ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಇಂಗ್ಲಿಷ್ ಹೆಸರನ್ನ ಬದಲಿಸಿಕೊಂಡಿದ್ದಾರೆ. ಪ್ರತಾಪ್ ಸಿಂಹ ಎಂಬ ಹೆಸರನ್ನು ಸಂಖ್ಯಾಶಾಸ್ತ್ರದ ಪ್ರಕಾರ ಸಂಸದರು ಸ್ವಲ್ಪ ಬದಲು ಮಾಡಿಕೊಂಡಿದ್ದಾರೆ. Prathap Simha ಎಂಬ ಹೆಸರನ್ನು Pratap Simmha ಎಂದು ಬದಲು ಮಾಡಿಕೊಂಡಿರುವುದನ್ನ ಅಫಿಡೆವಿಟ್ ಮೂಲಕ ಘೋಷಿಸಿಕೊಂಡಿದ್ದಾರೆ. ಸಂಸದ ಪ್ರತಾಪ್ ಸಿಂಹಗಿಂತಲೂ ಮೊದಲೇ ಹಲವು ನಾಯಕರು ಇದೇ ಮಾದರಿಯ ಬದಲಾವಣೆ ಮಾಡಿಕೊಂಡಿದ್ದಾರೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಇಂಗ್ಲಿಷ್ನಲ್ಲಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು. ಬಿಜೆಪಿ ಎಂಎಲ್ಸಿ ಹೆಚ್. ವಿಶ್ವನಾಥ್ ಕೂಡ ತಮ್ಮ ಹೆಸರಿನ ಹಿಂದೆ ಅಡಗೂರು ಎಂದು ಸೇರಿಸಿಕೊಂಡಿದ್ದರು. ತಮಿಳುನಾಡು ಸಿಎಂ ಆಗಿದ್ದ ಜೆ. ಜಯಲಲಿತಾ ಅವರು ಕೂಡ ಇದೇ ರೀತಿ ತಮ್ಮ ಹೆಸರು ಬದಲಿಸಿಕೊಂಡಿದ್ದರು. ಇದೀಗ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೂಡ ತಮ್ಮ ಹೆಸರನ್ನು ಸಂಖ್ಯಾಶಾಸ್ತ್ರದ ಪ್ರಕಾರ ಬದಲಿಸಿಕೊಂಡಿದ್ದಾರೆ.
ಲೋಕಸಭೆಗೂ ಮುನ್ನ ಹೆಸರು ಬದಲಾವಣೆ
ಲೋಕಸಭಾ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವಾಗ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಇಂಗ್ಲಿಷ್ನಲ್ಲಿರುವ ತಮ್ಮ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. 2 ಬಾರಿ ಮೈಸೂರು-ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ ಜಯ ಸಾಧಿಸಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಚುನಾವಣೆಗೆ 5 ತಿಂಗಳು ಬಾಕಿ ಇರುವಾಗ್ಲೇ ಈ ರೀತಿ ಹೆಸರು ಬದಲು ಮಾಡಿಕೊಂಡಿರೋದು ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದೆ. ಇಷ್ಟು ದಿನ ಇಂಗ್ಲಿಷ್ನಲ್ಲಿ Prathap Simha ಎಂದು ಬರೆಯಲಾಗಿತ್ತು. ಇದೀಗ Prathap Simha ಹೆಸರನ್ನು Pratap Simmha ಎಂದು ಅಫಿ-ಡೆವಿಟ್ ಮೂಲಕ ಘೋಷಿಸಿಕೊಂಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.