ಕೆ.ಆರ್.ಪುರ: -ಶಾಲೆಗಳಿಂದಲೇ ವಿದ್ಯಾರ್ಥಿಗಳಿಗೆ ನಾಡು,ನುಡಿ ಹಾಗೂ ಸಮಾಜಕ್ಕೆ ಶ್ರಮಿಸಿದ ಮಹನೀಯರ ಕುರಿತಾದ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಅಂಬೇಡ್ಕರ್ ನಗರ ಶಾಲೆಯ ಎಸ್ ಡಿಎಂಸಿ ಮುಖ್ಯಸ್ಥ ಮಂಜುನಾಥ್ ಅವರು ತಿಳಿಸಿದರು.
ಕ್ಷೇತ್ರದ ರಾಮಮೂರ್ತಿನಗರದ ಸಮೀಪದ ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಸಂತಕವಿ ದಾಸ ಶ್ರೇಷ್ಠ ಭಕ್ತ ಕನಕದಾಸರ 536 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
15 ನೇ ಶತಮಾನದಲ್ಲಿ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಕ್ಕನ್ನು ಹೋಗಲಾಡಿಸಲು ಅಗಲಿಗಳು ಶ್ರಮಿಸಿದ ಮಹಾನೀಯ ಕನಕದಾಸರು , ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಪ್ರಮುಖರಾಗಿ ಗುರಿತಿಸಿಕೊಂಡವರು .
ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಗರಾಗಿ , ಪುರಂದರದಾಸರ ರೀತಿ ಕರ್ನಾಟಕ ಸಂಗೀತಕ್ಕೆ ಮತ್ತು ಮೂಲಭೂತ ಸಿದ್ಧಾಂತಗಳಿಗೆ ದೊಡ್ಡ ಕಾಣಿಕೆಯನ್ನು ನೀಡಿದವರು ಎಂದು ವಿವರಿಸಿದರು .
ಇನ್ನೂ ಕನಕದಾಸರ ಜಯಂತಿ ಯಾವುದೇ ವ್ಯಕ್ತಿ ಹಾಗೂ ಸಮಾಜದ ಆಚರಣೆಯಾಗದೆ ಸಾರ್ವಜನಿಕರ ಆಚರಣೆ ಆಚರಣೆಯಾದಾಗ ಮಾತ್ರ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಬಹುದಾಗಿದೆ ಇಂತಹ ಮಹಾತ್ಮರ ಕುರಿತು ಮಕ್ಕಳಿಗೆ ಶಾಲೆಗಳಿಂದಲೇ ಕನಕದಾಸರ ತತ್ವ ಸಿದ್ದಾಂತ, ಅವರ ಜೀವನ ಮೌಲ್ಯಗಳ ಪಾಠ ಹೇಳಿಕೊಡಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಬಿ.ವಿ.ಭಾರತಿ,ವಿಜಯಲಕ್ಷ್ಮಿ, ಪ್ರಾಂಶುಪಾಲರು ಪ್ರಕಾಶ್, ಉಪಾನ್ಯಾಸಕರು ಹಾಗೂ ಶಿಕ್ಷಕರು ಇದ್ದರು