ರಾಯಬಾಗ :-ತಾೂಕಿನ ಮುಗಳಖೋಡ ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 21 ರಲ್ಲಿ ನಡೆದಿರುವ ಈ ರಸ್ತೆ ಕಾಮಗಾರಿಯು ಅಧಿಕಾರಿಗಳೇ ಹೇಳುವಂತೆ ಸರಕಾರದ ನಿಯಮ ಉಲ್ಲಂಘಿಸಿ ಈ ಹಿಂದಿನ ಶಾಸಕ ಪಿ ರಾಜೀವ್ ಅವರ ಅನುದಾನದಲ್ಲಿ ಮಂಜೂರಾತಿಯನ್ನು ಪಡೆದುಕೊಂಡಿತ್ತು.
ಮೂಲಭೂತ ಸೌಕರ್ಯಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹತ್ತು ಹಲವಾರು ಯೋಜನೆಗಳನ್ನ ಜಾರಿ ಮಾಡುತ್ತಲೇ ಬಂದಿವೆ. ಆದರೆ, ಇಲ್ಲಿ ಮೂಲಭೂತ ಸೌಖರ್ಯಗಳ ಹೆಸರಿನಲ್ಲಿ ತಮ್ಮ ಜೇಬ್ ಬರ್ತಿ ಮಾಡಿಕೊಳ್ಳುತ್ತಿರುವ ಆಸಾಮಿಗಳೆ ಬೇರೆ.
ಮುಗಳಖೋಡ ಪಟ್ಟಣದ ವಾರ್ಡ್ ಸಂಖ್ಯೆ 21ರ ಯಾದ್ಯಾನಕೋಡಿಯ ಕಾಫಸಿ ತೋಟದ ರಸ್ತೆ ಕಾಮಗಾರಿಯು ಕಳಪೆಯಲ್ಲಿ ಕಳಪೆಯಾಗಿರುವುದು ವಿಷಾದನೀಯ ಹಾಗೂ ಈ ಹಿಂದಿನ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎನ್ನುವುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.
ರಸ್ತೆ ಕಾಮಗಾರಿಯ ಹೆಸರಿನಲ್ಲಿ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿ ವಾರ್ಡ್ ಸದಸ್ಯರು ಹಾಗೂ ಕಾಮಗಾರಿಯನ್ನು ಪೂರ್ಣಗೊಳಿಸಿದ ಗುತ್ತಿಗೆದಾರರು ನಾವೇ ಅಭಿವೃದ್ಧಿಯ ಹರಿಕಾರರು ಎನುವಂತೆ ವಾಟ್ಸಪ್ ಗ್ರೂಫ್ ಗಳಲ್ಲಿ ತಮ್ಮ ಪ್ರತಿಷ್ಠೆಯನ್ನ ಅನಾವರಣಗೊಳಿಸಿದ್ದೆ, ಗೊಳಿಸಿದ್ದು, ಆದರೆ ಆ ಕಾಮಗಾರಿ ನಡೆದಿರುವುದು ಮಾತ್ರ ತುಂಬಾನೇ ಕಳಪೆ.
ಯಾರಾದ್ರೂ ನೋಡಿದರೆ ಹೀಗೂ ಉಂಟೆ? ಎನ್ನುವಂತಿದೆ. ಕಳೆದ 15 ದಿನಗಳ ಹಿಂದೆಯಷ್ಟೇ ಪೂರ್ಣಗೊಂಡಿರುವ ಈ ರಸ್ತೆ ಡಾಂಬೀಕರಣ ಕಾಮಗಾರಿಯ ರಸ್ತೆಯ ಮಧ್ಯ ಬ್ರದಾವನ ನಿರ್ಮಾಣವಾಗಿದೆ.
ರಸ್ತೆಗೆ ಬಳಕೆಯಾಗಬೇಕಿದ್ದ, ಮೆಟ್ಲಿಂಗ್, ಸಮರ್ಪಕ ಮುರುಂ ಹಾಗೂ ಡಾಂಬರೀಕರಣ ಆಗದೇ ಇರುವುದರಿಂದ ನಿನ್ನೆ ಮೊನ್ನೆಯಷ್ಟೇ ಮಾಡಿದ ರಸ್ತೆಯ ಡಾಂಬರೀಕರಣ ಕಿತ್ತು ಹೋಗುತ್ತಿದೆ. ರಸ್ತೆಯ ಮಧ್ಯದಲ್ಲಿ ಹುಲ್ಲು ಹುಲುಸಾಗಿ ಬೆಳೆಯುತ್ತಿದೆ. ರಸ್ತೆ ಮಧ್ಯ ಬೆಳೆಯುತ್ತಿರೂವ ಹುಲ್ಲಿಗೆ ಕಳೆ ಔಷಧಿಯನ್ನು ಸಿಂಪಡಣೆ ಮಾಡಲಾಗಿದೆ. ಸಾರ್ವಜನಿಕ ಕಾಮಗಾರಿಯನ್ನು ಈ ರೀತಿ ಅವ್ಯವಸ್ಥೆಗೆ ಗುರಿ ಮಾಡಿರುವ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರ ವಿರುಧ್ದ ಹಾಗೂ ಜನಪ್ರತಿನಿಧಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದರ ಮೂಲಕ ಸಾಮಾಜಿಕ ನ್ಯಾಯಕ್ಕೆ ಮನ್ನಣೆ ಕೊಡಬೇಕೆನ್ನುವುದು ಸಾರ್ವಜನಿಕ ಒತ್ತಾಯವಾಗಿದೆ.
ಇನ್ನು ಈ ಕಳಪೆ ಕಾಮಗಾರಿಯ ಕುರಿತು ಜಿಲ್ಲಾ ಪಂಚಾಯತ್ ಬೆಳಗಾವಿಯ ಎಇಇ, ಎಸ್ ಬಿ ಮೈಶಾಳೆಯವರನ್ನ ಕೇಳಿದರೆ, ಖುದ್ದಾಗಿ ನಿಂತು ಕಾಮಗಾರಿ ಮಾಡಿರುವದು, ಈ ಮಹಾಶಯ ನಾವು ಬಿಲ್ ನ್ನೇ ಬರಯೋದಿಲ್ಲ ಎನ್ನುವ ಉಡಾಫೆ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ.