Author: AIN Author

ಬೆಂಗಳೂರು:- ಯಾವ ಶಾಲೆಗಳಲ್ಲೂ ಬಾಂಬ್ ಇರಲು ಸಾಧ್ಯವಿಲ್ಲ ನನ್ನ ನಂಬಿಕೆ ಎಂದು ಪರಮೇಶ್ವರ್​ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೈಜೈಟ್ಸ್ @ ಬೀಬಲ್ ಡಾಟ್ ಕಾಂ ಅನ್ನೋ ಮೇಲ್ ಐಡಿಯಿಂದ ಮೆಸೇಜ್ ಬಂದಿದೆ. ಬೆಂಗಳೂರಿನ ಸುಮಾರು 15 ಶಾಲೆಗಳಿಗೆ ಬಾಂಬ್ ಇಟ್ಟಿದ್ದೀವಿ, ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ ಎಂದು ಮೆಸೇಜ್ ಬಂದಿದೆ. ಇದನ್ನ ನಾವು ಬಹಳ ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ. ಮೇಲ್​ನ ಮೂಲದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕಮಿಷನರ್​ಗೆ ಹಾಗೂ ಎಲ್ಲಾ ಅಧಿಕಾರಿಗಳಿಗೆ ಎಲ್ಲಾ ಶಾಲೆಗಳನ್ನ ಪರಿಶೀಲನೆ ಮಾಡುವಂತೆ ತಾಕೀತು ಮಾಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್​ ಹೇಳಿದರು. ಯಾವ ಶಾಲೆಗಳಲ್ಲೂ ಬಾಂಬ್ ಇರಲು ಸಾಧ್ಯವಿಲ್ಲವೆಂಬುವುದ ನನ್ನ ನಂಬಿಕೆ. ಯಾವ ಉಗ್ರ ಸಂಘಟನೆ ಮಾಡಿದೆ, ಯಾರು ಇದನ್ನೆಲ್ಲಾ ಮಾಡಿದ್ದಾರೆ ಅನ್ನೋ ಪರಿಶೀಲಿಸುತ್ತಿದ್ದೇವೆ. ಅವರು ಭಾರತದವರೇ ಆಗಿದ್ದರೇ ಅಂತವರಿಗೆ ಏನು ಮಾಡಬೇಕು ಅಂತ ಭಾರತ ಸರ್ಕಾರದ ಜೊತೆ ಮಾತನಾಡುತ್ತೇವೆ. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯೇ ಕಳುಹಿಸಿದೆ ಅನ್ನೋದನ್ನ ಇನ್ನೂ ಹೇಳಲು ಆಗಲ್ಲ ಎಂದರು.…

Read More

ಧಾರವಾಡ: ಶಾಸಕ ಬಿ.ಆರ್.ಪಾಟೀಲ ಅವರು ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಪತಿ ಬಸವರಾಜ ಹೊರಟ್ಟಿ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಆರ್.ಪಾಟೀಲ ಅವರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ. ಕಲಾಪದ ವೇಳೆ ಅದರ ಬಗ್ಗೆ ಮಾತನಾಡಿದರೆ ಅವಕಾಶ ಕೊಡುತ್ತೇನೆ. ಚರ್ಚೆಗೆ ಅವಕಾಶ ನೀಡುತ್ತೇನೆ. ಅಧಿವೇಶನದ ವೇಳೆ ಮಂತ್ರಿಗಳು ಸ್ಪಂದಿಸಿಲ್ಲ ಎಂದಿದ್ದಾರೆ. ಅದಕ್ಕಾಗಿ ಮಂತ್ರಿಗಳು ಹೆಚ್ಚಿನ ಸಮಯ ಅಧಿವೇಶನದಲ್ಲಿ ಕುಳಿತುಕೊಳ್ಳಬೇಕು. ಜಿಲ್ಲಾ ಪ್ರವಾಸ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು. ಶಾಸಕರು ಕೇಳುವ ಪ್ರಶ್ನೆಗಳಿಗೆ ಸಚಿವರು ಸರಿಯಾದ ಉತ್ತರ ನೀಡುವ ತಯಾರಿ ಮಾಡಿಕೊಂಡು ಬರಬೇಕು. ವಿವಿಧ ಕಾರ್ಯಕ್ರಮಗಳು ಜಾರಿಯಾಗುವಂತೆ ಕೆಲಸ ಮಾಡಬೇಕು. ದುರ್ದೈವದ ಸಂಗತಿ ಈಗ ಕೆಲಸ ಬಹಳ ಕಡಿಮೆಯಾಗಿವೆ. ಇದು ಸುಧಾರಣೆ ಆಗಬೇಕು. ಉತ್ತರ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಹೆಚ್ಚು ಚರ್ಚೆಗಳಾಗಬೇಕಿದೆ. ಡಿ.5, 6 ರಂದು ಪ್ರಶ್ನೋತ್ತರ ಬಳಿಕ ಉತ್ತರ ಕರ್ನಾಟಕ ಚರ್ಚೆ ಬಗ್ಗೆ ಸಮಯ ನೀಡುತ್ತೇನೆ ಎಂದರು. https://ainlivenews.com/ms-dhoni-bought-a-car-worth-3-30-crores-full-viral-on-social-media/ ಯಾರು ಏನು ಬೇಕಾದರೂ ಕೇಳಬಹುದು. ಅದನ್ನು ಅಜೆಂಡಾದಲ್ಲಿ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಶಾಲೆಗಳಿಗೆ ಬಾಂಬ್​ ಬೆದರಿಕೆ ಮೇಲ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ತನಿಖೆಗೆ ಸೂಚಿಸಿದ್ದಾರೆ. ನಗರದ ಶಾಲೆಗಳಿಗೆ ಇ-ಮೇಲ್ ಮುಖಾಂತರ​​ ಬಾಂಬ್​​ ಬೆದರಿಕೆ ಸಂದೇಶ ಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು. ಎಲ್ಲಿಂದ ಸಂದೇಶ ಬಂದಿದೆ ಎಂಬುದರ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದೇನೆ. ಎಲ್ಲಾ ‌ಶಾಲೆಗಳಿಗೂ ಭದ್ರತೆ ಕೊಡಲು ಸೂಚನೆ ನೀಡಿದ್ದೇನೆ ಎಂದರು.

Read More

ಶಿವಮೊಗ್ಗ: ರಾಜ್ಯದಲ್ಲಿ ಬರಗಾಲ ಆವರಿಸಿದೆ. ಕೇಂದ್ರ ಸರಕಾರಕ್ಕೆ ಕನಿಷ್ಠ ಸೌಜನ್ಯವೂ ಇಲ್ಲ. ನಮ್ಮ ರಾಜ್ಯದ ಸಚಿವರು ದೆಹಲಿಗೆ ಹೋದ್ರೂ ಅಧಿಕಾರಿಗಳನ್ನು ಮಾತನಾಡಿಸಲು ಆಗಲ್ಲ. ಕೇಂದ್ರ ಸರಕಾರದಿಂದ ಹಣ ತರುವ ದಮ್ಮು ತಾಕತ್ ಇದೆಯಾ? ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ನಿರ್ವಹಣೆ ಮಾಡುವುದಕ್ಕೆ ಸರಕಾರ ಕ್ರಮ ವಹಿಸಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಒಂದು ತಿಂಗಳ ನಂತರ ತೊಂದರೆ ಬರಬಹುದು. ಬಹಳ ಆಹಾಕಾರ ಆಗೋದು ನೀರಿಗೆ. ಮೇವಿಗೆ ಯಾವುದೇ ತೊಂದರೆ ಇಲ್ಲ ಎಂದರು. ಸದ್ಯ ಸೊರಬ ಪಟ್ಟಣಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಆಗ್ತಿದೆ. ಜಿಲ್ಲೆಯ 238 ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಹುದು ಎಂದು ಗುರುತಿಸಲಾಗಿದೆ. ಎಂದು ಅಭಿಪ್ರಾಯಪಟ್ಟರು. ರೈತರಿಗೆ ನೀಡುವ ವಿದ್ಯುತ್ ಪೂರೈಕೆ ಸಮಯದಲ್ಲಿ ವ್ಯತ್ಯಾಸ ಆಗಬಹುದು. ಖಜಾನೆಯಲ್ಲಿ ದುಡ್ಡಿಲ್ಲ, ರಾಜ್ಯದಲ್ಲಿ ವಿದ್ಯುತ್ ಇಲ್ಲ ಅಂತಾ ಬಿಜೆಪಿಯವರು ಅಪಪ್ರಚಾರ ಮಾಡಿದರು. ಅಂತಹ ಸಮಸ್ಯೆ ‌ಇಲ್ಲ. ಖಜಾನೆಯಲ್ಲಿ ದುಡ್ಡಿದೆ. ವಿದ್ಯುತ್ ಸಹ ಇದೆ ಎಂದು…

Read More

ಬೆಂಗಳೂರು, ಡಿಸೆಂಬರ್ 1 : ಮುಂದಿನ ಐದು ವರ್ಷಗಳಲ್ಲಿ ಭಾರತದ ದೇಶ, ಕರ್ನಾಟಕ ಏಡ್ಸ್ ಮುಕ್ತ ದೇಶ /ರಾಜ್ಯ ಆಗಲಿ. ಈ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಇದ್ದ ವಿಶ್ವ ಏಡ್ಸ್ ದಿನ 2023 ಮತ್ತು 25 ನೇ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಹೆಚ್ ಐ ವಿ ಮುಕ್ತ ಸಮಾಜವಾಗಿಸುವುದು ಎಲ್ಲರ ಜವಾಬ್ದಾರಿ : ಇಂದು ವಿಶ್ವ ಏಡ್ಸ್ ದಿನ. ಈ ಸಾಂಕ್ರಾಮಿಕ ರೋಗವನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ರೋಗ 1986 ರಲ್ಲಿ ಭಾರತದಲ್ಲಿ ಹಾಗೂ 1987 ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಯಿತು. ಇತ್ತಿಚಿನ ದಿನಗಳಲ್ಲಿ ಹೆಚ್ ಐವಿ ಪೀಡಿತರ ಹಾಗೂ ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ನಮ್ಮ ಸಮಾಜವನ್ನು ಹೆಚ್ ಐ ವಿ ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ ಮತ್ತು ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು.2015-2020ರವರೆಗೆ ಏಡ್ಸ್…

Read More

ಬೆಂಗಳೂರು:- ಕ್ಯಾನ್ಸರ್ ರೋಗಿಗಳಿಗೆ ಉಚಿತ ವಸತಿ ಸೌಲಭ್ಯ ಒದಗಿಸುವುದು ಆತಿಥ್ಯ ಸೇವೆಯಲ್ಲ ಎಂದು ಬೆಂಗಳೂರು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿ ಸಲ್ಲಿಸಿರುವ ಸಂಸ್ಥೆ ವಸತಿ ಪ್ರದೇಶದಲ್ಲಿರುವ ಕಟ್ಟಡವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳು ಮತ್ತು ಅವರ ಪೋಷಕರಿಗೆ ವಸತಿ ಸೌಕರ್ಯಕ್ಕಾಗಿ ಬಳಸುತ್ತಿದೆ. ಅಲ್ಲಿ ಯಾವುದೇ ಯಂತ್ರಗಳನ್ನು ಅಥವಾ ಸಾಧನಗಳನ್ನು ಬಳಕೆ ಮಾಡುತ್ತಿಲ್ಲ ಅಥವಾ ಮಕ್ಕಳಿಗೆ ಚಿಕಿತ್ಸೆ ನೀಡಲು ಇತರೆ ಸೌಕರ್ಯಗಳನ್ನು ಬಳಸುತ್ತಿಲ್ಲ. ಯಾವುದೇ ಬಗೆಯ ಚಿಕಿತ್ಸೆಯನ್ನೂ ನೀಡುತ್ತಿಲ್ಲ. ಹಾಗಾಗಿ, ಆಸ್ಪತ್ರೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ನೀಡಿರುವ ನೋಟಿಸ್ ಊರ್ಜಿತವಲ್ಲ ಎಂದು ಪೀಠ ಹೇಳಿದೆ. ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಕಟ್ಟಡವನ್ನು ಪರಿಶೀಲಿಸಿ ವಸ್ತು ಸ್ಥಿತಿಯ ವರದಿಯನ್ನು ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಬಿಬಿಎಂಪಿ ಸಲ್ಲಿಸಿದ್ದ ವರದಿ ಮತ್ತು ಛಾಯಾಚಿತ್ರಗಳನ್ನು ಪರಿಶೀಲಿಸಿದ ಪೀಠ, ಆ ಕಟ್ಟಡವನ್ನು ಕೇವಲ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುವ ಮಕ್ಕಳು ಹಾಗೂ ಅವರ ಪೋಷಕರ…

Read More

ಬೆಂಗಳೂರು:- ಕಾಂತರಾಜು ವರದಿ ಸ್ವೀಕರಿಸಲು ಸರ್ಕಾರ ಸಿದ್ಧ ಇದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿಯನ್ನು ಸರ್ಕಾರ ಸ್ವೀಕಾರ ಮಾಡಲಿದ್ದು, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರದಿ ಸ್ವೀಕಾರ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ವರದಿ ಸಲ್ಲಿಕೆಯಾಗಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆದು, ಆ ಬಳಿಕ ನಿರ್ಧಾರ ಮಾಡಲಾಗುವುದು. ವರದಿಯಲ್ಲೇನಿದೆ ಎಂದು ಯಾರಿಗೂ ಗೊತ್ತಿಲ್ಲ. ವರದಿ ಬಗ್ಗೆ ಮೊದಲೇ ಕಲ್ಪನೆ ಮಾಡಿಕೊಳ್ಳುವುದು ಬೇಡ ಎಂದರು. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿಸಿ ಸಮೀಕ್ಷೆ ಮಾಡಿಸಿರುವ ವರದಿಯನ್ನು ಸ್ವೀಕಾರ ಮಾಡಲ್ಲ ಎನ್ನಲು ಸಾಧ್ಯವೇ?, ಸರ್ಕಾರದಲ್ಲಿ ಸ್ವೀಕಾರ ಮಾಡಲಾಗಿರುವ ಇತರೆ ಹತ್ತಾರು ವರದಿಗಳಿವೆ. ಯಾವುದೇ ವರದಿಯನ್ನು ಸರ್ಕಾರ ಸ್ವೀಕಾರ ಮಾಡಲಿದೆ. ಆ ಬಗ್ಗೆ ಚರ್ಚೆ ನಡೆದು ನಿರ್ಧಾರ ಆಗಲಿದೆ. ವರದಿ ಸ್ವೀಕಾರವಾಗದೆ ಕಾಂತರಾಜು ವರದಿ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಸೂಕ್ತವಲ್ಲ ಎಂದು ತಿಳಿಸಿದರು.

Read More

ಬಿಗ್ ಬಾಸ್ ಮನೆಯಲ್ಲಿರುವ ವರ್ತೂರು ಸಂತೋಷ್ ಅವರು, ಮದುವೆ ಕುರಿತ ಮಾವನ ಆರೋಪವನ್ನ ವರ್ತೂರ್​​ ತಳ್ಳಿ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮನಬಿಚ್ಚಿ ಎಲ್ಲರ ಮುಂದೆ ಮಾತನಾಡಿದ ಸಂತೋಷ್, ‘ಮದುವೆ ವಿಚಾರ ಬಂದಾಗ ದೊಡ್ಡಪ್ಪನ ಬಳಿ ಹೇಳಿದ್ದೆ, ನೀವು ಯಾವ ಹುಡ್ಗೀನ ತೋರಿಸಿದ್ರೂ ಅವ್ಳಿಗೆ ತಾಳಿ ಕಟ್ತೇನೆ. ಮಾತು ಕೊಟ್ಟು ಒಪ್ಪಿಕೊಂಡೆ, ಹೀಗೆ ಸಾಗ್ತಾ ಇತ್ತು. ಕಡೆಗೆ ನಮ್ಮಮ್ಮನ ಇಗ್ನೋರ್ ಮಾಡೋಕೆ ಶುರು ಮಾಡಿದ್ಳು, ನಾನು ಸಂಪಾದನೆ ಮಾಡಿರೋ ಜನರನ್ನು ಬಿಟ್ಟು ಇವ್ರ ಹಿಂದೆ ಹೋಗ್ಬೇಕು ಅಂದ್ರೆ ಆಗಲ್ಲ. ನಾನು ಅವ್ರ ಮನೆ ತನಕ ಹೋಗ್ತೀನಿ, ನನ್ನ ಮಾತಿನ ಪ್ರಕಾರ ಬಂದ್ರೆ ಇವತ್ತಿಗೂ ನೀನ್ ರಾಣಿನೇ… ಬಾ ಅಂತ ಕರಿತೀನಿ.. ಆದ್ರೆ ಫಸ್ಟ್ ಆ ಗೇಟಿಂದ ಹೊರಗಡೆ ಹೋಗು ಅಂತಾಳೆ, ಅವತ್ತು ಮಾತ್ ಕೊಟ್ಟು ಬಂದಿದ್ದೀನಿ. ಆ ಮಾತಿಗೆ ಇವತ್ತು ನಿಂತಿದ್ದೀನಿ’ ಎಂದು ಹೇಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿರುವ ವರ್ತೂರ್​ ಸಂತೋಷ್​​ ಅವರ ವಿಡಿಯೋ ಸಾಮಾಜಿಕ…

Read More

ಈ ವಾರದ ಕಳಪೆ ಪಟ್ಟವನ್ನು ಡ್ರೋನ್ ಪ್ರತಾಪ್ ಧರಿಸಿದ್ದಾರೆ. ಈ ವಾರದ ನಾಯಕತ್ವದ ಪರಿಣಾಮವಾಗಿ ಜೈಲುಡುಗೆ ತೊಟ್ಟ ಪ್ರತಾಪ್ ಚಿತ್ರ JioCinema ಬಿಡುಗಡೆ ಮಾಡಿರುವ ಬೆಳಗಿನ ಫ್ರೊಮೊದಲ್ಲಿ ಜಾಹೀರುಗೊಂಡಿದೆ. ವಾರದ ಕೊನೆಗೆ ಕಳಪೆ ಯಾರು ಉತ್ತಮ ಯಾರು ಎಂಬುದನ್ನು ಆರಿಸುವ ಸಂದರ್ಭದಲ್ಲಿ ಎರಡೂ ತಂಡದ ಬಹುತೇಕ ಸದಸ್ಯರು ಪ್ರತಾಪ್ ಹೆಸರನ್ನು ಸೂಚಿಸಿದ್ದಾರೆ. ‘ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದು ಬೇಜಾರಾಯ್ತು’ ಎಂದು ನಮ್ರತಾ ಕಾರಣ ಕೊಟ್ಟಿದ್ದರೆ, ‘ಕಾರ್ತಿಕ್ ಅವರಂಥ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್‌ಗಳಲ್ಲಿಯೂ ಸೋಲುವಂತಾಯ್ತು’ ಎಂದು ವಿನಯ್ ಕಾರಣ ನೀಡಿದ್ದಾರೆ. ‘ಎಲ್ಲೋ ಒಂದು ಕಡೆ ಕೋಪದಿಂದ ಮಾತಾಡ್ತಾರೆ ಎಂದು ಈ ವಾರನೂ ಅಗ್ರೆಶನ್‌ನಲ್ಲಿಯೇ ಆಡ್ತಾರೆ ಅಂದುಕೊಳ್ಳುವುದು ಸರಿಯಲ್ಲ’ ಎಂದು ತನಿಷಾ ಹೇಳಿದ್ದಾರೆ. ವರ್ತೂರು, ಸ್ನೇಹಿತ್‌ ಕೂಡ ಪ್ರತಾಪ್ ಹೆಸರನ್ನೇ ಹೇಳಿದ್ದಾರೆ. ಮನೆಯವರ ನಿರ್ಧಾರಕ್ಕೆ ಬದ್ಧನಾಗಿ ಪ್ರತಾಪ್ ಜೈಲುಡುಗೆಯೇನೋ ತೊಟ್ಟಿದ್ದಾರೆ. ಆದರೆ ಅವರ ನಿರ್ಧಾರ ನನಗೆ ಸಮ್ಮತ ಅನಿಸಿಲ್ಲ ಎಂದೂ ಗಟ್ಟಿಯಾಗಿಯೇ ಹೇಳಿದ್ದಾರೆ. ‘ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು…

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ  ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬಸವೇಶ್ವರ ನಗರದ ಖಾಸಗಿ ಶಾಲೆಗಳಿಗೆ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗೂ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಹಾಗಾದ್ರೆ ಯಾವ ವಯಲದಲ್ಲಿ ಎಷ್ಟು ಶಾಲೆಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.. ಯಾವ ವಯಲದಲ್ಲಿ ಎಷ್ಟು ಶಾಲೆಗಳಿಗೆ ಬೆದರಿಕೆ? ಬೆಂಗಳೂರಿನ ಉತ್ತರ ವಲಯ -1ರಲ್ಲಿ 4 ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ ಬೆಂಗಳೂರಿನ ಉತ್ತರ ವಲಯ – 2ರಲ್ಲಿ 2 ಶಾಲೆಗಳಿಗೆ ಬೆಂಗಳೂರಿನ ಉತ್ತರ ವಲಯ -4: 01 ಶಾಲೆ ಬೆಂಗಳೂರಿನ ದಕ್ಷಿಣ ವಲಯ – 1: 15 ಶಾಲೆಗಳಿಗೆ ಬೆದರಿಕೆ ಇಮೇಲ್​ ಬೆಂಗಳೂರಿನ ದಕ್ಷಿಣ ವಲಯ – 2: 03 ಶಾಲೆಗಳು ಬೆಂಗಳೂರಿನ ದಕ್ಷಿಣ ವಲಯ – 3: 10 ಶಾಲೆಗಳು ಬೆಂಗಳೂರಿನ ದಕ್ಷಿಣ ವಲಯ 4: 04 ಶಾಲೆಗಳು ಬನ್ನೇರುಘಟ್ಟದ 7 ಶಾಲೆಗಳಿಗೆ ಬಾಂಬ್ ಬೆದರಿಕೆ ಗ್ರೀನ್ ಹುಡ್…

Read More