ಬೆಂಗಳೂರು;- ಮುಂದಿನ 24 ಗಂಟೆಗಳ ಕಾಲ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನ ಕೆಲ ಭಾಗದಲ್ಲಿ ಸುಳಿಗಾಳಿ ಉಂಟಾಗಿದೆ. ಅದರ ಪರಿಣಾಮ ರಾಜ್ಯದಲ್ಲಿ ಇನ್ನೂ ಮೂರು ದಿನ ಹೆಚ್ಚಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿಗೆ ಮಳೆಯಾಗಲಿದೆ. ಮುಂದಿನ ವಾರ ಬಹುತೇಕ ಹಿಂಗಾರು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಅವರು ತಿಳಿಸಿದ್ದಾರೆ.
Author: AIN Author
ಮಧುಗಿರಿ;- ಕರ್ನಾಟಕದ ಬಗ್ಗೆ ಕೇಂದ್ರಕ್ಕೆ ಕಾಳಜಿ ಇಲ್ಲ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಸರ್ಕಾರ ರಾಜ್ಯದ ರೈತರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇಂದ್ರದ ಬರ ಅದ್ಯಯನ ತಂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿ ವರದಿ ನೀಡಿದ ನಂತರವೂ ಕೇಂದ್ರದಿಂದ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ’ ಎಂದರು. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯದ ರೈತರ ಕಷ್ಟಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜಕೀಯಕ್ಕಾಗಿ ಬಿಜೆಪಿ ಬರ ಅಧ್ಯಯನ ಮಾಡುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಹಣ ಕೊಡಿಸುವ ಕೆಲಸ ಮಾಡಬೇಕು ಎಂದರು. ಶೇ 75 ಮಳೆ ಕುಂಠಿತವಾಗಿದೆ. ₹37 ಸಾವಿರ ಕೋಟಿ ನಷ್ಟವಾಗಿದೆ. ಕೆಂದ್ರ ಸರ್ಕಾರಕ್ಕೆ ₹17 ಸಾವಿರ ಕೋಟಿ ನಷ್ಟ ಬರಿಸಿ ಕೊಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ಬರ ಪರಿಸ್ಥಿತಿ ವಿವರಿಸಲು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಮೂರು…
ಬೆಂಗಳೂರು;-ಬೆಲೆ ಇಲ್ಲದವರ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ ಎಂದು ಹೇಳುವ ಮೂಲಕ ಈಶ್ವರಪ್ಪಗೆ ST ಸೋಮಶೇಖರ್ ಟಾಂಗ್ ಕೊಟ್ಟಿದ್ದಾರೆ. ʻʻನನ್ನನ್ನು ಪಕ್ಷದಿಂದ ಬಿಟ್ಟು ಹೋಗು ಅಂತ ಹೇಳಲು ಈಶ್ವರಪ್ಪ ಯಾರು!? ʻʻನಾನು ಈಶ್ವರಪ್ಪನನ್ನು ನಂಬಿ ಪಕ್ಷಕ್ಕೆ ಬರಲಿಲ್ಲ. ನಾನು ಯಡಿಯೂರಪ್ಪ ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ಇದೆಲ್ಲ ಬೆಳವಣಿಗೆಯಾದ ಮೇಲೆ ನಾನು ಯಡಿಯೂರಪ್ಪ ಜತೆ ಮಾತನಾಡಿದ್ದೇನೆ. ಅವರು ಯಾವುದೇ ಕಾರಣಕ್ಕೆ ಪಕ್ಷ ಬಿಡಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲಿದ್ದೇನೆ. ಈಗ ಯಾರೋ ಐದು ಜನರು ಮಾತನಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲʼʼ ಎಂದು ಮೈಸೂರಿನಲ್ಲಿ ಮಾತನಾಡುತ್ತಾ ಅವರು ಹೇಳಿದರು. ʻʻಎಸ್.ಟಿ.ಸೋಮಶೇಖರ್ ಬೆಂಬಲಿಗರು ಮಾತ್ರ ಪಕ್ಷ ಬಿಟ್ಟಿದ್ದಲ್ಲ. ಆರ್ ಅಶೋಕ್ ಕ್ಷೇತ್ರದಲ್ಲಿ ಹೋಗಿಲ್ಲವೇ? ಮುನಿರತ್ನ ಕ್ಷೇತ್ರದಲ್ಲಿ ಹೋಗಿಲ್ಲವೇ? ದಾಸರಹಳ್ಳಿ, ಕೆ.ಆರ್.ಪುರಂ ಕ್ಷೇತ್ರದಲ್ಲಿ ಹೋಗಿಲ್ಲವೇ? ಕೇವಲ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಾ? ಕ್ಷೇತ್ರದಲ್ಲಿ ಸಾವಿರ ಜನ ಲೀಡರ್ ಇರುತ್ತಾರೆ. ಚುನಾವಣೆ ಸಂಧರ್ಭದಲ್ಲಿ ಆ ಕಡೆ ಈ ಕಡೆ ಹೋಗುತ್ತಾರೆʼʼ ಎಂದು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್…
ಬೆಂಗಳೂರು;- ಚುನಾವಣಾ ರಾಜಕೀಯಕ್ಕೆ ಮಾಜಿ ಸಿಎಂ ಸದಾನಂದ ಗೌಡ ನಿವೃತ್ತಿ ಘೋಷಿಸಿದ್ದಾರೆ. ಈ ಸಂಬಂಧ ಮಾತನಾಡಿದ ಸದಾನಂದಗೌಡ, ಪಕ್ಷ ನನಗೆ ಎಲ್ಲವನ್ನೂ ನೀಡಿದೆ, ಹೆಚ್ಚಿನದಕ್ಕೆ ಆಸೆ ಪಡುವುದಿಲ್ಲ. ಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ, 4 ವರ್ಷ ರಾಜ್ಯ ಪಕ್ಷದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ’ ಎಂದು ಹೇಳಿದರು.
ಬೆಂಗಳೂರು;- ಉದ್ಯಮಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಅವರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿಯ ಹಾಲ ಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಅವರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಹಾಲಶ್ರೀ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕದಸ್ಯ ಪೀಠ ಅಭಿನವ ಹಾಲಶ್ರೀಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಅಭಿನವ ಹಾಲಶ್ರೀಗಳನ್ನು ಸೆಪ್ಟೆಂಬರ್ 19ರಂದು ಒಡಿಶಾದ ಕಟಕ್‌ನಲ್ಲಿ ಬಂಧಿಸಲಾಗಿತ್ತು
ಬೆಂಗಳೂರು::-ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ತಮ್ಮ ಗನ್ ಮ್ಯಾನ್ ನಿಂದ ಶೂ ಹಾಕಿಸಿಕೊಳ್ಳುತ್ತಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ. ಈ ಕೂಡಲೇ ರಾಜ್ಯದ ಜನತೆಯ ಮುಂದೆ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ಡಾ ಬಿ ಆರ್ ಅಂಬೇಡ್ಕರ್ ರವರು ಪ್ರತಿಪಾದಿಸಿಕೊಂಡು ಬಂದ ಸಾಮಾಜಿಕ ನ್ಯಾಯ , ಸಮಾನತೆಯ ತತ್ವಗಳಿಗೆ ಸಂಪೂರ್ಣ ಎಳ್ಳು ನೀರು ಬಿಟ್ಟು ಅಧಿಕಾರದ ಮದದಿಂದ ಈ ರೀತಿಯ ವರ್ತನೆಗಳನ್ನು ಮಾಡುವುದನ್ನು ರಾಜ್ಯದ ಜನ ಸಹಿಸುವುದಿಲ್ಲ. ನಿಮ್ಮಿಂದ ಶೋಷಣೆ ಒಳಗಾಗಿರುವ ಸಮುದಾಯಗಳು ಎಷ್ಟರಮಟ್ಟಿಗೆ ನ್ಯಾಯವನ್ನು ಪಡೆದುಕೊಳ್ಳುತ್ತವೆ ಎಂಬ ಪ್ರಶ್ನೆ ನಿಮ್ಮ ವರ್ತನೆಯನ್ನು ಮೂಡಿ ಬಂದಿದೆ . ನಿಮ್ಮಂತಹ ಬಲಿತ, ದೂರ್ತ ರಾಜಕಾರಣಿಗಳು ಈಗಾಗಲೇ ರಾಜಕಾರಣದಿಂದ ಹೆಸರಿಲ್ಲದೆ ಅಳಿಸಿ ಹೋಗಿದ್ದಾರೆ. ಮುಂಬರುವ ದಿವಸಗಳಲ್ಲಿ ಇದೇ ಸಾಲಿನಲ್ಲಿ ತಾವು ಸಹ ಅಳಿಸಿ ಹೋಗುವ ಮೊದಲು ನಿಮ್ಮ ಈ ಕೃತ್ಯಕ್ಕೆ ಬಳಸಿಕೊಂಡ ಆ ಪೊಲೀಸ್ ಗನ್ ಮ್ಯಾನ್…
ಧಾರವಾಡ;- ಎಸ್ ಟಿ ಸೋಮಶೇಖರ್ ಸ್ವಪಕ್ಷಿಯ ವಿರುದ್ದ ಕೊಟ್ಟ ಹೇಳಿಕೆ ವಿಚಾರವಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹೇದವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಅವರು ಚೆನ್ನಾಗಿ ಮಾತನಾಡಿದ್ದಾರೆ ರಾಜ್ಯ ಸರಕಾರ ಬರ ವರದಿಯನ್ನ ಕೇಂದ್ರ ಸರಕಾರಕ್ಕೆ ಕೊಟ್ಟಿದೆ. 4000 ಕೋಟಿ ಹಣ ಕೋಡಿ ಅಂತ ಸರಕಾರ ಕೇಳಿದೆ. ಈಶ್ವರಪ್ಪ ನಿಜ ಹೇಳಿದ್ದಾರೆ, ಬಿಜೆಪಿ ನಾಯಕರು ಇದನ್ನ ಕೇಂದ್ರ ಸರಕಾರಕ್ಕೆ ಪ್ರಶ್ನೆ ಮಾಡಬೇಕು ಎಂದರು. ಇದೇ ವೇಳೆ ಬೆಳಿಗ್ಗೆ ಅಂಗರಕ್ಷನ ಕೈಯಿಂದ ಶೂ ಹಾಕಿಸಿಕ್ಕೊಂಡ ವಿಚಾರವಾಗಿ ಮಾತನಾಡಿ, ನನಗೆ ಬೆನ್ನು ನೂವು ಇದೆ ಅದಕ್ಕೆ ಅವಾಗಿಂದ ಪೇನ್ ಇದೆ. ನನಗೆ ಬಗ್ಗೆಕ್ಕೆ ಆಗಲ್ಲ,ನನಗೆ ಬೆನ್ನು ನೂವು ಇದೆ ಅದಕ್ಕೆ ಶೋ ಹಾಕಿಸಿಕ್ಕೊಂಡೆ. ಕೆಲವೊಂದಿಷ್ಡು ಜನರು ಕಾಲು ಮುಂದೆ ಕೊಟ್ಡು ಕಾಲಿಗೆ ಬಿಳಿಸ್ಕೋತ್ತಾರೆ. ನಾನು ಯಾವುದೆ ದುರಹಂಕಾರದಿಂದ ಶೂ ಹಾಕಿಸಿಕ್ಕೊಂಡಿಲ್ಲ. ನಮಗೆ ಜಾಗೃತಿ ಮೋಡಿಸುತ್ತಿದ್ದಿರಿ, ಧನ್ಯವಾದಗಳು ಮಾದ್ಯಮಕ್ಕೆ ಎಂದರು. ಡಿಕೇಶಿ ಅವರು ಕೊಟ್ಟ ಹೇಳಿಕೆ ಗೆ ಹೆಚ್ಚು ಉತ್ತರ ಮಾದ್ಯಮಗಳಿಗೆ…
ವಿಜಯಪುರ;- ಜಿಪಿಟಿ ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ವಿಜಯಪುರ ನಗರದ ಡಿಡಿಪಿಐ ಕಚೇರಿಯ ಎದುರು ಅಭ್ಯರ್ಥಿಗಳ ಪ್ರತಿಭಟನೆ ನಡೆಸಿದರು. 2022ನೇ ಸಾಲಿನ ಜಿಪಿಟಿ ಶಿಕ್ಷಕರ ನೇಮಕಾತಿಯಲ್ಲಿ ಸಾಮನ್ಯ ವರ್ಗ, ಕೆಟಗರಿಯಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅಲ್ಲದೇ, ಕೆಲವೊಂದು ಸಮಸ್ಯೆಗಳು ನಮಗೆ ತಿಳಿಸದೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೇಮಕಾತಿ ಆದೇಶ ಪ್ರತಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ತಕ್ಷಣವೇ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂದು ಡಿಡಿಪಿಐ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಲಬುರ್ಗಿ;- ಬರದಿಂದ ಕಂಗೆಟ್ಟ ಕಲಬುರಗಿಯಲ್ಲಿ ಇವತ್ತು ಮಳೆಯಾಗಿದೆ. ವಿಚಿತ್ರ ಅಂದ್ರೆ ಮಟಮಟ ಮಧ್ಯಾನವೇ ಅದೂ ಬಿಸಿಲಿನಲ್ಲಿಯೇ ಮಳೆ ಬಂದಿದ್ದು ಜನರಿಗೆ ಆಶ್ಚರ್ಯವಾಗಿದೆ. ಆರಂಭದಲ್ಲಿ ಎಲ್ಲೆಡೆ ಮೋಡಕವಿದ ವಾತಾವರಣವಿತ್ತು. ಆದ್ರೆ ಮಳೆ ಕೈಕೊಟ್ಟಿದೆ.ಹೀಗಾಗಿ ಬರಲು ಸಾಧ್ಯವೇ ಇಲ್ಲ ಅಂತ ಜನ ಮಾತಾಡಿಕೊಳ್ಳುತಿದ್ರು. ಇದೇವೇಳೆ ಏಕಾಎಕಿ ಮಳೆ ಬಂದು ಧರೆ ತಂಪಾಗಿಸಿತು.. ಜಗತ್ ಬಡಾವಣೆ ರಾಘವೇಂದ್ರ ಕಾಲನಿ ಸೇರಿ ಹಲವು ಏರಿಯಾಗಳಲ್ಲಿ ವರುಣ ಚನ್ನಾಗಿಯೇ ದರ್ಶನಕೊಟ್ಟಿದ್ದಾನೆ. ಮೂಲಗಳ ಪ್ರಕಾರ ಇನ್ನೆರಡು ದಿನವೂ ಮಳೆ ಸುರಿಯುವ ಸಾಧ್ಯತೆಗಳಿದೆ ಎನ್ನಲಾಗಿದೆ..
ದಾವಣಗೆರೆ ;-ಇಬ್ಬರು ಯುವಕರ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿರುವ ಘಟನೆ ದಾವಣಗೆರೆ ನಗರದ ವಸಂತ ಚಿತ್ರಮಂದಿರದಲ್ಲಿ ಜರುಗಿದೆ. ಜಗಳದಲ್ಲಿ ಕೈಗೆ ಬಾಯಿಯಿಂದ ಯುವಕ ಕಚ್ಚಿದ್ದಾನೆ. ಲೋಕೇಶ್ ಗಾಯಗೊಂಡ ಯುವಕ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದಾರೆ. ಸಚಿನ್ ಬನ್ನಿಕಟ್ಟಿ ಎನ್ನುವರ ಜೊತೆ ಲೋಕೇಶ್ ಜಗಳವಾಡಿದ್ದ. ವಾಗ್ವಾದ ಮಾಡುತ್ತಾ ಲೋಕೇಶ್ ಮೇಲೆ ಸಚಿನ್ ಹಲ್ಲೆ ನಡೆಸಿದ್ದ. ಹಳೇ ದ್ವೇಷದ ಹಿನ್ನಲೆ ಇಬ್ಬರಿಗೂ ವಾಗ್ವಾದ ನಡೆದಿದೆ. ಜಗಳದಲ್ಲಿ ಕೈಗೆ ಬಾಯಿಯಿಂದ ಕಚ್ಚಿ ಸಚಿನ್ ಗಾಯಗೊಳಿಸಿದ್ದಾನೆ ಎನ್ನಲಾಗಿದೆ. ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಜರುಗಿದೆ.