ಚುಮುಚುಮು ಚಳಿಗೆ ಮನೆಯಲ್ಲಿಯೇ ಸಿಂಪಲ್ ಆಗಿ ಎಗ್ ರೈಸ್ ಮಾಡುವ ವಿಧಾನ ನೀವು ತಿಳಿದುಕೊಳ್ಳಬೇಕೆ ಇಲ್ಲಿದೆ ಮಾಹಿತಿ. ಬೇಕಾಗುವ ಸಾಮಗ್ರಿಗಳು:- 1. ಮೊಟ್ಟೆ – 2-3 2. ಅನ್ನ – 1 ಬಟ್ಟಲು 3. ದಪ್ಪ ಈರುಳ್ಳಿ – 1, ಸಣ್ಣಗೆ ಹೆಚ್ಚಿದ್ದು 4. ಹಸಿ ಮೆಣಸಿನಕಾಯಿ – 5ರಿಂದ6 (ಖಾರದ ಪುಡಿ ಬೇಕಾದ್ರೆ ಬಳಸಬಹುದು) 5. ಬೆಳ್ಳುಳ್ಳಿ, ಶುಂಠಿ ಪೇಸ್ಟ್ – 1 ಚಮಚ 6. ಗರಂ ಮಸಾಲ – ಒಂದೂವರೆ ಚಮಚ 7. ಕಡ್ಲೆಬೇಳೆ – 1-2 ಚಮಚ 8. ನಿಂಬೆಹಣ್ಣು – ಅರ್ಧ ಹೋಳು 9. ಕೊತ್ತಂಬರಿ ಸೊಪ್ಪು – ಸ್ವಲ್ಪ 10. ಅರಿಶಿನ ಪುಡಿ – ಚಿಟಿಕೆ 11. ಜೀರಿಗೆ+ಸಾಸಿವೆ – ಅರ್ಧ ಚಮಚ 12. ಉಪ್ಪು – ರುಚಿಗೆ ತಕ್ಕಷ್ಟು 13. ಎಣ್ಣೆ – 3-4 ಚಮಚ ಮಾಡುವ ವಿಧಾನ * ಮೊದಲಿಗೆ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಜೀರಿಗೆ, ಸಾಸಿವೆ, ಕಡ್ಲೆಬೇಳೆ ಹಾಕಿ…
Author: AIN Author
ಗಂಗಾವತಿ:- ಸೋನಿಯಾ ಗಾಂಧಿಗೆ ತಲೆ ಬಾಗದಿದ್ದಕ್ಕೆ ನನ್ನನ್ನು ಜೈಲಿಗೆ ಕಳಿಸಿದರು ಎಂದು ಜನಾರ್ದನ್ ರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜಕೀಯ ಸ್ವಾರ್ಥ, ಮುಖ್ಯಮಂತ್ರಿಯಾಗುವ ಆಸೆಯಿಂದ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿ ಅಧಿಕಾರ ಪಡೆದರು. ಅವರಿಗೂ ಗೊತ್ತು, ನಾನು ಏನೂ ತಪ್ಪು ಮಾಡಿಲ್ಲ ಅಂತ. ನಾನು ಸೋನಿಯಾ ಗಾಂಧಿಗೆ ತಲೆಬಾಗಲಿಲ್ಲ ಎಂಬ ಕಾರಣಕ್ಕೆ ಜೈಲಿಗೆ ಹೋಗಬೇಕಾಯಿತು ಎಂದರು. ನನ್ನಿಂದ ಉಪಕಾರ ಪಡೆದು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹೈಕಮಾಂಡ್ ಹಾಗೂ ಕೆಲವು ವ್ಯಕ್ತಿಗಳು ನನ್ನ ವಿರುದ್ಧ ರಾಜ್ಯ ಸರ್ಕಾರ ದಾಖಲಿಸಿದ್ದ ಕೇಸ್‌ಗಳನ್ನು ವಾಪಸ್ ಪಡೆಯಲಿಲ್ಲ. ಪ್ರಸ್ತುತ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ನಿಷ್ಠರಾಗಿದ್ದಾರೆ. ಅವರ ಮೇಲಿನ ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ವ್ಯಕ್ತಿಗೆ ನೀಡಿದ ಗೌರವ ಇದಾಗಿದೆ. ಈ ಬುದ್ಧಿ ಆಗ ನಮ್ಮ ಬಿಜೆಪಿಯವರಿಗೆ ಬರಲಿಲ್ಲ. ನಾನು ಜೈಲಿಗೆ ಹೋಗುವುದು ಅವರಿಗೆ ಬೇಕಿತ್ತು. ನನ್ನ ಜತೆ ದೇವರ ಆಶೀರ್ವಾದ ಹಾಗೂ…
ಪೀಣ್ಯ ದಾಸರಹಳ್ಳಿ:’ ಇಂದು ಬೆಳಿಗ್ಗೆ ಗಿಳಡಿಗೇಡಿಗಳು ಕೆಲವು ಖಾಸಗಿ ಶಾಲೆಗಳಿಗೆ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದು ಅದರ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿತ್ತು. ಬೆಳಿಗ್ಗೆ ಬೆಂಗಳೂರು ನಗರದಲ್ಲಿ ಕಿಡಿಗೇಡಿಗಳು ಅನೇಕ ಶಾಲೆಗಳಿಗೆ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಸೃಷ್ಟಿಸಿದ್ದು ಪೊಲೀಸ್ ಅಧಿಕಾರಿಗಳು ಸರಿಯಾದ ತನಿಖೆ ನಡೆಸಬೇಕು. ಬೆಳಿಗ್ಗೆ ಶಾಲೆಗೆ ರೆಡಿಯಾಗಿ ಮಕ್ಕಳು ಹೋಗುವ ಸಮಯದಲ್ಲಿ ಇಂತಹ ಆತಂಕ ವಿಷಯಗಳಿಗೆ ಮಕ್ಕಳು, ಪೋಷಕರು, ಶಾಲಾ ಆಡಳಿತ ಸಿಬ್ಬಂದಿ ಭಯಭೀತರಾಗುತ್ತಾರೆ. ನಮ್ಮ ಭಾಗದಲ್ಲಿ ಪೋಷಕರು ಶಾಲೆಗಳಿಗೆ ತೆರಳಿ ತಮ್ಮ ಮಕ್ಕಳನ್ನು ಕಳುಹಿಸಿ ಎಂದು ಭಯಭೀತರಾಗಿದ್ದಾರೆ. ಇಂತಹ ಕೃತ್ಯ ವ್ಯಸಗುತ್ತಿರುವವರನ್ನು ಪತ್ತೆಹಚ್ಚಿ ಇಂತಹ ಉಗ್ರ ಚಟುವಟಿಕೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ’ ಎಂದು ಶಾಸಕ ಮುನಿರಾಜು ತಿಳಿಸಿದರು.
ಹುಬ್ಬಳ್ಳಿ; ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆ ಗುರೂಜಿಯವರು ಗೌರವ ಡಾಕ್ಟರ್ ಪ್ರಶಸ್ತಿ ಪುರಸ್ಕೃತರು ಹಾಗೂ ಸರ್ವಧರ್ಮ ಸಮಾಜ ಸೇವಕರಾದ ಡಾ.ರಮೇಶ ಮಹಾದೇವಪ್ಪನವರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು . ಡಾ.ರಮೇಶ ಮಹಾದೇವಪ್ಪನವರ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕ್ಕಾಗಿ ಸಮಾಜ ಮುಖಿಯಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಜನಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಪಿರಾಜಿ ಖಂಡೇಕಾರ, ಸಂತೋಷ್ ಶೆಟ್ಟಿ, ಶ್ರೀಮತಿ ಸವಿತಾ ಅಮರ್ ಶೆಟ್ಟಿ, ಶ್ರೀ ಮಾರುತಿ ಶೆಟ್, ಸೇರಿದಂತೆ ಇನ್ನೂ ಅನೇಕ ಗಣ್ಯರು ಗ್ರಾಮ ಅಭಿವೃದ್ಧಿ ಯೋಜನೆಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹುಬ್ಬಳ್ಳಿ; ಅಶೋಕ ಸಜ್ಜನ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕ.ಸ.ಗ್ರಾ, ಪ್ರಾಶಾ.ಶಿ.ಸಂಘ (ರಿ) ರಾಜ್ಯ ಘಟಕ ಹುಬ್ಬಳ್ಳಿ, ಹಿರಿಯ ಶಿಕ್ಷಕರು ಸ.ಹಿ.ಪ್ರಾ.ಕ.ಹೆ.ಶಾಲೆ ಹೆಬಸೂರ, ಸ್ವಗ್ರಾಮ ಇಂಗಳಹಳ್ಳಿ ಹಾಗೂ ಉಣಕಲ್ಲ, ತಾ. ಹುಬ್ಬಳ್ಳಿ ಇವರು ದಿ. 31-01-2024 ರಂದು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದು.ಸದರಿಯವರ ಅಭಿನಂದನ ಸಮಾರಂಭವನ್ನು ರವಿವಾರ ದಿ. 11-2-2024 ರಂದು ಸವಾಯಿ ಗಂಧರ್ವ ಕಲಾಮಂದಿರ,ದೇಶಪಾಂಡೆನಗಹುಬ್ಬಳ್ಳಿಯಲ್ಲಿ ರಾಜ್ಯ ಸಂಘ ಎಲ್ಲಾ ಜಿಲ್ಲಾ ಸಂಘಗಳು ಹಾಗೂ ಸಜ್ಜನ – ಹೊಸಗಾಣಿಗೇರ ಪರಿವಾರದ ಆಶ್ರಯದಲ್ಲಿ ರಾಜ್ಯ ಮಟ್ಟದ ಅಭಿನಂದನ ಸಮಾರಂಭ ಆಯೋಜಿಸುತ್ತಿದ್ದು, ಈ ದಿಸೆಯಲ್ಲಿ ಶಿಕ್ಷಕ ಸಾಹಿತಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಅವರ ಕನಸಿನ ‘ಅಶೋಕಪಥ’ ಪುಸ್ತಕ ವಾಯ್, ಬಿ. ಕಡಕೋಳ ಇವರ ಸಂಪಾದಕತ್ವದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಆದ್ದರಿಂದ ಅಶೋಕ ಸಜ್ಜನ ಅವರ ಕುರಿತು ಅವರ ವೃತ್ತಿ ಬಾಂಧವರು, ಸಮುದಾಯದವರು, ಬಂಧುಗಳು, ಮಿತ್ರರು, ಗಣ್ಯರು ಅನಿಸಿಕೆ ಅಭಿಪ್ರಾಯ ಲೇಖನ ಕವನ, ಶುಭಸಂದೇಶ, ಆಶಯನುಡಿ, ಅವರ ವೃತ್ತಿ…
ವಿಜಯಪುರ:- ಬಿಜೆಪಿಗೆ ಜಗದೀಶ್ ಶೆಟ್ಟರ್ ವಾಪಸ್ ಬರ್ತಾರೆ ಎಂಬ ವಿಚಾರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈಶ್ವರಪ್ಪ ಹೇಳ್ತಿರೋದು ಹಸಿ.. ಹಸಿ.. ಸುಳ್ಳು.. ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ. ನನಗೆ ಯಾರು ಆಹ್ವಾನವನ್ನು ಕೊಟ್ಟಿಲ್ಲ. ಬಿಜೆಪಿಯವರು ಕಾಂಗ್ರೆಸ್ ಗೆ ಹೋಗದಂತೆ ತಡೆಯಲು ನನ್ನ ಹೆಸರು ಬಳಕೆ ಮಾಡ್ತಿದ್ದಾರೆ. ನಾನು ಬಿಜೆಪಿಗೆ ಹೋಗ್ತಿದ್ದೇನೆ ಎಂದು ಹೇಳಿ ಕಾಂಗ್ರೆಸ್ ಗೆ ಬರುವವರನ್ನ ತಡೆಯುವ ಪ್ರಯತ್ನ ನಡೆದಿದೆ. ಜಗದೀಶ್ ಶಟ್ಟರ್ ರೆ ಬಿಜೆಪಿಗೆ ಬಂದು ಬಿಡ್ತಾರೆ ನೀವು ಕಾಂಗ್ರೆಸ್ ಗೆ ಹೋಗಬೇಡಿ ಎಂದು ಹೇಳ್ತಿದ್ದಾರೆ. ನನಗೆ, ಸವದಿಗೆ ಟಿಕೆಟ್ ತಪ್ಪಿಸಿದ ಪರಿಣಾಮವನ್ನ ವಿಧಾನ ಸಭಾ ಚುನಾವಣೆಯಲ್ಲಿ ಜನ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಆ ಎಫೆಕ್ಟ್ ಆಗಬಾರದು ಎಂದು ಈ ರೀತಿ ಸುಳ್ಳು ಹಬ್ಬಿಸ್ತಿದ್ದಾರೆ ಎಂದು ಆರೋಪಿಸಿದರು. ಶೆಟ್ಟರ್ ರಕ್ತದಲ್ಲಿ ಹಿಂದೂತ್ವದ ರಕ್ತ ಎಂಬ ಈಶ್ವರಪ್ಪ ಹೇಳಿಕೆಗೂ ಇದೇ ವೇಳೆ ತಿರುಗೇಟು ಕೊಟ್ಟ ಶೆಟ್ಟರ್, ನನ್ನ ರಕ್ತದಲ್ಲಿ ಹರಿಯೋದು ಹಿಂದುತ್ವವಾದರೆ ಟಿಕೆಟ್…
ಹಾವೇರಿ- ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಇಂದು ಹಾವೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ಆಶಾ ಕಾರ್ಯಕರ್ತೆರು ಪ್ರತಿಭಟನೆ ಮಾಡಿದರು.ಆರ್ ಸಿ ಎಚ್ ಪೋರ್ಟಲ್ ನಲ್ಲಿ ತಾಂತ್ರಿಕ ದೋಷ ಇದೆ.ಇಲ್ಲಿ ನಮಗೆ ಸರಿಯಾಗಿ ಸಂಬಳ ಹಾಗೂ ಸೌಲಭ್ಯಗಳು ದೊರೆಯುತ್ತಿಲ್ಲಾ.ಇದರಿಂದ ಹಲವು ಸಮಸ್ಯೆ ಉಂಟಾಗಿವೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಜಿಲ್ಲೆಯಿಂದ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ನ್ಯಾಯಕ್ಕಾಗಿ ಒತ್ತಾಯಿಸಿದರು.ಕಳೆದ ಹಲವು ತಿಂಗಳಿನಿಂದ ಸಂಬಳ ಆಗದೆ ಕುಟಂಬ ನಡೆಸಲು ಕಷ್ಟವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ವಿವಿಧ 15 ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.ನಮ್ಮ ಬೇಡಿಕೆಗಳನ್ನು ಪೂರೈಸದಿದ್ದರೆ ಮುಂದೆ ಉಗ್ರವಾದ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ದಾವಣಗೆರೆ:- ನಗರ ಪಾಲಿಕೆ ಪೌರಕಾರ್ಮಿಕ ಬಂಧುಗಳು ಹಾಗೂ ಘನ ತ್ಯಾಜ್ಯ ವಿಲೇವಾರಿ ವಾಹನ ಚಾಲಕ ಕಾರ್ಮಿಕ,ಹಾಗೂ ಒಳಚರಂಡಿ ಸಹಾಯಕ ಕಾರ್ಮಿಕರು, ಹಾಗೂ ವಾಲ್ ಮ್ಯಾನ್ ಸಹಾಯಕ ಕಾರ್ಮಿಕರನ್ನು, ಏಕಕಾಲದಲ್ಲಿಯೇ ನೇರ ಪಾವತಿ ಮುಖಾಂತರ ಕಾಯಂ ಮಾಡಬೇಕೆಂದು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗ ಧರಣಿ ಸತ್ಯಾಗ್ರಹ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ನೀಡಲಾಯಿತು. ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಮೈಸೂರ್ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಕಾರ್ಯಧ್ಯಕ್ಷ ಎಲ್ ಎಂ ಹನುಮಂತಪ್ಪ ನೇತೃತ್ವದಲ್ಲಿ ನಡೆದ ಧರಣಿ ಯಶಸ್ವಿಯಾಗಿ ನಡೆಸಲಾಗಿದೆ. ಹೋರಾಟದಲ್ಲಿ ಪೌರಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಎಂ.ಉಮೇಶ್, ಕಾಂತರಾಜ್, ರಾಧಾಕೃಷ್ಣ, ವಾಲ್ಮಿನ್ಗಳಾದ ಅಂಜಿನಪ್ಪ ಅವರಗೆರೆ, ರವಿವರ್ಧನ್, ಶಿವರಾಜ್.ಎನ್.ಆದಾಪುರ್, ಮತ್ತೂರಮ್ಮ, ರೇಣುಕಮ್ಮ,ರತ್ನಮ್ಮ ಶಿವರಾಜ್,ಪರಶುರಾಮ್. ಗುರುರಾಜ್. ಎಲ್ಲಾ ಪಾಲಿಕೆ ಸ್ವಚ್ಛತಾ ಕಾರ್ಮಿಕರು,ವಾಹನ ಚಾಲಕರು ಭಾಗವಹಿಸಿದ್ದರು.
ಬೆಂಗಳೂರು:- ನಾಳೆಯಿಂದ ಡಿ. 9ರ ವರೆಗೆ ಸಾಧಾರಣದಿಂದ ಭಾರಿ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಒಳನಾಡಲ್ಲಿ ಸಕ್ರಿಯವಾಗಿದ್ದ ಮಳೆಯು ಮುಂದಿನ ವಾರ ದುರ್ಬಲಗೊಳ್ಳಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ ವಿಜಯಪುರದ ಅಲ್ಲಲ್ಲಿ ತಕ್ಕ ಮಟ್ಟಿಗೆ ಮಳೆ ಸಾಧ್ಯತೆ ಇದೆ. ಉಳಿದಂತೆ ಗದಗ, ಕೊಪ್ಪಳದಲ್ಲಿ ಒಣಹವೆ ಇರಲಿದೆ. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲೂ ಮಳೆ ಅಬ್ಬರ ಇರಲಿದೆ. ರಾಜ್ಯದ ವಿವಿಧೆಡೆ ಮಳೆಯಾಗಿರುವ ವರದಿ ಆಗಿದ್ದು, ಬೆಳಗಾವಿಯ ಹುಕ್ಕೇರಿಯಲ್ಲಿ 7 ಸೆಂ.ಮೀ ಅತಿ ಹೆಚ್ಚು ಮಳೆಯಾಗಿದೆ. ಉಳಿದಂತೆ ಚಿಕ್ಕೋಡಿಯಲ್ಲಿ 5 ಸೆಂ.ಮೀ, ಸೇಡಬಾಳ, ಬೈಲಹೊಂಗಲ, ಹಿಡಕಲ್ ಅಣೆಕಟ್ಟಲ್ಲಿ 4 ಸೆಂ.ಮೀ, ರಾಯ್‌ಭಾಗ, ಶೃಂಗೇರಿಯಲ್ಲಿ 3, ಗೋಕಾಕ್, ಸಂಕೇಶ್ವರ್‌ನಲ್ಲಿ 2 ಸೆಂ.ಮೀ, ರಾಯಲ್‌ಪಡು, ಚಿಕ್ಕಬಳ್ಳಾಪುರ,…
ಬೆಂಗಳೂರು:- ಕೇಂದ್ರ ಸರ್ಕಾರ ಕರ್ನಾಟಕದ ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಹಣ ಬಿಡುಗಡೆ ವಿಳಂಬದ ಆರೋಪಕ್ಕೆ ಪ್ರತಿಕ್ರಿಯಿಸಿ, ”ನರೇಂದ್ರ ಮೋದಿ ಅವರು 10 ವರ್ಷಕ್ಕೂ ಹೆಚ್ಚು ಕಾಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರಿಂದ, ಎಲ್ಲಾ ರಾಜ್ಯಗಳಿಗೂ ಸಕಾಲದಲ್ಲಿ ಹಣ ಬಿಡುಗಡೆ ನೀಡಬೇಕೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಸುಮ್ಮನೆ ಆರೋಪಗಳನ್ನು ಮಾಡಬಾರದು. ನನಗೆ ಮನವಿ ಪತ್ರ ತಲುಪುವ ಮೊದಲು ಸಚಿವರು ಅಥವಾ ಮುಖ್ಯಮಂತ್ರಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಬಹುದು. ನಾನು ಎರಡು ದಿನಗಳ ಹಿಂದೆ, ಕೇರಳದಲ್ಲಿದ್ದಾಗ ಈ ವಿಚಾರ ಗಮನಕ್ಕೆ ಬಂದಿಂದೆ” ಎಂದರು. ನಮ್ಮ ಕಡೆಯಿಂದ ಕರ್ನಾಟಕಕ್ಕೆ ಏನೂ ಬಾಕಿ ಇಲ್ಲ. ನಾನು ರಾಜ್ಯದ ಸಂಸದೆ, ನನಗೂ ಜವಾಬ್ದಾರಿ ಇದೆ. ಯಾವುದನ್ನೂ ಬಾಕಿ ಉಳಿಸಿಕೊಂಡಿಲ್ಲ. ಕಾಂಗ್ರೆಸ್ ಆರೋಪಗಳು ಸತ್ಯಕ್ಕೆ ದೂರವಾಗಿವೆ” ಎಂದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 23 ಇಲಾಖೆಗಳಲ್ಲಿ 61 ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣ…