ಕಲಬುರಗಿ: ಪ್ರಕೃತಿ ವಿಕೋಪಗಳಿಂದ ಜಗತ್ತನ್ನು ರಕ್ಷಿಸುವಂತೆ ಪ್ರಾರ್ಥಿಸಿ ಕಲಬುರಗಿಯ ಕರದಾಳದಲ್ಲಿ ಪ್ರತ್ಯಂಗಿರ ಹೋಮ ನಡೆಸಲಾಯಿತು.. ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಲ್ಲಿ ಈ ಹೋಮಕಾರ್ಯ ನೆರವೇರಿತು. ಪ್ರಣವಾನಂದ ಶ್ರೀಗಳ ನೇತ್ರತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.. ಅಥರ್ವಣ ವೇದದ ಪ್ರಕಾರ ನಡೆದ ಈ ಪ್ರತ್ಯಗಿಂರ ಹೋಮದಿಂದ ಲೋಕ ಕಲ್ಯಾಣವಾಗಲಿ ಅನ್ನೋ ಉದ್ದೇಶವೂ ಇದೆ ಅಂತ ಶ್ರೀಗಳು ಹೇಳಿದ್ರು.
Author: AIN Author
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಗರೇಟಿಗೊಂದು ಸೀಕ್ರೇಟ್ ರೂಮ್ (Cigarettes Secret Room) ಮಾಡಿ, ನಕಲಿ ವಿದೇಶಿ ಬ್ರ್ಯಾಂಡೆಡ್ ಸಿಗರೇಟ್ಗಳನ್ನ ಮಾರಾಟ ಮಾಡ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದಾರೆ. https://ainlivenews.com/good-news-for-grilahakshmi-dont-worry-if-you-dont-have-enough-money/ ವಿದೇಶಿ ಸಿಗರೇಟ್ಗಳನ್ನ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಹಿಂಭಾಗದ ರಸ್ತೆಯ ಗೊಡೌನ್ನಲ್ಲಿದ್ದ ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್ಗಳನ್ನ ಸಿಸಿಬಿ ಆರ್ಥಿಕ ಅಪರಾಧ ದಳದ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಅಂಡ್ ಟೀಂ ಪತ್ತೆ ಮಾಡಿದೆ. ಬಳಿಕ ಗೊಡೌನ್ ಸೀಜ್ ಮಾಡಿದೆ. ಲೈಟರ್ ಗೊಡೌನ್ನಲ್ಲಿ ಮಾಡಿಸಿದ್ದ ವುಡ್ ಶೆಲ್ಫ್ ನಲ್ಲೇ ಸೀಕ್ರೇಟ್ ರೂಮ್ಗೆ ದಾರಿ ಮಾಡಿಡಲಾಗಿತ್ತು. ಕಿಚನ್ ಕಬೋರ್ಡ್ನಂತೆ ಸಣ್ಣ ಕಿಂಡಿಯಷ್ಟು ಡೋರ್ ಇಡಲಾಗಿತ್ತು. ಒಂದು ವೇಳೆ ಪೊಲೀಸರು ಬಂದರೂ ಗೊತ್ತಾಗದ ರೀತಿ ಡೋರ್ ಮಾಡಿಸಿದ್ದ ಗೋಡೋನ್ ಮಾಲೀಕ ಲಲಿತ್, ವಿದೇಶಿ ಬ್ರಾಂಡೆಡ್ಗಳ ಹೆಸರಲ್ಲಿ ನಕಲಿ ಸಿಗರೇಟ್ ಮಾರಾಟ ಮಾಡುತ್ತಿದ್ದರು
ಕಲಬುರಗಿ: ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿ ಸಮೀಕ್ಷೆಯ ಕಾಂತರಾಜು ವರದಿ ಬೇಡವೇ ಬೇಡ ಅಂತ ಕಲಬುರಗಿಯ ವೀರಶೈವ ಮಹಾಸಭಾದ ಯುವ ಘಟಕ ಇಂದು ರಕ್ತದಲ್ಲಿ ಸಹಿ ಸಂಗ್ರಹ ಮಾಡಿತು.. ಯುವ ಮುಖಂಡ ಎಂಎಸ್ ಪಾಟೀಲ್ ಸೇರಿದಂತೆ ಹಲವಾರು ಯುವಕರು ನಗರದ ಆನಂದ್ ವೃತ್ತದ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಅಷ್ಟೇಅಲ್ಲ ಸರ್ಕಾರ ಈ ವರದಿಯನ್ನ ನಾವು ಒಪ್ಪುವುದಿಲ್ಲ ಹೀಗಾಗಿ ಕಾಂತರಾಜು ವರದಿ ಪ್ರಕಟಿಸಬಾರದು ಅಂತ ಹೇಳಿದ್ರು..
ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಸಿದ್ದು ಕುಂದುಗೋಳ ಅವರ ನೇತೃತ್ವದಲ್ಲಿ ಈ ದೇಶದ ಬೆನ್ನೆಲುವಾದ ಪ್ರಗತಿಪರ ರೈತರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಡಾ.ರಮೇಶ ಮಹಾದೇವಪ್ಪನವರಿಗೆ ಆತ್ಮೀಯವಾಗಿ ಸನ್ಮಾನಿಸಿ ಹೃದಯ ತುಂಬಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಿವಾನಂದ ಹೊಸಳ್ಳಿ, ಸೋಮಣ್ಣ ಸವಾಸೆ, ಅಶೋಕ ದೊಡ್ಡಮನಿ, ಮಲ್ಲಪ್ಪ ಸವ್ವಾಸರ, ಎಲ್ಲಪ್ಪ ತಡಸೋದ, ಶ್ರೀ ಫಕೀರಪ್ಪ ಮೋರಬದ, ಉಮೇಶ್ ಮೋರಬದ, ಶಾಂತಪ್ಪ ಸತ್ತೂರು, ಸಿರಿಗದ್ದೆ ಇನ್ನು ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
ಬೆಂಗಳೂರು: ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನ ಜನರಿಗೆ ತಲುಪಿಸಲು ಸರ್ಕಸ್ ಮಾಡುತ್ತಿದೆ. ಅದರಲ್ಲೂ ಮಹಿಳೆಯರಿಗೆ ಅನುಕೂಲವಾಗುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ (Gruhalakshmi) ಸವಾಲುಗಳು ದಿನಕ್ಕೊಂದು ಬರುತ್ತಿದೆ. ಹೀಗಾಗಿ ಗೃಹಲಕ್ಷ್ಮಿ ತಾಂತ್ರಿಕ ದೋಷ ನಿವಾರಣೆಗಾಗಿ ಮನೆಬಾಗಿಲಲ್ಲಿ ದಾಖಲೆ ಸಂಗ್ರಹಕ್ಕೆ ಇಲಾಖೆ ರೆಡಿಯಾಗಿದೆ. https://ainlivenews.com/health-service-chief-minister-siddaramaiah-launched-new-262-ambulances/ ಗೃಹಲಕ್ಷ್ಮಿ ಗ್ಯಾರಂಟಿ ಜಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಿನಕ್ಕೊಂದು ಕಸರತ್ತು ನಡೆಸುತ್ತಿದೆ. ಆದರೆ ಈಗ ತಾಂತ್ರಿಕ ದೋಷದ ಪರಿಣಾಮ ಬರೋಬ್ಬರಿ 5-6 ಲಕ್ಷದಷ್ಟು ಗೃಹಲಕ್ಷ್ಮಿಯರಿಗೆ ದುಡ್ಡು ಜಮೆಯಾಗಿಲ್ಲ. ಹೀಗಾಗಿ ಗ್ರಾಮ-ಗ್ರಾಮಗಳಲ್ಲಿ ಅದಾಲತ್ಗೆ ತಯಾರಾಗಿದೆ. ಆದರೆ ಅದಾಲತ್ಗೂ ಮುನ್ನಾ ಅಂಗನವಾಡಿ ಕಾರ್ಯಕರ್ತೆಯರು (Anganwadi Worker) ಖುದ್ದು ಮನೆಗಳಿಗೆ ತೆರಳಿ, ತಾಂತ್ರಿಕ ದೋಷಗಳ ಕಾರಣ ಹುಡುಕಿ ಪೂರಕ ದಾಖಲೆ ಕಲೆಹಾಕಲಿದ್ದಾರೆ. ಸುಮಾರು 5-6 ಲಕ್ಷದಷ್ಟು ಗೃಹಲಕ್ಷ್ಮಿ ದುಡ್ಡು ಜಮೆಯಾಗದ ಯಜಮಾನಿಯರ ಮನೆ ಬಾಗಿಲಿಗೆ ತೆರಳಿ ದಾಖಲೆ ಸಂಗ್ರಹಿಸಿ, ಅವರಿಗೆ ಹಣ ತಲುಪಲು ಕ್ರಮ ವಹಿಸಲಾಗುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ದುಡ್ಡು ಜಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಈಗಾಗಲೇ…
ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ತಾತನ ಕೊಲೆ ಮಾಡಿದ್ದ ಮೊಮ್ಮಗ ಹಾಗು ಆ ಮೊಮ್ಮಗನ ತಾಯಿ ಇಬ್ಬರನ್ನ ಪೋಲೀಸರು ಬಂಧಿಸಿದ್ದಾರೆ. ಕಲಬುರಗಿಯ ಜವಳಗಾ ಗ್ರಾಮದ ಬಳಿ ಇದೇ 27 ರಂದು ಸಿದ್ರಾಮಪ್ಪ ಎಂಬಾತನ ಕೊಲೆಯಾಗಿತ್ತು. ತನ್ನ ತಾಯಿಗೆ ಬೈದ ಅನ್ನೋ ಕಾರಣಕ್ಕೆ ಮೊಮ್ಮಗ ಆಕಾಶ್ ಕೊಲೆ ಮಾಡಿದ್ದ ಇದೇ ವಿಚಾರಕ್ಕೆ ಕೊಲೆ ಮಾಡಲು ಮಗನಿಗೆ ಪ್ರಚೋದನೆ ಕೊಟ್ಟಳು ಅನ್ನೋ ಕಾರಣಕ್ಕೆ ಆಕಾಶನ ತಾಯಿ ಸರೋಜಾಳನ್ನ ಬಂಧಿಸಲಾಗಿದೆ. ನರೋಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು..
ಹುಬ್ಬಳ್ಳಿ: ಇಲ್ಲಿನ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗುರುವಾರ ಶ್ರೀರಾಮ ಸೇನಾ ಸಂಘಟನೆ ಕಾರ್ಯಕರ್ತರು ಸರಳವಾಗಿ ಕನಕದಾಸ ಜಯಂತಿ ಆಚರಿಸಿದರು. ಜೈ ಶ್ರೀರಾಮ ಘೋಷಣೆ ಹಾಕುತ್ತ ಮೈದಾನ ಪ್ರವೇಶಿಸಿದ ಕಾರ್ಯಕರ್ತರು, ಗಂಗಾಜಲ ಸಿಂಪಡಿಸಿ, ಮೈದಾನ ಶುದ್ಧೀಕರಿಸುತ್ತ ಪೆಂಡಾಲ್ ಬಳಿ ಬಂದರು. ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಪೂರ್ವ ಸಾಮೂಹಿಕವಾಗಿ ಶ್ರೀರಾಮ ಮಂತ್ರ ಪಠಿಸಿದರು. ನಂತರ ಪುನಃ ಪೆಂಡಾಲ್ ಆವರಣದಲ್ಲಿ ಗಂಗಾಜಲ ಸಿಂಪಡಿಸಿ, ಗೋಮಾತಾಕೀ ಜೈ, ಕನಕದಾಸ ಕೀ ಜೈ ಎಂದು ಘೋಷಣೆ ಕೂಗಿದರು. ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘಟನೆ ಅಧ್ಯಕ್ಷ ಗಂಗಾಧರ ಕುಲಕರ್ಣಿ ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಅಣ್ಣಪ್ಪ ದೀವಟಗಿ, ಮಂಜುನಾಥ ಕಾಟಗರ, ಗಣೇಶ ಕದಂ, ಬಸವರಾಜ ಗೌಡರ, ಬಸು ದುರ್ಗದ, ಪ್ರವೀಣ ಎಂ., ಮಹಾಂತೇಶ ತುಂಬಳಿ, ಚಂದ್ರು ಕೋಳೂರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೈದಾನದಲ್ಲಿ ಜಯಂತಿ ಆಚರಣೆಗೆ ಮಹಾನಗರ ಪಾಲಿಕೆ ಷರತ್ತು ಬದ್ಧ ಅನುಮತಿ ನೀಡಿತ್ತು. ಮುಂಜಾಗ್ರತಾ ಕ್ರಮವಾಗಿ ಮೈದಾನದಲ್ಲಿ ವಾಹನ ಪಾರ್ಕಿಂಗ್…
ಬೆಂಗಳೂರು: ಜಾತಿಗಣತಿ ವರದಿ ಬಂದ ಬಳಿಕ ಜಾರಿ ಮಾಡಬೇಕಾ? ಬೇಡವಾ ಅಂತ ಸಿಎಂ ಸಿದ್ದರಾಮಯ್ಯ (Siddaramaiah) ತೀರ್ಮಾನ ಮಾಡ್ತಾರೆ ಅಂತ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಸ್ಪಷ್ಟಪಡಿಸಿದ್ದಾರೆ. https://ainlivenews.com/big-relief-for-dk-from-high-court-what-did-former-cm-hdk-say/ ಜಾತಿಗಣತಿ ವರದಿ ಜಾರಿ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಈಗಾಗಲೇ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರ ಜನವರಿವರೆಗೆ ವಿಸ್ತರಣೆ ಮಾಡಲಾಗಿದೆ. ಅವರು ಮೊದಲು ಜಾತಿಗಣತಿ ವರದಿ (Caste Census Report) ಕೊಡಲಿ ಆಮೇಲೆ ಬಿಡುಗಡೆ ಮಾಡಬೇಕಾ, ಬೇಡ್ವಾ? ಅನ್ನೋದನ್ನ ಚರ್ಚೆ ಮಾಡ್ತೀವಿ. ನಾನು, ಸಿಎಂ ಯಾರು ಕೂಡಾ ವರದಿ ನೋಡಿಲ್ಲ. ವರದಿ ಇಲ್ಲದೇ ಚರ್ಚೆ ಮಾಡೋದು ಸರಿಯಲ್ಲ ಅಂತ ಹೇಳಿದ್ದಾರೆ. ವರದಿ ಸ್ವೀಕಾರ ಮಾಡಬಾರದು ಅಂತ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಹಿ ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯಿಸಿ, ವರದಿ ನೋಡದೇ ಸ್ವೀಕಾರ ಮಾಡಬೇಕು-ಬೇಡ ಅನ್ನೋದು ಸರಿಯಲ್ಲ. ಗಣತಿ ಕುರಿತು ಸಾಕಷ್ಟು ವರದಿಗಳು ಬಂದಿವೆ. ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕ ಜಾರಿ…
ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿಸೆಂಬರ್ 5ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ, ಕರಾವಳಿಯಲ್ಲಿ ಒಣಹವೆ ಇತ್ತು. ಚಾಮರಾಜನಗರದಲ್ಲಿ 17.3 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಕೆಲವೆಡೆ ನಿನ್ನೆ ತುಂತುರು ಮಳೆಯಾಗಿದೆ. ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೈಕೋರ್ಟ್ನಿಂದ (Highcourt) ರಿಲೀಫ್ ಸಿಕ್ಕಿಲ್ಲ ಇವರೇ ತೆಗೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. https://ainlivenews.com/from-the-government-to-the-families-of-priests-good-news/ ಈ ವಿಚಾರ ಕುರಿತು ನಗರದಲ್ಲಿಮಾತನಾಡಿದ ಅವರು, ಸ್ವಲ್ಪ ದಿನ ಇದನ್ನ ಮುಂದಕ್ಕೆ ಎಳೆಯಬೇಕಲ್ಲ. ಬಹುಶಃ ಗ್ಯಾರಂಟಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದುಬಿಡ್ತೀವಿ. ಅಧಿಕಾರಕ್ಕೆ ಬಂದಮೇಲೆ ಎಲ್ಲಾ ಕೇಸ್ಗಳನ್ನ ಮುಚ್ಚಿಹಾಕಬಹುದು ಅಂತಾ ಐದಾರು ತಿಂಗಳು ಮುಂದೂಡ್ತಿದ್ದಾರೆ. ಇದೆಲ್ಲಾ ಅವರ ತಂತ್ರಗಾರಿಕೆ ಅಷ್ಟೇ. ಅದು ಮುಂದೆ ಏನೇನಾಗುತ್ತೋ ನೋಡೋಣ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ. ನಾನು ವಕೀಲನಾಗಿರುವುದಕ್ಕೆ ಕೇಸ್ ವಾಪಸ್ ತೆಗೆದುಕೊಂಡಿದ್ದು ಎಂಬ ಸಿಎಂ ಸಿದ್ದು ಹೇಳಿಕೆಗೆ ವ್ಯಂಗ್ಯವಾಡಿದ ಹೆಚ್ಡಿಕೆ, ಅವರು ದೊಡ್ಡ ವಕೀಲರು ಅಂತ ಗೊತ್ತು ನನಗೆ. ಇವರೊಬ್ಬರೇ ಕಾನೂನು ತಿಳಿದುಕೊಂಡಿದ್ದಾರಲ್ವಾ. ಅದಕ್ಕೆ ಅರ್ಕಾವತಿ ಡಿನೋಟಿಫಿಕೇಷನ್ ತೆಗೆದು ರಿಡೋ ಮಾಡಿದ್ರಿ. ಕೆಂಪಣ್ಣನ ಆಯೋಗ ಮಾಡಿ ಉಳಿದುಕೊಂಡ್ರಲ್ಲ. ಆ ರೀತಿಯ ವಕೀಲರು ಇವರು. ಜನಸಾಮಾನ್ಯರಿಗೆ ಒಂದು ನ್ಯಾಯ, ಇವರಿಗೊಂದು ನ್ಯಾಯ. ಆ ವಕೀಲಿಕೆಲಿಯಲ್ಲಿ ಇವರು ಬುದ್ದಿವಂತರಿದ್ದಾರೆ. ಎಸಿಬಿ…