ಉಡುಪಿ: ಮಾಜಿ ರಾಜ್ಯಪಾಲ ಪಿ.ಬಿ ಆಚಾರ್ಯ (92) (Padmanabha Acharya) ವಿಧಿವಶರಾಗಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯವರಗಿರುವ ಪಿ.ಬಿ ಆಚಾರ್ಯಯವರು ಮಹಾರಾಷ್ಟ್ರದ ಮುಂಬೈಯಲ್ಲಿ ನಿಧನರಾಗಿದ್ದಾರೆ. ಇವರು ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶದಲ್ಲಿ ರಾಜ್ಯಪಾಲರಾಗಿದ್ದರು. https://ainlivenews.com/knee-pain-treatment-joint-pain-treatment/ ಉಡುಪಿಯ ತೆಂಕಪೇಟೆಯ ಆಚಾರ್ಯ ಮಠದಲ್ಲಿ ಜನಿಸಿರುವ ಪಿ.ಬಿ ಆಚಾರ್ಯ ಅವರು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಅವಿರತಶ್ರಮ ಪಟ್ಟಿದ್ದಾರೆ. ಆರ್ ಎಸ್ ಎಸ್ ಕಾರ್ಯಕರ್ತರಾಗಿಯೂ ಈಶಾನ್ಯ ಭಾರತದ ಮೂಲೆ ಮೂಲೆಯಲ್ಲಿ ಕೆಲಸ ಮಾಡಿದ್ದಾರೆ. ಸಾಮಾನ್ಯ ಜನರಿಗೆ ರಾಜಭವನ ಮುಕ್ತವಾಗಿ ತೆರೆದಿಟ್ಟವರಾಗಿದ್ದಾರೆ. ಅಲ್ಲದೆ ಬಡ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಶಿಕ್ಷಣ ಕೊಡಿಸುತ್ತಿದ್ದರು.
Author: AIN Author
ಬೆಂಗಳೂರು: ಪಶು ಆಹಾರ ತಯಾರಿಸುವ ಕುರಿತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ KMFನ ಆಹಾರ ಘಟಕಗಳು ಆರು ಕಡೆ ಇದೆ. ಪಶು ಆಹಾರ ತಯಾರಿಸಲು ಮೆಕ್ಕೆಜೋಳ ಬೇಕು. ಮೆಕ್ಕೆಜೋಳದ SSP 2,090 ರೂಪಾಯಿ ಇದೆ. ಇದಕ್ಕೆ ನಾವು 160 ರೂ. ಹೆಚ್ಚುವರಿಯಾಗಿ ನೀಡುತ್ತಿದ್ದೇವೆ. ನವೆಂಬರ್ 13ನೇ ತಾರೀಖಿನಿಂದ ಮೆಕ್ಕೆಜೋಳ ಖರೀದಿ ಆರಂಭ ಮಾಡಲಿದ್ದು ರೈತರಿಂದ 2250 ರೂ.ಗೆ ಮೆಕ್ಕೆಜೋಳ ಖರೀದಿ ಮಾಡುತ್ತಿದ್ದೆವೆ. ಒಟ್ಟು ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡುತ್ತೇವೆ. https://ainlivenews.com/good-news-extension-of-purple-line-metro-rail-to-bidadi-announcement-by-d-k-sivakumar/ ರಾಜ್ಯದಲ್ಲಿ ಇಷ್ಟು ದಿನ ಬರ ಇತ್ತು. ಆದರೇ, ಕಳೆದ ವಾರದಿಂದ ಕೆಲವು ಕಡೆ ಮಳೆ ಆಗುತ್ತಿದೆ. ಇದರಿಂದ ಮೇವು ಕೂಡ ಹೆಚ್ಚಾಗುವ ನಿರೀಕ್ಷೆ ಇದೆ. ಈಗ ಸದ್ಯ 6-7 ತಿಂಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ. ಹಾಲಿನ ದರ ಏರಿಕೆ ಮಾಡುವಂತೆ ಒತ್ತಾಯ ಇದೆ ಎಂದು ಅವರು ಹೇಳಿದರು.
ಬೆಂಗಳೂರು: ಬೆಂಗಳೂರಿನಿಂದ-ಧರ್ಮಸ್ಥಳಕ್ಕೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಸೈಕಲ್ ಯಾತ್ರೆ ಕೈಗೊಂಡಿದ್ದರು. ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಹೊರಟು ಇಂದು ಧರ್ಮಸ್ಥಳಕ್ಕೆ ತಲುಪಿದ್ದಾರೆ. ದಿ ರಾಜಾಜಿನಗರ ಪೆಡಲ್ ಪವರ್ ತಂಡದ ಮೂಲಕ ಮೂರು ದಿನಗಳ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದರು. ಎಂಟು ಜನ ಸಹ ಸವಾರರ ಜೊತೆ ತೆರಳಲಾಗಿತ್ತು. https://ainlivenews.com/2-thousand-additional-special-transport-system-by-ksrtc/ ಈ ಬಗ್ಗೆ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. 2014ರಲ್ಲಿ ನಾನು ಗೆಳೆಯರ ಜೊತೆ ಪಾದಯಾತ್ರೆ ಮಾಡಿಕೊಂಡಿದ್ದನ್ನು ಮೆಲುಕು ಹಾಕಿದ್ದಾರೆ. ಆಗ ಎಂಟು ದಿನಗಳ ಯಾತ್ರೆ ಮಾಡಿದ್ದೆವು ಎಂದು ಇದರ ಬಗ್ಗೆ ಬರೆದುಕೊಂಡಿದ್ದಾರೆ. ಹಾಗೆ ಪ್ರಯಾಣದ ವೇಳೆ ಸಹಾಯ ಮಾಡಿ ಆತಿಥ್ಯ ನೀಡಿದ ಎಲ್ಲರಿಗೂ ಸಹ ನನ್ನ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.
ರಾಮನಗರ: ಬಿಡದಿ ಭಾಗದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಓಡಾಟಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬಿಡದಿಗೆ ಮೆಟ್ರೋ ಘೋಷಣೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಬಿಡದಿ ಸ್ಮಾರ್ಟ್ ಸಿಟಿಗಾಗಿ ಹತ್ತು ಸಾವಿರ ಎಕರೆ ಜಾಗ ವಶ ಪಡಿಸಿಕೊಳ್ಳಲಾಗಿತ್ತು. ಅದು ಹಾಗೇಯೆ ಉಳಿದುಕೊಂಡಿದೆ. ಹೀಗಾಗಿ ಗ್ರೇಟರ್ ಬೆಂಗಳೂರು ಡೆವಲಪ್ಮೆಂಟ್ ಪ್ಲ್ಯಾನಿಂಗ್ ಅಥಾರಿಟಿಯನ್ನಾಗಿ ಬಿಡದಿಯನ್ನು ಘೋಷಿಸಲಾಗಿದೆ ಎಂದರು. ಎಲ್ಲರಿಗು ಶಕ್ತಿ ತುಂಬುವ ದೃಷ್ಟಿಯಿಂದ ಈ ಘೋಷಣೆಗಳನ್ನು ಮಾಡಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗಕ್ಕಾಗಿ ಪ್ರತ್ಯೇಕ ಸಭೆ ನಡೆಸಿ, ಎಲ್ಲ ಕಾರ್ಖಾನೆಗಳ ಬಳಿ ಮನವಿ ಮಾಡಲಾಗುವುದು. ನಾವೆಲ್ಲ ಬೆಂಗಳೂರಿನವರು. ನಮ್ಮ ಮೂಲ ಹೆಸರನ್ನು ನಾವು ಕೆಳದುಕೊಳ್ಳುವುದಿಲ್ಲ. ಹೀಗಾಗಿ ಬೆಂಗಳೂರು ದಕ್ಷಿಣವನ್ನಾಗಿ ಜಿಲ್ಲೆಯ ಹೆಸರು ಬದಲಿಸಲು ಜನರಿಂದ ಅಭಿಪ್ರಾಯ ಕೇಳಲಾಗುತ್ತಿದೆ. ಬಳಿಕ ಸರಕಾರದ ಮುಂದಿಟ್ಟು ಬದಲಾವಣೆ ಕ್ರಮ ಕೈಗೊಳ್ಳಲಾಗುವುದು. ಸಿಬಿಐ ಅರ್ಜಿ ವಜಾ ಆಗಿದ್ಯಾ? ನನಗೆ ಗೊತ್ತಿಲ್ಲ. ಏಕೆ? ಈಗ ಇಲ್ಲಿದ್ದೆನೆ. ವಿಚಾರಿಸಿ ಮಾತನಾಡುತ್ತೆನೆ ಎಂದು ಹೈಕೋರ್ಟ್ ನಲ್ಲಿ ಅರ್ಜಿ…
ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಬರೊಬ್ಬರಿ 2 ಸಾವಿರ ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ನವೆಂಬರ್ 12 ಮತ್ತು 14 ರಂದು ನರಕ ಚತುರ್ದಶಿ ಹಾಗೂ ಬಲಿಪಾಡ್ಯಮಿ ಹಬ್ಬ ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ ನ.10 ರಿಂದ 12 ರವರೆಗೆ ಬೆಂಗಳೂರಿನಿಂದ ಕೆಳಕಂಡ ಸ್ಥಳಗಳಿಗೆ 2 ಸಾವಿರ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ನಿಗಮ ಮಾಡಿದೆ. ಇದರ ಜೊತೆಗೆ ಅಂತರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ನ.14 ಹಾಗೂ 15 ರಂದು ವಿಶೇಷ ಬಸ್ಸುಗಳು ಕೂಡ ಸಂಚರಿಸಲಿವೆ ಎಂದು KSRTC ತಿಳಿಸಿದೆ. https://ainlivenews.com/mysore-bangalore-mangalore-special-train-for-passengers-going-to-coastal-areas/ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಹೆಚ್ಚುವರಿ ಬಸ್ಗಳು ಕಾರ್ಯನಿರ್ವಹಿಸಲಿವೆ.
ರಾಮನಗರ: ಇದೊಂದು ಸುದಿನ. ಟೊಯೋಟಾ 25 ವರ್ಷ ಪೂರೈಸಿದೆ. ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಲು ತರಬೇತಿ ಯೋಜನೆ ರೂಪಿಸಿರೋದು ಶ್ಲಾಘನೀಯ. ಭಾರತದ ಅದರಲ್ಲೂ ಕರ್ನಾಟಕದ ಹೆಮ್ಮೆಯ ಸಂಸ್ಥೆ. ಗುಣಮಟ್ಟದಲ್ಲಿ ಯಾವತ್ತೂ ರಾಜಿ ಮಾಡಿಕೊಂಡಿಲ್ಲ ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು. ಟೊಯೋಟಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯಲ್ಲಿ ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ. ಇವತ್ತಿನ ಸವಾಲು ಉದ್ಯೋಗ ಸೃಷ್ಟಿ. ಸಂಸ್ಥೆ ಅದನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ. ಯುವಕ, ಯುವತಿಯರಿಗೆ ಬದುಕು ಕಟ್ಟಿ ಕೊಡುತ್ತಿದೆ. ಹೆಣ್ಣು ಮಕ್ಕಳಿಗೆ ವಿಶೇಷ ತರಬೇತಿಗೆ ಮುಂದಾಗಿರೋದು ಮಾದರಿ. ಶಿಕ್ಷಣ, ಗಾರ್ಮೆಂಟ್ ಉದ್ಯಮದಲ್ಲಿ ಸಾಧನೆ ಮಾಡಿರುವ ಮಹಿಳೆಯರ ಕೈಗೆ ಸ್ಕ್ರೂ ಡ್ರೈವರ್, ಸ್ಪಾನರ್ ಕೊಟ್ಟು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೆ ಪ್ರೇರಣೆ ನೀಡಿರುವುದು ಅನುಕರಣನೀಯ. ವಿಶ್ವದಲ್ಲಿ ಮಹಿಳಾ ಶಕ್ತಿ ಪ್ರಾಮುಖ್ಯತೆ ಪಡೆದಿದೆ. ಮಹಿಳೆಯರು ಸ್ವಾವಲಂಬನೆ ಸಾಧಿಸುತ್ತಿರೋದು ಶ್ಲಾಘನೀಯ. ಡಿಸಿಎಂ ಮೂಲಕ ಸಿಎಂ ಅವರಿಗೆ ವಿಶೇಷ ಮನವಿ ಮಾಡುತ್ತೇನೆ. ಉದ್ಯೋಗದಲ್ಲಿ ಮಹಿಳೆಯರಿಗೆ ಶೇಕಡಾ 25 ರಷ್ಟು ಮೀಸಲಿಡಲು ಕೋರುತ್ತೇನೆ. ಟೊಯೋಟಾದಲ್ಲಿ…
ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆ ಎಚ್ಚತ್ತ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.ಬಿಬಿಎಂಪಿ ಮನವಿ ಮಾಲಿನ್ಯ ರಹಿತ ದೀಪಾವಳಿಯನ್ನಾಗಿ ಆಚರಣೆ ಮಾಡಲು ಮನವಿ ಹಸಿರು ಪಟಾಕಿಗಷ್ಟೇ ಅನುಮತಿ ನೀಡಿದ ಸರ್ಕಾರ ನಿಯಮ ಮೀರಿದರೆ ಕಾನೂನು ಕ್ರಮದ ಎಚ್ಚರಿಕೆ https://ainlivenews.com/it-would-be-good-if-sumalta-contested-from-bangalore-north-constituency/ ಪಟಾಕಿ ಮಾರುವ ಮಳಿಗೆಗೆ ಕೆಲವು ನಿಭಂದನೆಗಳನ್ನು ನೀಡಿದ ಸರ್ಕಾರ ಹಾಗಿದ್ರೆ ಪಟಾಕಿ ಮಾರಾಟ ಮಾಡುವ ಮಳಿಗೆಗಳ ನಿಬಂಧನೆಗಳು ಏನು? ಇಲ್ಲಿದೆ ನೋಡಿ! ಹಾಗಿದ್ರೆ ಪಟಾಕಿ ಮಾರಾಟ ಮಾಡುವ ಮಳಿಗೆಗಳ ನಿಬಂಧನೆಗಳು ಏನು? -ಹಸಿರು ಪಟಾಕಿ ಮಾರುವುದು ಕಡ್ಡಾಯ, -ಹಸಿರು ಪ್ಯಾಕೆಟ್‌ಗಳ ಮೇಲೆ ಹಸಿರು ಪಟಾಕಿ ಚಿಕ್ಕ ಕ್ಯೂಆರ್ ಕೋಡ್ ಕಡ್ಡಾಯ -ಮಳಿಗೆಗಳ ವಿಸ್ತೀರ್ಣ 10×10 ಅಡಿ ಸೀಮಿತ -ನಿಗದಿಗಿಂತ ಹೆಚ್ಚು ಪ್ರಮಾಣದ ಪಟಾಕಿ ದಾಸ್ತಾನು ಮಾಡುವಂತಿಲ್ಲ -ಸಾಧ್ಯವಾದಷ್ಟೂ ಬೆಂಕಿ ತಡೆಯುವ ಉಪಕರಣಗಳನ್ನೇ ಬಳಸಿ ಮಳಿಗೆ ನಿರ್ಮಿಸಬೇಕು -ಮಳಿಗೆ ಮುಂಭಾಗ ಹಾಗೂ ಹಿಂಭಾಗ ಪ್ರವೇಶಿಸುವ ಅವಕಾಶ ಇರಬೇಕು -ಪ್ರತಿ ಮಾರಾಟ ಮಳಿಗೆಗೆ 3 ಮೀಟರ್…
ರಾಮನಗರ: ಬೆಂಗಳೂರು ಹೊರವಲಯದ ರಾಮನಗರ ಜಿಲ್ಲೆ ಬಿಡದಿಯ ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯ ವಿಸ್ತರಣೆ ಘಟಕದ (TTTI) ಉದ್ಘಾಟನೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಶುಕ್ರವಾರ ಉದ್ಘಾಟಿಸಿದರು. ಸಚಿವ ಮಂಕಾಳ ವೈದ್ಯ, ಸಂಸದ ಡಿ ಕೆ ಸುರೇಶ್, ಶಾಸಕ ಎಚ್ ಸಿ ಬಾಲಕೃಷ್ಣ, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಟೊಯೋಟಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸುದೀಪ್ ದಾಲ್ವಿ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ವಪನೇಶ್ ಮಾರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ದಾವಣಗೆರೆ: ದಾವಣಗೆರೆಯಲ್ಲಿ ಪಂಚಮಸಾಲಿ 2A ಮೀಸಲಾತಿ ಹೋರಾಟ ಆರಂಭಗೊಂಡಿದೆ. ದಾವಣಗೆರೆ ರಾಷ್ಟ್ರೀಯ 48 ರಲ್ಲಿ ಇಷ್ಟ ಲಿಂಗಪೂಜೆ ಪೂಜೆ ಮೂಲಕ ಬಾಡಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. 2A ಮೀಸಲಾತಿಗಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 7ನೇ ಹಂತದ ಪ್ರತಿಭಟನೆಯಾಗಿದ್ದು, ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅನುಪಸ್ಥಿತಿಯಲ್ಲಿ ಮನವಿ ಸ್ವೀಕರಿಸಿದರು. ಪಂಚಮಸಾಲಿ ಸಮಾಜದ ನೂರಾರು ಜನರು ಭಾಗಿಯಾಗಿದ್ದರು.
ಬೆಂಗಳೂರು : ದೀಪಾವಳಿ ಹಬ್ಬಕ್ಕೆ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರಿನಿಂದ ಕರಾವಳಿ ಭಾಗಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಮೈಸೂರು-ಬೆಂಗಳೂರು -ಮಂಗಳೂರು ವಿಶೇಷ ರೈಲು ಸಂಚರಿಸಲಿದೆ. ದೀಪಾವಳಿ ಹಬ್ಬದ ಮುಂಚಿನ ದಿನದಂದು ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ವಿಶೇಷ ರೈಲು ಮೈಸೂರು-ಮಂಗಳೂರು ರೈಲು ಬೆಂಗಳೂರು ಮಾರ್ಗವಾಗಿ ಒಂದು ಟ್ರಿಪ್ ಸಂಚಾರ ಮಾಡುತ್ತದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. Mysore-Bangalore-Mangalore special train for passengers going to coastal areas ರೈಲು ನಂಬರ್ 07303 ಮೈಸೂರಿನಿಂದ ಮಂಗಳೂರಿಗೆ ನವೆಂಬರ್ 10 ರಂದು ರಾತ್ರಿ 8.30ಕ್ಕೆ ಮೈಸೂರಿನಿಂದ ಹೊರಟು ನವೆಂಬರ್ 11 ರಂದು ಬೆಳಿಗ್ಗೆ 9.40 ಕ್ಕೆ ಮಂಗಳೂರು ತಲುಪಲಿದೆ. ರೈಲು ಮಾರ್ಗದಲ್ಲಿ ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ,ಪುತ್ತೂರು, ಬಂಟ್ವಾಳದಲ್ಲಿ ನಿಲುಗಡೆಯಾಗಲಿದೆ.