ಸುಹಾಸಿನಿ, ಖುಷ್ಬೂ, ಆಮೀರ್ ಖಾನ್, ಸೂರ್ಯ ಸೇರಿದಂತೆ ಹಲವರು ಗಣ್ಯರು ಭಾಗಿಯಾಗಿದ್ದರು. ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. https://ainlivenews.com/knee-pain-treatment-joint-pain-treatment/ ಕಮಲ್ ಹಾಸನ್ ಹುಟ್ಟು ಹಬ್ಬ (Birthday). ಈ ಸಡಗರವನ್ನು ಇನ್ನಷ್ಟು ಹೆಚ್ಚಿಸುವುದಕ್ಕಾಗಿ ಅವರ ನಟನೆಯ 234ನೇ ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ‘ಥಗ್ ಲೈಫ್’ (Thug’s Life) ಎಂದು ಹೆಸರಿಡಲಾಗಿದೆ. ಶೀರ್ಷಿಕೆಯ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದೆ. ಜೈಲರ್ ಸಿನಿಮಾದ ಯಶಸ್ಸಿನ ನಂತರ ತಮಿಳಿನಲ್ಲಿ ಶಿವರಾಜ್ ಕುಮಾರ್ (Shivaraj Kumar) ಬೇಡಿಕೆ ಹೆಚ್ಚಾಗಿದೆ. ಜೈಲರ್ ಸಿನಿಮಾದ ಜೊತೆ ಜೊತೆಗೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದರು. ಇದೀಗ ಕಮಲ್ ಹಾಸನ್ ನಟನೆಯ ಹೊಸ ಸಿನಿಮಾದಲ್ಲೂ ಶಿವರಾಜ್ ಕುಮಾರ್ ಪಾತ್ರ…

Read More

ಬೆಂಗಳೂರು: ಚೈತ್ರಾ ಕುಂದಾಪುರ ಗ್ಯಾಂಗ್​ನಿಂದ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ 9 ಆರೋಪಿಗಳ ವಿರುದ್ಧ ಸಿಸಿಬಿ ಚಾರ್ಜ್​​ಶೀಟ್ ಸಲ್ಲಿಸಿದೆ. 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದೆ. 75 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿ ಸುಮಾರು 800 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದೆ. https://ainlivenews.com/knee-pain-treatment-joint-pain-treatment/ ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿದ್ದಾರಂತೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸ್ತೇನೆ ಅಂತಾ ಚೈತ್ರಾ ಕುಂದಾಪುರ ನಂಬಿಸಿದ್ದರಂತೆ. ಟಿಕೆಟ್ ಆಮಿಷ ಒಡ್ಡಿ 7 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ರಂತೆ. ಇದು ಚೈತ್ರಾ ಕುಂದಾಪುರ ಹಾಗೂ ಅವರ ಸಂಗಡಿಗರ ವಿರುದ್ಧ ಕೇಳಿ ಬಂದಿರೋ ಆರೋಪ. ಈ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಚೈತ್ರಾ ಕುಂದಾಪುರ ಸೇರಿದಂತೆ ಒಟ್ಟು 8 ಮಂದಿ ವಿರುದ್ಧ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಗೋವಿಂದ…

Read More

ತುಮಕೂರು: ಸರ್ಕಾರ 5 ಗ್ಯಾರಂಟಿ ಯೋಜನೆ ಕೊಟ್ಟು ರಾಜ್ಯ ದಿವಾಳಿಯಾಗಿದೆ ಎಂದು ಜಿಲ್ಲೆಯ ಮಧುಗಿರಿಯಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದರು. ‘ಗ್ಯಾರಂಟಿ ಯೋಜನೆಗಳಲ್ಲೂ ಮಹಿಳೆಯರಿಗೆ ಮೋಸ ಆಗಿದೆ. https://ainlivenews.com/knee-pain-treatment-joint-pain-treatment/ ಬರ ಹಿನ್ನೆಲೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕೊರಟಗೆರೆ ಹಾಗೂ ಮಧುಗಿರಿಯಲ್ಲಿ ಬರ ಪರಿಶೀಲನೆ ಮಾಡಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಸರ್ಕಾರ ನಿಲ್ಲಿಸಿದೆ. ಇಲ್ಲಿನ ಸ್ಥಿತಿಗತಿಯನ್ನು ಪ್ರಧಾನಿ ಮೋದಿಗೆ ಮನವರಿಕೆ ಮಾಡಿಸುತ್ತೇವೆ ಎಂದರು.

Read More

ಬೆಂಗಳೂರು: ಚಲಿಸ್ತಿದ್ದ ಫ್ಲೈಟ್‌ನಲ್ಲಿ ಸಹಪ್ರಯಾಣಿಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ. ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಲುಫ್ತಾನ್ಸ್‌ ಏರ್‌ಲೈನ್ಸ್‌ನ LH 0754 ವಿಮಾನದಲ್ಲಿ ಪಕ್ಕದ ಸೀಟ್‌ನಲ್ಲಿದ್ದ ವ್ಯಕ್ತಿ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾನೆ. ಸೀಟ್‌ನಲ್ಲಿ ನಿದ್ದೆಗೆ ಜಾರಿದ್ದ ತಿರುಪತಿ ಮೂಲದ ಮಹಿಳೆಗೆ ಸಹ ಪ್ರಯಾಣಿಕ ರಂಗನಾಥ್ ಲೈಂಗಿಕ ಕಿರುಕುಳ ನೀಡಿದ್ದಾನೆ. https://ainlivenews.com/knee-pain-treatment-joint-pain-treatment/ ರಂಗನಾಥ್ ಬಂಧಿತ ಆರೋಪಿಯಾಗಿದ್ದು ಪ್ರಾಂಕ್ ಪರ್ಟ್ ನಿಂದ ಬೆಂಗಳೂರಿಗೆ ಪ್ರಯಾಣಿಸುತಿದ್ದ ಲುಪ್ತಾನ್ಸಾ ಏರ್ ಲೈನ್ಸ್ ಮಹಿಳೆಯ ಪಕ್ಕದ ಸೀಟಿನಲ್ಲಿ ಕೂತಿದ್ದ ರಂಗನಾಥ್ ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಮಹಿಳೆ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ರಂಗನಾಥ್ ನನ್ನು ಬಂಧಿಸಿದ ಪೊಲೀಸರು

Read More