ಭೋಪಾಲ್: ಅಕ್ರಮ ಮರಳು ದಂಧೆ (Illegal Sand Mining) ತಡೆಯಲು ತೆರಳಿದ್ದ ಕಂದಾಯ ಅಧಿಕಾರಿಯೊಬ್ಬರ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ (Madhya Pradesh) ಶಾಹದೋಲ್ ಎಂಬಲ್ಲಿ ನಡೆದಿದೆ. ಅಧಿಕಾರಿಯನ್ನು ಹತ್ಯೆಗೈದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಟ್ರ್ಯಾಕ್ಟರ್ ಹರಿದು ಸಾವಿಗೀಡಾದ ಅಧಿಕಾರಿಯನ್ನು ಪಟ್ವಾರಿ ಪ್ರಸನ್ನ ಸಿಂಗ್ ಎಂದು ಗುರುತಿಸಲಾಗಿದೆ. ಸಿಂಗ್ ಸೇರಿದಂತೆ ಇಲಾಖೆಯ ಕೆಲವು ಸಿಬ್ಬಂದಿ ಗೋಪಾಲ್ಪುರ ಪ್ರದೇಶದ ಸೋನ್ ನದಿಯ ಬಳಿ ಅಕ್ರಮವಾಗಿ ಗಣಿಗಾರಿಕೆ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಟ್ರಾಕ್ಟರ್ ಒಂದನ್ನು ತಡೆಯಲು ಯತ್ನಿಸಿದ್ದಾರೆ, ಆದರೆ ಚಾಲಕ ಅಧಿಕಾರಿಯ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ್ದಾನೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ..! SBIನಲ್ಲಿ ಖಾಲಿಯಿದೆ 8283 ಹುದ್ದೆಗಳು
ಟ್ರಾಕ್ಟರ್ ಮೈಮೇಲೆ ಹರಿದ ಪರಿಣಾಮ ಪಟ್ಟಾರಿ ಪ್ರಸನ್ನ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದ. ಕೂಡಲೇ ಪೊಲೀಸರು ವಾಹನದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಚಾಲಕ ಶುಭಂ ವಿಶ್ವಕರ್ಮ (25) ಎಂಬಾತನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಟ್ರ್ಯಾಕ್ಟರ್ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಲಾಗಿದೆ.