Author: AIN Author

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ಏರ್ ಪೋರ್ಟ್’ನಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ ಕೆಂಪೇಗೌಡ ವಿಮಾನ ನಿಲ್ದಾಣದ ಚಾಲಕರುತಾಯಿ ಭುವನೇಶ್ವರಿ ಜೊತೆ ಅಪ್ಪು ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅನ್ಯ ಭಾಷಗರಿಗೆ ಕನ್ನಡದ ಕಂಪನ್ನ ಪ್ರಸರಿಸಿದ ಕನ್ನಡಾಂಬೆಯ ಚಾಲಕರು ಸಾವಿರರು ಟ್ಯಾಕ್ಸಿಗಳಿಗೆ ಕನ್ನಡದ ಕೆಂಪು ಹಳದಿ ಧ್ವಜ ಅಳವಡಿಕೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ಭಾಗಿಯಾಗಿದ್ದರು. ಯಾವ ನಟರಿಗೂ ಕಮ್ಮಿ ಇಲ್ಲಾ ನಮ್ಮ ಚಾಲಕರು ವಿಮಿಕ್ರಿ, ಚಲನಚಿತ್ರ ಗೀತೆ, ಜಾನಪದ ಗೀತೆಗಳ, ಜಾನಪದ ಕಲೆಗಳ ಅನಾವರಣ. ಕೆ ಎಸ್ ಟಿ ಡಿ ಸಿ, ಎಸಿ, ಮತ್ತು ನಾನ್ ಎಸಿ  ಟ್ಯಾಕ್ಸಿಗಳಿಂದ ವಿಮಾನ ನಿಲ್ದಾಣ ದಲ್ಲಿ ರ್ರ್ಯಾಲಿ ನಡೆಸಿದ್ದು  ಹೊರ ದೇಶದ ಜನರ ಗಮನ ಸೆಳೆದ ನೂರಾರು ಟ್ಯಾಕ್ಸಿಗಳು.

Read More

ಚಿತ್ರದ  ನಿರ್ದೇಶಕ ಹಾಗೂ ನಿರ್ಮಾಪಕ ರಘು ಹಾಸನ್ ಮಾತನಾಡುತ್ತ  ಈ ಚಿತ್ರದಲ್ಲಿ ಸಿಂಬನ ಮಗ ನಟಿಸುತ್ತಿದ್ದಾನೆ.  ಸಿಂಬು ನಾಲ್ಕು ದಿನವಷ್ಟೇ  ಶೂಟಿಂಗ್ ನಲ್ಲಿ ಭಾಗವಹಿಸಿ ನಿಧನ ಹೊಂದಿದ. ಈಗ ಅವನ ಮಗ ಸಿಂಬ ನಟಿಸುತ್ತಿದ್ದಾನೆ. ಗೋವಿಂದೇಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಸಿನಿಮಾ ಮುಂದುವರೆಯಲಿದೆ. ಮೊದಲಭಾಗ ಮಾಡುವಾಗಲೇ ೨ರ ಕಥೆ ರೆಡಿ ಮಾಡಿಕೊಂಡಿದ್ದೆ. ಸೋಷಿಯಲ್  ಕನ್ ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಈಗಾಗಲೇ ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು  ಸುತ್ತಮುತ್ತ 50 ದಿನಗಳ  ಶೂಟಿಂಗ್ ನಡೆಸಲಾಗಿದ್ದು, ಊಟಿ ಭಾಗದ‌ 20 ದಿನದ ಚಿತ್ರೀಕರಣವಷ್ಟೇ ಬಾಕಿಯಿದೆ.  ನಾನು ಪಾತ್ರವನ್ನು ಸದ್ಯದಲ್ಲೇ ರಿವೀಲ್ ಮಾಡುತ್ತೇವೆ. ಚಿತ್ರದ  ನಿರ್ದೇಶಕ ಹಾಗೂ ನಿರ್ಮಾಪಕ ರಘು ಹಾಸನ್ ಮಾತನಾಡುತ್ತ  ಈ ಚಿತ್ರದಲ್ಲಿ ಸಿಂಬನ ಮಗ ನಟಿಸುತ್ತಿದ್ದಾನೆ.  ಸಿಂಬು ನಾಲ್ಕು ದಿನವಷ್ಟೇ  ಶೂಟಿಂಗ್ ನಲ್ಲಿ ಭಾಗವಹಿಸಿ ನಿಧನ ಹೊಂದಿದ. ಈಗ ಅವನ ಮಗ ಸಿಂಬ ನಟಿಸುತ್ತಿದ್ದಾನೆ. ಗೋವಿಂದೇಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಸಿನಿಮಾ ಮುಂದುವರೆಯಲಿದೆ. ಮೊದಲಭಾಗ ಮಾಡುವಾಗಲೇ…

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂ ಬೆಳಗ್ಗೆ ಭಯಾನಕ ಆಕ್ಸಿಡೆಂಟ್ ನಡೆದಿದ್ದು ನಗರದ ಹಗದೂರಿನಲ್ಲಿ ನಡೆದಿದ್ದು ಸಿಸಿಟಿವಿಯಲ್ಲಿ ಡೆಡ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಕಂಟ್ರೋಲ್ ಸಿಗದೆ ಅಡ್ಡಾದಿಡ್ಡಿ ಚಾಲನೆ ಮಾಡಿದ ಚಾಲಕ ರಸ್ತೆ ಬದಿ ನಿಂತಿದ್ದವ್ರಿಗೆ ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಇಂದು ಬೆಳಗ್ಗೆ 7.30 ರ ಸುಮಾರಿಗೆ ನಡೆದಿರೋ ಘಟನೆಯಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಇಬ್ಬರು ವ್ಯಕ್ತಿಗಳು ಪಾರಾಗಿದ್ದಾರೆ. ಈ ವೇಳೆ ಬೈಕ್ ನಲ್ಲಿ ಕುಳಿತಿದ್ದ ಅಪ್ಪಣ್ಣ ಹಾಗೂ ಪೋನ್ ನಲ್ಲಿ ಮಾತಾಡಿಕೊಂಡು ಹೋಗ್ತಿದ್ದ ಶ್ರೀನಿವಾಸ್ ಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಜಂಪ್ ಮಾಡಿ ಬಿದ್ದಿದ್ದ ಅಪ್ಪಣ್ಣಗೆ ತಲೆಗೆ ಗಾಯ ಹಾಗೆ ಶ್ರೀನಿವಾಸ್ ಗೆ ಕಾಲಿಗೆ ಗಂಭೀರ ಗಾಯವಾಗಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಪ್ಪಣ್ಣ ಸ್ಥಳೀಯ ವ್ಯಕ್ತಿಯಾಗಿದ್ದು, ಶ್ರೀನಿವಾಸ್ ಖಾಸಗಿ ಕಂಪನಿಯೊಂದ್ರಲ್ಲಿ ಮ್ಯಾನೇಜರ್ ಗಿ ಕೆಲಸ ಮಾಡುತ್ತಿದ್ದರು ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ವಾಹನದ ಮುಂಭಾಗ ನಜ್ಜುಗುಜ್ಜು..…

Read More

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ  ಸಾಗರ ತಾಲ್ಲೂಕು ಹಳ್ಳಿಯೊಂದರಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆದಿದೆ ಎನ್ನಲಾದ ಅಶ್ಲೀಲ ನೃತ್ಯದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.  ಮುಖ್ಯವಾಗಿ ಸಭ್ಯ ಕಾರ್ಯಕ್ರಮವಾಗಬೇಕಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಅರೆಬರೆ ಬಟ್ಟೆ ತೊಟ್ಟ ಯುವತಿಯನ್ನು ಕುಣಿಸಿದ್ದು ವಿರೋಧಕ್ಕೆ ಕಾರಣವಾಗಿದೆ. ಇದಕ್ಕಿಂತ ಹೆಚ್ಚಾಗಿ ಒಬ್ಬ ಅಪ್ರಾಪ್ತ ಬಾಲಕನನ್ನ ಬಳಸಿಕೊಂಡು ಅಶ್ಲೀಲ ಭಂಗಿಗಳಲ್ಲಿ ಯುವತಿ ಕುಣಿದಿದ್ದಾಳೆ. ಇದು ಆಕ್ರೋಶಕ್ಕೆ ಗುರಿಯಾಗಿದೆ. ಎರಡುವರ ನಿಮಿಷದ ಮೊಬೈಲ್ ದೃಶ್ಯಾವಳಿಯಲ್ಲಿ ಯುವತಿಯು ಬಾಲಕನನ್ನ ಒಬ್ಬ ಪುರುಷನ ರೀತಿಯಲ್ಲಿ ಬಳಸಿಕೊಂಡು ಆತನ ಜೊತೆಗೆ ಸೆಕ್ಸ್​​ ಓರಿಯೆಂಟೆಡ್​ ಸ್ಟೆಪ್​ಗಳನ್ನು ಹಾಕುತ್ತಿದ್ದಾಳೆ. ಇನ್ನೂ ದೃಶ್ಯದ ಹಿಂದೆ ಕಾಣುವ ಬ್ಯಾನರ್​ ನಲ್ಲಿ ಶಿವಮೊಗ್ಗ ಜಿಲ್ಲೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಭದ್ರಾವತಿ ಮೂಲದ ಆಕ್ರೆಸ್ಟ್ರಾ ಎಂಬ ಬರಹ ಕೂಡ ಕಾಣುತ್ತಿದೆ. https://ainlivenews.com/residents-own-property-in-bangalore-heres-the-good-news/ ಮೂಲಗಳ ಪ್ರಕಾರ, ಕನ್ನಡ ಸಂಘಟನೆಯೊಂದರ ಕಾರ್ಯಕ್ರಮ ಇದಾಗಿತ್ತು ಎನ್ನಲಾಗಿದ್ದು ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು, ಬಾಲಕನೊಬ್ಬನನ್ನ ಅಸಭ್ಯ ರೀತಿಯಲ್ಲಿ ಕುಣಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸ್​ ಇಲಾಖೆಗೆ ಮಾಹಿತಿ…

Read More

ಬೆಂಗಳೂರು: ನಗರದ CAR ಮೈದಾನದಲ್ಲಿ ಮಾಸಿಕ ಪೊಲೀಸ್ ಕವಾಯತು ನಡೆದಿದ್ದು  ಇದೇ ಮೊದಲ ಬಾರಿಗೆ ಲಾಠಿ ಡ್ರಿಲ್ ಪ್ರಾತ್ಯಕ್ಷಿಕತೆ ನಡೆದಿದೆ. ಬೆಂಗಳೂರು ನಗರ ಪೊಲೀಸರಿಂದ ಲಾಠಿ ಡ್ರಿಲ್  ನಡೆದಿದ್ದು ಸಿವಿಲ್, ಮಹಿಳಾ, CAR, ಟ್ರಾಫಿಕ್,   ವಿಭಾಗದ ಸಿಬ್ಬಂದಿಯಿಂದ ಲಾಠಿ ಡ್ರಿಲ್ 330 ಸಿಬ್ಬಂದಿಯಿಂದ ಲಾಠಿ ಡ್ರಿಲ್ ಪ್ರಾತ್ಯಕ್ಷಿಕತೆ  ನಡೆದಿದ್ದು ಕವಾಯತು ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Read More

ಬೆಂಗಳೂರು/ ಬೀದರ್ : ನಾಳೆ  ಬೀದರ್  ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿ ಕೆ.ಚಿರಂಜೀವಿ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 11ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.15ಕ್ಕೆ ಬೀದರ್‌ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ 12.20ಕ್ಕೆ ಬೀದರ್’ನಿಂದ  ಹೆಲಿಕ್ಯಾಪ್ಟರ್‌ ಮೂಲಕ ಭಾಲ್ಕಿಗೆ ತೆರಳುವರು ನಂತರ ಭಾಲ್ಕಿ ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ನಡೆಯಲಿರುವ ಮಾಜಿ ಸಚಿವ ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಲೋಕನಾಯಕ ಅಭಿನಂದನ ಗ್ರಂಥ ಬಿಡುಗಡೆಗೊಳಿಸುವರು. ಸಂಜೆ 4ಕ್ಕೆ ಭಾಲ್ಕಿಯಿಂದ ಬೀದರ್‌ಗೆ ಬಂದು, ಅಲ್ಲಿಂದ ವಿಶೇಷ ವಿಮಾನದ ಮ‌ೂಲಕ ಬೆಂಗಳೂರಿಗೆ ವಾಪಸ್  ಪ್ರಯಾಣ ಬೆಳಸಲಿದ್ದಾರೆ.

Read More

ಮಂಗಳೂರು : ಹಿಂದು ಯುವತಿಯ ಜೊತೆಗೆ ಮುಸ್ಲಿಂ ಯುವಕನೊಬ್ಬ ಸುತ್ತಾಡುವುದನ್ನು ಗಮನಿಸಿದ ಬಜರಂಗದಳ ಕಾರ್ಯಕರ್ತರು ಬೈಕಿನಲ್ಲಿ ಬೆನ್ನಟ್ಟಿ ಹಲ್ಲೆಗೆ ಯತ್ನಿಸಿದ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿಯ ಮಂಕಿ ಸ್ಟಾಂಡ್ ನಲ್ಲಿ ನಡೆದಿದೆ.‌  ಹಿಂದು ಯುವತಿಯ ಜೊತೆಗೆ ಮುಸ್ಲಿಂ ಯುವಕನೊಬ್ಬ ಸುತ್ತಾಡುವುದನ್ನು ಗಮನಿಸಿದ ಬಜರಂಗದಳ ಕಾರ್ಯಕರ್ತರು ಬೈಕಿನಲ್ಲಿ ಬೆನ್ನಟ್ಟಿ ಹಲ್ಲೆಗೆ ಯತ್ನಿಸಿದ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿಯ ಮಂಕಿ ಸ್ಟಾಂಡ್ ನಲ್ಲಿ ನಡೆದಿದೆ.‌ https://ainlivenews.com/residents-own-property-in-bangalore-heres-the-good-news/ ಮಂಕಿ ಸ್ಟಾಂಡ್ ನಲ್ಲಿ ಮಳಿಗೆ ಒಂದರಲ್ಲಿ ಕೆಲಸಕ್ಕಿದ್ದ ಅನ್ಯಕೋಮಿನ ಯುವಕ ಹಾಗೂ ಚಿಕ್ಕಮಗಳೂರಿನ‌ ಯುವತಿ ಜೊತೆಯಾಗಿ ಸುತ್ತಾಡುತ್ತಿದ್ದರು.‌ ಸ್ಕೂಟರ್ ನಲ್ಲಿ ಜೋಡಿಯ ಸುತ್ತಾಟ ಗಮನಿಸಿ ಬಜರಂಗದಳ ಕಾರ್ಯಕರ್ತರು ಬೈಕ್ ನಲ್ಲಿ ಬೆನ್ನಟ್ಟಿದ್ದಾರೆ.‌ ಬಳಿಕ ಸ್ಕೂಟರ್ ಗೆ ಅಡ್ಡ ಹಾಕಿ ಜೋಡಿಯನ್ನು ಸ್ಥಳದಲ್ಲಿ ಎರಡು ಕೋಮಿನ‌ ಯುವಕರು ಜಮಾಯಿಸಿದ್ದು ತಂಡಗಳ ನಡುವೆ ಮಾತಿನ ಚಕಮಕಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳುತಿದ್ದಂತೆ ಮಧ್ಯ ಪ್ರವೇಶಿಸಿದ ಪಾಂಡೇಶ್ವರ ಠಾಣೆ ಪೊಲೀಸರು ಗುಂಪನ್ನು ಚದುರಿಸಿದ್ದಾರೆ. ಅನ್ಯಕೋಮಿನ ಜೋಡಿಯನ್ನು ವಶಕ್ಕೆ ಪಡೆದು ತನಿಖೆ‌…

Read More

ಮುಂಬೈ: ಅಗ್ನಿವೀರ್ (Agniveer) ತರಬೇತಿ ಪಡೆಯುತ್ತಿದ್ದ 20 ವರ್ಷದ ಯುವತಿ (Woman) ಮುಂಬೈನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯುವತಿ ಕೇರಳದ ನಿವಾಸಿಯಾಗಿದ್ದು ನೌಕಾಪಡೆ ತರಬೇತಿ ಪಡೆಯಲು 2 ವಾರಗಳ ಹಿಂದೆ ಮುಂಬೈಗೆ ಬಂದಿದ್ದಳು. ಬೆಳಗ್ಗೆ ಯುವತಿ ಹಾಗೂ ಆಕೆಯ ಗೆಳೆಯ ಜಗಳವಾಡಿಕೊಂಡಿದ್ದು, ಬಳಿಕ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. https://ainlivenews.com/residents-own-property-in-bangalore-heres-the-good-news/ ಯುವತಿಯ ಶವ ಮಲಾಡ್ ವೆಸ್ಟ್‌ನ ಐಎನ್‌ಎಸ್ ಹಮ್ಲಾ ಬೇಸ್‌ನಲ್ಲಿರುವ ಆಕೆಯ ಕೋಠಡಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ ಬಳಿಕ ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಾಳವಾನಿ ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಗ್ನಿಪಥ ಯೋಜನೆಯಡಿ ‘ಅಗ್ನಿವೀರ್’ ಸೈನಿಕರು 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ. ಇದರಲ್ಲಿ 6 ತಿಂಗಳ ತರಬೇತಿ ಮತ್ತು ಮೂರುವರೆ ವರ್ಷಗಳ ಕಾಲ ಕರ್ತವ್ಯದಲ್ಲಿರಬೇಕು. ಇದರ ಬಳಿಕ…

Read More

ಹೆಚ್​ಐವಿ ಅಥವಾ ಏಡ್ಸ್​ ವಿರುದ್ಧದ ಹೋರಾಟದಲ್ಲಿ ವಿಶ್ವವು ಸಾಧಿಸಿದ ಪ್ರಗತಿಯನ್ನು ಬಿಂಬಿಸಲು ಈ ದಿನವನ್ನು ವಿಶ್ವ ಏಡ್ಸ್ ದಿನ ಎಂದು ಆಚರಣೆ ಮಾಡಲಾಗುತ್ತದೆ. ಹೌದು, ಏಡ್ಸ್​ಯೆಂದರೆ ಸಾಕು ಎಲ್ಲಾರಿಗೂ ಭಯವಿತ್ತು ಅದೊಂದು ಗಂಭೀರ ಮತ್ತು ಗುಣಪಡಿಲಾಗದ ಕಾಯಿಲೆಯೆಂದು ಆತಂತದಲ್ಲಿ ಜನರು ಇದ್ದರೂ ಅಂದ್ರೆ ದಿನಕಳೆದಂತೆ ಅದರ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಜನರಿಗೆ ಮೂಡಿಸಿ ತಪ್ಪು ಕಲ್ಪನೆಯನ್ನ ಹೋಗಲಾಡಿಸಿದೆ. ಏಡ್ಸ್​ ಹೇಗೆ ಹರಡುತ್ತದೆ..? ಹ್ಯೂಮನ್ ಇಮ್ಯೂನೊ ಡಿಫಿಷಿಯೆನ್ಸಿ ವೈರಸ್ (H.I.V) ನಿಂದ ಉಂಟಾಗುವ ಈ ರೋಗವು ಸೋಂಕಿತ ವ್ಯಕ್ತಿಯ ಜೀವಕ್ಕೆ ಮಾರಕವಾಗಿ ಪರಿಣಾಮಿಸಬಹುದು. ಈ ಕಾಯಿಲೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಈ ಕಾರಣದಿಂದ ಈ ವೈರಸ್ ದೇಹದಲ್ಲಿ ವೇಗವಾಗಿ ಹರಡಲು ಪ್ರಾರಂಭಿಸುತ್ತದೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡದಿದ್ದರೆ, ಈ ಕಾಯಿಲೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಅಸುರಕ್ಷಿತ ಲೈಂಗಿಕತೆ, ಸೋಂಕಿತ ರಕ್ತದ ವರ್ಗಾವಣೆಯ ಮೂಲಕ ಅಥವಾ ಸೋಂಕಿತ ವ್ಯಕ್ತಿಯ ಚುಚ್ಚು ಮದ್ದಿನ ಹಂಚಿಕೆಯ ಮೂಲಕ ಈ ಸೋಂಕು ಒಬ್ಬ ವ್ಯಕ್ತಿಯಿಂದ  ಇನ್ನೊಬ್ಬ ವ್ಯಕ್ತಿಗೆ…

Read More

ಮೈಸೂರು ಸಮೀಪದ ಚಿಕ್ಕಕಾನ್ಯ ಬಳಿ ಹುಲಿ(tiger) ಪ್ರತ್ಯಕ್ಷಗೊಂಡಿದ್ದು ಟಿವಿಎಸ್ ಪ್ಯಾಕ್ಟರಿ ಬಳಿ ಹುಲಿ ತಿರುಗಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಗ್ರಾಮದಲ್ಲಿನ ಜನರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಶಾಸಕ  ಜಿ.ಟಿ.ದೇವೇಗೌಡ ಭೇಟಿ ಪರಿಶೀಲನೆ ನಡೆಸಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಶಾಸಕರು ಹುಲಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಜಿ.ಟಿ.ಡಿ ಸೂಚನೆ. ಜಯಪುರ ಹೋಬಳಿ ಸಿಂಧುವಳ್ಳಿ, ಬ್ಯಾತಹಳ್ಳಿ, ಚಿಕ್ಕಕಾನ್ಯ, ದೊಡ್ಡಕಾನ್ಯ ಗ್ರಾಮಗಳಲ್ಲಿ ಕಾಣಿಸಿಕೊಂಡ ಹುಲಿ. ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಅನಾವಶ್ಯಕವಾಗಿ ಓಡಾಡದಂತೆ ಮನವಿ ಕೂಡ ಮಾಡಲಾಗಿದೆ. ಗ್ರಾಮಸ್ಥರು ಅನಾವಶ್ಯಕ ವದ್ದಂತಿಗಳಿಗೆ ಭಯಭೀತರಾಗಬಾರದು. ಹುಲಿ ಕಾರ್ಯಚರಣೆ ಮುಗಿಯುವವರೆಗೆ ಜನರು ಸಹಕರಿಸಬೇಕು. ಟಿ.ವಿ.ಎಸ್. ಕಂಪನಿಯ ನೌಕರರು ರಾತ್ರಿಪಾಳಿ ಮುಗಿಸಿ ಹೋಗುವಾಗ ಎಚ್ಚರಿಕೆಯಿಂದಿರಿ. ಹಾಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಶಾಸಕ ಜಿಟಿ ದೇವೇಗೌಡ ಮನವಿ. ಈ ವೇಳೆ ಎ.ಸಿ.ಎಫ್. ಲಕ್ಷ್ಮಿಕಾಂತ್, ಆರ್.ಎಫ್.ಒ.ಸುರೇಂದ್ರ, ಸ್ಥಳೀಯ ಮುಖಂಡರಾದ ಗೆಜ್ಜಗಳ್ಳಿ ಲೋಕೇಶ್, ಕೃಷ್ಣ ಸಿಂಧುವಳ್ಳಿ, ಚಿಕ್ಕಕಾನ್ಯ ಮಹದೇವಸ್ವಾಮಿ, ಹಾರೋಹಳ್ಳಿ ಸುರೇಶ್ ಸೇರಿದಂತೆ ಮತ್ತಿತರರು ಹಾಜರು.

Read More