ಬೆಂಗಳೂರು:- ನಿಗಮ ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರಿಗೆ ಸ್ಥಾನ ಸಿಗಲಿ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹೊಸಬರಿಗೆ ನಿಗಮ-ಮಂಡಳಿಯಲ್ಲಿ ಅವಕಾಶ ಇಲ್ಲವೇ ಇಲ್ಲ. ಮೂರ್‍ನಾಲ್ಕು ಬಾರಿ ಗೆದ್ದವರಿಗೆ ಅವಕಾಶ ನೀಡಲು ಪಕ್ಷ ಬದ್ಧವಾಗಿದೆ. ನಮ್ಮ ಜಿಲ್ಲೆಯಲ್ಲೂ ಎರಡ್ಮೂರು ಹಿರಿಯ ಶಾಸಕರಿದ್ದಾರೆ. ಅವರಿಗೆ ನಿಗಮ – ಮಂಡಳಿಯಲ್ಲಿ ಅವಕಾಶ ಕೊಟ್ಟೇ ಕೊಡುತ್ತಾರೆ. ಸದನ ಪ್ರಾರಂಭವಾಗುವುದಕ್ಕೆ ಮೊದಲೇ ನೇಮಕವಾದರೆ ಉತ್ತಮ. ಹಿರಿಯರಿಗೆ ಕೊಟ್ಟರೆ ಭಿನ್ನಮತಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದರು. ನಾನು ಕೂಡ ಕಾರ್ಯಕರ್ತರ ಪರವಾಗಿ ಒತ್ತಾಯ ಮಾಡಿದ್ದೇನೆ. ಕಾರ್ಯಕರ್ತರೇ ಪಕ್ಷ ಸಂಘಟನೆಗೆ ಮುಖ್ಯ ಪಾತ್ರ ವಹಿಸುತ್ತಾರೆ. ಯಾವತ್ತೂ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಬೆಳಗಾವಿಯಲ್ಲಿ ಚರ್ಚೆಯಾಗಿಲ್ಲ. ಈ ಬಾರಿಯಾದರೂ ಅವಕಾಶ ಸಿಗುತ್ತದೋ ಎಂದು ಕಾದು ನೋಡಬೇಕು ಎಂದರು.
Author: AIN Author
ಬೆಂಗಳೂರು:- 2024ರಿಂದ ರಾಜ್ಯ ಶಿಕ್ಷಣ ನೀತಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಪ್ರಯತ್ನ ಖಂಡನೀಯ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜಕೀಯ ದುರುದ್ದೇಶಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆದು, 2024ರಿಂದ ರಾಜ್ಯ ಶಿಕ್ಷಣ ನೀತಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಪ್ರಯತ್ನ ಖಂಡನೀಯ ಎನ್‌ಇಪಿ ನಾಗಪುರ ಶಿಕ್ಷಣ, ಉತ್ತರ ಭಾರತದ ಶಿಕ್ಷಣ ನೀತಿಯಲ್ಲ. ಕಾಂಗ್ರೆಸ್‌ನ ರಾಜಕೀಯ ಪ್ರೇರಿತ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ ಎಂದರು. ಪಠ್ಯಕ್ರಮ ಮತ್ತು ಶಿಕ್ಷಣ ನೀತಿ ಪ್ರತ್ಯೇಕ. ಇದರ ಪರಿಜ್ಞಾನ ಇಲ್ಲಿನ ಸಿಎಂ, ಶಿಕ್ಷಣ ಸಚಿವರಿಗೆ ಇದೆಯೇ? ಕಲಿಯುವಿಕೆ ಮತ್ತು ಕಲಿಸುವುದು ಇದು ರಾಷ್ಟ್ರೀಯ ಶಿಕ್ಷಣ ನೀತಿ ಎಂದರು. ಹಳೆಯ ನೀತಿಯಲ್ಲಿ ಇದ್ದ ನ್ಯೂನತೆಗಳನ್ನು ಹೋಗಲಾಡಿಸಿ 34 ವರ್ಷಗಳ ಬಳಿಕ ಹೊಸ ನೀತಿ ತರಲಾಗಿದೆ. ಸಮಾನತೆ, ಗುಣಮಟ್ಟದ ಶಿಕ್ಷಣ ಕೊಡಬೇಕಿದೆ. ಇದಕ್ಕಾಗಿ 3ನೇ ರಾಷ್ಟ್ರೀಯ ಶಿಕ್ಷಣ ನೀತಿ ತರಲಾಗಿದೆ. ರಾಜ್ಯ ಶಿಕ್ಷಣ ನೀತಿಯ ಕಚೇರಿ ಎಲ್ಲಿದೆ? ಈ ಸರ್ಕಾರ ರಚಿಸಿದ ಸಮಿತಿಯಲ್ಲಿ…
ಚನ್ನಪಟ್ಟಣ:- DCM ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹೈಕೋರ್ಟ್ ಅವರಿಗೆ ರಿಲೀಫ್ ಕೊಟ್ಟಿಲ್ಲ. ಅವರೇ ತೆಗೆದುಕೊಂಡಿದ್ದಾರೆ. ಇನ್ನೂ ಸ್ವಲ್ಪ ದಿನ ಇದನ್ನು ಮುಂದಕ್ಕೆ ಎಳೆಯಬೇಕಲ್ಲ ಎಂದರು. ಬಹುಶಃ ಗ್ಯಾರಂಟಿ ಕಾರ್ಯಕ್ರಮದ ಮೂಲಕವೇ ದೇಶದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಆಗ, ಎಲ್ಲಾ ಪ್ರಕರಣಗಳನ್ನು ಮುಚ್ಚಿ ಹಾಕಬಹುದು ಎಂದು ಐದಾರು ತಿಂಗಳು ಮುಂದೂಡುತ್ತಿದ್ದಾರೆ. ಇದೆಲ್ಲಾ ತಂತ್ರಗಾರಿಕೆ ಅಷ್ಟೇ. ಮುಂದೆ ಏನೇನಾಗುತ್ತದೊ ನೋಡೊಣ’ ಎಂದರು. ನಾನು ವಕೀಲನಾಗಿರುವುದಕ್ಕೆ ಪ್ರಕರಣ ವಾಪಸ್ ತೆಗೆದುಕೊಂಡಿದ್ದು’ ಎಂಬ ಸಿ.ಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ದೊಡ್ಡ ವಕೀಲರು ಅಂತ ನನಗೆ ಗೊತ್ತುಗೆ. ಇವರೊಬ್ಬರೇ ಕಾನೂನು ತಿಳಿದುಕೊಂಡಿದ್ದಾರೆ ತಾನೇ. ಅದಕ್ಕೆ ಅರ್ಕಾವತಿ ಡಿನೋಟಿಫಿಕೇಷನ್ ತೆಗೆದು ರಿಡೂ ಮಾಡಿದ್ರಿ. ಕೆಂಪಣ್ಣನ ಆಯೋಗ ಮಾಡಿ ಉಳಿದುಕೊಂಡ್ರಲ್ಲ. ಆ ರೀತಿಯ ವಕೀಲರು ಇವರು’ ಎಂದು ವಾಗ್ದಾಳಿ ನಡೆಸಿದರು. ಜನಸಾಮಾನ್ಯರಿಗೆ ಒಂದು ನ್ಯಾಯ, ಇವರಿಗೊಂದು ನ್ಯಾಯ. ಅಂತಹ ವಕೀಲಿಕೆಯಲ್ಲಿ ಇವರು ಬುದ್ದಿವಂತರಿದ್ದಾರೆ.…
ಗಂಗಾವತಿ:- BJP ಸರಕಾರ ನನ್ನ ವಿರುದ್ಧದ ಸುಳ್ಳು ಕೇಸ್‌ಗಳನ್ನು ವಾಪಸ್ ಪಡೆಯಲಿಲ್ಲ ಎಂದು ಗಾಲಿ ಜನಾರ್ಧನ್ ರೆಡ್ಡಿ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಗೆ ಸಂಪೂರ್ಣ ಬಹುಮತವಿಲ್ಲದಿದ್ದರೂ ಕಷ್ಟಪಟ್ಟು ಅಧಿಕಾರ ಕೊಡಿಸಿದೆ. ನನ್ನ ಸಂಕಷ್ಟ ಕಾಲದಲ್ಲಿ ಬಿಜೆಪಿ ಹೈಕಮಾಂಡ್ ನನ್ನ ನೆರವಿಗೆ ಬರಲಿಲ್ಲ. ಕೇಸ್‌ಗಳನ್ನು ವಾಪಸ್ ಪಡೆಯಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಪ್ರಸ್ತುತ ಡಿ.ಕೆ. ಶಿವಕುಮಾರ್ ಅವರ ಬೆನ್ನಿಗೆ ನಿಂತು ಬಹುತೇಕ ಕೇಸ್‌ಗಳನ್ನು ವಾಪಸ್ ಮಾಡಿಸುತ್ತಿದೆ ಎಂದರು. ರಾಜಕೀಯ ಸ್ವಾರ್ಥ ಹಾಗೂ ಮುಖ್ಯಮಂತ್ರಿಯಾಗುವ ಆಸೆಯಿಂದ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿ ಅಧಿಕಾರ ಪಡೆದಿದ್ದಾರೆ. ಅವರಿಗೂ ಗೊತ್ತು, ನಾನು ಏನೂ ತಪ್ಪು ಮಾಡಿಲ್ಲ ಎಂದು. ನಾನು ಸೋನಿಯಾ ಗಾಂಧಿಯವರಿಗೆ ತಲೆ ಬಾಗಿಸಲಿಲ್ಲ ಎಂಬ ಕಾರಣಕ್ಕೆ ಏನೂ ತಪ್ಪು ಮಾಡದಿದ್ದರೂ ಜೈಲಿಗೆ ಹೋಗಬೇಕಾಯಿತು. ನಂತರ ನನ್ನಿಂದ ಉಪಕಾರ ಪಡೆದು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಬಂದ ಬಿಜೆಪಿ , ವ್ಯಕ್ತಿಗಳು ಹಾಗೂ ಹೈಕಮಾಂಡ್ ನನ್ನ ವಿರುದ್ಧ…
ಹುಬ್ಬಳ್ಳಿ; ಸನ್ಮಾನ ಕಾರ್ಯಕ್ರಮಗಳು ಇನ್ನಷ್ಟು ಜವಾಬ್ದಾರಿ ಹೆಚ್ಚು ಮಾಡುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ ಮಹದೇಪ್ಪನವರ ಅಭಿಪ್ರಾಯಪಟ್ಟರು. ನಗರದ ಕಮರಿ ಪೇಟೆಯಲ್ಲಿ ಕಾಟಿಗಾರ ಹಾಗೂ ಎಸ್, ಎಸ್, ಕೆ, ಸಮಾಜದ ಮುಖಂಡರಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಅವರು ಆತ್ಮೀಯವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ನಾರಾಯಣ ಕಾಟಿಗಾರ್, ಅನಿಲ್ ಶಿರಾಳಕರ್, ರೋಹಿತ್ ಕಾಟಿಗಾರ್, ಕಾರ್ತಿಕ್ ಕಾಟಿಗರ್, ಅಮೃತ್ ಬಾಂಡಗೆ, ಮೈಲಾರ ಹಬೀಬ್, ಪ್ರಶಾಂತ ದೊಂಗಡೆ, ಫಕೀರಪ್ಪ ಗುಲಗಂಜಿ, ಸಂತೋಷ್ ವರ್ಣೇಕರ್, ರಂಗನಾಥ್ ಸೋಲಂಕಿ, ದೀಪಕ್ ಜಟಾರ್ಕರ್, ಪ್ರಶಾಂತ್ ಕಲಬುರ್ಗಿ, ಸಿರಿದಂತೆ ಇನ್ನೂ ಅನೇಕ ಎಸ್ ಎಸ್ ಕೆ ಸಮಾಜದವರು ಉಪಸ್ಥಿತರಿದ್ದರು.
ಬೆಂಗಳೂರು:- ಬರ ಪರಿಹಾರ ಸಂಬಂಧ ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಬರ ಪರಿಹಾರ ಸಂಬಂಧ ಕೇಂದ್ರಕ್ಕೆ ಬರೆದ ಪತ್ರಗಳಿಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ ರೂ.2,000 ವರೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುತ್ತಿದ್ದೇವೆ. ಉದ್ಯೋಗ ಖಾತರಿ ಯೋಜನೆಯಡಿ 150 ಮಾನವ ದಿನಗಳ ಉದ್ಯೋಗ ಕೊಡಲು ಕೇಂದ್ರಕ್ಕೆ ಅನುಮತಿ ಕೋರಲಾಗಿತ್ತು. ಆದರೆ ಇನ್ನೂ ಅನುಮತಿ ನೀಡಿಲ್ಲ. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ…
ನವದೆಹಲಿ:- ಜನರಿಗೆ ನಮ್ಮ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಳೆದ ಹತ್ತು ವರ್ಷಗಳಲ್ಲಿ ತಾವು ಮಾಡಿರುವ ಕೆಲಸಗಳು, ತಮ್ಮ ನೇತೃತ್ವದ ಸರ್ಕಾರದಲ್ಲಿ ಜನರಿಗೆ ಅಪಾರ ವಿಶ್ವಾಸ ಮೂಡಲು ಕಾರಣವಾಗಿದೆ ಎಂದರು. ಬಡವರು, ಯುವಕರು, ಮಹಿಳೆಯರು ಮತ್ತು ರೈತರು ತಮ್ಮ ಪಾಲಿಗೆ ನಾಲ್ಕು ಅತಿದೊಡ್ಡ ಜಾತಿಗಳು, ಅವರನ್ನು ಮೇಲಕ್ಕೆ ತಂದರೆ ಭಾರತವು ಅಭಿವೃದ್ಧಿ ಹೊಂದುತ್ತದೆ ಎಂದು ಮೋದಿ ಹೇಳಿದರು. ಈ ‘ಯಾತ್ರೆ’ಯ ಭಾಗವಾಗಿ ಸರ್ಕಾರದ ‘ರಥ’ಗಳು ದೇಶದ ಹಲವೆಡೆ ಪ್ರಯಾಣ ಬೆಳೆಸಲಿವೆ. ಕೆಲವರು ಈ ‘ರಥ’ಗಳನ್ನು ‘ಮೋದಿ ಅವರ ಗ್ಯಾರಂಟಿಗಳು ಇರುವ ಗಾಡಿ’ ಎಂದು ಬಣ್ಣಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ‘ಮೋದಿ ಅವರು ಭರವಸೆಗಳನ್ನು ಈಡೇರಿಸುತ್ತಾರೆ ಎಂಬುದು ಜನ ಸಮೂಹಕ್ಕೆ ಗೊತ್ತಿದೆ’ ಎಂದು ಹೇಳಿದರು. ಹಿಂದಿನ ಸರ್ಕಾರಗಳು ಊಳಿಗಮಾನ್ಯ ಧೋರಣೆ ಹೊಂದಿದ್ದುದನ್ನು ಜನರು ಕಂಡಿದ್ದಾರೆ. ಈ ಧೋರಣೆಯ ಕಾರಣದಿಂದಾಗಿಯೇ ಸ್ವಾತಂತ್ರ್ಯ ದೊರೆತ ದಶಕಗಳ ನಂತರವೂ ದೇಶದ ಜನರಲ್ಲಿ ಒಂದು…
ಗದಗ:- ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗ್ತಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಲೋಕಸಭೆ ಚುನಾವಣೆ ಬಳಿಕ ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ಜೈಲಿಗೆ ಹೋಗುತ್ತಾರೆ. ಡಿಕೆ ಶಿವಕುಮಾರ್ ಮನೆಯಲ್ಲಿ ಸಿಬಿಐ ರೇಡ್ ಆದಾಗ ನೂರಾರು ಕೋಟಿ ರೂ. ಅಕ್ರಮ ದಾಖಲೆಗಳು ಸಿಕ್ತು. ವಿಚಾರಣೆ ಮುಗಿದು ಚಾರ್ಜಶಿಟ್ ಹಾಕುವಂಥ ಸಂದರ್ಭ ಇತ್ತು. ತಮ್ಮ ಕೈಯಲ್ಲಿ ಸರ್ಕಾರ ಇದೆ ಅಂತಾ ಹೈಕಮಾಂಡ್ ಒತ್ತಡಕ್ಕೆ ಒಳಗಾಗಿದ್ದರು ಎಂದಿದ್ದಾರೆ. ಹೈಕಮಾಂಡ್ ಕೈಗೊಂಬೆಯಾಗಿ ಡಿಕೆ ಶಿವಕುಮಾರ್ ಮೇಲಿನ ಕೇಸನ್ನು ವಿತ್ ಡ್ರಾ ಮಾಡಿದರು. ತಾತ್ಕಾಲಿಕ ರಿಲೀಫ್ ಅಷ್ಟೇ ಸಿಕ್ಕಿದೆ. ಆದರೆ ಎಫ್ಐಆರ್ ವಿತ್ ಡ್ರಾ ಮಾಡಿಲ್ಲ. ಲೋಕಸಭೆ ಚುನಾವಣೆ ಬಳಿಕ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ. ಐಟಿ, ಇಡಿ, ಸಿಬಿಐ ಇವೆಲ್ಲ ಸ್ವಾಯತ್ತ ಸಂಸ್ಥೆಗಳು. ಹಾಗಾದರೆ ಕಾಂಗ್ರೆಸ್‌ನಲ್ಲಿದ್ದು ಎಷ್ಟು ಬೇಕಾದರೂ ಲೂಟಿ ಮಾಡಬಹುದಾ. ಯಾವುದೇ ಕಾರಣಕ್ಕೂ ಕಾಂಗ್ರೆಸ್ನವರನ್ನು ಮುಟ್ಟಬಾರದು ಅಂತ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಇಡೀ ದೇಶದಲ್ಲಿ…
ಮಂಡ್ಯ :- ಜಿಲ್ಲೆಯ ವಿವಿಧೆಡೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರ ಗಮನವನ್ನು ಬೇರೆಡೆ ಸೆಳೆದು ಚಿನ್ನದ ಸರ ಎಗರಿಸುತ್ತಿದ್ದ ಸರಗಳ್ಳರ ಜಾಲವೊಂದನ್ನು ಹೆಡೆಮುರಿ ಕಟ್ಟುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿ ಬೀದರ್ ನ ಜಾವೇದ್ ಬಾಲಿ ಜಾಫ್ರಿಯನ್ನು (39) ಬಂಧಿಸಿ ಆರೋಪಿಯಿಂದ 435.5 ಗ್ರಾಂ ಚಿನ್ನ, ಮಾಂಗಲ್ಯ ಸರಗಳು ಹಾಗೂ ಹುಂಡೈ ಐ 10 ಕಾರು ಸೇರಿ ಒಟ್ಟು 27 ಲಕ್ಷದ 30 ಸಾವಿರ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮೂಲತಃ ಮಹಾರಾಷ್ಟ್ರದವರಾಗಿದ್ದು, ಬೀದರ್ ನಗರದಲ್ಲಿ ವಾಸವಿದ್ದು, ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಸರಗಳ್ಳತನ ನಡೆಸಿ ಮತ್ತೆ ಬೀದರ್ ಗೆ ಪರಾರಿಯಾಗುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮದ್ದೂರು ಟೌನ್ ಎಸ್.ಬಿ.ಎಂ ರಸ್ತೆಯಲ್ಲಿ ನ.16 ರಂದು ಹಾಡುಹಗಲೇ ಕೆಂಪಮ್ಮ ಎಂಬ ವೃದ್ಧೆಯ 62 ಗ್ರಾಂ ತೂಕದ ಚಿನ್ನದ ಸರವನ್ನು ಇಬ್ಬರು ಸರಗಳ್ಳರು ಅಪಹರಿಸಿ ಬೈಕ್ ನಲ್ಲಿ ಪರಾರಿಯಾಗಿದ್ದರು. ವಿಷಯ…
ರಾಯಬಾಗ :-ತಾೂಕಿನ ಮುಗಳಖೋಡ ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 21 ರಲ್ಲಿ ನಡೆದಿರುವ ಈ ರಸ್ತೆ ಕಾಮಗಾರಿಯು ಅಧಿಕಾರಿಗಳೇ ಹೇಳುವಂತೆ ಸರಕಾರದ ನಿಯಮ ಉಲ್ಲಂಘಿಸಿ ಈ ಹಿಂದಿನ ಶಾಸಕ ಪಿ ರಾಜೀವ್ ಅವರ ಅನುದಾನದಲ್ಲಿ ಮಂಜೂರಾತಿಯನ್ನು ಪಡೆದುಕೊಂಡಿತ್ತು. ಮೂಲಭೂತ ಸೌಕರ್ಯಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹತ್ತು ಹಲವಾರು ಯೋಜನೆಗಳನ್ನ ಜಾರಿ ಮಾಡುತ್ತಲೇ ಬಂದಿವೆ. ಆದರೆ, ಇಲ್ಲಿ ಮೂಲಭೂತ ಸೌಖರ್ಯಗಳ ಹೆಸರಿನಲ್ಲಿ ತಮ್ಮ ಜೇಬ್ ಬರ್ತಿ ಮಾಡಿಕೊಳ್ಳುತ್ತಿರುವ ಆಸಾಮಿಗಳೆ ಬೇರೆ. ಮುಗಳಖೋಡ ಪಟ್ಟಣದ ವಾರ್ಡ್ ಸಂಖ್ಯೆ 21ರ ಯಾದ್ಯಾನಕೋಡಿಯ ಕಾಫಸಿ ತೋಟದ ರಸ್ತೆ ಕಾಮಗಾರಿಯು ಕಳಪೆಯಲ್ಲಿ ಕಳಪೆಯಾಗಿರುವುದು ವಿಷಾದನೀಯ ಹಾಗೂ ಈ ಹಿಂದಿನ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎನ್ನುವುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ. ರಸ್ತೆ ಕಾಮಗಾರಿಯ ಹೆಸರಿನಲ್ಲಿ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿ ವಾರ್ಡ್ ಸದಸ್ಯರು ಹಾಗೂ ಕಾಮಗಾರಿಯನ್ನು ಪೂರ್ಣಗೊಳಿಸಿದ ಗುತ್ತಿಗೆದಾರರು ನಾವೇ ಅಭಿವೃದ್ಧಿಯ ಹರಿಕಾರರು ಎನುವಂತೆ ವಾಟ್ಸಪ್ ಗ್ರೂಫ್ ಗಳಲ್ಲಿ ತಮ್ಮ ಪ್ರತಿಷ್ಠೆಯನ್ನ ಅನಾವರಣಗೊಳಿಸಿದ್ದೆ, ಗೊಳಿಸಿದ್ದು, ಆದರೆ ಆ ಕಾಮಗಾರಿ…