Author: AIN Author

ಬೆಂಗಳೂರು:- ನೈಸ್‌ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಅತಿ ವೇಗವಾಗಿ ಬಂದ ಗೂಡ್ಸ್‌ ವಾಹನವು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಹಿನ್ನೆಲೆ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನೈಸ್ ರಸ್ತೆಯ ವಜ್ರಮುನೇಶ್ವರ ಅಂಡರ್ ಪಾಸ್ ಬಳಿ ಘಟನೆ ನಡೆದಿದೆ. ನಿರ್ಮಲಾ (45) ಬೈಯಣ್ಣ (55) ಮೃತ ದಂಪತಿ ಆಗಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗೂಡ್ಸ್ ವಾಹನ ಅತಿವೇಗವಾಗಿ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್‌ನಿಂದ ರಸ್ತೆಗೆ ಬಿದ್ದು ತೀವ್ರ ಗಾಯದಿಂದ ಬಳಲುತ್ತಿದ್ದ ಗಾಯಾಳು ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲೂ ಯಾರೊಬ್ಬರು ಕೂಡ ಸರಿಯಾದ ಸಮಯಕ್ಕೆ ಆಂಬುಲೆನ್ಸ್‌ ಲಭ್ಯವಾಗಿಲ್ಲ. ಇನ್ನು ಗೂಡ್ಸ್ ವಾಹನದಲ್ಲಿಯೂ ಆವರನ್ನು ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ದಂಪತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಸಂಬಂಧ ತಲಘಟ್ಟಪುರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದಂಪತಿ ಇಂದು ಬೆಳಗ್ಗೆ ಹಾರಗದ್ದೆಗೆ ಗೃಹ ಪ್ರವೇಶಕ್ಕೆ ಹೋಗಿದ್ದರು.…

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ ಐದು ದಿನ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್, ಕಲಬುರ್ಗಿ, ರಾಯಚೂರು, ಯಾದಗಿರಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಒಟ್ಟು 17 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಿಧಿಲಿ ಚಂಡಮಾರುತ ಬಳಿಕ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗಿದೆ. ಮಿಚುವಾಂಗ್​​ ಚಂಡಮಾರುತವು ನವೆಂಬರ್​ 30ರ ವೇಳೆಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಚಂಡಮಾರುತವು ಗಂಟೆಗೆ 45 ರಿಂದ 80 ಕಿಲೋ ಮೀಟರ್​​ ವೇಗದಲ್ಲಿ ಬಂಗಾಳಕೊಲ್ಲಿ ಕರಾವಳಿ ಭಾಗಕ್ಕೆ ಬಂದಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಬೆಂಗಳೂರು:- ಪಂಚರಾಜ್ಯ ಚುನಾವಣೆಯಲ್ಲಿ ಕನಿಷ್ಠ ಮೂರು ಕಡೆ ಅಧಿಕಾರ ಹಿಡಿಯುತ್ತೇವೆ ಎಂದು ಸಚಿವ ಎಂ ಬಿ ಪಾಟೀಲ್​ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪಂಚರಾಜ್ಯ ಚುನಾವಣೆಯಲ್ಲಿ ಐದು ರಾಜ್ಯಗಳ ಪೈಕಿ ಕನಿಷ್ಠ ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತೇವೆ. ನಾಲ್ಕನೇ ಕಡೆಯೂ ಅಧಿಕಾರ ಹಿಡಿಯೋ ಸಾಧ್ಯತೆ ಇದೆ. ಎಕ್ಸಿಟ್ ಪೋಲ್ ನೋಡಿ ಗೊತ್ತಾಗುತ್ತದೆ ಎಂದರು. ಇನ್ನೂ ಮೈಸೂರು ‌ಹಾಗೂ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಮಕ್ಕಳ ಮಾರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದು ಅತ್ಯಂತ ಅಕ್ಷಮ್ಯ ಹಾಗೂ ಹೀನಾಯ ಕೆಲಸ. ವೈದ್ಯರು ಕೂಡಾ ಶಾಮೀಲಾಗಿ ಮಾಡುತ್ತಿರುವುದು ಅಪರಾಧ. ಯಾವುದೇ ಸರ್ಕಾರವಿದ್ದರೂ ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಇಂಥ ಕೆಲಸ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ತಡೆಗಟ್ಟಲು ಸರ್ಕಾರ ಬದ್ಧ. ಯಾರೇ ಹೆಣ್ಣು ಭ್ರೂಣ ಹತ್ಯೆ ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಹೇಳಿದರು

Read More

ಬ್ಯಾಡಗಿ:- ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ಸರ್ಕಾರ ಸಿದ್ಧ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 5 ಕೆಪಿಎಸ್ ಶಾಲೆಯನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಶಿಕ್ಷಕರ ನೇಮಕ ಮಾಡುವ ಮೂಲಕ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ಸರ್ಕಾರ ಸಿದ್ಧವಿದೆ ಎಂದರು. ಕರ್ನಾಟಕದ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಕದರಮಂಡಲಗಿ ಗ್ರಾಮದಲ್ಲಿ ಹಳೇ ವಿದ್ಯಾರ್ಥಿಗಳು ₹1.16 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪ್ರಾಥಮಿಕ ಶಾಲೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿದವರಿದ್ದಾರೆ. ಅವರೆಲ್ಲರೂ ತಾವು ಕಲಿತ ಶಾಲೆಗೆ ಸಾಧ್ಯವಾದಷ್ಟು ಧನಸಹಾಯ ಮಾಡಿದ್ದೇ ಆದಲ್ಲಿ ಸರ್ಕಾರದ ಹೊರೆ ಇಳಿಸುವುದರ ಜೊತೆಗೆ ದೇಶದಲ್ಲಿಯೇ ರಾಜ್ಯದ ಶಿಕ್ಷಣ ಇಲಾಖೆ ಮಾದರಿಯಾಗಲಿದೆ ಎಂದರು. ಸರ್ಕಾರಿ ಶಾಲೆಗೆ ಸಾರ್ವಜನಿಕರ ಸೇವೆ ಸಣ್ಣ ವಿಷಯವಲ್ಲ. ಗ್ರಾಮದಲ್ಲಿ ₹1 ಕೋಟಿಗೂ ಅಧಿಕ ಹಣವನ್ನು ವ್ಯಯಿಸಿ ಹಳೆಯ ವಿದ್ಯಾರ್ಥಿಗಳು ಶಾಲೆಯ ಕಟ್ಟಡವನ್ನು ನಿರ್ಮಿಸಿ ಸರ್ಕಾರಕ್ಕೆ ನೀಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

Read More

ಬಳ್ಳಾರಿ:- ಶಾಸಕ ನಾರಾ ಭರತ್ ರೆಡ್ಡಿ ಹಾಗೂ ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬೇಡ ಎಂದು ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ. ಈ ಸಂಬಂಧ ಬಳ್ಳಾರಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಈ ಅವದಿಯಲ್ಲಿ, ಮುಂದಿನ ಅವಧಿಯಲ್ಲೂ ಕಾಂಗ್ರೆಸ್‌ ಆಡಳಿತ ನಡೆಸಲಿದೆ. ಈ ವಿಚಾರದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬೇಡ. ನಾವಿಬ್ಬರೂ ಅಣ್ಣ ತಮ್ಮಂದಿರಂತೆ ಇದ್ದೇವೆ, ನಮ್ಮಿಬ್ಬರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬೇಡ ಎಂದು ಸಚಿವ ಬಿ.ನಾಗೇಂದ್ರ ಸಿಡಿಮಿಡಿಗೊಂಡಿದ್ದಾರೆ. ಮೇಯ‌ರ್ ಆಯ್ಕೆ ವಿಚಾರದಲ್ಲಿ ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಗೊಂದಲಗಳಿಲ್ಲ, ಪ್ರಾದೇಶಿಕ ಆಯುಕ್ತರು ನಾನಾ ಕಾರಣಗಳಿಂದ ಬರಲು ಸಾಧ್ಯವಾಗಿಲ್ಲ, ಹಿನ್ನೆಲೆ ಮೇಯ‌ರ್ ಚುನಾವಣೆಯನ್ನು ಡಿ.19ಕ್ಕೆ ಮುಂದೂಡಲಾಗಿದೆ. ಈ ವಿಚಾರವನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ ಬಣ, ಸಚಿವ ಬಿ.ನಾಗೇಂದ್ರ ಬಣ ಎಂದು ನಮ್ಮನಮ್ಮಲ್ಲೇ ಬೆಂಕಿ ಹಚ್ಚುವ ಕೆಲಸ ಬೇಡ, ನಮ್ಮಲ್ಲಿ ಯಾವುದೇ ಬಣಗಳಿಲ್ಲ, ನಮ್ಮದು ಕಾಂಗ್ರೆಸ್ ಬಣ, ಮೇಯ‌ರ್…

Read More

ಮಹದೇವಪುರ: ಸಾಹಿತ್ಯದ‌ ಮೂಲಕ ಅಸ್ಪೃಶ್ಯತೆಯನ್ನ ಹೋಗಲಾಡಿಸಿದ ಮಹಾನ್ ಪುರುಷ ಕನಕ ದಾಸರು. ಜಾತಿ ಸಂಕೋಲೆಯನ್ನು ಕಳಚಿದ ಭಕ್ತ ಶ್ರೇಷ್ಠ ಕನಕದಾಸರ ತತ್ವಾದರ್ಶಗಳನ್ನು ಹಾಗೂ ಕೀರ್ತನೆಯ ಸಂದೇಶಗಳನ್ನು ಪಾಲಿಸುವುದು ನಾವು ಅವರಿಗೆ ಕೊಡುವ ಅತಿ ದೊಡ್ಡ ಗೌರವವಾಗಿದೆ ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಕಾರ್ಯದರ್ಶಿ ಆರ್,ರಾಮಕೃಷ್ಣಪ್ಪ ಅವರು ಹೇಳಿದರು. ಮಹದೇವಪುರ ಕ್ಷೇತ್ರದ ಗುಂಜೂರು ಪಾಳ್ಯ ಗ್ರಾಮದಲ್ಲಿ ಸಂತ ಕನಕದಾಸರ 536 ನೇ ಜಯಂತಿ ಕಾರ್ಯಕ್ರಮದಲ್ಲಿ  ಕನಕದಾಸರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಕನಕದಾಸರ ಕೀರ್ತನೆಯಲ್ಲಿ ಅಗಾಧ ವೈಚಾರಿಕ ಚಿಂತನೆ ಯಾವ ಮಟ್ಟದಲಿದೆ ಎಂಬುದು ತಿಳಿಯುತ್ತದೆ ಅವರು ಬರಿ ಹರಿ ಯನ್ನು ಹೊಗಳಿ ದಾಸ ಶ್ರೇಷ್ಠ ರಾಗಲಿಲ್ಲ ಅಂದಿನ ಕಾಲದಲ್ಲಿ ಇಂದಿಗೂ ನಡೆಯುತ್ತಿರುವ  ಮೌಡ್ಯದ ಅಂದಾಚರಣೆಗಳನ್ನೂ ತೀಕ್ಷ್ಣವಾಗಿ ಟೀಕಿಸಿದ್ದರು ಎಂದು ಹೇಳಿದರು. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜನರ ಮನಸ್ಸುಗಳನ್ನು ಬದಲಿಸುತ್ತಾ ಸಮಾಜವನ್ನು ಸರಿದಾರಿಗೆ ತರುಲು ಶ್ರಮಿಸಿದರು. ಅವರ ಜೀವನ ಹಾಗೂ ಸಾಹಿತ್ಯ ಎರಡೂ ನಮಗೆ ಉತ್ತಮ ಮಾರ್ಗವನ್ನು ತೋರುತ್ತವೆ ಎಂದರು. ಕುಲ…

Read More

ದಾವಣಗೆರೆ:-  ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿನ ಎಟಿಎಂ ಗಳ ಭದ್ರತೆ ಸಂಬಂಧ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ ಜಿಲ್ಲೆಯಲ್ಲಿನ ಎಟಿಎಂ ಗಳ ಭದ್ರತೆ ಸಂಬಂಧ ಎಲ್ಲಾ ಬ್ಯಾಂಕ್ಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಎಲ್ಲಾ ಬ್ಯಾಂಕ್ ಗಳ ಮುಖ್ಯಸ್ಥರುಗಳು 24*7 ಕಾರ್ಯ ನಿರ್ವಹಿಸುವ ಎಲ್ಲಾ ಎಟಿಎಂ ಗಳಲ್ಲಿ ಕಡ್ಡಾಯವಾಗಿ ಉತ್ತಮ ಗುಣ ಮಟ್ಟದ ಸಿಸಿಟಿವಿ ಹಾಕುವುದು, 24*7 ಗಾರ್ಡ್ ವ್ಯವಸ್ಥೆ ಮಾಡುವುದು. ಸಿಸಿಟಿವಿ ಒಳಗಡೆ ಹಾಕುವದರ ಜೊತೆಗೆ ಎಟಿಎಂ ಗಳ ಹೊರಭಾಗದಲ್ಲಿ ಎಟಿಎಂ ಗಳಿಗೆ ಹಾಗೂ ಎಟಿಎಂ ಮುಂದೆ ಸಂಚರಿಸುವವರು ಕಾಣುವಂತೆ ಸಿಸಿಟಿವಿಗಳನ್ನು ಆಳವಡಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ಬ್ಯಾಂಕ್ ಗಳಲ್ಲಿ ಒಳಗಡೆ ಹೊರಗಡೆ ಸಿಸಿಟಿವಿ ವ್ಯವಸ್ಥೆ ಮಾಡಬೇಕು ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುತ್ತಿರಬೇಕು. ಬ್ಯಾಂಕ್ ಗಳಲ್ಲಿ ಅಲರಾಂ (ಎಚ್ಚರಿಕೆ ಘಂಟೆ) ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುತ್ತಿರಬೇಕು. ಬ್ಯಾಂಕುಗಳಿಗೆ ಬರುವ ಸಾರ್ವಜನಿಕರಲ್ಲಿ ಅನುಮಾನಸ್ಪದ ವ್ಯಕ್ತಿಗಳು ಯಾರಾದರೂ…

Read More

ಧಾರವಾಡ:- ದೇಶದ ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನ ಸಭೆ ಚುನಾವಣೆಗಳಲ್ಲಿ ಬಹುತೇಕ ರಾಜ್ಯಗಳಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ಸಿಗುತ್ತದೆ. ಹಾಗಾಗಿ ರಾಜಸ್ತಾನ ಸೇರಿ ಬಹುತೇಕ ರಾಜ್ಯಗಳಲ್ಲಿ ಮತದಾರ ನಮ್ಮಗೆ ಅಧಿಕಾರ ನೀಡುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ‌ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ದುಮ್ಮವಾಡ ಗ್ರಾಮದಲ್ಲಿ ಮಾಧ್ಯಮಕ್ಲೆ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಜಸ್ತಾನದ ಚುನಾವಣೆ ಉಸ್ತುವಾರಿ ಆಗಿದೆ. ಅಲ್ಲಿಯ ವಾತವರಣವು ಬಿಜೆಪಿ ಪರ ಇದ್ದು, ನಮ್ಮಗೆ ರಾಜಸ್ತಾನದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಐದು ರಾಜ್ಯಗಳಲ್ಲಿ‌ಅಧಿಕಾರಕ್ಕೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ನಮ್ಮ ಪಕ್ಷದ ನಾಯಕರೆಲ್ಲರು ಕೂಡಿ ಕೆಲಸ ಮಾಡುತ್ತಿದ್ದೇವೆ ಎಂದರು. ಇನ್ನೂ ದೇಶವ್ಯಾಪಿ ವಿಕಶಿತ ಭಾರತ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಜನರು ಇದನ್ನು ಮೋದಿ ಗ್ಯಾರಂಟಿ ಗಾಡಿ ಎಂದು ಗುರುತ್ತಿಸುತ್ತಿದ್ದಾರೆ. ಈ ಯಾತ್ರೆಯ ಉದ್ದೇಶ, ಭಾರತ ಸರ್ಕಾರದ ಯೋಜನೆಗಳು ಎಷ್ಟರಮಟ್ಟಿಗೆ ಜನಗಳಿಗೆ ತಲುಪಿವೆ ಹಾಗೂ ಕೇಂದ್ರ ಸರ್ಕಾರ ಇದೂವರೆಗೂ…

Read More

ಕೆ.ಆರ್.ಪುರ: -ಶಾಲೆಗಳಿಂದಲೇ ವಿದ್ಯಾರ್ಥಿಗಳಿಗೆ ನಾಡು,ನುಡಿ ಹಾಗೂ ಸಮಾಜಕ್ಕೆ ಶ್ರಮಿಸಿದ ಮಹನೀಯರ ಕುರಿತಾದ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಅಂಬೇಡ್ಕರ್ ನಗರ ಶಾಲೆಯ  ಎಸ್ ಡಿಎಂಸಿ ಮುಖ್ಯಸ್ಥ ಮಂಜುನಾಥ್ ಅವರು ತಿಳಿಸಿದರು. ಕ್ಷೇತ್ರದ ರಾಮಮೂರ್ತಿನಗರದ ಸಮೀಪದ ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ  ಸಂತಕವಿ ದಾಸ ಶ್ರೇಷ್ಠ ಭಕ್ತ ಕನಕದಾಸರ 536 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 15 ನೇ ಶತಮಾನದಲ್ಲಿ  ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಕ್ಕನ್ನು ಹೋಗಲಾಡಿಸಲು ಅಗಲಿಗಳು ಶ್ರಮಿಸಿದ ಮಹಾನೀಯ ಕನಕದಾಸರು , ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಪ್ರಮುಖರಾಗಿ ಗುರಿತಿಸಿಕೊಂಡವರು . ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಗರಾಗಿ , ಪುರಂದರದಾಸರ ರೀತಿ ಕರ್ನಾಟಕ ಸಂಗೀತಕ್ಕೆ ಮತ್ತು ಮೂಲಭೂತ ಸಿದ್ಧಾಂತಗಳಿಗೆ ದೊಡ್ಡ ಕಾಣಿಕೆಯನ್ನು ನೀಡಿದವರು ಎಂದು ವಿವರಿಸಿದರು . ಇನ್ನೂ ಕನಕದಾಸರ ಜಯಂತಿ ಯಾವುದೇ ವ್ಯಕ್ತಿ ಹಾಗೂ ಸಮಾಜದ ಆಚರಣೆಯಾಗದೆ ಸಾರ್ವಜನಿಕರ ಆಚರಣೆ  ಆಚರಣೆಯಾದಾಗ ಮಾತ್ರ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಬಹುದಾಗಿದೆ ಇಂತಹ ಮಹಾತ್ಮರ…

Read More

ಬೆಂಗಳೂರು:- ನಿಮ್ಹಾನ್ಸ್​​ನಲ್ಲಿ ಮಗು ಸಾವು ಘಟನೆ ಸಂಬಂಧ ವರದಿ ಕೇಳಿದ್ದು, ಬಳಿಕ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಿಮ್ಹಾನ್ಸ್​ನಲ್ಲಿ ಹಾಸನ ಮೂಲದ ಮಗು ಸಾವು ಮತ್ತು ಪ್ರತಿಭಟನೆ ವಿಚಾರವಾಗಿ ವರದಿ ಕೇಳಿದ್ದೇನೆ. ಅಧಿಕಾರಿಗಳು ವರದಿ ಕೊಟ್ಟ ನಂತರ ಮುಂದೇನು ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ನಮ್ಮ‌ ಕಡೆಯಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಅಂತ ವೈದ್ಯರು ಹೇಳಿದ್ದಾರೆ. ಎರಡೂ ಕಡೆಯವರ ಜೊತೆ ಮಾತನಾಡುತ್ತೇವೆ. ಲೋಪಗಳು ಆಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಹಾನ್ಸ್ ಮೇಲೆ ಬಹಳ ಒತ್ತಡ ಇದೆ. ಸಾಕಷ್ಟು ರೋಗಿಗಳು ರಾಜ್ಯಾದ್ಯಂತ ಬರುತ್ತಾರೆ. ಕೆಲವೊಮ್ಮೆ ಬೆಡ್​ಗಳು ಸಿಗಲ್ಲ. ನಾನೂ ಕೆಲವೊಮ್ಮೆ ಪ್ರಯತ್ನ ಪಟ್ಟಾಗ ಬೆಡ್ ಸಿಕ್ಕಿಲ್ಲ. ಇದಕ್ಕೆ ಏನದರೂ ಪರ್ಯಾಯ ವ್ಯವಸ್ಥೆ ಕುರಿತು ಚರ್ಚೆ ಮಾಡುತ್ತೇವೆ ಎಂದರು. ಆರೋಗ್ಯ ಕವಚ ಸೇವೆ ಗುಣಮಟ್ಟದ ವೃದ್ಧಿಯಲ್ಲಿ ಕುಂಠಿತವಾಗಿರೋದು ನಿಜ.‌ ಈ ಸೇವೆಯಲ್ಲಿ ಸಾಕಷ್ಟು ಕುಂದುಕೊರತೆಗಳಿವೆ. ಲೋಪದೋಷಗಳನ್ನು ಸರಿಪಡಿಸಲು ಆರೋಗ್ಯ ಇಲಾಖೆ ಕಟಿಬದ್ಧವಾಗಿದೆ. 262 ಹೊಸ ಆಂಬ್ಯುಲೆನ್ಸ್ ಆರೋಗ್ಯ…

Read More