ಬೆಂಗಳೂರು:- ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೊದಲ ಪಟ್ಟಿಯಲ್ಲಿ ಫಸ್ಟ್ ಟೈಂ ಶಾಸಕರಾದವರಿಗೆ ಅವಕಾಶ ನೀಡಿಲ್ಲ. ಮುಂದಿನ ಪಟ್ಟಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲು ತೀರ್ಮಾನವಾಗಿದೆ. ನಿಗಮ ಮಂಡಳಿ ನೇಮಕಾತಿ, ಕಾರ್ಯಕರ್ತರಿಗೂ ಅವಕಾಶ ನೀಡುವ ಸಂಬಂಧ ನಾನು ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಮಾತನಾಡಿದ್ದೇವೆ. ನಾವು ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ನೀಡಿದ್ದು, ಅವರು ಅದನ್ನು ದೆಹಲಿಗೆ ತೆಗದುಕೊಂಡು ಹೋಗಿದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದ ನಂತರ ಹೈಕಮಾಂಡ್ ನಾಯಕರು ನಮ್ಮ ಪಟ್ಟಿ ಪರಿಶೀಲಿಸಿ ಎರಡ್ಮೂರು ದಿನಗಳಲ್ಲಿ ಅಂತಿಮ ಪಟ್ಟಿ ರವಾನಿಸುತ್ತಾರೆ. ನಾವು ನೀಡಿದ ಪಟ್ಟಿಯನ್ನು ಪಕ್ಷದ ಹೈಕಮಾಂಡ್ ಪರಿಶೀಲಿಸಬೇಕು. ಏಕೆಂದರೆ ಚುನಾವಣೆ ಹೊತ್ತಿನಲ್ಲಿ ಒಂದಿಷ್ಟು ಮಾತುಗಳನ್ನು ಕೊಟ್ಟಿರುತ್ತಾರೆ. ಹೈಕಮಾಂಡ್ ಯಾರಿಗೆ ಏನು ಸೂಚನೆ ನೀಡಿತ್ತೋ ಅದರ ಪ್ರಕಾರ ಅಂತಿಮ ಪಟ್ಟಿ ಸಿದ್ಧವಾಗಲಿದೆ ಎಂದು ತಿಳಿಸಿದರು. ಬಿ.ಆರ್.…
Author: AIN Author
ಪೀಣ್ಯ ದಾಸರಹಳ್ಳಿ:’ ಈ ಕ್ಷೇತ್ರದಲ್ಲಿ ಈ ಹಿಂದೆ (ಎಲೆಕ್ಷನ್ ಗೆ ಮೊದಲು) ಕಾಮಗಾರಿ ಕೆಲಸದ ಪೂರ್ವ ಆದೇಶ ಇಲ್ಲದೆ ಪೂಜೆ ಸಲ್ಲಿಸಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಶಾಸಕ ಎಸ್. ಮುನಿರಾಜು ಅಧಿಕಾರಿಗಳಿಗೆ ಸೂಚಿಸಿದರು. ಸೋಮಶೆಟ್ಟಿಹಳ್ಳಿ ರಸ್ತೆ, ಚಿಕ್ಕಬಾಣಾವರದಲ್ಲಿ 30 ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಸಾರ್ವಜನಿಕ ಗ್ರಂಥಾಲಯ ಅನಾವರಣ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದ ಮೈದಾನದಲ್ಲಿ 80 ಲಕ್ಷ ವೆಚ್ಚದ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಎಲೆಕ್ಷನ್ ಗೆ ಮೊದಲು ಆಸ್ಪತ್ರೆ ಕಟ್ಟಡಕ್ಕೆ ಇಲ್ಲಿ ಪೂಜೆ ಸಲ್ಲಿಸಲಾಗಿದೆ. ಆದರೆ ಗುತ್ತಿಗೆದಾರ ಕಟ್ಟಡ ನಿರ್ಮಿಸಿಲ್ಲ, ಕೆಲಸದ ಆದೇಶ ಇಲ್ಲದೆ ಪೂಜೆ ಮಾಡಿದ್ದಾರೆ. ಇತ್ತೀಚಿಗೆ ಅದರ ಕಾಮಗಾರಿ ಆದೇಶ ಬಂದಿದೆ ಕೆಲವೊಬ್ಬ ಗುತ್ತಿಗೆದಾರರು ಆಟ ಆಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದರು. ಈ ಭಾಗದಲ್ಲಿ ಬಡವರು, ಮಧ್ಯಮ ವರ್ಗದವರು ಹೆಚ್ಚಾಗಿ ನೆಲೆಸಿದ್ದಾರೆ. ಅವರ ಅನುಕೂಲಕ್ಕೆ ಇನ್ನು 9 ತಿಂಗಳಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ…
ನೆಲಮಂಗಲ:- ದನ ಮೇಯಿಸುತ್ತಿದ್ದ ವೃದ್ದ ಮಹಿಳೆ ಮೇಲೆ ಚಿರತೆ ದಾಳಿ ನೆಡೆಸಿ ಮಹಿಳೆಯ ಸೊಂಟದ ಭಾಗಕ್ಕೆ ಗಾಯಗೊಳಿಸಿದ್ದು ಅದೃಷ್ಟವಶಾತ್ ಪ್ರಾಣಾಪಾಯ ದಿಂದ ಪಾರಾದ ಘಟನೆ ನೆಲಮಂಗಲ ತಾಲೂಕು ದಾಬಸ್ ಪೇಟೆ ಸಮೀಪದ ಗೊಲ್ಲರಹಟ್ಟಿ ಗ್ರಾಮದ ಬಳಿ ನೆಡೆದಿದೆ. ಇನ್ನೂ ಗೊಲ್ಲರಹಟ್ಟಿ ಕಾಲೋನಿ ನಿವಾಸಿ ಅಮ್ಮಯ್ಯ (60) ಚಿರತೆ ದಾಳಿಯಲ್ಲಿ ಗಾಯ ಗೊಂಡು ಸ್ಥಳೀಯ ದಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಿರತೆ ಯಿಂದ ತಮ್ಮ ದನಗಳನ್ನ ರಕ್ಷಣೆ ಮಾಡಲು ಮುಂದಾದ ವೇಳೆ ಈ ಘಟನೆ ನೆಡೆದಿದೆ. ಈ ಸಂಬಂಧ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು,ನೆಲಮಂಗಲ ಅರಣ್ಯ ಇಲಾಖೆಯವರು ಚಿರತೆಯನ್ನ ಸೆರೆ ಹಿಡಿದು ಅರಣ್ಯಕ್ಕೆ ಬಿಡುವಂತೆ ಮನವಿ ಮಾಡಿದ್ದಾರೆ..
ಬೆಳಗಾವಿ:- ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ಖ್ಯಾತ ಉದ್ಯಮಿಯೊರ್ವರ ಮನೆ ಮುಂದೆ ಮುಸುಕಾಧಾರಿಗಳಿಂದ ಹಲ್ಲೆಗೆ ಯತ್ನಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಹೌದು ವಿಕ್ಷಕರೆ ನೀವೂ ನೋಡಬಹುದು ಇದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ನಡೆದ ಘಟನೆ. ಖ್ತಾತ ಉದ್ಯಮಿಯೊರ್ವರ ಮನೆ ಮುಂದೆ ಮುಸುಕಾಧಾರಿಗಳಿಂದ ಕಳ್ಳತನಕ್ಕೆ ಯತ್ನಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಹೌದು ಕಳ್ಳತನಕ್ಕೆ ಯತ್ನಿಸಿದ ಘಟನೆಯೊಂದು ಸಿಸಿ ಟಿವಿ ಪೂಟೆಜನಲ್ಲಿ ಬೆಳಕಿಗೆ ಬಂದಿದೆ ಇನ್ನೂ ಈ ಖತರ್ನಾಕ ಖದೀಮರ ತಂಡ ಯಾವೂದು ಎಲ್ಲಿಯಿಂದ ಬದರೂ ಎಂಬುದನ್ನು ಯಮಕನರಡಿ ಪೋಲಿಸರು ಪತ್ತೆ ಹಚ್ಚಬೇಕಿದೆ. ಈ ಒಂದು ಸಿಸಿಟಿವಿ ದ್ರಶ್ಯ ನೋಡಿ ಗ್ರಾಮದ ಜನತೆಯಲ್ಲಿ ಭಯಬೀತ ವಾತಾವರಣ ಮೂಡಿದೆ. ಇನ್ನೂ ಯಮಕನಮರಡಿ ಪೋಲಿಸರು ಯಾವ ರೀತಿ ಸೂಕ್ತ ಕಾನೂನಿನ ಕ್ರಮ ಕೈಗೊಂಡು ಖತರ್ನಾಕ ಕಳ್ಳರ ಗ್ಯಾಂಗ ಹೆಡೆಮುರಿ ಕಟ್ಟುತ್ತಾರೆಯೆ ಕಾದು ನೊಡಬೇಕಿದೆ ಇಂತಹ ಭಯಬಿತ ಮಚ್ಚು ಲಾಂಗೂ ತಳ್ವಾರ ಹಿಡಿದಿಕೊಂಡ ಬಂದ ಈ ಖತರ್ನಾಕ…
ಬೆಳಗಾವಿ :- ಜಿಲ್ಲೆ ಚಿಕ್ಕೋಡಿ ತಾಲೂಕಿನ ರುಪಿನಾಳ ಗ್ರಾಮದಲ್ಲಿ ಶನಿವಾರ ರಂದು ಕಿರಾಣಿ ಅಂಗಡಿ ಮಾಲಕಿಯನ್ನು ಯಾಮಾರಿಸಿ ಚಿನ್ನದ ಮಾಂಗಲ್ಯ ದೋಚಿ ಯುವಕ ಎಸ್ಕೆಪ್ ಆಗಿದ್ದಾನೆ. ಗುಟ್ಕಾ ಖರೀದಿ ನೆಪದಲ್ಲಿ ಕಿರಾಣಿ ಅಂಗಡಿಗೆ ಆಗಮಿಸಿದ್ದ ಯುವಕ 15 ಗ್ರಾಂ ಚಿನ್ನದ ಮಾಂಗಲ್ಯ ದೋಚಿ ಪರಾರಿಯಾಗಿದ್ದಾನೆ, ಕಳ್ಳತನ ಮಾಡುವ ವಿಡಿಯೋ ಸಿ ಸಿ ಟಿ ಯಲ್ಲಿ ಸೇರೆ ಆಗಿದೆ, ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಬಳ್ಳಾರಿ: ಎಲ್ಲಾ ರೈತರು ಪ್ರತಿ ವರ್ಷ ಕಡ್ಡಾಯವಾಗಿ ವಿಮೆ ನೊಂದಣಿ ಮಾಡುವುದರಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ದೊಡ್ಡ ನಷ್ಟ ತಪ್ಪಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ. ಕ್ರೀಡಾ ಮತ್ತು ಯುವ ಸಬಲೀಕರಣ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವರಿ ಸಚಿವರಾದ ನಾಗೇಂದ್ರ ಅವರೊಂದಿಗೆ ತಾಲ್ಲೂಕಿನ ವಿವಿಧ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಹವಾಲು ಅಲಿಸಿ ಸಚಿವರು ರೈತರಿಗೆ ಕಿವಿ ಮಾತು ಹೇಳಿದರು. ಬಳ್ಳಾರಿ ತಾಲ್ಲೂಕಿನ ಹಲಕುಂದಿ ಹಾಗು ಬೆಲಗೊಳ ಗ್ರಾಮಗಳ ಜಮೀನಿನಲ್ಲಿ ಬೆಳೆದಿದ್ದ ತೋಗರಿ, ನವಣೆ ಮತ್ತು ಸೂರ್ಯಕಾಂತಿ ಬೆಳೆ ಪರಿಶೀಲಿಸಿದ ಸಚಿವರು ಉತ್ತಮ ಮಳೆ , ಇಳುವರಿ ಬಂದು ಪರಿಹಾರ ಸಿಗದಿದ್ದರೂ 10 ವರ್ಷಗಳಲ್ಲಿ ಒಮ್ಮೆ ಇದರ ಫಲ ಎಲ್ಲಾ ಕಂತಿನ ಹಣದ ಹತ್ತಾರು ಪಟ್ಟು ಬರಲಿದೆ .ಇದರ ಅನುಕೂಲ ತಿಳಿದು ನಿರಂತರ ವೆಮೆ ಮಾಡಿಸಿ ಎಂದರು. https://ainlivenews.com/do-you-know-which-are-the-most-visited-websites-by-indians/ ತೋಗರಿ ಬೆಳೆ ಬೆಳಿದಿದ್ದ ಮಲ್ಲಿಕಾರ್ಜುನ ಎಂಬ ರೈತನ ಜಮೀನಿಗೆ ಭೇಟಿ ನೀಡಿದ ಸಚಿವರು ಬೆಳೆ ವಿಮೆ…
ಧಾರವಾಡ : ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಖಾಯಂ ನೇಮಕಾತಿ ಮಾಡಿಕೊಳ್ಳಲು ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಹನುಮಂತಗೌಡ ಕಲ್ಮನಿ, ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಅತಿಥಿ ಉಪನ್ಯಾಸಕರ ಕರ್ತವ್ಯವನ್ನೇ ಅವಲಂಬಿಸಿವೆ. ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಉಪನ್ಯಾಸಕರ ಬದುಕು ಅತಂತ್ರವಾಗಿದೆ. ಅತಿಥಿ ಎಂಬ ಅನಿಷ್ಠ ಪದ್ಧತಿಗೆ ಮುಕ್ತಾಯ ಹಾಡಿ ಸೇವಾ ಭದ್ರತೆಯ ಜೊತೆಗೆ ಕಾಯಮಾತಿ ಮಾಡಬೇಕು. ಇಲ್ಲದೇ ಹೋದಲ್ಲಿ ಕಾಯಂ ಆಗಿ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. https://ainlivenews.com/do-you-know-which-are-the-most-visited-websites-by-indians/ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ವಿರೋಧ ಪಕ್ಷದಲ್ಲಿದ್ದಾಗ ಅತಿಥಿ ಉಪನ್ಯಾಸಕರ ನಿಯೋಗಕ್ಕೆ, ನಮ್ಮ ಸರ್ಕಾರ ಬಂದರೆ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಂತೆ…
ಬೆಂಗಳೂರು: ಸಿಎಂ, ಸಚಿವರಿಗೆ ಮಾತ್ರವಲ್ಲ.. ಹೈಕಮಾಂಡ್ ಗೂ ಬಿ.ಆರ್ ಪಾಟೀಲ್ ತಲೆನೋವಾಗಿಬಿಟ್ಟಿದ್ದಾರೆ.. ಸಚಿವರ ವಿರುದ್ಧ ಪದೇ ಪದೇ ಲೆಟರ್ ಬರೆದು, ಜೋಡೆತ್ತು ಸರ್ಕಾರದ ಮಾನ ಹರಾಜು ಹಾಕಿದ್ದಾರೆ.. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದ್ರೆ ರಾಜೀನಾಮೆ ಕೊಡೋಕೂ ಸಿದ್ದ ಎಂದು ಸವಾಲ್ ಎಸೆದಿದ್ದಾರೆ. ಸೀನಿಯರ್ ಎಂಎಲ್ ದ ರೆಬೆಲ್ ಆಗ್ತಿದ್ದಂತೆ, ಸಿದ್ದರಾಮಯ್ಯ ಮನವೊಲಿಕೆಗೆ ಮುಂದಾಗಿದ್ದಾರೆ. ಈ ಕಡೆ ಬಿ.ಆರ್ ಪಾಟೀಲ್ ಲೆಟರ್ ವಿಚಾರವನ್ನ ಮುಂದಿಟ್ಟುಕೊಂಡು, ವಿಪಕ್ಷ ನಾಯಕರು ಸಿಎಂ, ಡಿಸಿಎಂ ಕಿವಿಹಿಂಡುತ್ತಿದ್ದಾರೆ.. ಯೆಸ್.. ಆಳಂದ ಕ್ಷೇತ್ರದಲ್ಲಿ ಕೆಆರ್ ಐಡಿಎಲ್ ನಿಂದ ನಡೆದ ಕಾಮಗಾರಿಗಳ ತನಿಖೆಗೆ ಕಾಂಗ್ರೆಸ್ ಹಿರಿಯ ಶಾಸಕ ಬಿಆರ್ ಪಾಟೀಲ್ ಪಟ್ಟು ಹಿಡಿದಿದ್ದಾರೆ. ಕಳೆದ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿಯೆತ್ತಿದ್ದಕ್ಕೆ, ತಮ್ಮ ವಿರುದ್ದವೇ ಆರೋಪ ಬರೋ ರೀತಿ ಸಚಿವರು ಮಾತನಾಡಿದ್ದಾರೆ. ಕೃಷ್ಣಭೈರೇಗೌಡ ಹಾಗೂ ಅಧಿಕಾರಿಗಳನ್ನ ಕರೆಸಿ ಮಾತಾಡಬೇಕು. ಇಲ್ಲದಿದ್ರೆ ಬೆಳಗಾವಿ ಅಧಿವೇಶನಕ್ಕೆ ಕಾಲಿಡಲ್ಲ ಎಂದು ಸಿಎಂಗೆ ಪತ್ರ ಬರೆದಿದ್ದಾರೆ . ಅಲ್ಲದೇ ಸ್ವಾಭಿಮಾನಕ್ಕೆ ಧಕ್ಕೆ ಆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋಕೂ…
ಗಾಂಧಿನಗರ: ಗುಜರಾತ್‍ನ (Gujarat) ಸೂರತ್ (Surat) ನಗರದ ಕೆಮಿಕಲ್ಸ್ ಫ್ಯಾಕ್ಟರಿ (Chemical Plant) ಒಂದರ ಟ್ಯಾಂಕ್‍ನಲ್ಲಿ ಸಂಗ್ರಹಿಸಿದ್ದ ರಾಸಾಯನಿಕ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 24 ಕಾರ್ಮಿಕರು ಗಾಯಗೊಂಡಿದ್ದಾರೆ. ನಗರದ ಸಚಿನ್ ಜಿಐಡಿಸಿ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ರಾತ್ರಿ 2 ರಿಂದ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ದೊಡ್ಡ ತೊಟ್ಟಿಯೊಳಗೆ ಶೇಖರಿಸಲಾದ ರಾಸಾಯನಿಕಗಳ ಸೋರಿಕೆಯಿಂದ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಗಾಯಗೊಂಡ 24 ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. https://ainlivenews.com/dont-organize-marriage-ceremonies-abroad-pm-modi/#google_vignette ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಮೂರು ಅಂತಸ್ತಿನ ಕಟ್ಟಡದಲ್ಲೂ ಬೆಂಕಿ ಆವರಿಸಿದೆ. ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ. ಘಟನೆ ನಡೆದಾಗ ಕಾರ್ಖಾನೆಯೊಳಗೆ ಎಷ್ಟು ಕಾರ್ಮಿಕರಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು : ಸಚಿವರು ಹೆದರಿಸುತ್ತಿದ್ದಾರೆ. ಮಂತ್ರಿಗಳು ಮಾತ್ರವಲ್ಲ ಅವರ ಪಿಎಗಳೂ ಕೂಡ ಓಪನ್ ಆಗಿ ದಂಧೆ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. https://ainlivenews.com/after-b-y-vijayendra-became-the-state-president-there-is-enthusiasm-among-activists-b-s-yediyurappa/ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನೆಮ್ಮದಿಯ ಸರ್ಕಾರ ಅಂತ ಹೇಳುತ್ತಿದ್ದಾರೆ. ನೆಮ್ಮದಿ ಕಳೆದುಕೊಂಡು ಕೂತಿದ್ದಾರೆ. ನಮ್ಮ ಅವಧಿಯ ದುಡ್ಡು ತಗೊಂಡಿದ್ದಾರೆ ಎಂದು ಕುಟುಕಿದ್ದಾರೆ. ಬಿ.ಆರ್ ಪಾಟೀಲ್ ಪತ್ರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಈ ಸರ್ಕಾರದ ಬಗ್ಗೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಪದೇ ಪದೆ ಹೇಳುತ್ತಾ ಬಂದಿದ್ದೇವೆ. ನಿಮ್ಮ ಶಾಸಕರೇ ನಿಮ್ಮ ವಿರುದ್ಧ ದಂಗೆ ಎದ್ದಿದ್ದಾರೆ ಅಂತ. ಯಾವುದೂ ಇಲ್ಲ ಅಂದ್ರು. ಎರಡನೇ ಬಾರಿ ಬಿ.ಆರ್ ಪಾಟೀಲ್ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.