ಗಂಗಾವತಿ:- BJP ಸರಕಾರ ನನ್ನ ವಿರುದ್ಧದ ಸುಳ್ಳು ಕೇಸ್ಗಳನ್ನು ವಾಪಸ್ ಪಡೆಯಲಿಲ್ಲ ಎಂದು ಗಾಲಿ ಜನಾರ್ಧನ್ ರೆಡ್ಡಿ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಗೆ ಸಂಪೂರ್ಣ ಬಹುಮತವಿಲ್ಲದಿದ್ದರೂ ಕಷ್ಟಪಟ್ಟು ಅಧಿಕಾರ ಕೊಡಿಸಿದೆ. ನನ್ನ ಸಂಕಷ್ಟ ಕಾಲದಲ್ಲಿ ಬಿಜೆಪಿ ಹೈಕಮಾಂಡ್ ನನ್ನ ನೆರವಿಗೆ ಬರಲಿಲ್ಲ. ಕೇಸ್ಗಳನ್ನು ವಾಪಸ್ ಪಡೆಯಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಪ್ರಸ್ತುತ ಡಿ.ಕೆ. ಶಿವಕುಮಾರ್ ಅವರ ಬೆನ್ನಿಗೆ ನಿಂತು ಬಹುತೇಕ ಕೇಸ್ಗಳನ್ನು ವಾಪಸ್ ಮಾಡಿಸುತ್ತಿದೆ ಎಂದರು.
ರಾಜಕೀಯ ಸ್ವಾರ್ಥ ಹಾಗೂ ಮುಖ್ಯಮಂತ್ರಿಯಾಗುವ ಆಸೆಯಿಂದ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿ ಅಧಿಕಾರ ಪಡೆದಿದ್ದಾರೆ. ಅವರಿಗೂ ಗೊತ್ತು, ನಾನು ಏನೂ ತಪ್ಪು ಮಾಡಿಲ್ಲ ಎಂದು. ನಾನು ಸೋನಿಯಾ ಗಾಂಧಿಯವರಿಗೆ ತಲೆ ಬಾಗಿಸಲಿಲ್ಲ ಎಂಬ ಕಾರಣಕ್ಕೆ ಏನೂ ತಪ್ಪು ಮಾಡದಿದ್ದರೂ ಜೈಲಿಗೆ ಹೋಗಬೇಕಾಯಿತು. ನಂತರ ನನ್ನಿಂದ ಉಪಕಾರ ಪಡೆದು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಬಂದ ಬಿಜೆಪಿ , ವ್ಯಕ್ತಿಗಳು ಹಾಗೂ ಹೈಕಮಾಂಡ್ ನನ್ನ ವಿರುದ್ಧ ರಾಜ್ಯ ಸರಕಾರ ದಾಖಲಿಸಿದ್ದ ಕೇಸ್ಗಳನ್ನು ವಾಪಸ್ ಪಡೆಯಲಿಲ್ಲ ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.