ಮುಂಬೈ: ಅಗ್ನಿವೀರ್ (Agniveer) ತರಬೇತಿ ಪಡೆಯುತ್ತಿದ್ದ 20 ವರ್ಷದ ಯುವತಿ (Woman) ಮುಂಬೈನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯುವತಿ ಕೇರಳದ ನಿವಾಸಿಯಾಗಿದ್ದು ನೌಕಾಪಡೆ ತರಬೇತಿ ಪಡೆಯಲು 2 ವಾರಗಳ ಹಿಂದೆ ಮುಂಬೈಗೆ ಬಂದಿದ್ದಳು. ಬೆಳಗ್ಗೆ ಯುವತಿ ಹಾಗೂ ಆಕೆಯ ಗೆಳೆಯ ಜಗಳವಾಡಿಕೊಂಡಿದ್ದು, ಬಳಿಕ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Bengaluru: ನಿವಾಸಿಗಳೇ, ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದೀರಾ!? – ಇಲ್ಲಿದೆ ಗುಡ್ ನ್ಯೂಸ್
ಯುವತಿಯ ಶವ ಮಲಾಡ್ ವೆಸ್ಟ್ನ ಐಎನ್ಎಸ್ ಹಮ್ಲಾ ಬೇಸ್ನಲ್ಲಿರುವ ಆಕೆಯ ಕೋಠಡಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ ಬಳಿಕ ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಾಳವಾನಿ ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಗ್ನಿಪಥ ಯೋಜನೆಯಡಿ ‘ಅಗ್ನಿವೀರ್’ ಸೈನಿಕರು 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ. ಇದರಲ್ಲಿ 6 ತಿಂಗಳ ತರಬೇತಿ ಮತ್ತು ಮೂರುವರೆ ವರ್ಷಗಳ ಕಾಲ ಕರ್ತವ್ಯದಲ್ಲಿರಬೇಕು. ಇದರ ಬಳಿಕ ಅವರು ಸಶಸ್ತ್ರ ಪಡೆಗಳಲ್ಲಿ ಮುಂದುವರಿಯಲು ಅರ್ಜಿ ಸಲ್ಲಿಸಬಹುದು.