Author: AIN Author

ಬೆಂಗಳೂರು:- ರಾಜ್ಯಾಧ್ಯಕ್ಷರ ಸ್ಥಾನಕ್ಕೆ ವಿಜಯೇಂದ್ರರ ಆಯ್ಕೆ ಪಕ್ಷಕ್ಕೆ ಶಕ್ತಿ ತುಂಬಿದೆ ಎಂದು MP ರೇಣುಕಾಚಾರ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ವಿಜಯೇಂದ್ರರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದಕ್ಕೆ ರೇಣುಕಾಚಾರ್ಯರ ಕೂಗಲ್ಲ. ಈ ನಾಡಿನ ಪ್ರಜ್ಞಾವಂತರ ಅಪೇಕ್ಷೆಯಾಗಿತ್ತು. ಜನರ ಅಪೇಕ್ಷೆ ಈಡೇರಿಸಿದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಧಾನಿ ಮೋದಿ, ‌ಅಮಿತ್ ಶಾ ಅವರಿಗೆ ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾರ್ಯ ಅಭಿವಂದನೆಗಳು ತಿಳಿಸಿದರು. ವಿಜಯೇಂದ್ರರ ಪಕ್ಷ ಸಂಘಟನೆ ಸಾಮರ್ಥ್ಯ ನೋಡಿ ಈ ಹುದ್ದೆ ಸಿಕ್ಕಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಜಯೇಂದ್ರರ ಆಯ್ಕೆ ಪಕ್ಷಕ್ಕೆ ಶಕ್ತಿ ತುಂಬಿದೆ. ಇದು ಮಾಸ್ಟರ್‌ ಸ್ಟ್ರೋಕ್ ಎಂದರು. ಯಡಿಯುರಪ್ಪ ಅವರನ್ನ ಬೆಳಗ್ಗೆ ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿ ಹೊರಟಿದ್ದೆ. ಇಂದು ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗ್ತಿದ್ದಂತೆ ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚುವ ಮೂಲಕ ಸಂಭ್ರಮಾಚರಣೆ ಮಾಡ್ತಿದ್ದಾರೆ ಎಂದರು. ಮುಂದೆ ಲೋಕಸಭಾ ಚುನಾವಣೆ ಬರ್ತಿದೆ. ಸಂಘಟನೆ ಚತುರ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರರ ಸಂಘಟನೆ ನೋಡಿ…

Read More

ಹುಣಸಗಿ:- ರೈತರಿಗೆ ಬರ ಪರಿಹಾರ ನೀಡಲು ಮುಂದಾಗಿ ಎಂದು ಶಾಸಕ ಅರವಿಂದ ಬೆಲ್ಲದ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ತಾಲೂಕಿನ ಕರಿಭಾವಿ ಗ್ರಾಮದಲ್ಲಿ ಬರಗಾಲದಿಂದ ಹಾನಿಗೀಡಾಗಿರುವ ಬೆಳೆಗಳನ್ನು ವೀಕ್ಷಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಬರಗಾಲ ಪರಿಹಾರಕ್ಕಾಗಿ ಯಾವುದೇ ಖರ್ಚು ಮಾಡದೇ ಎಲ್ಲದಕ್ಕೂ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಅನಗತ್ಯವಾಗಿ ಗೂಬೆ ಕೂಡಿಸುತ್ತಿದ್ದಾರೆ ಎಂದು ಹರಿಹಾಯ್ದರು. 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೂ ರೈತರಿಗೆ ಪರಿಹಾರ ಹಣ ಹಾಕಲು ವಿಳಂಬ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 25 ಸಾವಿರ ಹಣ ಪರಿಹಾರ ನೀಡಲಿ ಎಂದು ಆಗ್ರಹಿಸಿದರು. ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಬಿದ್ದಾಗಲೂ ರೈತರ ಸಮಸ್ಯೆ ಬಗ್ಗೆ ತೀವ್ರ ನಿರ್ಲಕ್ಷÂ ವಹಿಸಿದ್ದು, ರೈತರ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಕಾಳಜಿಯೇ ಇಲ್ಲ. ಈ ಹಿಂದೆ ಬಿಜೆಪಿ ಅ ಧಿಕಾರದಲ್ಲಿದ್ದಾಗ ನೆರೆ ಹಾವಳಿ ಬಂದಾಗ ರಾಜ್ಯದ ಎಲ್ಲ ಕಡೆಗೂ ನೆರವಿಗೆ ಧಾವಿಸಿತ್ತು. ಆದರೆ ಇದೀಗ ಸಿಎಂ-ಡಿಸಿಎಂ ಅವರಿಗೆ…

Read More

ಕಲಬುರಗಿ:- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮದ ಪ್ರಕರಣದಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಸೆರೆಸಿಕ್ಕ ಕಿಂಗ್ ಪಿನ್ RD ಪಾಟೀಲನನ್ನ ಇದೀಗ ಕಲಬುರಗಿಗೆ ಕರೆತರಲಾಯಿತು. ಕಳೆದ ಮೂರು ದಿನದ ಹಿಂದೆ ಅಪಾರ್ಟ್‌ಮೆಂಟಿನ ಗೇಟ್ ಜಿಗಿದು ಎಸ್ಕೇಪ್ ಆಗಿದ್ದ RD ಅರೆಸ್ಟ್ ಮಾಡಲು ನಾಲ್ಕು ತಂಡಗಳನ್ನ ರಚಿಸಲಾಗಿತ್ತು. ಸತತ ಹುಡುಕಾಟದ ನಂತ್ರ ಅಂದ್ರೆ 12 ದಿನಗಳ ಬಳಿಕ ಸಂಭಂಧಿಕರ ಮನೆಯಲ್ಲಿಯೇ ಲಾಕ್ ಆಗಿದ್ದ. ಬಂಧಿಸಿದ ನಂತ್ರ ಬಿಗಿ ಬಂದೋಬಸ್ತಲ್ಲಿ ಸೀದಾ ಅಶೋಕ ನಗರ ಠಾಣೆಗೆ ಕರೆತರಲಾಯಿತು.

Read More

ಗದಗ:- ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕ ಹಿನ್ನೆಲೆ ಗದಗನಲ್ಲಿ‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಗದಗ ನಗರದ ಹುಯಿಲಗೋಳ ನಾರಾಯಣರಾಯರ ವೃತ್ತದಲ್ಲಿ ವಿಜಯೋತ್ಸವ ಆಚರಣೆ ನಡೆದಿದೆ. ಮಿನಿ ರಾಜಾಹುಲಿ ಮುಂದಿನ ಮುಖ್ಯಮಂತ್ರಿ ಬಿ ವೈ ವಿಜಯೇಂದ್ರಗೆ ಜಯವಾಗಲಿ ಅಂತಾ ಘೋಷಣೆ ಕೂಗಿದ್ದಾರೆ. ಪಟಾಕಿ‌ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Read More

ಬೆಂಗಳೂರು:- ಮುಂದಿನ ವಾರ ಪ್ರತಿಪಕ್ಷ ನಾಯಕನ ಆಯ್ಕೆ ಆಗಲಿದೆ ಎಂದು ಬಿಜೆಪಿ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರದ ವೀಕ್ಷಕರು ಕೂಡ ಆಗಮಿಸುತ್ತಿದ್ದಾರೆ. ಅವರ ಸಮ್ಮುಖದಲ್ಲೇ ಪ್ರತಿ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಮುಂದಿನ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆಯಾಗಲಿದೆ ಎಂದು ತಿಳಿಸಿದರು. ಇನ್ನು, ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಮಗ ಎನ್ನುವ ಕಾರಣಕ್ಕೆ ನನಗೆ ಹುದ್ದೆ ಕೊಟ್ಟಿಲ್ಲ. ಅವರ ಮಗ ಎನ್ನುವ ಹೆಮ್ಮೆ ಇದೆ. ಪಕ್ಷ ಬಿಡುವ ಯೋಚನೆಯಲ್ಲಿ ಇರುವವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು. ಮಾಜಿ ಸಚಿವ ವಿ. ಸೋಮಣ್ಣ, ಆರ್ ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಅವರು ಹೇಳಿದರು.

Read More

ಮಂಗಳೂರು:-ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರ ಅವರಿಗೆ ನಳಿನ್ ಕುಮಾರ್ ಕಟೀಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯುವ ಮೋರ್ಚಾ ಕಾರ್ಯ ವಿಸ್ತರಣೆ ಮಾಡಿದ ಅವರು ಅತ್ಯುತ್ತಮ ಸಂಘಟಕರು, ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಅವರು ನಮ್ಮ ಜತೆ ರಾಜ್ಯದಲ್ಲಿ ಪ್ರವಾಸ ಮಾಡಿದ ಅನುಭವ ಇರುವವರು. ಉತ್ತಮ ರೀತಿಯಲ್ಲಿ ಪಕ್ಷವನ್ನು ಸಂಘಟಿಸುವ ವಿಶ್ವಾಸವಿದೆ. ಲೋಕಸಭೆ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಗೆಲ್ಲಿಸುವುದು ನಮ್ಮ ಗುರಿಯಾಗಿದೆ’ ಎಂದರು. ‘ಅಧ್ಯಕ್ಷನಾಗಿ ಆಯ್ಕೆಯಾದಾಗ ದಕ್ಷಿಣ ಕನ್ನಡ ಜಿಲ್ಲೆಯವನು ಪ್ರವಾಸ ಮಾಡಿ ಅನುಭವ ಇಲ್ಲ ಎಂಬ ಮಾತು ಇತ್ತು. ಇಡೀ ರಾಜ್ಯವನ್ನು 18 ಬಾರಿ ಸುತ್ತಿದ್ದೇನೆ. ಅನೇಕ ಚುನಾವಣೆಗಳು, ಉಪಚುನಾವಣೆಗಳನ್ನು ಗೆದ್ದಿದ್ದೇವೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟಿರುವ ಬಗ್ಗೆ ತೃಪ್ತಿಯಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಡಿ.ವಿ. ಸದಾನಂದ ಗೌಡರ ರಾಜಕೀಯ ನಿವೃತ್ತಿ ಘೋಷಣೆಯ ಬಗ್ಗೆ ಕೇಳಿದ ಪ್ರಶ್ನೆಗೆ,…

Read More

ಕಲಬುರಗಿ :-ಜಿಲ್ಲೆಯ ಅಳಿಯನಿಗೆ ಸಿಕ್ಕಿತು ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ..ಹೌದು ಕಲಬುರಗಿಯ ಖ್ಯಾತ ಉದ್ಯಮಿ ಶಿವಾನಂದ ಮಾನ್ಕರ್ ಮಗಳನ್ನು ವರಿಸಿದ್ದ ಬಿವೈ ವಿಜಯೇಂದ್ರ ಇದೀಗ ಬಿಜೆಪಿಗೆ ಸಾರಥಿ.. ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪ ಬೀಗರ ಕಲಬುರಗಿ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ನಿರೀಕ್ಷೆಯಂತೆ ಪಕ್ಷದಲ್ಲಿ ಉನ್ನತ ಸ್ಥಾನ ಸಿಕ್ಕಿರೋದಕ್ಕೆ ಸಖತ್ ಖುಷಿಯಾಗಿದೆ ಅನ್ನೋದು ಬಿಎಸ್ವೈ ಬೀಗರ ಮಾತು..

Read More

ಶಿವಮೊಗ್ಗ:- ಕೊಟ್ಟಿರುವ ಜವಾಬ್ದಾರಿ ವಿಜಯೇಂದ್ರ ಸವಾಲಾಗಿ ಸ್ವೀಕರಿಸುತ್ತಾನೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇದೊಂದು ದೊಡ್ಡ ಜವಾಬ್ದಾರಿ, ಇದೊಂದು ಯೋಗ, ಕೇಂದ್ರದಲ್ಲಿ ಮೋದಿ ಪ್ರಧಾನಮಂತ್ರಿ, ನಡ್ಡಾ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ರಾಜಕಾರಣವನ್ನು ಹತ್ತಿರದಿಂದ ನೋಡಿ ಬೆಳೆದಿದ್ದಾನೆ. ಕಾರ್ಯಕರ್ತರ ಶಕ್ತಿ ಸಂಘಟನೆ ಲೋಕಸಭೆ, ಜಿ.ಪಂ ತಾ.ಪಂ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡ್ತಾನೆ. ವಿಜಯೇಂದ್ರ ಕೊಟ್ಟಿರುವ ಜವಾಬ್ದಾರಿ ಸವಾಲಾಗಿ ಸ್ವೀಕರಿಸ್ತಾನೆ ಯಶಸ್ವಿಯಾಗಿ ನಿರ್ವಹಣೆ ಮಾಡ್ತಾನೆ ಎಂದು ಭರವಸೆ ವ್ಯಕ್ತಪಡಿಸಿದರು. ಹಿಂದೆ ಕಟೀಲ್ ಸಹ ಒಳ್ಳೆಯ ಕೆಲಸ ಮಾಡಿದ್ದರು. ಈಶ್ವರಪ್ಪ, ಅನಂತಕುಮಾರ್ ಬಿ.ಬಿ.ಶಿವಪ್ಪ ಅಂತಹವರು ಪಕ್ಷ ಸಂಘಟನೆ ಮಾಡಿದ್ದಾರೆ. ಇದೀಗ ಬಿವೈ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ನಾಯಕರು. ರಾಜಕಾರಣ ಒಂದು ಸವಾಲು ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಅಧಿಕಾರ ಬಂದಾಗ ಸನಿಹಕ್ಕೆ ಬರೋದು ಸಹಜ. ಅದೇ ಅಧಿಕಾರ ಇಲ್ಲದಿದ್ದಾಗ ಹಿಂದೆ ಮುಂದೆ ನೋಡೋದು ಸಹಜ. ಹಿರಿಯರ ಜೊತೆ ಪಕ್ಷ ಸಂಘಟನೆ ಯಶಸ್ವಿಯಾಗಿ ಮಾಡುತ್ತಾನೆ. ಕೊಟ್ಟಿರುವ…

Read More

ಬೆಂಗಳೂರು:- ಬಿಜೆಪಿ ಹೈಕಮಾಂಡ್‌ ವಿರುದ್ಧ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಬಿಜೆಪಿ ನಾಯಕರ ಮೇಲೆ ಕೋಪಗೊಳ್ಳಬೇಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ ಅವರು, ಬಾಕಿ ಇರುವ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕಾತಿಗಳನ್ನು ಶೀಘ್ರವಾಗಿ ಮಾಡುವಂತೆ ಒತ್ತಾಯ ಮಾಡಿದರು. ಸದಾನಂದ ಗೌಡರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಎರಡು ದಿನಗಳ ನಂತರ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿ ನಾಯಕರ ವರ್ತನೆಯಿಂದ ನನಗೆ ನೋವಾಗಿದೆ. ನಾವು ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕೇಂದ್ರ ನಾಯಕರ ವಿರುದ್ಧ ನನಗೆ ಅಸಮಾಧಾನವಿದೆ ಎಂದರು. ಇಂದಿಗೂ ನಾನು ಕೇಂದ್ರ ನಾಯಕರಲ್ಲಿ ಕೇಳಿಕೊಳ್ಳುತ್ತೇನೆ. ಕರ್ನಾಟಕದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ನಾವು ಏನನ್ನು ಕಳೆದುಕೊಂಡಿದ್ದೇವೆ, ಅದನ್ನು ಲೋಕಸಭೆ ಚುನಾವಣೆಯಲ್ಲಿ ಆಸಕ್ತಿಯಿಂದ ನಿಮಗೆ ಹಿಂತಿರುಗಿಸುತ್ತೇವೆ. ನಮ್ಮ ಮೇಲೆ ಕೋಪ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.

Read More

ಬೆಂಗಳೂರು:- ಬಿಜೆಪಿಯ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕ ಬೆನ್ನಿಗೇ ಬಿ.ವೈ. ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿ ಧನ್ಯವಾದಗಳನ್ನು ತಿಳಿಸಿದ್ದಾರೆ. ರಾಜ್ಯಾಧ್ಯಕ್ಷರಾಗಿ ತಮ್ಮನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ಅವರು ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೆಸರುಗಳನ್ನು ಉಲ್ಲೇಖಿಸಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಅಚಲ ವಿಶ್ವಾಸವಿಟ್ಟು ಪಕ್ಷ ಸಂಘಟನೆಯ ಬಹುದೊಡ್ಡ ಜವಾಬ್ದಾರಿ ವಹಿಸಿದ ತಮಗೆಲ್ಲ ತುಂಬು ಹೃದಯದ ಕೃತಜ್ಞತೆಗಳು ಎಂದು ವಿಜಯೇಂದ್ರ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆ ಮುಖಾಂತರ ಹೇಳಿಕೊಂಡಿದ್ದಾರೆ. ಸಂಘದ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸರ್ವರ ನಿರೀಕ್ಷೆ ಹಾಗೂ ಜನರ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ತುಂಬಲು ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ಅಹರ್ನಿಶಿ ದುಡಿಯುವ ಸಂಕಲ್ಪ ತೊಟ್ಟಿರುವೆ. ನಾಡಿನ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂಬುದಾಗಿ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

Read More